For Quick Alerts
ALLOW NOTIFICATIONS  
For Daily Alerts

  ತೂಕ ನಿಯಂತ್ರಿಸಿ, ಖಂಡಿತ ಮಧುಮೇಹವನ್ನೂ ನಿಯಂತ್ರಿಸಬಹುದು...

  By Arshad
  |

  ಹಿಂದೊಮ್ಮೆ ಬ್ರಿಟಿಷರಿಗೇ ಹೆಚ್ಚಾಗಿ ಬರುತ್ತಿದ್ದ ಸಕ್ಕರೆ ಕಾಯಿಲೆ ಇದೇ ಕಾರಣಕ್ಕೆ 'ಪರಂಗಿಯವರ ಕಾಯಿಲೆ' ಎಂದೇ ಕನ್ನಡನಾಡಿನಲ್ಲಿ ಜನಜನಿತವಾಗಿತ್ತು. ಇಂದು ಈ ವ್ಯಾಧಿ ಕನ್ನಡನಾಡಿನ ಜೊತೆಗೇ ಇಡಿಯ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಿಸಿದೆ. ಅಂದು ಇರದಿದ್ದ ಕಾಯಿಲೆ ಇಂದು ಇಷ್ಟೊಂದು ಸಂಖ್ಯೆಯಲ್ಲಿ ಏರಲು ಬದಲಾದ ಜೀವನಕ್ರಮ ಎಂದು ಸ್ಪಷ್ಟವಾಗಿಯೇ ಹೇಳಬಹುದು. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು  

  Diabetes
   

  ಮಧುಮೇಹ ನೇರವಾಗಿ ಅಪಾಯಕಾರಿಯಲ್ಲದಿದ್ದರೂ ಇದರ ಪರೋಕ್ಷ ಪರಿಣಾಮಗಳಿಂದ ದೇಹದ ಇತರ ಅಂಗಗಳು ವಿಫಲಗೊಂಡು ಸಾವಿನತ್ತ ದೂಡುವ ಕಾರಣ ಮಧುಮೇಹವನ್ನು ನಿಯಂತ್ರಿಸುವುದು ಅತಿ ಅಗತ್ಯ. ಮಧುಮೇಹ ದೇಹದ ತೂಕಕ್ಕೆ ನೇರವಾಗಿ ಸಂಬಂಧಿಸಿರುವ ಕಾರಣ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬೇಕೇಂದರೆ ತೂಕವನ್ನು ಆರೋಗ್ಯಕರ ಮಿತಿಗಳ ಒಳಗೇ ಇರಿಸಬೇಕಾದುದು ಅನಿವಾರ್ಯ. ಮಧುಮೇಹಿಗಳಿಗೆ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ...  

  Diabetes
   

  ಇಂದಿನ ದಿನಗಳಲ್ಲಿ ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಭಾರತದಂತಹ ಅಭಿವೃದ್ದಿಶೀಲ ರಾಷ್ಟ್ರಗಳ ಜೊತೆಗೇ ಶ್ರೀಮಂತ ರಾಷ್ಟ್ರಗಳಲ್ಲಿಯೂ ಬಹುವಾಗಿಯೇ ವ್ಯಾಪಿಸಿದೆ. ಒಟ್ಟಾರೆ 7.9ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ.

  ಇವರಲ್ಲಿ ಟೈಪ್ 2 ಅಥವಾ ದೇಹದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಬಳಕೆಯಾಗದ ಮಧುಮೇಹ ಇರುವವರ ಸಂಖ್ಯೆ ಬಹಳ ಹೆಚ್ಚು. ಇವರಲ್ಲಿ ಪ್ರತಿ ಮೂವರಲ್ಲಿ ಇಬ್ಬರು ಹೃದಯಾಘಾತ ಅಥವಾ ಹೃದಯ ಸಂಬಂಧಿ ಇತರ ತೊಂದರೆಗಳಿಂದ ಸಾವನ್ನಪ್ಪುವ ಸಂಭವ ಹೆಚ್ಚು. ನೆನಪಿರಲಿ ಮಧುಮೇಹ ಕಣ್ಣನ್ನೂ ಬಾಧಿಸುತ್ತದೆ!   

  Diabetes
   

  ಮಧುಮೇಹ ವಿಪರೀತಕ್ಕೆ ಹೋಗುತ್ತಿದ್ದಂತೆಯೇ ಕಣ್ಣಿನ ದೃಷ್ಟಿ ಕುಂದುವುದು, ಮೂತ್ರಪಿಂಡಗಳು ವಿಫಲಗೊಳ್ಳುವುದು ಇತ್ಯಾದಿಗಳು ನಿಧಾನವಾಗಿ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಗಾಯಗಳು ಒಣಗದೇ ಗ್ಯಾಂಗ್ರೀನ್ ಸ್ಥಿತಿಗೆ ಒಳಗಾಗಬೇಕಾಗುತ್ತದೆ. ಗ್ಯಾಂಗ್ರೀನ್ ಆವರಿಸಿದ ಭಾಗವನ್ನು ಕತ್ತರಿಸದೇ ಅನ್ಯಮಾರ್ಗವಿಲ್ಲ. ಆದ್ದರಿಂದ ಮಧುಮೇಹಿಗಳು ತಮ್ಮ ತೂಕವನ್ನು ಹದ್ದುಬಸ್ತಿನಲ್ಲಿಡುವುದು ಅತ್ಯಂತ ಅಗತ್ಯ ಮತ್ತು ಅನಿವಾರ್ಯ.

  ಇದಕ್ಕೆ ಬೇಕಾಗಿರುವುದು ದೃಢ ಮನಸ್ಸು ಮಾತ್ರ. ದೃಢಮನಸ್ಸಿನಿಂದ ವೈದ್ಯರು ಹೇಳಿದ ಮಾತುಗಳನ್ನು ಪಾಲಿಸಿಕೊಂಡು ಬಂದರೆ ತೂಕವನ್ನೂ ಹದ್ದುಬಸ್ತಿನಲ್ಲಿಡಬಹುದು, ತನ್ಮೂಲಕ ಮಧುಮೇಹವನ್ನೂ ಹದ್ದುಬಸ್ತಿನಲ್ಲಿಡಬಹುದು. ವೈದ್ಯರು ಹೇಳುವ ಸಲಹೆಯ ಸಂಕ್ಷಿಪ್ತ ರೂಪವೆಂದರೆ ಊಟವನ್ನು ಬಿಡಬೇಡಿ, ಬದಲಿಗೆ ಪ್ರತಿ ಊಟದ ಪ್ರಮಾಣವನ್ನು ಕಡಿಮೆ ಮಾಡಿ.

  belly fat
   

  ಇಂದಿನ ಈ ಸ್ಥಿತಿಗೆ 1980-90ರ ಅವಧಿಯಲ್ಲಿ 'ಏನು ಬೇಕಾದರೂ, ಎಷ್ಟು ಬೇಕಾದರೂ ತಿನ್ನಿ' ಎಂದು ಆಹಾರಮಳಿಗೆಗಳು ಭರ್ಜರಿ ಪ್ರಚಾರ ನಡಿಸಿದ್ದೂ ಒಂದು ಕಾರಣವಿರಬಹುದು. ಆಗ ಕೊಟ್ಟ ಹಣಕ್ಕೆ ಮೋಸವಾಗಬಾರದು ಎಂದು ಭಾರೀ ಪ್ರಮಾಣದಲ್ಲಿ ತಿಂದು ಕೊಬ್ಬು ಹೆಚ್ಚಿಸಿಕೊಂಡ ಪರಿಣಾಮವಾಗಿ ಇಂದು ಮಧುಮೇಹ ಹೆಚ್ಚು ಜನರಿಗೆ ಆವರಿಸಿದೆ ಎಂದು ಇನ್ನೊಂದು ಸಮೀಕ್ಷೆ ತಿಳಿಸುತ್ತದೆ.

  ಆದ್ದರಿಂದ ತೂಕ ಕಡಿಮೆಯಾಗಬೇಕಾದರೆ ಆಹಾರಗಳ ಜಾಹೀರಾತುಗಳನ್ನು ನೋಡುವುದನ್ನೇ ಬಿಟ್ಟುಬಿಟ್ಟು ನಿಮಗೆ ಸೂಕ್ತ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ, ಕಾಲಕಾಲಕ್ಕೆ ಸೇವಿಸುವುದೇ ಸೂಕ್ತ ವಿಧಾನ. ಸಾಮಾನ್ಯವಾಗಿ ನಾವು ಊಟ ಕಡಿಮೆ ಮಾಡಿದರೆ ನಮ್ಮ ದೇಹ ಹಸಿವು ಪೂರ್ಣವಾಗಿ ಹೋಗಿಲ್ಲ ಎಂದು ಸೂಚನೆ ನೀಡುತ್ತದೆ.

  ಹೆಚ್ಚಿನ ಸಂದರ್ಭಗಳಲ್ಲಿ ಇದು ಹುಸಿ ಸೂಚನೆಯಾಗಿರುತ್ತದೆ. ಕಡಿಮೆ ಊಟ ಮಾಡಿದ ಬಳಿಕ ಹೆಚ್ಚು ನೀರು ಕುಡಿದು ಈ ಹೊತ್ತಿಗೆ ನಿನಗೆ ಇಷ್ಟೇ, ಮುಂದಿನ ಹೊತ್ತಿಗೆ ಬೇಕಾದರೆ ನೋಡುವಾ ಎಂದು ಮನಸ್ಸನ್ನು ಗದರಿಸಿದರೆ ಸಾಕು, ಆಹಾರದ ನಿಯಂತ್ರಣ ತನ್ನಿಂತಾನೇ ಆಗುತ್ತದೆ. ಈ ಅಭ್ಯಾಸವನ್ನು ಮುಂದುವರೆಸಿಕೊಂಡು ಹೋದರೆ ತೂಕವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ.

  Diabetes
   

  ಒಂದು ವೇಳೆ ಈ ಸೂಚನೆಗೆ ತಲೆದೂಗಿ ತಟ್ಟೆಗೆ ಇನ್ನಷ್ಟು ಸುರುವಿಕೊಂಡಿರೋ, ಆಗ ಮನಸ್ಸೆಂಬ ರಾಕ್ಷಸನಿಗೆ ಜೀವನ ಪೂರ್ತಿ ಗುಲಾಮನಾಗಬೇಕಾಗಿ ಬರುತ್ತದೆ. ಇದರಿಂದ ಅನಗತ್ಯವಾದ ಮತ್ತು ಹೆಚ್ಚುವರಿ ಆಹಾರವನ್ನು ತಿಂದು ತೂಕ ಇನ್ನಷ್ಟು ಹೆಚ್ಚಲು ಕಾರಣವಾಗುತ್ತದೆ.

  ತೂಕವನ್ನು ನಿಯಂತ್ರಣದಲ್ಲಿರಿಸಲು ಇನ್ನೊಂದು ಸೂಕ್ತ ವಿಧಾನವೆಂದರೆ ದಿನವಿಡೀ ನೀರು ಕುಡಿಯುತ್ತಿರುವುದು. ಅದರಲ್ಲೂ ಊಟಕ್ಕೂ ಅರ್ಧ ಗಂಟೆ ಮುನ್ನ ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವುದು. ಇದರಿಂದ ದೇಹ ನಿರ್ಜಲೀಕರಣಕ್ಕೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬಹುದು ಜೊತೆಗೇ ಹೊಟ್ಟೆ ಅರ್ಧಕ್ಕಿಂತ ಹೆಚ್ಚು ತುಂಬಿರುವ ಕಾರಣ ಹೆಚ್ಚು ಆಹಾರ ಸೇವಿಸಲು ಸ್ಥಳಾವಕಾಶವಿಲ್ಲದೇ ಹೆಚ್ಚಿನ ಆಹಾರ ತಿನ್ನುವುದರಿಂದ ತಪ್ಪಿಸಲು ಸಾಧ್ಯವಾಗುತ್ತದೆ.

  ಮಧುಮೇಹಿಗಳಲ್ಲಿ ಕೆಲವೊಮ್ಮೆ ಬಾಯಾರಿಕೆ ಮತ್ತು ಹಸಿವು ಎರಡಕ್ಕೂ ಮೆದುಳು ಏಕಸಮಾನವಾದ ಸೂಚನೆಯನ್ನು ಕಳುಹಿಸುತ್ತದೆ. ಅಂದರೆ ಬಾಯಾರಿಕೆಯಾಗಿದ್ದಾಗಲೂ ಘನ ಆಹಾರವನ್ನೇ ತಿನ್ನುವ ಬಯಕೆಯಾಗುತ್ತದೆ. ಆದ್ದರಿಂದ ಹಸಿವಾದಾಗಲೆಲ್ಲಾ ನೀರು ಕುಡಿದೇ ತಣಿಸುವುದು ಜಾಣತನದ ಲಕ್ಷಣ. 

   

  Drinking water

  ತೂಕದ ನಿಯಂತ್ರಣಕ್ಕೆ ಇನ್ನೊಂದು ವಿಧಾನವೆಂದರೆ ನಿಮ್ಮ ಇಷ್ಟದ ತಿಂಡಿಗಳನ್ನು ಆಪ್ತರೊಂದಿಗೆ ಹಂಚಿಕೊಂಡು ತಿನ್ನುವುದು. ನಿಮ್ಮ ಪಾಲಿಗೆ ಬಂದ ಆಹಾರದಲ್ಲಿ ಕೊಂಚವೇ ಇರಿಸಿಕೊಂಡು ಉಳಿದ ಭಾಗವನ್ನು ಆಪ್ತರ ತಟ್ಟೆಗೆ ಸುರಿದು ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಸೇವಿಸುವುದರಿಂದ ಈ ಆಹಾರ ನಿಜವಾಗಿಯೂ ಪಂಚಾಮೃತವೇ ಆಗುತ್ತದೆ. ಟೈಪ್‌-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ

  ಮಧುಮೇಹಿಗಳಿಗೆ ಸಕ್ಕರೆ ಸಂಪೂರ್ಣವಾಗಿ ವರ್ಜ್ಯವಲ್ಲ, ಅವರಿಗೂ ಕೊಂಚ ಪ್ರಮಾಣದಲ್ಲಿ ಬೇಕಾಗಿರುತ್ತದೆ. ಆ ಅಗತ್ಯತೆಯನ್ನು ಈ ಚಿಕ್ಕ ಪ್ರಮಾಣದ ಮೂಲಕ ಪಡೆದುಕೊಳ್ಳಬಹುದು ಹಾಗೂ ಮನಸ್ಸಿಗೂ ಸಮಾಧಾನ ಸಿಗುತ್ತದೆ. ಎಲ್ಲರೂ ಪುಕ್ಕಟೆಯಾಗಿ ನೀಡುವ ಸಲಹೆ ಇನ್ನೊಂದು ಎಂದರೆ ವ್ಯಾಯಾಮ ಮಾಡಿ ಎನ್ನುವುದು.

  ಮಧುಮೇಹಿಗಳಿಗೆ ಹಿಂದಿನ ದಿನಗಳ ಕಸುವು ಇಲ್ಲದಿರುವ ಕಾರಣ ಭಾರೀ ವ್ಯಾಯಾಮ ಇವರಿಗೆ ಮಾರಕ. ಆದ್ದರಿಂದ ನಿಮ್ಮ ದೇಹಕ್ಕೆ ಸೂಕ್ತವಾದ ಸರಳ ವ್ಯಾಯಾಮವನ್ನು ಮಾಡಿ. ಮಧುಮೇಹಿಗಳಿಗೆ ಹೇಳಿ ಮಾಡಿಸಿದ ವ್ಯಾಯಾಮವೆಂದರೆ ನಡಿಗೆ. ದಿನದ ಮೂರೂ ಹೊತ್ತು ಎಷ್ಟು ಸಾಧ್ಯವೋ ಅಷ್ಟು ಅಡ್ಡಾಡಿ. ನಿಮ್ಮ ನಿತ್ಯದ ಕೆಲಸದ ನಡುವೆ ಸಾಧ್ಯವಿದ್ದಷ್ಟು ನಡೆದೇ ಕೆಲಸಗಳನ್ನು ಪೂರ್ಣಗೊಳಿಸಿ. ಒಟ್ಟಾರೆ ನಿಮಗೆ ಸಮಾಧಾನವಾಗುವಷ್ಟು ವ್ಯಾಯಾಮವನ್ನು ತಪ್ಪದೇ, ನಿತ್ಯವೂ ಅನುಸರಿಸಿ.

  English summary

  Controlling Diabetes Through Weight Reduction

  Diabetes is a disease that has become very common nowadays. Due to lifestyle changes and wrong food habits, a lot of people are ending up with diabetes. This is a deadly disease that must be stopped even before it attacks a person. Hence there are certain things that need to be done to prevent it by controlling your weight.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more