For Quick Alerts
ALLOW NOTIFICATIONS  
For Daily Alerts

ಅಮೆನೋರಿಯಾ ಗುಣಪಡಿಸಲು ಸಾಧ್ಯವೇ? ಈ ಬಗ್ಗೆ ತಿಳಿದಿರಬೇಕಾದ ಕೆಲವು ಅಚ್ಚರಿಯ ಸಂಗತಿಗಳು

|

ಪ್ರೌಢಾವಸ್ಥೆ ತಲುಪಿದ ಬಳಿಕ ಪ್ರತಿ ಮಹಿಳೆಗೂ ಎದುರಾಗುವ ಋತುಚಕ್ರ ಒಂದು ವೇಳೆ ಒಂದು ತಿಂಗಳು ಇಲ್ಲವಾದರೆ ಹೆಚ್ಚಿನವರು ಇದನ್ನೊಂದು ಶುಭಸಂಕೇತವೆಂದೇ ತಿಳಿಯುತ್ತಾರೆ. ಅಂದರೆ ಗರ್ಭನಿಂತ ಸೂಚನೆಯಾಗಿದ್ದು ಮುದ್ದುಕಂದ ಜಗತ್ತಿಗೆ ಬರಲಿರುವ ಸೂಚನೆಯೂ ಆಗಿದೆ. ಒಂದು ವೇಳೆ ಗರ್ಭಾಂಕುರವಿಲ್ಲದೇ ಋತುಚಕ್ರ ನಿಂತರೆ ಹಾಗೂ ಸತತ ಮೂರು ತಿಂಗಳು ಈ ಸ್ಥಿತಿ ಮುಂದುವರೆದರೆ ಇದು ಒಂದು ಗಂಭೀರವಾದ ಸಮಸ್ಯೆಯಾಗಿದ್ದು ವೈದ್ಯರು ಈ ಸಮಸ್ಯೆಯನ್ನು ಅಮೆನೋರೀಯಾ (amenorrhoea) ಎಂಬ ಹೆಸರಿನಿಂದ ಗುರುತಿಸುತ್ತಾರೆ. ಇದಕ್ಕೆ ಕಾರಣಗಳು ಹಲವಾರಿವೆ: ಸ್ಥೂಲಕಾಯ ಅಥವಾ ಅಗತ್ಯಕ್ಕಿಂತಲೂ ಕಡಿಮೆ ತೂಕ, ಮಾನಸಿಕ ಒತ್ತಡ ಇತ್ಯಾದಿ.

Amenorrhea

ಒಂದು ವೇಳೆ ಗರ್ಭಾಂಕುರವಿಲ್ಲದೇ ಮಾಸಿಕ ಋತುಚಕ್ರ ಎರಡನೆಯ ತಿಂಗಳಿಗೂ ಇಲ್ಲವಾದರೆ ತಕ್ಷಣ ವೈದ್ಯರನ್ನು ಕಂಡು ತಪಾಸಣೆಗೊಳಪಡಬೇಕು. ಸಾಮಾನ್ಯವಾಗಿ ಹದಿಮೂರನೇ ವಯಸ್ಸಿಗೆ ಆಗಮಿಸುವ ಋತುಚಕ್ರ ಹದಿನೈದು ಅಥವಾ ಹದಿನಾರು ವರ್ಷವಾದರೂ ಪ್ರಾರಂಭವಾಗದೇ ಇದ್ದರೂ ವೈದ್ಯರಲ್ಲಿ ತಪಾಸಣೆಗೊಳಗೊಂಡು ಅಮೆನೋರೀಯಾ ಇರುವ ಸಾಧ್ಯತೆಗಳನ್ನು ಪರಿಗಣಿಸಬೇಕು. ಇಂದಿನ ಲೇಖನದಲ್ಲಿ ಈ ಸಮಸ್ಯೆಯ ಕಾರಣಗಳು, ಸೂಚನೆಗಳು, ಚಿಕಿತ್ಸೆ ಹಾಗೂ ಸುರಕ್ಷತೆಯ ಇತರ ಮಾಹಿತಿಗಳನ್ನು ಒದಗಿಸಲಾಗಿದೆ. ಈ ಸ್ಥಿತಿ ಎದುರಾಗಲು ಮಾಸಸಿಕ ಕಾರಣಗಳಷ್ಟೇ ದೈಹಿಕ ಕಾರಣಗಳೂ ಇರಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ:

Most Read: ಬ್ರೇಕ್‍ಫಾಸ್ಟ್‌ನ ಮೊದಲೇ ಖಾಲಿ ಹೊಟ್ಟೆಗೆ ಸೇವಿಸಬೇಕಾದ ಆಹಾರಗಳು

ಅಮೆನೋರಿಯಾ ಕಾಯಿಲೆಯ ವಿಧಗಳು

ಅಮೆನೋರೀಯಾದಲ್ಲಿ ಎರಡು ವಿಧಗಳಿವೆ. ಅವೆಂದರೆ ಪ್ರಾಥಮಿಕ (primary) ಹಾಗೂ ಆನಂತರದ (secondary). ಒಂದು ವೇಳೆ ಯುವತಿಯ ವಯಸ್ಸು ಹದಿನೈದು ಅಥವಾ ಹದಿನಾರು ಆಗಿದ್ದರೂ ಋತುಮತಿಯಾಗದೇ ಇದ್ದರೆ ಇದು ಪ್ರಾಥಮಿಕ ಅಮೆನೋರೀಯಾ ಎಂದು ಕರೆಯಲಾಗುತ್ತದೆ. ಇದಕ್ಕೆ ಜನ್ಮಪೂರ್ವಕ್ಕೂ ಪಡೆದಿರಬಹುದಾದ ಅಥವಾ ಅನುವಂಶಿಕ ಕಾರಣಗಳಿರಬಹುದು. ಒಂದು ವೇಳೆ ಮಹಿಳೆ ಸಹಜವಾಗಿ ಋತುಮತಿಯಾಗಿದ್ದು ನಂತರದ ವರ್ಷಗಳಲ್ಲಿ ಯಾವುದೋ ಒಂದು ವಯಸ್ಸಿನಲ್ಲಿ ಗರ್ಭಾಂಕುರವಿಲ್ಲದೇ ಋತುಸ್ರಾವವಾಗದೇ ಹೋದರೆ, ಅದೂ ಸತತವಾಗಿ ಮೂರು ತಿಂಗಳು ಆಗದೇ ಇದ್ದರೆ ಇದನ್ನು ಆನಂತರದ ಅಮೆನೋರೀಯಾ ಎಂದು ಕರೆಯುತ್ತಾರೆ.

ಅಮೆನೋರಿಯಾ ಇರುವಿಕೆಯ ಲಕ್ಷಣಗಳು

ಈ ಲಕ್ಷಣಗಳು ಈ ಸ್ಥಿತಿ ಎದುರಾದ ಕಾರಣಗಳನ್ನು ಅವಲಂಬಿಸಿವೆ. ಋತುಸ್ರಾವ ಆಗದೇ ಹೋಗುವ ಕಾರಣ ಮೇಲ್ನೋಟಕ್ಕೇ ಗಮನಕ್ಕೆ ಬರುವ ಕೆಲವು ಸಾಮಾನ್ಯ ಲಕ್ಷಣಗಳೆಂದರೆ:
*ಸೊಂಟದ ಭಾಗದಲ್ಲಿ ನೋವು
*ಹೆಚ್ಚುವ ಮೊಡವೆಗಳ ಪ್ರಮಾಣ
*ಕೂದಲು ಹೆಚ್ಚೇ ಉದುರುವುದು
*ಕಣ್ಣಿನ ದೃಷ್ಟಿ ಕೊಂಚ ಮಂದವಾಗುವುದು
*ಮುಖದ ಮೇಲಿನ ರೋಮಗಳು ಅತಿಯಾಗಿ ಹೆಚ್ಚುವುದು
MOst Read:

ಅಮೆನೋರಿಯಾ ಸ್ಥಿತಿಗೆ ಕಾರಣಗಳು

1. ರಸದೂತಗಳ ಪ್ರಭಾವ:
ಥೈರಾಯ್ಡ್ ಗ್ರಂಥಗೆ ಸಂಬಂಧಿಸಿದ ಕಾರಣಗಳು:
ಥೈರಾಯ್ಡ್ ಗ್ರಂಥಿಯ ಅತಿ ಹೆಚ್ಚು ಸ್ರವಿಕೆ (hyperthyroidism) ಅಥವಾ ಅತಿ ಕಡಿಮೆ ಸ್ರವಿಕೆ (hypothyroidism) ಸಹಾ ಅಮೇನೋರೀಯಾ ಸ್ಥಿತಿಗೆ ಕಾರಣವಾಗಬಹುದು. ಈ ಗ್ರಂಥಿಯಿಂದ ಸ್ರವಿಸುವ ರಸದೂತಗಳು ದೇಹದ ಹಲವಾರು ಕಾರ್ಯಗಳನ್ನು ನಿಯಂತ್ರಿಸುತ್ತವೆ. ಇವುಗಳಲ್ಲಿ ಪ್ರಮುಖವಾದುದೆಂದರೆ ಋತುಚಕ್ರದ ನಿಯಂತ್ರಣವಾಗಿದೆ. ಈ ರಸದೂತ ಅತಿ ಹೆಚ್ಚು ಅಥವಾ ಅತಿ ಕಡಿಮೆಯಾಗುವ ಮೂಲಕ ಅಮೇನೋರೀಯಾ ಎದುರಾಗುತ್ತದೆ.

PCOS: Polycystic Ovarian Syndrome:
ಪಿಕೋಸ್ ಎಂದು ಹೃಸ್ವವಾಗಿ ಕರೆಯಲ್ಪಡುವ ಈ ಸ್ಥಿತಿ ಮಹಿಳೆಯಲ್ಲಿ ಋತುಚಕ್ರ ಇಲ್ಲವಾಗಿಸಲು ಪ್ರಮುಖ ಕಾರಣವಾಗಿದೆ. ಈ ಸ್ಥಿತಿ ಕೆಲವು ರಸದೂತಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ ಹಾಗೂ ಋತುಚಕ್ರದ ಸಮಯದಲ್ಲಿ ಹೆಚ್ಚು ಸ್ರವಿಸಬೇಕಾದ ರಸದೂತಗಳನ್ನು ಸ್ರವಿಸದೇ ಅಗತ್ಯವಿಲ್ಲದ ರಸದೂತಗಳು ಹೆಚ್ಚು ಸ್ರವಿಸುತ್ತವೆ. ಇದರಿಂದ ರಸದೂತಗಳ ಸಮತೋಲನ ಏರುಪೇರಾಗುತ್ತದೆ ಮತ್ತು ಪರಿಣಾಮವಾಗಿ ಸಂಭವಿಸಬೇಕಾಗಿದ್ದ ಋತುಚಕ್ರ ಸಂಭವಿಸದೇ ಹೋಗುತ್ತದೆ.
Most Read: ಎಳೆನೀರು ಕುಡಿದರೂ ಸಾಕು, ದೇಹದ ತೂಕ ಇಳಿಸಿಕೊಳ್ಳಬಹುದು!

ಪಿಟ್ಯುಟರಿ ಗ್ರಂಥಿಯ ಗಡ್ಡೆ (Pituitary tumour)

ಒಂದು ವೇಳೆ ಪಿಟ್ಯುಟರಿ ಗ್ರಂಥಿಯಲ್ಲಿ ಗಡ್ಡೆ ಉಂಟಾದರೂ ಅಮೆನೋರಿಯಾ ಸ್ಥಿತಿ ಎದುರಾಗಬಹುದು. ಈ ಗಡ್ಡೆ ಕ್ಯಾನ್ಸರ್ ಅಂತೂ ಅಲ್ಲ, ಆದರೆ ಪ್ರೋಲಾಕ್ಟಿನೋಮಾ ಎಂಬ ಹೆಸರಿನ ಈ ಗಡ್ಡೆ ಪ್ರೊಲಾಕ್ಟಿನ್ ಎಂಬ್ ರಸದೂತವನ್ನು ಸ್ರವಿಸುತ್ತದೆ. ದೇಹಕ್ಕೆ ಅಗತ್ಯವಾದುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಪ್ರೊಲಾಕ್ಟಿನ್ ಸ್ರವಿಕೆಯ ಕಾರಣ ಇದು ನೇರವಾಗಿ ಋತುಚಕ್ರದ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಅಮೆನೋರಿಯಾ ಸ್ಥಿತಿ ಎದುರಾಗುತ್ತದೆ.

ಜೀವನಕ್ರಮದ ಕಾರಣಗಳು

-ಅಗತ್ಯಕ್ಕೂ ಹೆಚ್ಚಿನ ವ್ಯಾಯಾಮ:
ನಮಗೆ ವ್ಯಾಯಾಮ ಅಗತ್ಯವಾಗಿ ಬೇಕಾಗಿದ್ದರೂ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಹೆಚ್ಚಿನ ವ್ಯಾಯಾಮವೂ ವಿಷವೇ ಆಗಿದೆ. ಏಕೆಂದರೆ ಅತಿ ಹೆಚ್ಚಿನ ವ್ಯಾಯಾಮದಿಂದ ಮಾನಸಿಕ ಒತ್ತಡ ಹೆಚ್ಚುವ ರಸದೂತಗಳು ಸ್ರವಿಸಲ್ಪಡುತ್ತವೆ. ಈ ರಸದೂತಗಳು ಮೆದುಳಿನ ಸಹಜ ಕಾರ್ಯಕ್ಕೆ ಅಡ್ಡಗಾಲು ಹಾಕಿ ಹಲವಾರು ಕಾರ್ಯಗಳನ್ನು ಸರಿಯಾಗಿ ನಡೆಸಲು ಬಿಡುವುದಿಲ್ಲ. ಹೀಗೆ ಬಾಧೆಗೊಳಗಾಗುವ ಒಂದು ಪ್ರಮುಖ ಕ್ರಿಯೆ ಎಂದರೆ ಋತುಚಕ್ರ, ಹಾಗೂ ಋತುಚಕ್ರ ಇಲ್ಲವಾಗುವ ಮೂಲಕ ಎದುರಾಗುವ ನೇರಪರಿಣಾಮ ಅಮೇನೋರೀಯಾ. ಇದೇ ಕಾರಣಕ್ಕೆ ಬಹಳ ಮಹಿಳಾ ಕ್ರೀಡಾಪಟುಗಳಲ್ಲಿ ಅಮೆನೋರಿಯಾ ಸ್ಥಿತಿ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಅತಿ ಹೆಚ್ಚಿನ ವ್ಯಾಯಾಮದಿಂದ ಜೀವರಾಸಾಯನಿಕ ಕ್ರಿಯೆಯೂ ಅನಿವಾರ್ಯವಾಗಿ ಹೆಚ್ಚಬೇಕಾಗುತ್ತದೆ, ಇದೂ ಕೆಲವಾರು ವಿಧಗಳಲ್ಲಿ ರಸದೂತಗಳ ಕಾರ್ಯವನ್ನು ಏರುಪೇರುಗೊಳಿಸುತ್ತವೆ.
Most Read: ನಾನ್ ವೆಜ್ ಪ್ರಿಯರಿಗೆ ಸಿಹಿ ಸುದ್ದಿ-'ಚಿಕನ್ ಲಿವರ್‌' ಆರೋಗ್ಯಕ್ಕೆ ಒಳ್ಳೆಯದು

ಮಾನಸಿಕ ಒತ್ತಡ

ಮಾನಸಿಕ ಒತ್ತಡದಲ್ಲಿರುವ ಮಹಿಳೆಯರ ಮಾಸಿಕ ಋತುಚಕ್ರವೂ ಏರುಪೇರಾಗುವುದನ್ನು ಗಮನಿಸಲಾಗಿದೆ. ಒಂದು ವೇಳೆ ಮಹಿಳೆ ಹೆಚ್ಚೇ ಕಾಲ ಮಾನಸಿಕ ಒತ್ತಡದಲ್ಲಿದ್ದರೆ ಇದು ಸಹ ಅಮೇನೋರೀಯಾ ಸ್ಥಿತಿಗೆ ಕಾರಣವಾಗಬಹುದು. ಅದರೆ ಈ ಸ್ಥಿತಿ ತಾತ್ಕಾಲಿಕವಾಗಿದ್ದು ಮಾನಸಿಕ ಒತ್ತಡದಿಂದ ಹೊರಬಂದು ಮನಸ್ಸು ನಿರಾಳವಾದರೆ ಈ ತೊಂದರೆಗಳು ತಾನಾಗಿಯೇ ಸಹಜ ಸ್ಥಿತಿಗೆ ಬರುತ್ತವೆ. ಮಾನಸಿಕ ಒತ್ತಡದಲ್ಲಿದ್ದಾಗ ಮೆದುಳಿನ ದೊಡ್ಡಭಾಗವಾದ ಹೈಪೋಥಲಮಸ್ ಒತ್ತಡಕ್ಕೆ ಕಾರಣವಾದ ಸ್ಥಿತಿಯನ್ನೇ ಹೆಚ್ಚು ಗಂಭೀರವಾಗಿ ಪರಿಗಣಿಸುವ ಮೂಲಕ ಇದರ ಸಹಜ ಕಾರ್ಯಗಳು ನಡೆಯದೇ ಹೋಗುತ್ತವೆ. ಇದರಲ್ಲೊಂದು ಕಾರ್ಯವೆಂದರೆ ಪಿಟ್ಯುಟರಿ ಗ್ರಂಥದ ನಿಯಂತ್ರಣ. ಪಿಟ್ಯುಟರಿ ಗ್ರಂಥಿ ಮತ್ತು ಹೈಪೋಥಲಮಸ್ ಎರಡೂ ಜೊತೆಯಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದ್ದು ಹೈಪೋಥಲಮಸ್ ನ ನಿಯಂತ್ರಣವಿಲ್ಲದೇ ಹೋದರೆ ಪಿಟ್ಯುಟರಿ ಗ್ರಂಥಿ ಹೆಚ್ಚು ಅಥವಾ ಕಡಿಮೆ ರಸದೂತವನ್ನು ಸ್ರವಿಸಿ ಅಮೇನೋರೀಯಾ ಸಹಿತ ಇತರ ತೊಂದರೆಗಳನ್ನೂ ಹುಟ್ಟುಹಾಕಬಹುದು.

ಅಸಮರ್ಪಕ ಬಿಎಂಐ (ದೇಹದ ಎತ್ತರಕ್ಕೆ ತಕ್ಕ ತೂಕ)

ಒಂದು ವೇಳೆ ಬಿಎಂಐ ತೀರಾ ಕಡಿಮೆ ಇದ್ದರೆ, ಅಂದರೆ ಅಗತ್ಯ ತೂಕ ಇಲ್ಲದೇ ಇದ್ದರೆ ಸಾಮಾನ್ಯವಾಗಿ ಈ ಮಹಿಳೆಯರು ಆಗಾಗ ಒಂದು ಅಥವಾ ಎರಡು ತಿಂಗಳ ಋತುಚಕ್ರವನ್ನು ಕಳೆದುಕೊಂಡಿರುತ್ತಾರೆ. ಏಕೆಂದರೆ ದೇಹದಲ್ಲಿರುವ ಅಗತ್ಯ ಪ್ರಮಾಣದ ಕೊಬ್ಬು ಈಸ್ಟ್ರೋಜೆನ್ ರಸದೂತದ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಗತ್ಯ ಮಟ್ಟದ ಕೊಬ್ಬು ಇಲ್ಲದೇ ಹೋದರೆ ಈಸ್ಟ್ರೋಜೆನ್ ಸಹಾ ಅಗತ್ಯ ಪ್ರಮಾಣದಲ್ಲಿ ಉತ್ಪಾದನೆಯಾಗದೇ ಹೋಗುವ ಮೂಲಕ ಮಾಸಿಕ ಚಕ್ರವೂ ಸಂಭವಿಸದೇ ಹೋಗುತ್ತದೆ. ಇದಕ್ಕೆ ವಿರುದ್ದವಾಗಿ ಹೆಚ್ಚಿನ ಬಿಎಂಐ ಅಥವಾ ಅಗತ್ಯಕ್ಕೂ ಹೆಚ್ಚಿನ ತೂಕದಿಂದಲೂ ದೇಹದಲ್ಲಿ ರಸದೂತಗಳ ಮಟ್ಟ ಏರುಪೇರಾಗುತ್ತದೆ ಹಾಗೂ ಇದೂ ಒಂದೆರಡು ತಿಂಗಳಗಳ ಋತುಚಕ್ರವನ್ನು ಇಲ್ಲವಾಗಿಸಬಹುದು.

ದೈಹಿಕ ರಚನೆಯ ಕಾರಣಗಳು

ಗರ್ಭಾಶಯದ ಒಳಗಿನ ಭಾಗಗಳು ಒಂದಕ್ಕೊಂದು ಅಂಟಿಕೊಂಡಿರುವುದು ( Intrauterine adhesions)
ಈ ಸ್ಥಿತಿಯನ್ನು ವೈದ್ಯರು Asherman's syndrome ಎಂದೂ ಗುರುತಿಸುತ್ತಾರೆ ಹಾಗೂ ಈ ಸ್ಥಿತಿ ಅತ್ಯಪರೂಪವಾಗಿದೆ. ಈ ಸ್ಥಿತಿ ಇರುವ ಮಹಿಳೆಯರಲ್ಲಿ ಗರ್ಭಾಶಯದ ಒಳಗೆ uterine scarring ಅಥವಾ ಗರ್ಭಾಶಯದ ಒಳಗೋಡೆಗಳು ಒಳಗಿಂದ ಒಂದಕ್ಕೊಂದು ಅಂಟಿಕೊಂಡಿರುತ್ತವೆ. ಪರಿಣಾಮವಾಗಿ ಗರ್ಭಾಶಯದ ಒಳಗೋಡೆಗಳ ಪದರ ಸಹಜವಾಗಿ ಋತುಚಕ್ರದ ಮೂಲಕ ನಿವಾರಣೆಯಾಗಬೇಕಾಗಿದ್ದುದು ನಿವಾರಣೆಯಾಗದೇ ಹೋಗುತ್ತದೆ.

ಜನನಾಂಗಗಳಲ್ಲಿ ಇರುವ ಕ್ರಮವ್ಯತ್ಯಾಸ

ಕೆಲವು ಸಂದರ್ಭಗಳಲ್ಲಿ, ಮಹಿಳೆಯರ ಜನನಾಂಗಗಳು ಪೂರ್ಣಮಟ್ಟಕ್ಕೆ ಬೆಳೆಯದೇ ಹೋಗುತ್ತವೆ ಹಾಗೂ ಇದರಿಂದ ಸಹಜ ಋತುಚಕ್ರ ಸಂಭವಿಸದೇ ಹೋಗಬಹುದು.
- ವಿರೂಪಗೊಂಡ ಯೋನಿ: ಒಂದು ವೇಳೆ ಕನ್ಯಾಪೊರೆ ಹೆಚ್ಚು ದಪ್ಪನಾಗಿದ್ದರೆ ಅಥವಾ ಗರ್ಭಾಶಯದ ಕವಾಟ (transverse vaginal septum) ತೀರಾ ದಪ್ಪನಾಗಿದ್ದರೆ ಇದು ಗರ್ಭಾಶಯದಿಂದ ಸ್ರಾವವನ್ನು ಹೊರಬರಲು ಬಿಡದೇ ಅಡ್ಡಿಪಡಿಸುತ್ತವೆ ಹಾಗೂ ಇದೂ ಋತುಚಕ್ರವಾಗದೇ ಇರುವ ಕಾರಣವಾಗಬಹುದು. ಈ ಸ್ಥಿತಿಯನ್ನು ಸರಳ ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಬಹುದು.

ಇತರ ಕಾರಣಗಳು

ಕೆಲವು ಔಷಧಿಗಳ ಅಡ್ಡಪರಿಣಾಮಗಳು:
ಗರ್ಭನಿರೋಧಕ ಗುಳಿಗೆಗಳು ಅಥವಾ ಗರ್ಭಾನಿರೋಧಕಾ ಕ್ರಮಗಳು, ಕ್ಯಾನ್ಸರ್ ಮೊದಲಾದ ಕಾಯಿಲೆಗೆ ನೀಡಲಾಗುವ ಖೀಮೋಥೆರಪಿ ಚಿಕಿತ್ಸೆ, ಮಾನಸಿಕ ಕಾಯಿಲೆಗೆ ನೀಡಲಾಗುವ ಔಷಧಿಗಳು ಸಹಾ ಅಮೇನೋರೀಯಾ ಸ್ಥಿತಿಗೆ ಕಾರಣವಾಗಬಹುದು.
ಅನುವಂಶಿಕ ಕಾರಣಗಳು: ಅಮೇನೋರೀಯಾಕ್ಕೆ ಕೆಲವು ಅನುವಂಶಿಕ ಕಾರಣಗಳೂ ಇರಬಹುದು. ಒಂದು ವೇಳೆ ಮಹಿಳೆಯ ಕುಟುಂಬದಲ್ಲಿ ಈ ತೊಂದರೆ ಇರುವ ಮಹಿಳಾಸದಸ್ಯರಿದ್ದರೆ ಈ ಸ್ಥಿತಿ ಇತರರಲ್ಲೂ ಕಂಡುಬರುವ ಸಾಧ್ಯತೆ ಹೆಚ್ಚು.

ಅಮೆನೋರಿಯಾ ಸ್ಥಿತಿಗೆ ಚಿಕಿತ್ಸೆಗಳು

ಈ ಸ್ಥಿತಿಗೆ ಕೆಲವಾರು ಕಾರಣಗಳಿವೆ ಎಂದು ಈಗಾಗಲೇ ತಿಳಿದುಕೊಂಡಿದ್ದೇವೆ. ಹಾಗಾಗಿ ಇದರ ಚಿಕಿತ್ಸೆಯೂ ಈ ಕಾರಣಗಳನ್ನು ಅವಲಂಬಿಸಿ ಭಿನ್ನವಾಗಿದ್ದು ಸೂಕ್ತವಾದುದನ್ನು ವೈದ್ಯರೇ ನಿರ್ಧರಿಸುತ್ತಾರೆ.

ಔಷಧಿಗಳು: ಒಂದು ವೇಳೆ ಗರ್ಭನಿರೋಧಕ ಗುಳಿಗೆಗಳ ಪ್ರಭಾವದಿಂದ ಈ ಸ್ಥಿತಿ ಎದುರಾಗಿದ್ದರೆ ಇದನ್ನು ಸರಿಪಡಿಸಲು ಇತರ ಗರ್ಭನಿರೋಧಕ ಗುಳಿಗೆಗಳನ್ನು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಪಿಕೋಸ್ ತೊಂದರೆಯಿಂದ ಈ ಕಾಯಿಲೆ ಎದುರಾಗಿದ್ದರೆ ಇದಕ್ಕೆ Clomiphene citrate (CC) ಎಂಬ ಔಷಧಿ ಸೂಕ್ತವಾಗಿದೆ. ಇದರಿಂದ ಗರ್ಭಾಶಯದಲ್ಲಿ ಅಂಡಾಣು ಬಿಡುಗಡೆಯಾಗುವ ಸಾಧ್ಯತೆಗಳು ಹೆಚ್ಚುವ ಮೂಲಕ ಅಮೆನೋರಿಯಾ ಸ್ಥಿತಿ ತಾನಾಗಿಯೇ ಹಿಂದೆ ಸರಿಯುತ್ತದೆ.

*ಹಾರ್ಮೋನ್ ಥೆರಪಿ: ರಸದೂತಗಳ ಏರುಪೇರಿನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಯಾವ ರಸದೂತ ಕಡಿಮೆ ಇದೆ ಮತ್ತು ಯಾವುದು ಹೆಚ್ಚಿದೆ ಎಂಬುದನ್ನು ಪ್ರಯೋಗಗಳ ಮೂಲಕ ಖಚಿತಪಡಿಸಿ ಇದನ್ನು ಸರಿಪಡಿಸಲು ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟಿನ್ ಹಾರ್ಮೋನುಗಳನ್ನು ಹೆಚ್ಚಿಸುವ ಚಿಕಿತ್ಸೆಯ ಮೂಲಕ ಈ ಸ್ಥಿತಿಯನ್ನು ಇಲ್ಲವಾಗಿಸಬಹುದು.
Most Read: ಹಲ್ಲಿನ ಕಾಂತಿ ಹೆಚ್ಚಿಸಲು ಅರಿಶಿನದ ಚಿಕಿತ್ಸೆ! ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಶಸ್ತ್ರಕ್ರಿಯೆ: ಒಂದು ವೇಳೆ uterine scarring ಅಥವಾ ಗರ್ಭಾಶಯದ ಒಳಗೋಡೆಗಳು ಒಳಗಿಂದ ಒಂದಕ್ಕೊಂದು ಅಂಟಿಕೊಂಡಿದ್ದು ಇದನ್ನು ಸರಳ ಶಸ್ತ್ರಚಿಕಿತ್ಸೆಯಿಂದ ಬೇರ್ಪಡಿಸಬಹುದು.hysteroscopic resection ಎಂಬ ಈ ಶಸ್ತ್ರಚಿಕಿತ್ಸೆಯ ಮೂಲಕ ಹೀಗೆ ಅಂಟಿಕೊಂಡಿದ್ದ ಪದರಗಳನ್ನು ಬೇರ್ಪಡಿಸಿ ಈ ಭಾಗದಲ್ಲಿ ಗಟ್ಟಿಯಾಗಿದ್ದ ಹೊರಪದರವನ್ನು ಕೆರೆದು ನಿವಾರಿಸಿ ಸಹಜ ಬೆಳವಣಿಗೆಗೆ ಅನುವು ಮಾಡಿಕೊಡಲಾಗುತ್ತದೆ. ತನ್ಮೂಲಕ ಗರ್ಭಾಶಯದಿಂದ ಸಹಜವಾಗಿ ಋತುಸ್ರಾವ ಸಂಭವಿಸಲು ಸಾಧ್ಯವಾಗುತ್ತದೆ.

English summary

Is Amenorrhea Treatable? Here Are Interesting Things

Amenorrhea means the absence of periods, it's of two types - primary & secondary. This can be caused due to numerous reasons ranging from stress, excessive exercising, improper BMI, hormonal imbalance, hyperthyroidism & hypothyroidism, side-effects of medications, abnormal ovary structure, disorders related to uterus, ovary or pituitary glands.
X
Desktop Bottom Promotion