For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗೆ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ...

By Deepak M
|

ಮಧುಮೇಹವು ಇತ್ತೀಚೆಗೆ ಸಾಮಾನ್ಯ ಮತ್ತು ಅದೇ ಸಮಯಕ್ಕೆ ಗಂಭೀರವಾದ ಸಮಸ್ಯೆಯಾಗಿದೆ. ಮಧುಮೇಹಿಗಳ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವುದನ್ನು ನಾವು ಗಮನಿಸಬಹುದು. ಬರೀ ನಮ್ಮ ನಿಮ್ಮ ನಡುವಿನ ಜನರಷ್ಟೇ ಅಲ್ಲದೆ ಇಡೀ ವಿಶ್ವದಲ್ಲಿನ ಜನರನ್ನು ಸಹ ಭಾದಿಸುತ್ತಿದೆ. ಮಧುಮೇಹಿಗಳೇ ನಿಮಗೋಸ್ಕರನೇ ಈ ವಿಶೇಷ ಉಪಹಾರಗಳು!

ಅಗತ್ಯಕ್ಕಿಂತ ಹೆಚ್ಚಿನ ತೂಕವನ್ನು ಹೊಂದಿರುವುದು, ಜಡತ್ವದಿಂದ ಕೂಡಿದ ಜೀವನ ಶೈಲಿಯನ್ನು ಹೊಂದಿರುವುದು, ವ್ಯಾಯಾಮದ ಕೊರತೆ ಮತ್ತು ಸಕ್ಕರೆ, ಕೊಬ್ಬಿನಂತಹ ಅಧಿಕ ಕ್ಯಾಲೊರಿ ಇರುವ ಆಹಾರವನ್ನು ಸೇವಿಸುವುದು, ಇತ್ಯಾದಿ ಅಂಶಗಳಿಂದ ಈ ಮಧುಮೇಹವು ಬರುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಈ ಕೆಳಕಂಡ ಆಹಾರಗಳನ್ನು ಸೇವಿಸಿ.

Eat these to prevent diabetes

ಮೆಂತೆ
ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಆರೋಗ್ಯಕರ ಮಟ್ಟದಲ್ಲಿ ಇರಿಸಲು ಮೆಂತೆ ಅತ್ಯುತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ಟೈಪ್ 2 ಮಧುಮೇಹಿಗಳಿಗೆ ಇದು ಉತ್ತಮ ಪರಿಹಾರವಾಗಿದ್ದು ದೇಹದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಪ್ರಮಾಣವನ್ನು ಜೀವಕೋಶಗಳು ಹೀರಿಕೊಳ್ಳಲು ನೆರವಾಗುತ್ತದೆ. ಮೆಂತೆಸೊಪ್ಪಿನ ದೋಸೆ, ಸಾರು ಹಾಗೂ ಮೆಂತೆಕಾಳುಗಳನ್ನು ನೆನೆಸಿ ಅರೆದು ಸೇರಿಸಿ ಮಾಡಿದ ಖಾದ್ಯಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಉತ್ತಮ ಪರಿಣಾಮ ಕಂಡುಕೊಳ್ಳಬಹುದು. ಮಧುಮೇಹ ನಿಯಂತ್ರಿಸುವ ಪವರ್-ಮೆಂತೆ ಕಾಳಿನಲ್ಲಿದೆ!

ಚಕ್ಕೆ
ಚಕ್ಕೆಯು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುತ್ತದೆ. ಇದು ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಜೊತೆಗೆ ಇದು ಟ್ರೈಗ್ಲಿಸರೈಡ್ ಮಟ್ಟಗಳನ್ನು, ಎಲ್‌ಡಿಎಲ್ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಕರಿಸುತ್ತದೆ. ಕಾಫಿ ಅಥವಾ ಟೋಸ್ಟ್ ಸೇವಿಸುವ ಮೊದಲು ಅದರ ಮೇಲೆ ಸ್ವಲ್ಪ ಚಕ್ಕೆ ಪುಡಿಯನ್ನು ಚಿಮುಕಿಸಿಕೊಳ್ಳಿ.

ಸೇಬು ಹಣ್ಣು
ದಿನಕ್ಕೊಂದು ಸೇಬು ನಿಮ್ಮನ್ನು ವೈದ್ಯರಿಂದ ದೂರವಿಡುತ್ತದೆ ಇದು ತುಂಬಾ ಜನಪ್ರಿಯ ನುಡಿ ಮತ್ತು ನಿಜವೂ ಹೌದು. ಸೇಬು ಸೇವನೆಯಿಂದ ಮಧುಮೇಹವನ್ನು ತಡೆಯಬಹುದು. ಕಡಿಮೆ ಕ್ಯಾಲರಿ ಮತ್ತು ಗರಿಷ್ಠ ಮಟ್ಟದಲ್ಲಿ ನಾರಿನಾಂಶ ಹೊಂದಿರುವ ಸೇಬು ಮಧುಮೇಹ ಆಹಾರ ಕ್ರಮದಲ್ಲಿ ಅದ್ಭುತ ಆಹಾರ. ಸೇಬಿನ ಸಿಪ್ಪೆ ತೆಗೆಯದೆ ತಿಂದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಕ್ಯಾರೆಟ್
ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಕ್ಯಾರೆಟ್ ಪ್ರಕೃತಿಯ ಒಂದು ಕೊಡುಗೆ. ಇದು ಡಯಾಬಿಟಿಸ್ ಅನ್ನು ತಡೆಯಲು ನೆರವಾಗುತ್ತದೆ. ಇದು ಮಧುಮೇಹ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೆಳಗಿನ ಜಾವ ವಾಕಿಂಗ್ ಗೆ ಹೋಗುವಾಗ ಕ್ಯಾರೆಟ್ ತಿನ್ನಿ. ಮಧುಮೇಹಕ್ಕೆ ತಡೆ ಹಾಕುವ ಆರೋಗ್ಯಕರ ಜೀವನಶೈಲಿ

ಸೀತಾಫಲ ಹಣ್ಣು ಸೇವಿಸಿ
ಸೀತಾಫಲವು ಮಧುಮೇಹಿ ಪ್ರತಿರೋಧಕ ಗುಣಲಕ್ಷಣಗಳನ್ನು ಹೊ೦ದಿದೆ ಸೀತಾಫಲಗಳಲ್ಲಿ ಅನೇಕ ಮಧುಮೇಹಿ ಪ್ರತಿಬ೦ಧಕ ಗುಣಲಕ್ಷಣಗಳಿವೆ. ಸೀತಾಫಲದ ಈ ವಿಶಿಷ್ಟವಾದ ಗುಣವಿಶೇಷವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸಲು ಸಹಕರಿಸುತ್ತದೆ ಹಾಗೂ ಶರೀರದ ಮಾ೦ಸಖ೦ಡಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳುವ೦ತೆ ಮಾಡುವುದರ ಮೂಲಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ತನ್ಮೂಲಕ ಶರೀರದ ಸಕ್ಕರೆಯ ಪ್ರಮಾಣದ ಬಳಕೆಯನ್ನು ನಿಯಮಿತಗೊಳಿಸಿ ನಿಯ೦ತ್ರಿಸಲು ಸಹಕರಿಸುತ್ತದೆ. ಆದ್ದರಿ೦ದ, ಸೀತಾಫಲಗಳನ್ನು ದಿನನಿತ್ಯವೂ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿ೦ದ ಅವುಗಳಲ್ಲಿರುವ ಮಧುಮೇಹ ಸ೦ಬ೦ಧಿ ಪ್ರಯೋಜನಗಳು, ಮಧುಮೇಹಿಗಳಿಗೆ ಮಧುಮೇಹದ ನಿಯ೦ತ್ರಣದಲ್ಲಿ ಸಹಕಾರಿಯಾಗುತ್ತವೆ.

English summary

Eat these to prevent diabetes

Diabetes isn't known as a silent killer just for kicks. The growing number of people falling prey to this metabolic disease has raised quite an alarm worldwide. Being overweight, leading a sedentary lifestyle, lack of exercise and consumption of high calorie, sugary and fatty foods are the reasons that give rise to this lifestyle ailment. Here's a list of foods that help in preventing diabetes
Story first published: Wednesday, July 13, 2016, 9:59 [IST]
X
Desktop Bottom Promotion