Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೆನಪಿರಲಿ ಮಧುಮೇಹ ಕಣ್ಣನ್ನೂ ಬಾಧಿಸುತ್ತದೆ!
ಜಗತ್ತಿನಾದ್ಯಂತ ಅನೇಕರು ಮಧುಮೇಹಕ್ಕೆ ತುತ್ತಾಗಿದ್ದಾರೆ. ಆಡುವ ಮಕ್ಕಳನ್ನು ಕೂಡ ಭಾದಿಸುತ್ತದೆ ಈ ಮಧುಮೇಹ. ಯೌವನದ ಬಿಸಿಯಲ್ಲಿರುವವರಲ್ಲಿಯೂ ಈ ರೋಗ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಮಧುಮೇಹ ಮಾರಣಾಂತಿಕ ರೋಗವಲ್ಲ. ಆದರೆ ಮಸಣದವರೆಗೂ ನಮ್ಮ ಜೋತೆಯಲ್ಲೇ ಬರುವ ರೋಗ. ಒಂದೇ ತಿಂಗಳಿನಲ್ಲಿ ಮಧುಮೇಹ ನಿಯಂತ್ರಣ-ಚಾಲೆಂಜ್‌ಗೆ ರೆಡಿನಾ?
ಅದಕ್ಕೆ ಯಾರಾದರು ಮಧುಮೇಹಿ ಎಂದು ಗುರುತಿಸಲ್ಪಟ್ಟರೆ ಅಂತವರು ತಮ್ಮ ವೈದ್ಯರು ಹೇಳುವ ಪ್ರತಿಯೊಂದನ್ನೂ ಚಾಚೂ ತಪ್ಪದೆ ಪಾಲಿಸಬೇಕು. ಜೊತೆಗೆ ನೇತ್ರವೈದ್ಯರನ್ನೂ ನಿಯಮಿತವಾಗಿ ಭೇಟಿಯಾಗುವುದು ಒಳಿತು! ಮಧುಮೇಹ ಕಣ್ಣನ್ನೂ ಕಿತ್ತುಕೊಳ್ಳಬಹುದು
ಸಕ್ಕರೆ ಕಾಯಿಲೆಗೂ ಕಣ್ಣಿನ ತಜ್ಞರಿಗೂ ಏನು ಸಂಬಂಧವೆಂದು ಯೋಚಿಸುತ್ತಿರುವಿರೇ? ಖಂಡಿತ ಸಂಬಂಧವಿದೆ. ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಅಂಶದಿಂದಾಗಿ ನಿಮ್ಮ ದೃಷ್ಟಿಯಲ್ಲಿ ತೊಂದರೆ ಉಂಟಾಗಬಹುದು. ಮುಂಜಾಗ್ರತೆ ವಹಿಸದಿದ್ದರೆ ಈ ತೊಂದರೆ ಮುಂದುವರೆದು ಕುರುಡುತನಕ್ಕೂ ಕಾರಣವಾಗಬಹುದು. ಹಾಗಿದ್ದರೆ ಬನ್ನಿ, ಮಧುಮೇಹವು ನಿಮ್ಮ ನೇತ್ರಗಳ ಮೇಲೆ ಹೇಗೆಲ್ಲ ಪರಿಣಾಮ ಬೀರಬಹುದು ಎಂಬ ಬಗ್ಗೆ ತಿಳಿಯೋಣ...

ಮಧುಮೇಹದ ರೆಟಿನೋಪತಿ
ಇದು ಮಧುಮೇಹಿಗಳು ಸಾಮಾನ್ಯವಾಗಿ ಎದುರಿಸುವ ಗಂಭೀರವಾದ ದೃಷ್ಟಿ ಸಮಸ್ಯೆ. ಇದು ಅಕ್ಷಿಪಟಲದ ರಕ್ತನಾಳಗಳ ಮೇಲೆ ಪರಿಣಾಮ ಬೀರಿ ಅವು ಕಟ್ಟಿಕೊಳ್ಳುವಂತೆ ಅಥವಾ ಸೋರುವಂತೆ ಮಾಡುತ್ತದೆ. ಇದರಿಂದ ನಿಮ್ಮ ದೃಷ್ಟಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

ಅಂಗ ವಿಭಜನೆಯ ರೆಟಿನೋಪತಿ
ಇದು ಕೂಡ ಒಂದು ರೀತಿಯ ಮಧುಮೇಹದ ರೆಟಿನೋಪತಿ. ಆದರೆ ಇದರಲ್ಲಿ ಅಕ್ಷಿಪಟಲದಲ್ಲಿ ಅಸಾಮಾನ್ಯ ನರಗಳ ಬೆಳವಣಿಗೆ ಕಂಡುಬರುತ್ತದೆ. ಇದು ನಾಲ್ಕು ಹಂತಗಳಲ್ಲಿ ಪರಿಣಾಮ ಬೀರುವಂತಹದ್ದಾಗಿದ್ದು ಮೊದಲ ಮೂರು ಹಂತಗಳಲ್ಲಿ ಅಂಗ ವಿಭಜನೆಯಾಗದೆ ನರಗಳಲ್ಲಿ ಬಾವು ಕಂಡುಬರುವುದಲ್ಲದೆ ನರಗಳು ಕಟ್ಟಿಕೊಳ್ಳುತ್ತವೆ. ಆದರೆ ಕೊನೆಯ ಹಂತದಲ್ಲಿ ನರಗಳ ಮೇಲೆ ಅನವಶ್ಯಕ ಅಂಗಗಳು ಬೆಳೆಯಲಾರಂಭಿಸುತ್ತವೆ.

ಮಧುಮೇಹದ ಮ್ಯಾಕ್ಯುಲೋಪತಿ
ಇದರಲ್ಲಿ ಕಣ್ಣಿನ ಮ್ಯಾಕ್ಯುಲಾ ಭಾದಿಸಲ್ಪಡುತ್ತದೆ. ಇದರಲ್ಲಿ ಬಾಹ್ಯದೃಷ್ಟಿಗೆ ಯಾವುದೇ ಹಾನಿಯಾಗದಿದ್ದರೂ ಕೇಂದ್ರ ದೃಷ್ಟಿಗೆ ಹಾನಿಯುಂಟಾಗುತ್ತದೆ. ಮಧುಮೇಹದ ಮ್ಯಾಕ್ಯುಲೋಪತಿಗೆ ಒಳಗಾದವರು ಮನೆಯಲ್ಲಿ ಆರಾಮವಾಗಿ ಸುತ್ತಾಡಬಹುದಾದರೂ ವ್ಯಕ್ತಿಗಳ ಮುಖ ಹಾಗೂ ಇತರ ಸೂಕ್ಷ್ಮ ವಸ್ತುಗಳ ನಡುವಿನ ಅಂತರವನ್ನು ಗುರುತಿಸುವಲ್ಲಿ ವಿಫಲರಾಗುತ್ತಾರೆ.

ಕಣ್ಣಿನ ಪೊರೆ
ಕಣ್ಣಿನ ಮಸೂರದ ಮೇಲೆ ಮೋಡದಂತಹ ಪದರ ಬೆಳೆದು ವ್ಯಕ್ತಿಯ ದೃಷ್ಟಿಯ ಸ್ಪಷ್ಟತೆಗೆ ಅಡಚಣೆಯುಂಟುಮಾಡುವ ಕಣ್ಣಿನ ಪೊರೆ ಬೆಳೆಯಲು ವಿವಿಧ ಕಾರಣಗಳಿದ್ದರೂ ಮಧುಮೇಹವೂ ಪ್ರಮುಖ ಕಾರಣವಾಗಿದೆ. ದಿನ ಕಳೆದಂತೆ ಬೆಳೆಯುತ್ತಾ ಹೋಗುವ ಈ ಪೊರೆಯನ್ನು ಲೇಸರ್ ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಬಹುದೆಂಬುದು ಸಮಾಧಾನಕರ ವಿಷಯ.

ಗ್ಲುಕೋಮಾ
ಮಧುಮೇಹಿಗಳಲ್ಲಿ ಗ್ಲುಕೋಮಾ ಸಂಭವ ಹೆಚ್ಚು. ಅವರ ಕಂಗಳಲ್ಲಿನ ದ್ರವ ಸರಿಯಾಗಿ ಸಂಚರಿಸದ ಕಾರಣ ಕಣ್ಣಿನ ನರಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ನರಗಳಿಗೆ ಹಾನಿಯುಂಟಾಗುತ್ತದೆ ಹಾಗೂ ದೃಷ್ಟಿಗೂ ತೊಂದರೆಯಾಗಬಹುದು.

ಇತರ ಕಾರಣಗಳಿಂದ ದೃಷ್ಟಿಯ ತೀಕ್ಷ್ಣತೆಯ ಗ್ರಹಿಕೆ ಕಡಿಮೆಯಾಗುವುದು
ಮಧುಮೆಹಿಗಳಿಗೆ ದೃಷ್ಟಿಯ ಆಳ ಹಾಗು ತೀಕ್ಷ್ಣತೆಯ ಗ್ರಹಿಕೆ ಕಡಿಮೆಯಾಗುವುದು. ಅವರು ಮಸುಕಾದ ಅಥವಾ ದುಪ್ಪಟ್ಟು ದೃಷ್ಟಿಯ ಸಮಸ್ಯೆಯನ್ನು ಎದುರಿಸ ಬೇಕಾಗಬಹುದು. ರೆಟೆನಾದ ಪ್ರತ್ಯೆಕತೆಯಿಂದಾಗಿ ದೃಷ್ಠಿ ಕ್ಷೇತ್ರದಲ್ಲಿ ಕಲೆಗಳು ಕಂಡುಬರುವುವು. ಕಣ್ಣುಗಳಲ್ಲಿ ತೇಲುವ ಕೆಂಪು ಚಿಕ್ಕೆಗಳು ಅಥವಾ ಗೆರೆಗಳು ಕಂಡುಬರುವವು. ಇವು ಕಂಗಳಲ್ಲಿನ ರಕ್ತಸ್ರಾವ, ಮುಸುಕು ಅಥವಾ ಮೋಡದಂತಹ ವಿನ್ಯಾಸವನ್ನು ಸೂಚಿಸುತ್ತವೆ. ಅದಕ್ಕೆ ನೀವು ಮಧುಮೇಹಿಗಳಾಗಿದ್ದಲ್ಲಿ ನಿಮ್ಮ ದೈಹಿಕ ತಪಾಸಣೆಯ ಜೊತೆಗೆ ಕಣ್ಣಿನ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಿಕೊಂಡು ಆರೋಗ್ಯವಂತರಾಗಿರಿ.



Click it and Unblock the Notifications
