ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

By Super

ತೇಜಸ್ವಿಯವರ ತಬರನ ಕಥೆ ಓದಿದವರಿಗೆಲ್ಲಾ ಸಕ್ಕರೆ ಕಾಯಿಲೆ ಬಗ್ಗೆ ಪರಿಚಯವಿದ್ದೇ ಇರುತ್ತದೆ. ಹಿಂದೆ ಶ್ರಮಜೀವಿಗಳಲ್ಲದಿದ್ದ ಬ್ರಿಟಿಷರಿಗೆ ಹೆಚ್ಚಾಗಿ ಬರುತ್ತಿದ್ದುದರಿಂದ ಸಕ್ಕರೆ ಕಾಯಿಲೆಯನ್ನು ಪರಂಗಿಯವರ ಕಾಯಿಲೆ ಎಂದೂ ಕರೆಯುತ್ತಿದ್ದರು. ಆದರೆ ಇಂದು ಈ ಪಿಡುಗು ಮಕ್ಕಳಿಂದ ವೃದ್ಧರವರೆಗೆ ಎಲ್ಲಾ ವಯಸ್ಸಿನವರನ್ನು ಸಮಾನವಾಗಿ ಕಾಡುತ್ತಿದೆ. ಮಧುಮೇಹಕ್ಕೆ ಆಹ್ವಾನ ನೀಡುವ ಕೆಟ್ಟ ಅಭ್ಯಾಸಗಳಿಂದ ದೂರವಿರಿ!

ಜನಸಾಮಾನ್ಯರಲ್ಲಿ ಈ ಕಾಯಿಲೆಯ ಬಗ್ಗೆ ಪೂರ್ವಾಗ್ರಹವಾಗಿ ಬಂದ ನಂಬಿಕೆ ಎಂದರೆ "ಸಕ್ಕರೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುತ್ತದೆ" ಎನ್ನುವುದು. ವಾಸ್ತವವಾಗಿ ಸಕ್ಕರೆ ತಿನ್ನುವುದಕ್ಕೂ ಸಕ್ಕರೆ ಕಾಯಿಲೆ ಬರುವುದಕ್ಕೂ ಯಾವುದೇ ಸಂಬಂಧವಿಲ್ಲ. ಸಕ್ಕರೆ ಕಾಯಿಲೆ ಬರುವುದು ನಮ್ಮ ದೇಹದಲ್ಲಿ ಮೇದೋಜೀರಕ ಗ್ರಂಥಿ (pancreas) ನಿಂದ ಇನ್ಸುಲಿನ್ ಉತ್ಪತ್ತಿಯಾಗುವುದು ಕಡಿಮೆಯಾದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಬಳಕೆಯಾಗದೇ ಇದ್ದಾಗ ಮಾತ್ರ (ಇವೆರಡೂ ಸ್ಥಿತಿಗಳನ್ನು ಅನುಸರಿಸಿ ಟೈಪ್-1 ಮತ್ತು ಟೈಪ್-2 ಡಯಾಬಿಟೀಸ್ ಎಂದು ವರ್ಗೀಕರಿಸಲಾಗಿದೆ).

ಈ ಕಾಯಿಲೆ ಬಂದ ಮೇಲೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದೇ ಹೋದರೂ ಸೂಕ್ತ ಜೀವನ ಶೈಲಿ, ಆಹಾರಪದ್ಧತಿ ಮತ್ತು ವೈದ್ಯರು ಸಲಹೆ ನೀಡಿದ ಔಷಧಿಗಳ ಸೇವನೆಯ ಮೂಲಕ ಸಂಪೂರ್ಣವಾಗಿ ಹತೋಟಿಯಲ್ಲಿಟ್ಟುಕೊಳ್ಳಬಹುದು. ರೋಗ ರುಜಿನಗಳ ಹೆಡೆಮುರಿ ಕಟ್ಟಿಹಾಕುವ ಅಜ್ಜಿ ಮಾಡಿದ ಮನೆಮದ್ದು!

ವಿವಿಧ ವೈದ್ಯಪದ್ಧತಿಯಲ್ಲಿ ಇಂದು ವಿವಿಧ ರೀತಿಯ ಚಿಕಿತ್ಸೆಗಳು ಹಾಗೂ ಔಷಧಿಗಳು ಲಭ್ಯವಿವೆ. ಆದರೆ ದುಬಾರಿಯಾದ ಈ ಔಷಧಿಗಳನ್ನು ಕೊಳ್ಳಲು ಎಲ್ಲರಿಗೂ ಸಾಧ್ಯವಾಗದು. ಈ ಔಷಧಿಗಳು ನೀಡುವಷ್ಟೇ ಪರಿಣಾಮಕಾರಿ ಫಲಿತಾಂಶವನ್ನು ನಮ್ಮ ಮನೆಯಲ್ಲಿರುವ ಸುಲಭ ಸಾಮಾಗ್ರಿಗಳೂ ನೀಡುತ್ತವೆ. ಆಯುರ್ವೇದದಿಂದ ಪ್ರಮಾಣಿತವಾದ ಈ ಏಳು ಮನೆಮದ್ದುಗಳು ನಿಜವಾಗಿಯೂ ಫಲಪ್ರದವಾಗಿವೆ. ಆದರೆ ಸೇವನೆಗೆ ಮೊದಲು ಆಯುರ್ವೇದ ವೈದ್ಯರಿಂದ ಸಲಹೆ ಪಡೆದುಕೊಂಡು ಅವರು ಸೂಚಿಸಿದ ಪ್ರಮಾಣ ಮತ್ತು ಅವಧಿಯಲ್ಲಿ ಸೇವಿಸುವುದು ಸೂಕ್ತವಾಗಿದೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಅತ್ಯಾವಶ್ಯಕ ತೈಲ (essential oils) ಗಳಿವೆ. ಇವುಗಳ ಸೇವನೆಯಿಂದ ದೇಹದಲ್ಲಿ eugenol, methyl eugenol ಮತ್ತು caryophyllene ಎಂಬ ಮೂರು ಪ್ರಮುಖ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಈ ಮೂರೂ ರಾಸಾಯನಿಕಗಳು ಕಲೆತಾಗ ಮೇದೋಜೀರಕ ಗ್ರಂಥಿಯ ಬೀಟಾ ಜೀವಕೋಶಗಳು (ಈ ಜೀವಕೋಶಗಳಿಂದ ಇನ್ಸುಲಿನ್ ಸಂಗ್ರಹವಾಗುತ್ತದೆ ಮತ್ತು ಅಗತ್ಯವಿದ್ದಷ್ಟು ಬಿಡುಗಡೆಯಾಗುತ್ತದೆ) ಹೆಚ್ಚಿನ ಪೋಷಕಾಂಶಗಳನ್ನು ಪಡೆಯುತ್ತದೆ. ಪರಿಣಾಮವಾಗಿ ರಕ್ತದಲ್ಲಿ ಹೆಚ್ಚಿನ ಇನ್ಸುಲಿನ್ ಬಿಡುಗಡೆಯಾಗುತ್ತದೆ. ಜೊತೆಗೇ oxidative stress ಎಂಬ ಒತ್ತಡವನ್ನೂ ಕಡಿಮೆಗೊಳಿಸುತ್ತದೆ.ಈ ವಿಧಾನ ಟೈಪ್-1 ಮಧುಮೇಹಕ್ಕೆ ಸೂಕ್ತವಾಗಿದೆ. (ಟೈಪ್-1 ಮಧುಮೇಹಕ್ಕೆ ನಮ್ಮ ಜೀವನ ಪ್ರತಿರೋಧ ವ್ಯವಸ್ಥೆಯೇ ಪರೋಕ್ಷವಾಗಿ ಕಾರಣವಾಗಿದೆ. ಇಲ್ಲಿ ಜೀವನ ಪ್ರತಿರೋಧ ವ್ಯವಸ್ಥೆ ಮೇದೋಜೀರಕ ಗ್ರಂಥಿಯ ಜೀವಕೋಶಗಳನ್ನು ಶತ್ರುಗಳೆಂದು ಪರಿಗಣಿಸಿ ನಿಶ್ಕ್ರಿಯಗೊಳಿಸುತ್ತದೆ. ಪರಿಣಾಮವಾಗಿ oxidative stress ಎಂಬ ಒತ್ತಡ ಉಂಟಾಗಿ ಇನ್ಸುಲಿನ್ ಉತ್ಪತ್ತಿಯಲ್ಲಿ ಕಡಿತವಾಗುತ್ತದೆ. ಇದಕ್ಕೆ ಕಾರಣಗಳು ಇನ್ನೂ ನಿಖರವಾಗಿ ಗೊತ್ತಾಗಿಲ್ಲ, ಸಂಶೋಧನೆ ಮುಂದುವರೆದಿದೆ)

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಚೆನ್ನಾಗಿ ಬಲಿತ (ಕಾಂಡದ ಕೆಳಭಾಗದ) ಎಲೆಗಳನ್ನು ಅಥವಾ ಐದರಿಂದ ಆರು ಮೇಲ್ಭಾಗದ ಎಲೆಗಳನ್ನು ನೀರು ನೀರಾಗುವವರೆಗೆ ಜಗಿದು ನುಂಗಬೇಕು. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬದಲಿಗೆ ಒಂದು ದೊಡ್ಡಚಮಚ ತುಳಸಿ ಎಲೆಗಳನ್ನು ಅರೆದು ಹಿಂಡಿ ತೆಗೆದ ರಸವನ್ನೂ ಕುಡಿಯಬಹುದು.

ಅಗಸೆ ಬೀಜಗಳು (Flax seeds (Alsi))

ಅಗಸೆ ಬೀಜಗಳು (Flax seeds (Alsi))

ಅಗಸೆಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಮತ್ತು ಹಲವು ಪೋಷಕಾಂಶಗಳಿವೆ. ಈ ನಾರನ್ನು ಕರಗಿಸಲು ದೇಹಕ್ಕೆ ಹೆಚ್ಚಿನ ಸಕ್ಕರೆ ಮತ್ತು ಕೊಬ್ಬು ಅಗತ್ಯವಿದೆ. ಇದೇ ಕಾರಣದಿಂದ ದೇಹದಲ್ಲಿ ಸಂಗ್ರಹವಾಗಿದ್ದ ಸಕ್ಕರೆ ಮತ್ತು ಕೊಬ್ಬು ಕರಗಿ ದೇಹದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಸಂಶೋಧನೆಗಳಿಂದ ಈ ಪ್ರಮಾಣ ಶೇಖಡಾ 28ರಷ್ಟು ಎಂದು ಕಂಡುಬಂದಿದೆ. ಇದು ಟೈಪ್ -೨ ಮಧುಮೇಹಕ್ಕೆ ಸೂಕ್ತವಾಗಿದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಒಂದು ದೊಡ್ಡಚಮಚ ಅಗಸೆಬೀಜದ ಒಣಪುಡಿಯನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕದಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು, ಬಳಿಕ ಮುಕ್ಕಾಲು ಘಂಟೆ ಏನನ್ನೂ ಸೇವಿಸಬಾರದು.

ನೀಲಾಬದರಿ ಮರದ ಎಲೆಗಳು (Leaves of bilberry (neelabadari) plant)

ನೀಲಾಬದರಿ ಮರದ ಎಲೆಗಳು (Leaves of bilberry (neelabadari) plant)

ಮಧುಮೇಹಕ್ಕೆ ಆಯುರ್ವೇದ ಪಂಡಿತರು ಈ ಮರದ ಎಲೆಗಳನ್ನು ಸಾವಿರಾರು ವರ್ಷಗಳಿಂದ ಉಪಯೋಗಿಸುತ್ತಾ ಬಂದಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸಿದ ಸಂಸ್ಥೆ ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ anthocyanidin ಎಂಬ ಪೋಷಕಾಂಶವಿದೆ ಎಂದು the Journal of Nutrition ಪತ್ರಿಕೆಯಲ್ಲಿ ಪ್ರಕಟಿಸಿದೆ. ಈ ಆಂಥೋಸಯಾನೈಡಿನ್ ನಮ್ಮ ರಕ್ತದಲ್ಲಿ ಮಿಳಿತಗೊಂಡ ಬಳಿಕ ರಕ್ತದಲ್ಲಿನ ಗ್ಲುಕೋಸ್ ವ್ಯರ್ಥವಾಗಿ ಮೂತ್ರದಲ್ಲಿ ಹೊರಹರಿದು ಹೋಗುವ ಬದಲು ಜೀವಕೋಶಗಳು ಪಡೆಯುವಲ್ಲಿ ಸಹಕರಿಸುತ್ತದೆ. ಇದೇ ಕಾರಣದಿಂದ ಟೈಪ್-೨ ಮಧುಮೇಹ ಶೀಘ್ರವೇ ಹತೋಟಿಗೆ ಬರುತ್ತದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಸುಮಾರು ಒಂದು ಹಿಡಿಯಷ್ಟು ಹಸಿ ಎಲೆಗಳನ್ನು ಒನಕೆ ಅಥವಾ ಒರಳಿನಲ್ಲಿ ಚೆನ್ನಾಗಿ ಅರೆದು ಮಿಶ್ರಣ ತಯಾರಿಸಿ. ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ನೂರು ಮಿಲಿಗ್ರಾಂನಷ್ಟು ಸೇವಿಸಿ. ಪರ್ಯಾಯವಾಗಿ ಆಯುರ್ವೇದ ಅಂಗಡಿಗಳಲ್ಲಿ ಸಿದ್ಧರೂಪದಲ್ಲಿ ಸಿಗುವ ಒಣಪುಡಿಯನ್ನೂ ನೀರಿನಲ್ಲಿ ಬೆರೆಸಿ ಕುಡಿಯಬಹುದು.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿ ಸೇವನೆಯಿಂದ ಕಡಿಮೆ ಇರುವ ರಕ್ತದೊತ್ತಡ ಮತ್ತು ಇನ್ಸುಲಿನ್ ಪ್ರಮಾಣದಲ್ಲಿ ಸುಧಾರಣೆ ಕಂಡುಬರುತ್ತದೆ. ಜೊತೆಗೇ ತೂಕ ಏರುವುದನ್ನು ನಿಯಂತ್ರಿಸಿ ಹೃದಯಾಘಾತದ ಸಂಭವಗಳಿಂದ ಕಾಪಾಡುತ್ತದೆ. ಪ್ರತಿದಿನಕ್ಕೆ ಅರ್ಧ ಚಿಕ್ಕ ಚಮಚದಷ್ಟು ಪ್ರಮಾಣ ಅಧ್ಬುತಗಳನ್ನೇ ಸಾಧಿಸಬಲ್ಲುದು.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ನಿಮ್ಮ ನಿತ್ಯದ ಊಟದಲ್ಲಿ ಒಂದು ಗ್ರಾಮ್ ದಾಲ್ಚಿನ್ನಿಯ ಪುಡಿಯನ್ನು ಸೇರಿಸಿ ಸೇವಿಸಿ. ಒಂದು ತಿಂಗಳ ಸತತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಶೀಘ್ರ ಹತೋಟಿಗೆ ಬರುತ್ತದೆ. ಇದು ಟೈಪ್ ೧ ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

ಹಸಿರು ಟೀ

ಹಸಿರು ಟೀ

ಹಸಿರು ಟೀ ರುಚಿಯಲ್ಲಿ ಮತ್ತು ಪೋಷಕಾಂಶಗಳಲ್ಲಿ ಸಾಮಾನ್ಯ ಟೀ ಗಿಂತ ಭಿನ್ನವಾಗಿದೆ. ಇದರ ಮುಖ್ಯ ಅಂಶವೆಂದರೆ ಪಾಲಿಫಿನಾಲ್ (polyphenol) ಎಂಬ ಪೋಷಕಾಂಶವಾಗಿದೆ. ಇದೊಂದು ಪ್ರಬಲವಾದ ಆಂಟಿ ಆಕ್ಸಿಡೆಂಟು ಮತ್ತು hypo-glycaemic compound ಆಗಿದ್ದು ರಕ್ತದಲ್ಲಿನ ಸಕ್ಕರೆ ಅಂಶವನ್ನು ದೇಹ ಬಳಸಿಕೊಳ್ಳಲು ಸಹಕರಿಸುತ್ತದೆ. ಇದು ಟೈಪ್ -೨ ಮಧುಮೇಹಕ್ಕೆ ಸೂಕ್ತವಾಗಿದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಹಸಿರು ಟೀ ಪುಡಿ ಇರುವ ಪೊಟ್ಟಣವನ್ನು ಸುಮಾರು ಎರಡರಿಂದ ಮೂರು ನಿಮಿಷಗಳವರೆಗೆ ಬಿಸಿನೀರಿನಲ್ಲಿರಿಸಿ (ಕುದಿಸಬಾರದು). ಈ ನೀರನ್ನು ಬೆಚ್ಚಗಿರುವಂತೆಯೇ ಹಾಲು ಅಥವಾ ಸಕ್ಕರೆ ಬೆರೆಸದೇ ಹಾಗೇ ಕುಡಿಯಿರಿ. ಈ ಟೀ ಬೆಳಗ್ಗಿನ ಉಪಾಹಾರಕ್ಕೂ ಅರ್ಧ ಘಂಟೆ ಮೊದಲು ಕುಡಿಯಬೇಕು.

ನುಗ್ಗೇಕಾಯಿ ಮರದ ಎಲೆಗಳು (moringa leaf)

ನುಗ್ಗೇಕಾಯಿ ಮರದ ಎಲೆಗಳು (moringa leaf)

ನುಗ್ಗೆ ಮರದ ಎಲೆಗಳು ಚಿಕ್ಕದಾಗಿದ್ದರೂ ಪೋಷಕಾಂಶಗಳ ಪಟ್ಟಿ ಜೋರಾಗಿದೆ. ಈ ಎಲೆಗಳು ಆಹಾರವನ್ನು ಜೀರ್ಣೀಸಿಕೊಳ್ಳುವ ಗತಿಯನ್ನು ಕೊಂಚ ನಿಧಾನಗೊಳಿಸಿ ಸಕ್ಕರೆಯ ಬಳಕೆಯನ್ನು ಹೆಚ್ಚು ಸಮರ್ಥಗೊಳಿಸಲು ಸಹಕರಿಸುತ್ತದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಸುಮಾರು ಒಂದು ಹಿಡಿಯಷ್ಟು ನುಗ್ಗೇ ಮರದ ಹಸಿ ಎಲೆಗಳನ್ನು ಚೆನ್ನಾಗಿ ಅರೆದು ಹಿಂಡಿ ರಸ ತೆಗೆಯಿರಿ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸುಮಾರು ಕಾಲು ಕಪ್ ಪ್ರಮಾಣದಲ್ಲಿ ಈ ನೀರನ್ನು ಕುಡಿಯಿರಿ. ಇದು ಟೈಪ್ -1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

ಬೇವಿನ ಎಲೆಗಳು (ಕಹಿಬೇವು)

ಬೇವಿನ ಎಲೆಗಳು (ಕಹಿಬೇವು)

ಕಹಿಬೇವಿನ ಎಲೆಗಳು ವಿವಿಧ ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಮುಖ್ಯವಾಗಿ ಇನ್ಸುಲಿನ್ ಬಳಕೆಯನ್ನು ಗರಿಷ್ಟಗೊಳಿಸಲು ನೆರವಾಗುತ್ತದೆ. ಇದರಿಂದ ನಿಧಾನವಾಗಿ ಟೈಪ್ -೨ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೇ ನರಗಳು ಸೆಳೆದುಕೊಂಡಿದ್ದರೆ ಅವುಗಳನ್ನು ಸಡಿಲಗೊಳಿಸಿ ರಕ್ತಸಂಚಾರ ಸುಗಮವಾಗಲು ಸಹಕರಿಸುತ್ತದೆ. ಇನ್ನೂ ಮುಖ್ಯವಾಗಿ ದೇಹ ಮಧುಮೇಹದ ಕಾರಣದಿಂದಾಗಿ hypoglycaemic ಔಷಧಿಗಳ ಮೇಲಿನ ಅವಲಂಬನೆಯನ್ನು ಮುಕ್ತಗೊಳಿಸುತ್ತದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಕಹಿಬೇವಿನ ಎಲೆಗಳನ್ನು ಮತ್ತು ತುದಿಯ ಕಾಂಡವನ್ನು ನುಣ್ಣಗೆ ಅರೆದು ರಸ ಹಿಂಡಿಕೊಳ್ಳಿ. ಒಂದು ಲೋಟ ಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಈ ರಸವನ್ನು ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ.ಬಳಿಕ ಸುಮಾರು ಮುಕ್ಕಾಲು ಘಂಟೆ ಏನನ್ನೂ ಸೇವಿಸಬಾರದು.

ಹಾಗಲಕಾಯಿ

ಹಾಗಲಕಾಯಿ

ಕಹಿ ಪದಾರ್ಥಗಳಲ್ಲಿ ಅದರಲ್ಲೂ ಸಕ್ಕರೆಯ ಅಂಶವನ್ನು ತಗ್ಗಿಸುವಲ್ಲಿ ಹಾಗಲಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಇದನ್ನು ನೀವು ಬಳಸಬೇಕು. ಇದು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.

ಹಸಿರು ತರಕಾರಿ

ಹಸಿರು ತರಕಾರಿ

ಹಸಿರು ತರಕಾರಿ ತಿನ್ನಿ ಮಧುಮೇಹ ರೋಗ ತಡೆಯಲು ಒಳ್ಳೆಯ ದಾರಿಯೆಂದರೆ ಹಸಿರಾಗಿರುವ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರದಲ್ಲಿಡಲು ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಡಯಾಬಿಟಿಸ್ ನಿಂದ ಕಣ್ಣಿಗೆ ದೃಷ್ಟಿ ದೋಷ ಉಂಟಾಗುತ್ತದೆ. ಇದರಿಂದ ವಿಟಾಮಿನ್ ಬಿ ಮತ್ತು ವಿಟಾಮಿನ್ ಸಿ ಅಧಿಕವಾಗಿರುವ ತರಕಾರಿಗಳನ್ನು ಹೆಚ್ಚಾಗಿ ಬಳಸಿ.

ಓಟ್ ಮೀಲ್

ಓಟ್ ಮೀಲ್

ಮಧುಮೇಹವನ್ನು ದೂರ ಮಾಡಲು ಪ್ರತೀ ದಿನ ಓಟ್ ಮೀಲ್ ಉಪಾಹಾರ ಸೇವನೆ ಮಾಡಿ. ಓಟ್ ಮೀಲ್ ನಲ್ಲಿ ಹೆಚ್ಚಿನ ನಾರಿನಾಂಶವಿದೆ ಮತ್ತು ಇದರಲ್ಲಿರುವ ಕಾರ್ಬ್ ಗಳು ರಕ್ತದ ಸಕ್ಕರೆಯಾಗಲು ತುಂಬಾ ಸಮಯ ಬೇಕಾಗುತ್ತದೆ. ಇದರಿಂದ ಪ್ರತೀ ದಿನ ಓಟ್ ಮೀಲ್ ಉಪಹಾರ ಸೇವಿಸಿ.

ಕ್ಯಾರೆಟ್

ಕ್ಯಾರೆಟ್

ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಕ್ಯಾರೆಟ್ ಪ್ರಕೃತಿಯ ಒಂದು ಕೊಡುಗೆ. ಇದು ಮಧುಮೇಹವನ್ನು ತಡೆಯಲು ನೆರವಾಗುತ್ತದೆ. ಇದು ಡಯಾಬಿಟಿಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೆಳಗ್ಗಿನ ಜಾವ ವಾಕಿಂಗ್ ಗೆ ಹೋಗುವಾಗ ಕ್ಯಾರೆಟ್ ತಿನ್ನಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆ ಪ್ರಯತ್ನಿಸಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಆಲಿವ್ ತೈಲ ಮಧುಮೇಹವನ್ನು ತಡೆಯಲು ಉತ್ತಮ ರೀತಿಯಲ್ಲಿ ನೆರವಾಗುತ್ತದೆ. ಆಲಿವ್ ಎಣ್ಣೆಯಲ್ಲಿರುವ ಉತ್ತಮ ಕೊಬ್ಬು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಆಹಾರ ಹೆಚ್ಚು ರುಚಿ ನೀಡಲು ಆಲಿವ್ ತೈಲವನ್ನು ಬಳಸಿ.

ಪಾಲಾಕ್ ಸೊಪ್ಪು

ಪಾಲಾಕ್ ಸೊಪ್ಪು

ಸಕ್ಕರೆ ಕಾಯಿಲೆ ವ್ಯಕ್ತಿಗಳು ಪಲಾಕ್ ಅನ್ನು ಸೇವಿಸಲೇಬೇಕು. ಪಾಲಾಕ್ ಸ್ವಲ್ಪ ಕಹಿಯಾಗಿರುತ್ತದೆ ಆದರೆ ಅದು ಒಳಗೊಂಡಿರುವ ಪ್ರೊಟೀನ್ ದೇಹಕ್ಕೆ ಉತ್ತಮ.

ಸೇಬು

ಸೇಬು

"ದಿನಕ್ಕೊಂದು ಸೇಬು ತಿನ್ನಿ, ವೈದ್ಯರನ್ನು ದೂರವಿಡಿ" ಎಂಬ ನಾಣ್ಣುಡಿಯಿದೆ.ನಿಜ ಸೇಬನ್ನು ತಿನ್ನುವುದರಿಂದ ಆರೋಗ್ಯ ವೃದ್ಧಿಗೊಳ್ಳುತ್ತದೆ. ಅದರಲ್ಲೂ ಸೇಬಿನಲ್ಲಿ ಕ್ಯಾಲೊರಿ ಪ್ರಮಾಣ ಕಡಿಮೆಯಿದೆ, ಹೆಚ್ಚಿನ ನಾರಿನಂಶವಿದೆ. ಇದು ಕೊಲೆಸ್ಟ್ರಾಲ್‍ಗಳ ಜೊತೆಗೆ ಹೊಡೆದಾಡುವುದರ ಜೊತೆಗೆ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರ ಸಿಪ್ಪೆಯನ್ನು ತೆಗೆಯದೆ ಹಾಗೆಯೇ ತಿನ್ನಿ, ಹೆಚ್ಚಿನ ಲಾಭವನ್ನು ಪಡೆಯಿರಿ.ಸೇಬಿನಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ಒಂದು ಸಮೃದ್ಧವಾದ ಅಂಟಿ ಬಯೋಟಿಕ್ ಆಗಿದ್ದು, ಇದು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ.

ಹುರುಳಿ

ಹುರುಳಿ

ಬೇಯಿಸಿದ, ನೆನೆಸಿದ ಅಥವಾ ಒಣಗಿಸಿದ ಯಾವುದಾದರು ಸರಿ, ಹುರುಳಿಯು ನಿಮ್ಮ ರಕ್ತದಲ್ಲಿರುವ ಅಧಿಕ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹುರುಳಿಯಲ್ಲಿ ಅಧಿಕ ಪ್ರೋಟಿನ್ ಇರುತ್ತದೆ. ಇವು ಮಾಂಸಾಹಾರಕ್ಕೆ ಪೂರಕವಾಗಿ ಬಳಸಲ್ಪಡುತ್ತವೆ. ಮತ್ತೊಂದು ಆಶಾದಾಯಕವಾದ ಸುದ್ದಿಯೆಂದರೆ ಹುರುಳಿಯಲ್ಲಿರುವ ಫೈಟೊನ್ಯೂಟ್ರಿಯೆಂಟ್ಸ್ ಹೃದಯಕ್ಕೆ ಮಾತ್ರವಲ್ಲದೆ, ಮಧುಮೇಹ ನಿಯಂತ್ರಣಕ್ಕು ಸಹ ಉಪಯೋಗಕಾರಿ.

ಒಣ ಹಣ್ಣುಗಳು

ಒಣ ಹಣ್ಣುಗಳು

ಒಣ ಹಣ್ಣುಗಳು " ನಿಧಾನವಾಗಿ ಜೀರ್ಣವಾಗುವ" ಆಹಾರವಾಗಿದೆ. ಇವು ತಮ್ಮಲ್ಲಿರುವ ಹೆಚ್ಚಿನ ಪ್ರಮಾಣದ ನಾರು ಮತ್ತು ಪ್ರೊಟೀನ್‍ಗಳಿಂದಾಗಿ ರಕ್ತದಲ್ಲಿರುವ ಸಕ್ಕರೆ ಅಂಶದ ಸ್ನೇಹಿಯಾಗಿ ಕೆಲಸ ಮಾಡುತ್ತವೆ. ಅಧ್ಯಯನಗಳ ಪ್ರಕಾರ ನಿಯಮಿತವಾಗಿ ಪ್ರತಿದಿನ ಒಣ ಹಣ್ಣುಗಳನ್ನು ಸೇವಿಸುವುದರಿಂದಾಗಿ ಹೃದಯದ ಬೇನೆಯನ್ನು ತಡೆಯಬಹುದಂತೆ. ಒಣ ಹಣ್ಣುಗಳಲ್ಲಿರುವ ಟೊಕೊಟ್ರೈಯೆನೊಲ್‍ಗಳು ನಮಗೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಆದರೆ ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕೆಂಬುದನ್ನು ಮರೆಯಬೇಡಿ

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಕಡಿಮೆ ಕೊಬ್ಬು ,ಸಮೃದ್ಧ ನಾರಿನಂಶದಿಂದ ಕೂಡಿರುವ ಸಿಟ್ರಸ್ ಹಣ್ಣುಗಳು ತಮ್ಮಲ್ಲಿರುವ ಉತ್ತಮ ಪೋಷಕಾಂಶಗಳಿಂದಾಗಿ ಆರೋಗ್ಯಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತವೆ. ಉದಾಹರಣೆಗೆ ; ಕಿತ್ತಳೆ ಹಣ್ಣಿನಲ್ಲಿ ಫ್ಲವೊನೊಯ್ಡ್ಸ್, ಕ್ಯಾರೊಟೆನೊಯ್ಡ್ಸ್, ಟರ್ಪೈನ್ಸ್, ಪೆಕ್ಟಿನ್ಸ್ ಮತ್ತು ಗ್ಲುಟತಿಯೊನ್ ಮತ್ತು ಫೋಟೊನ್ಯೂಟ್ರಿಯೆಂಟ್‍ಗಳ ಸಮೃದ್ಧ ಆಗರವಿದೆ. ಇವುಗಳೆಲ್ಲವು ಸೇರಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ. ಪ್ರಪಂಚದ ನಾನಾ ಮೂಲೆಗಳಲ್ಲಿ ನಡೆದ ಅಧ್ಯಯನಗಳಲ್ಲಿ ತಿಳಿದು ಬಂದ ವಿಚಾರದ ಪ್ರಕಾರ ಮಧುಮೇಹಿಗಳಲ್ಲಿ ವಿಟಮಿನ್ ಸಿಯ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ನಿಮ್ಮ ತಿಂಡಿಯಲ್ಲಿ ಅಂಟಿ ಆಕ್ಸಿಡೆಂಟ್ ಹೆಚ್ಚಾಗಿರುವ ಸಿಟ್ರಸ್ ಹಣ್ಣುಗಳನ್ನು ಸೇರಿಸುವುದನ್ನು ಮರೆಯಬೇಡಿ.

ಮೀನು

ಮೀನು

ಹೃದಯದ ಬೇನೆ ಉಂಟಾಗಲು ಮೂಲ ಕಾರಣ ಮಧುಮೇಹ. ವಾರಕ್ಕೆ ಒಮ್ಮೆಯಾದರು ಮೀನನ್ನು ಸೇವಿಸುವುದರಿಂದ ಶೇ.40ರಷ್ಟು ಈ ಸಮಸ್ಯೆ ಬರದಂತೆ ತಡೆಯಬಹುದು. ಮೀನಿನಲ್ಲಿರುವ ಒಮೆಗಾ - 3 ಕೊಬ್ಬಿನ ಆಮ್ಲಗಳು ದೇಹದಲ್ಲಿ ಉರಿಯೂತವನ್ನು ತಡೆಯುತ್ತವೆ. ಜೊತೆಗೆ ಮಧುಮೇಹ ಹಾಗು ಇನ್ಸುಲಿನ್ ಪ್ರತಿರೋಧಕವಾಗಿ ಕೆಲಸ ಮಾಡುತ್ತವೆ.

ಬೆಂಡೆಕಾಯಿ

ಬೆಂಡೆಕಾಯಿ

ಇದರಲ್ಲಿರುವ ದ್ರವ ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಬೆಂಡೆಕಾಯಿಯ ತುದಿ ಮುರಿದು ಅದರ ದ್ರವವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಕುಡಿಯಬೇಕು. ಈ ರೀತಿ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಯಾವುದೇ ಇನ್ಸುಲಿನ್ ಚುಚ್ಚು ಮದ್ದಿನ ಅಗತ್ಯ ಕೂಡ ಕಂಡು ಬರುವುದಿಲ್ಲ.

ಕುಂಬಳಕಾಯಿ

ಕುಂಬಳಕಾಯಿ

ಕುಂಬಳಕಾಯಿ ಸಿಹಿ ಇರವುದರಿಂದ ಇದನ್ನು ಮಧುಮೇಹಿಗಳು ತಿನ್ನಬಾರದೆಂದು ಯೋಚಿಸುತ್ತೇವೆ. ಆದರೆ ಕುಂಬಳಕಾಯಿ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು.

X
Desktop Bottom Promotion