ಟೈಪ್‌-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ

By: manu
Subscribe to Boldsky

ಮಧುಮೇಹ ಎಂದಾಕ್ಷಣ ಕೆಲವರಲ್ಲಿ ಅಳುಕಿನ ಭಾವ ಎದುರಾಗುತ್ತದೆ. ಇದರಿಂದ ತಮ್ಮ ಜೀವನವೇ ಮುಗಿದ ಹಾಗೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಇನ್ನು ಕೆಲವರು ಅನೇಕ ಔಷಧಿ ಮತ್ತು ಮಾತ್ರೆಗಳನ್ನು ಸೇವಿಸುತ್ತಾ ನರಳುತ್ತಿರುತ್ತಾರೆ. ತಾವು ಸೇವಿಸುವ ಔಷಧಿಗಳಿಂದ ಕೆಲವರಿಗೆ ಅಡ್ಡಪರಿಣಾಮಗಳು ಉಂಟಾಗಿ ಅನೇಕ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ.

ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಾಣವು ನಿಮ್ಮ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಪ್ರಾಕೃತಿಕವಾಗಿ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗುವ ಸುಲಭದ ಸಂಗತಿಗಳನ್ನು ನಿಮ್ಮ ಉಪಯೋಗಕ್ಕಾಗಿ ನೀಡಿದೆ. ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಮತ್ತು ರಕ್ತದೊತ್ತದ ಮಟ್ಟವನ್ನು ಸಮತೋಲನದಲ್ಲಿಡಲು ಸರ್ವಪ್ರಯತ್ನ ಮಾಡಬೇಕಿದೆ. ನಿರ್ಲಕ್ಷಿಸಿದರೆ, ಮಧುಮೇಹದ ತೊಂದರೆಯು ಹೆಚ್ಚಾಗಿ ಅಪಾಯವುಂಟಾಗಲು ಕಾರಣವಾಗುತ್ತದೆ.  ಮಧುಮೇಹಕ್ಕೆ ತಡೆ ಹಾಕುವ ಆರೋಗ್ಯಕರ ಜೀವನಶೈಲಿ

ಅದರಲ್ಲೂ 2 ನೇ ವಿಧದ ಅಥವಾ ಟೈಪ್ 2 ಮಧುಮೇಹದಲ್ಲಿ ನಿಮ್ಮ ದೇಹದಲ್ಲಿರುವ ಸಕ್ಕರೆ ಅಥವಾ ಗ್ಲುಕೋಸ್ ಮಟ್ಟ ಕಡಿಮೆಯಾಗಿ ಕೋಶಗಳಿಗೆ ಅದನ್ನು ಪಂಪ್ ಮಾಡುವ ಸಾಕಷ್ಟು ಇನ್ಸುಲಿನ್ ಇಲ್ಲವಾಗುತ್ತದೆ. ಇದರಿಂದಾಗಿ 2 ನೇ ವಿಧದ ಮಧುಮೇಹವು ಇನ್ಸುಲಿನ್ ನಿರೋಧಕ ವಿಧದ ಮಧುಮೇಹ ಎಂದಾಗಿದೆ. ಸಾಮಾನ್ಯವಾಗ ಟೈಪ್ 2 ಮಧುಮೇಹವು ಎಲ್ಲಾ ವಯಸ್ಸಿನವರನ್ನೂ ಕಾಡುತ್ತದೆ.

ಆರಂಭದಲ್ಲಿ, ಈ ವಿಧದ ಮಧುಮೇಹದ ಲಕ್ಷಣದಲ್ಲಿ ಶಕ್ತಿಯ ಕೊರತೆ, ಆಯಾಸ, ತೂಕ ಕಡಿಮೆಯಾಗುವುದು, ಆಗಾಗ್ಗೆ ಮೂತ್ರಶಂಕೆ, ಮಬ್ಬಾದ ದೃಷ್ಟಿ ಮತ್ತು ಆಗಾಗ್ಗೆ ಹಸಿವಾಗುವುದಾಗಿದೆ. ಇದು ಹೆಚ್ಚಾಗುತ್ತಾ ಹೋದಂತೆ, ಕಾಲುಗಳಲ್ಲಿ ನೋವು ಮತ್ತು ಜೋಮು ಹಿಡಿಯುವುದು ಉಂಟಾಗುತ್ತಿರುತ್ತದೆ; ಅವರಿಗೆ ಗಾಯಗಳುಂಟಾದಾಗ ಇದು ನಿಧಾನವಾಗಿ ಒಣಗುತ್ತದೆ.  ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಜೀವನಶೈಲಿಯಲ್ಲಿ ಮತ್ತು ಆಹಾರ ಕ್ರಮದಲ್ಲಿ ಬದಲಾವಣೆಯನ್ನು ತರುವುದರ ಜೊತೆಗೆ, ಟೈಪ್ 2 ಮಧುಮೇಹವನ್ನು ನಿಯಂತ್ರಣಕ್ಕೆ ತರಲು ಆಯುರ್ವೇದ ಔಷಧಗಳನ್ನು ಬಳಸಬಹುದಾಗಿದೆ. ಇಂದಿನ ಲೇಖನದಲ್ಲಿ ಈ ವಿಧದ ಮಧುಮೇಹವನ್ನು ನಿಯಂತ್ರಣಕ್ಕೆ ತರುವ ಆಯುರ್ವೇದ ಔಷಧಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಬೇವಿನ ಎಲೆಗಳು

ಬೇವಿನ ಎಲೆಗಳು

ಇದನ್ನು ಜ್ಯೂಸ್ ರೂಪದಲ್ಲಿ ಅಥವಾ ಹಾಗೆಯೇ ಜಗಿದು ಕೂಡ ಸೇವಿಸಬಹುದಾಗಿದೆ. ರಕ್ತದ ಸಕ್ಕರೆಯನ್ನು ನಿಯಂತ್ರಿಸಲು ಇದೊಂದು ಉತ್ತಮ ಆಯುರ್ವೇದಿಕ್ ಪರಿಹಾರ ಎಂದೆನಿಸಿದ್ದು ಇದರಲ್ಲಿರುವ ನಿಂಬಿಡಿನ್ ಅಂಶವು ಹೈಪರ್ ಗ್ಲಾಸಮಿಕ್ ವಿರೋಧಿ ಅಂಶವನ್ನು ಹೊಂದಿದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ಆಮ್ಲ ಎಂದೇ ಕರೆಯಿಲ್ಪಡುವ ನೆಲ್ಲಿಕಾಯಿ, ಅಜ್ಜಿ ಔಷಧಿ ಎಂದೇ ಕರೆಯಲಾಗಿದೆ. ಇದು 2 ನೇ ವಿಧದ ಮಧುಮೇಹವನ್ನು ನಿಯಂತ್ರಿಸಲು ಉತ್ತಮವಾದುದು. ವಿಟಮಿನ್ ಸಿ ಅಂಶಗಳು ಇದರಲ್ಲಿದ್ದು, ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದನ್ನು ಜ್ಯೂಸ್ ಅಥವಾ ಹುಡಿಯನ್ನು ತಣ್ಣೀರಿನಲ್ಲಿ ಕರಗಿಸಿಕೊಂಡು ಬೆಳಗ್ಗಿನ ಹೊತ್ತು ಸೇವಿಸಬೇಕು.

ಹಾಗಲ ಕಾಯಿ ಜ್ಯೂಸ್

ಹಾಗಲ ಕಾಯಿ ಜ್ಯೂಸ್

ಇದು ಫೈಟೊನ್ಯೂಟ್ರಿಯಂಟ್ ಅಂಶಗಳನ್ನು ಒಳಗೊಂಡಿದ್ದು ರಕ್ತದಲ್ಲಿರುವ ಗ್ಲುಕೋಸ್ ಅನ್ನು ದೇಹದ ಇತರ ಭಾಗಗಳಿಗೆ ಅಂದರೆ ಪಿತ್ತಜನಕಾಂಗ ಮತ್ತು ಸ್ನಾಯುಗಳಿಗೆ ವರ್ಗಾಯಿಸುತ್ತದೆ ಇದು ರಕ್ತದ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆಲ್ಫಾ - ಗ್ಲುಕೋಸಿಡೈಸ್ ಎಂಜಿಮ್ ಅನ್ನು ಕಡಿಮೆ ಮಾಡುತ್ತದೆ ಇದು ಹೈಪರ್ ಗ್ಲಾಸಮಿಕ್ ಮಟ್ಟವನ್ನು ಕಡಿಮೆ ಮಾಡಿ ದೇಹದ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರುತ್ತದೆ.

ಪಾನಾಕ್ಸ್ ಗಿನ್ಸೆಂಗ್

ಪಾನಾಕ್ಸ್ ಗಿನ್ಸೆಂಗ್

ಆಯುರ್ವೇದದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಮೂಲಿಕೆಯ ಬೇರು ಮತ್ತು ಹಣ್ಣನ್ನು ರಕ್ತದ ಸಕ್ಕರೆ ಪ್ರಮಾಣವನ್ನು ತಗ್ಗಿಸಲು ಬಳಸಲಾಗುತ್ತದೆ. ಮೊದಲಿಗೆ ಬೇರುಗಳನ್ನು ಒಣಗಿಸಿ ಹುಡಿ ಮಾಡಿ ನಂತರ 2 ನೇ ವಿಧದ ಮಧುಮೇಹದವರಿಗೆ ಔಷಧವಾಗಿ ನೀಡಲಾಗುತ್ತದೆ.

ಗುರ್ಮರ್

ಗುರ್ಮರ್

ಅನಾದಿ ಕಾಲದಿಂದಲೂ, ಗುರ್ಮರ್, ಬಳ್ಳಿಯು 2 ನೇ ವಿಧದ ಮಧುಮೇಹವನ್ನು ಗುಣಪಡಿಸುವ ಆಯುರ್ವೇದ ಔಷಧಿಯಾಗಿ ಹೆಸರುವಾಸಿಯಾಗಿದೆ. ಇದರ ಕೆಲವು ಎಲೆಗಳನ್ನು ತೆಗೆದುಕೊಂಡು ಅಗಿಯಬೇಕು, ಇಲ್ಲದಿದ್ದರೆ ಇದರ ಎಲೆಗಳನ್ನು ಒಣಗಿಸಿ ಚಹಾದಂತೆ ಕುದಿಸಿ ಸೇವಿಸಬಹುದು. ಇದರ ಕಹಿ ಸತ್ವ ರುಚಿಸದೇ ಇದ್ದವರು ಸ್ವಲ್ಪ ಏಲಕ್ಕಿಯನ್ನು ಇದಕ್ಕೆ ಹಾಕಿ ಸೇವಿಸಬಹುದಾಗಿದೆ.

 
English summary

5 Ayurvedic Remedies For Type 2 Diabetes

Type 2 diabetes tends to affect all age groups. Initially, common symptoms shown by those suffering from type 2 diabetes are lack of energy, fatigue, weight loss, frequent urination, blurred vision and frequent hunger. Here are 5 Ayurvedic remedies to treat and control type 2 diabetes that you should have a look at.
Please Wait while comments are loading...
Subscribe Newsletter