For Quick Alerts
ALLOW NOTIFICATIONS  
For Daily Alerts

ಹಲ್ಲಿನ ಕಾಂತಿ ಹೆಚ್ಚಿಸಲು ಅರಿಶಿನದ ಚಿಕಿತ್ಸೆ! ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್ ಟಿಪ್ಸ್

|

ಮುಖದ ಮೇಲಿನ ಸುಂದರವಾದ ನಗೆ ವ್ಯಕ್ತಿಯ ಆತ್ಮವಿಶ್ವಾಸವನ್ನು ತೋರ್ಪಡಿಸುತ್ತದೆ. ಅಲ್ಲದೆ ಅಂಥ ವ್ಯಕ್ತಿಯನ್ನು ಜಗತ್ತು ಇಷ್ಟಪಡುತ್ತದೆ. ಆದರೆ ದಂತ ಪಂಕ್ತಿಗಳು ಸುಂದರವಾಗಿರದಿದ್ದರೆ ನಗುವೂ ಸುಂದರವಾಗಿರದು.

ಹಲವಾರು ಕಾರಣಗಳಿಂದ ಹಲ್ಲುಗಳು ಹೊಳಪು ಕಳೆದುಕೊಂಡು ಕಳಾಹೀನವಾಗಿ ಕಾಣಿಸುತ್ತವೆ. ವಯಸ್ಸಾಗುವಿಕೆ, ಅತಿಯಾದ ಕಾಫಿ, ಟೀ ಸೇವನೆ, ಬಾಯಿ ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ ಮತ್ತು ಹವಾಮಾನ ಪರಿಸ್ಥಿತಿಗಳು ಮುಂತಾದ ಕಾರಣದಿಂದ ಹಲ್ಲುಗಳು ತಮ್ಮ ನೈಜ ಬಣ್ಣವನ್ನು ಕಳೆದುಕೊಳ್ಳುತ್ತವೆ. ಆದಾಗ್ಯೂ ದಂತ ವೈದ್ಯ ವಿಜ್ಞಾನದ ಕೆಲ ವಿಧಾನಗಳ ಮೂಲಕ ಹಲ್ಲುಗಳ ಹೊಳಪನ್ನು ಮರಳಿ ಪಡೆಯಬಹುದಾಗಿದೆ. ಆದರೆ ಸಾಮಾನ್ಯ ನಾಗರಿಕರು ಪ್ರತಿ ತಿಂಗಳು ಡೆಂಟಿಸ್ಟ್ ಬಳಿ ಹೋಗಿ ಟ್ರೀಟ್ ಮೆಂಟ್ ಪಡೆದುಕೊಳ್ಳುವುದು ತುಸು ಕಷ್ಟದ ಕೆಲಸ. ಹಾಗಾದರೆ ಮನೆಯಲ್ಲಿಯೆ ಕೆಲ ಸರಳ ವಿಧಾನಗಳ ಮೂಲಕ ಹಲ್ಲುಗಳ ಹೊಳಪನ್ನು ಮತ್ತೆ ಪಡೆಯುವುದು ಹೇಗೆ ಎಂಬ ಬಗ್ಗೆ ಈ ಅಂಕಣದಲ್ಲಿ ಮಹತ್ವದ ಟಿಪ್ಸ್ ನೀಡಲಾಗಿದೆ.

Turmeric Teeth Whitening Step By Step tips

ಎಲ್ಲರ ಅಡುಗೆ ಮನೆಯಲ್ಲಿ ಇರುವ ಅರಿಶಿನ ಬಳಸಿ ಹಲ್ಲುಗಳ ನೈಜ ಬಣ್ಣವನ್ನು ಹೇಗೆ ಮರಳಿ ಪಡೆಯುವುದು ಎಂಬುದನ್ನು ತಿಳಿದುಕೊಳ್ಳೋಣ. ಅರಿಶಿನದಲ್ಲಿರುವ ವಿಟಮಿನ್ ಸಿ, ಮ್ಯಾಗ್ನೇಶಿಯಂ ಹಾಗೂ ಸೆಲೆನಿಯಂ ಅಂಶಗಳು ಹಲ್ಲುಗಳನ್ನು ಗಟ್ಟಿಗೊಳಿಸಲು ಸಹಾಯಕವಾಗಿವೆ. ಅಲ್ಲದೆ ಅರಿಶಿಣದಲ್ಲಿರುವ ನೋವು ನಿವಾರಕ ಗುಣಗಳಿಂದ ವಸಡುಗಳ ಸೋಂಕು ಹಾಗೂ ನೋವು ಶಮನವಾಗುತ್ತದೆ. ಅರಿಶಿನಬಳಸಿ ಹಲ್ಲುಗಳ ಆರೋಗ್ಯ ಹೆಚ್ಚಿಸುವುದು ಹೇಗೆಂಬುದನ್ನು ನೋಡೋಣ.

ಅರಿಶಿನ ಉಪ್ಪು ಮತ್ತು ನಿಂಬೆ ರಸ

ಅರಿಶಿನ ಉಪ್ಪು ಮತ್ತು ನಿಂಬೆ ರಸ

ಹಲ್ಲುಗಳ ಮೇಲಿನ ಕಲೆಗಳನ್ನು ನಿವಾರಿಸಲು ನಿಂಬೆ ಉಪಯುಕ್ತವಾಗಿದೆ. ಹಾಗೆಯೇ ಉಪ್ಪಿನಿಂದ ಹಲ್ಲುಗಳ ಬಣ್ಣ ಮಾಸುವಿಕೆಯನ್ನು ತಡೆಗಟ್ಟಬಹುದು. ಮೊದಲಿಗೆ ಒಂದಿಷ್ಟು ಅರಿಶಿನ ಬೇರುಗಳನ್ನು ತೆಗೆದುಕೊಂಡು ಅವನ್ನು ಹುರಿದುಕೊಳ್ಳಿ. ನಂತರ ಗ್ರೈಂಡರ್‌ಗೆ ಹಾಕಿ ನುಣುಪಾದ ಪೌಡರ್ ತಯಾರಿಸಿ. ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಅರಿಶಿನ ಹಾಗೂ ಚಿಟಿಕೆ ಉಪ್ಪು ಹಾಕಿ. ಇದಕ್ಕೆ ಕೆಲ ನಿಂಬೆ ಹನಿಗಳನ್ನು ಬೆರೆಸಿ, ಮಿಕ್ಸ ಮಾಡಿ ನುಣುಪಾದ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಹಲ್ಲುಗಳಿಗೆ ಸವರಿ. ಸುಮಾರು 3 ನಿಮಿಷ ಬಿಟ್ಟು ಸಾದಾ ನೀರಿನಿಂದ ಬಾಯಿ ತೊಳೆದುಕೊಳ್ಳಿ. ವಾರಕ್ಕೆ ಮೂರು ಬಾರಿ ಈ ವಿಧಾನ ಅನುಸರಿಸುವುದರಿಂದ ಒಳ್ಳೆಯ ಪರಿಣಾಮಗಳನ್ನು ಕಾಣಬಹುದು.

Most Read: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಜೇನುತುಪ್ಪ ಸೇವಿಸಿದರೆ, ಆರೋಗ್ಯಕ್ಕೆ ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳಿವೆ

ಅರಿಶಿನ, ತೆಂಗಿನೆಣ್ಣೆ ಮತ್ತು ಅಡುಗೆ ಸೋಡಾ

ಅರಿಶಿನ, ತೆಂಗಿನೆಣ್ಣೆ ಮತ್ತು ಅಡುಗೆ ಸೋಡಾ

ಅಡುಗೆ ಸೋಡಾ ಹಾಗೂ ತೆಂಗಿನೆಣ್ಣೆಗಳು ಹಲ್ಲುಗಳನ್ನು ಶುಭ್ರಗೊಳಿಸಲು ಸಹಕಾರಿಯಾಗಿವೆ. 4 ಟೇಬಲ್ ಸ್ಪೂನ್ ಅರಿಶಿನ ಪುಡಿ, 2 ಟೇಬಲ್ ಸ್ಪೂನ್ ಅಡುಗೆ ಸೋಡಾ ಮತ್ತು 3 ಟೇಬಲ್ ಸ್ಪೂನ್ ತೆಂಗಿನೆಣ್ಣೆ ತೆಗೆದುಕೊಳ್ಳಿ. ಇವನ್ನೆಲ್ಲ ಒಂದು ಬಟ್ಟಲಿಗೆ ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಮೊದಲು 2 ರಿಂದ 3 ನಿಮಿಷದವರೆಗೆ ಹಲ್ಲುಗಳನ್ನು ಬ್ರಶ್ ಮಾಡಿಕೊಳ್ಳಿ. ನಂತರ ನೀವು ತಯಾರಿಸಿದ ಅರಿಶಿನಹಾಗೂ ತೆಂಗಿನೆಣ್ಣೆಯ ಮಿಶ್ರಣದಿಂದ ಬಾಯಿ ಮುಕ್ಕಳಿಸಿ. ನಂತರ ನೀರಿನಿಂದ ಮುಕ್ಕಳಿಸಿ. ಇದೇ ರೀತಿ 2 ರಿಂದ 3 ಬಾರಿ ಮಾಡಿ. ವಾರಕ್ಕೆರಡು ಬಾರಿ ಈ ವಿಧಾನ ಅನುಸರಿಸಿದರೆ ಹಲ್ಲುಗಳಿಗೆ ಹೊಳಪು ಬರುವುದನ್ನು ನೀವೆ ಕಾಣುವಿರಿ.

ಅರಿಶಿನ, ಸಾಸಿವೆ ಎಣ್ಣೆ ಮತ್ತು ಉಪ್ಪು

ಅರಿಶಿನ, ಸಾಸಿವೆ ಎಣ್ಣೆ ಮತ್ತು ಉಪ್ಪು

ಅರಿಶಿನ, ಸಾಸಿವೆ ಎಣ್ಣೆ ಹಾಗೂ ಉಪ್ಪಿನ ನಿಯಮಿತ ಉಪಯೋಗದಿಂದ ಹಲ್ಲುಗಳನ್ನು ಶುಭ್ರ ಹಾಗೂ ಬಿಳಿಯಾಗಿಸಬಹುದು. ಒಂದು ಬಟ್ಟಲಿಗೆ ೧ ಟೇಬಲ್ ಸ್ಪೂನ್ ಸಾಸಿವೆ ಎಣ್ಣೆ, ಚಿಟಿಕೆ ಉಪ್ಪು ಮತ್ತು ಅರ್ಧ ಟೇಬಲ್ ಸ್ಪೂನ್ ಅರಿಶಿನಪುಡಿ ಹಾಕಿ ಸರಿಯಾಗಿ ಮಿಕ್ಸ್ ಮಾಡಿ ನುಣುಪಾದ ಪೇಸ್ಟ್ ತಯಾರಿಸಿಟ್ಟುಕೊಳ್ಳಿ. ಇದನ್ನು ಟೂತ್ ಪೇಸ್ಟ್ ರೀತಿ ಬ್ರಶ್‌ಗೆ ಹಚ್ಚಿ 2 ರಿಂದ 3 ನಿಮಿಷ ಹಲ್ಲುಜ್ಜಿಕೊಳ್ಳಿ. ವಾರಕ್ಕೆ 2 ರಿಂದ 3 ಬಾರಿ ಈ ವಿಧಾನವನ್ನು ಅನುಸರಿಸಿದರೆ ಉತ್ತಮ ಪರಿಣಾಮ ಸಿಗುತ್ತವೆ.

Most Read: ಮೀನು ಸೇವಿಸಿದರೆ, ಹೃದಯಕ್ಕೆ ಒಳ್ಳೆಯದು ಅಲ್ಲದೆ ಹಲವಾರು ಕಾಯಿಲೆಗಳನ್ನೂ ನಿವಾರಿಸಬಹುದು

ಅರಿಶಿನ ಮತ್ತು ವೆನಿಲ್ಲಾ ಎಸೆನ್ಸ್

ಅರಿಶಿನ ಮತ್ತು ವೆನಿಲ್ಲಾ ಎಸೆನ್ಸ್

ಅರ್ಧ ಟೇಬಲ್ ಸ್ಪೂನ್ ಅರಿಶಿನಪುಡಿ ಹಾಗೂ ಕೆಲ ಹನಿ ವೆನಿಲ್ಲಾ ಎಸೆನ್ಸ್‌ಗಳನ್ನು ಸೇರಿಸಿ ನುಣುಪಾದ ಪೇಸ್ಟ್ ತಯಾರಿಸಿ. ಇದರಲ್ಲಿ ಟೂತ್ ಬ್ರಶ್ ಅದ್ದಿ ಮೃದುವಾಗಿ ಹಲ್ಲು ಉಜ್ಜಿಕೊಳ್ಳಿ. ನಂತರ ಸಾದಾ ನೀರಿನಿಂದ ಬಾಯಿ ಮುಕ್ಕಳಿಸಿ ನಿಮ್ಮ ರೆಗ್ಯುಲರ್ ಟೂತ್ ಪೇಸ್ಟ್ ನಿಂದ ಹಲ್ಲುಜ್ಜಿಕೊಳ್ಳಿ. ವಾರಕ್ಕೆ 2 ರಿಂದ 3ಬಾರಿ ಈ ವಿಧಾನ ಅನುಸರಿಸಿ.ಹಲ್ಲನ್ನು ಲಕಲಕ ಹೊಳೆಯುವಂತೆ ಮಾಡಲು ಇನ್ನಷ್ಟು ಸರಳ ಮನೆಮದ್ದುಗಳಿವೆ ಮುಂದೆ ಓದಿ

ಅಡುಗೆ ಸೋಡಾ

ಅಡುಗೆ ಸೋಡಾ

ಸ್ವಲ್ಪ ಅಡುಗೆ ಸೋಡಾ ತೆಗೆದುಕೊಂಡು ಅದರಿಂದ ಹಲ್ಲುಗಳನ್ನು ನಿಧಾನವಾಗಿ ಉಜ್ಜಿಕೊಳ್ಳಿ. ಇದನ್ನು ಹಲ್ಲುಗಳನ್ನು ಬಿಳಿಯಾಗಿಸುವುದು ಮಾತ್ರವಲ್ಲದೆ ಕಲೆಗಳನ್ನು ನಿವಾರಿಸುವುದು. ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಇದು ನಿಯಂತ್ರಣದಲ್ಲಿ ಇಡುವುದು. ಒಂದೇ ದಿನದಲ್ಲಿ ಹಲ್ಲುಗಳು ಬಿಳಿಯಾಗುತ್ತದೆ ಎಂದು ನಿರೀಕ್ಷಿಸಬೇಡಿ. ಫಲಿತಾಂಶ ಬರಲು ಸ್ವಲ್ಪ ಸಮಯ ಬೇಕಾಗುವುದು.

ಒಂದು ಚಮಚ ತೆಂಗಿನ ಎಣ್ಣೆ

ಒಂದು ಚಮಚ ತೆಂಗಿನ ಎಣ್ಣೆ

ಬಾಯಿಗೆ ತೈಲವನ್ನು ಹಾಕಿಕೊಂಡು ಬಾಯಿ ಮುಕ್ಕಳಿಸಿಕೊಳ್ಳುವುದು ನೈಸರ್ಗಿಕ ವಿಧಾನವಾಗಿದೆ. ಒಂದು ಚಮಚ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು 15 ನಿಮಿಷ ಕಾಲ ಬಾಯಿ ಮುಕ್ಕಳಿಸಿಕೊಂಡರೆ ವಿಷಕಾರಿ ಅಂಶಗಳು ಹೊರಹೋಗುವುದು. ಇದು ಬ್ಯಾಕ್ಟೀರಿಯಾವನ್ನು ಕೊಂದು ಉರಿಯೂತವನ್ನು ಕಡಿಮೆ ಮಾಡುವುದು. ಅಲ್ಲದೆ ಹಲ್ಲಿನ ಮೇಲೆ ಉಂಟಾಗುವ ಹಳದಿ ಪದರವನ್ನು ಕಡಿಮೆ ಮಾಡುವುದು.

ಉಪ್ಪು ಮತ್ತು ಲಿಂಬೆಯ ಮಿಶ್ರಣ

ಉಪ್ಪು ಮತ್ತು ಲಿಂಬೆಯ ಮಿಶ್ರಣ

ಉಪ್ಪು ಮತ್ತು ಲಿಂಬೆಯ ಮಿಶ್ರಣವನ್ನು ಮಾಡಿಕೊಂಡು ಹಲ್ಲುಜ್ಜಿ. ಒಂದು ಚಿಟಿಕೆ ಉಪ್ಪು ಮತ್ತು ಎರಡು ಮೂರು ಹನಿ ಲಿಂಬೆ ಸಾಕು. ವಾರದಲ್ಲಿ ಒಂದು ಅಥವಾ ಎರಡು ಸಲ ಹೀಗೆ ಮಾಡಿದರೆ ಹಲ್ಲುಗಳು ಬಿಳಿಯಾಗುವುದು.

ಹಸಿ ಕ್ಯಾರೆಟ್

ಹಸಿ ಕ್ಯಾರೆಟ್

ಪ್ರತೀ ದಿನ ಹಸಿ ಕ್ಯಾರೆಟ್ ತಿನ್ನಿ. ಇದು ಹಲ್ಲುಗಳನ್ನು ಬಿಳಿಯಾಗಿಸುವುದು. ಕ್ಯಾರೆಟ್ ತಿನ್ನುವಾಗ ಪದರಗಳು ದೂರವಾಗುವುದು

ಸ್ಟ್ರಾಬೆರಿ

ಸ್ಟ್ರಾಬೆರಿ

ಯಾವಾಗಲೊಮ್ಮೆ ಸ್ಟ್ರಾಬೆರಿ ಸೇವಿಸಿ. ಇದರಲ್ಲಿರುವ ಮಲಿಕ್ ಆಮ್ಲವು ಹಲ್ಲುಗಳನ್ನು ಹೊಳೆಯುವಂತೆ ಮಾಡುವುದು. ಹಲ್ಲುಗಳನ್ನು ಬಿಳಿಯಾಗಿಸುವ ಕೆಲವೊಂದು ಆಯುರ್ವೇದ ವಿಧಾನವಿದು. ಇದನ್ನು ಪ್ರಯತ್ನಿಸಿ ಫಲತಾಂಶದ ಬಗ್ಗೆ ಕಮೆಂಟ್ ಮಾಡಿ.

ಕಹಿ ಬೇವು

ಕಹಿ ಬೇವು

ಕಹಿ ಬೇವು ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ನಿಮ್ಮ ಹಳದಿ ದ೦ತಪ೦ಕ್ತಿಗಳನ್ನು ಮಾಲೀಸು ಮಾಡಿಕೊಳ್ಳುವುದರ ಮೂಲಕ ಅದನ್ನು ಬಿಳುಪಾಗಿಸಿರಿ. ಫಲಿತಾ೦ಶವು ಗಮನಾರ್ಹವಾಗಿ ಕ೦ಡುಬರುವ೦ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ೦ದು ಬಾರಿ ಕೈಗೊಳ್ಳಿರಿ.

ತಾಜಾ ತುಳಸಿ ಎಲೆಗಳು

ತಾಜಾ ತುಳಸಿ ಎಲೆಗಳು

*ತಾಜಾ ತುಳಸಿ ಎಲೆಗಳನ್ನು ತೆಗೆದುಕೊಂಡು ನೆರಳಲ್ಲಿ ಇಟ್ಟು ಒಣಗಿಸಿ

*ಒಮ್ಮೆ ತುಳಸಿ ಎಲೆಗಳು ಸಂಪೂರ್ಣವಾಗಿ ಒಣಗಿದ ಮೇಲೆ, ಅದನ್ನು ಗ್ರೈಂಡ್ ಮಾಡಿ ಪುಡಿಮಾಡಿ

*ಈ ಪುಡಿಯನ್ನು ನಿಮ್ಮ ಹಲ್ಲುಗಳನ್ನು ಬ್ರಶ್ ಮಾಡಲು ಬಳಸಿ.

*ನಿಮ್ಮ ಬೆರಳಿನಿಂದ ಕೂಡ ತುಳಸಿ ಪುಡಿಯಿಂದ ಹಲ್ಲುಗಳನ್ನು ಉಜ್ಜಬಹುದು ಅಥವಾ ತುಳಸಿ ಪುಡಿಯನ್ನು ನಿಮ್ಮ ಎಂದಿನ ಟೂತ್ ಪೇಸ್ಟ್ ಜೊತೆ ಮಿಶ್ರಣಮಾಡಿ ಬಳಸಲೂ ಬಹುದು.

ಪ್ರತಿ ಎರಡು ತಿಂಗಳಿಗೊಂದು ಹೊಸ ಬ್ರಷ್ ಬಳಸಿ

ಪ್ರತಿ ಎರಡು ತಿಂಗಳಿಗೊಂದು ಹೊಸ ಬ್ರಷ್ ಬಳಸಿ

ಉತ್ತಮ ಫಲಿತಾಂಶಗಳನ್ನು ಪಡೆಯಲು ನಿಯಮಿತವಾಗಿ ನಿಮ್ಮ ಬ್ರಷ್ ಬದಲಾಯಿಸುವುದು ಬಹಳ ಮುಖ್ಯ . ಅವಧಿಯ ನಂತರ ನಿಮ್ಮ ಬ್ರಷ್ ಕಠಿಣವಾಗಿ ನಿಮ್ಮ ಹಲ್ಲುಗಳಲ್ಲಿ ಕಲೆಗಳು ಗೊಚರಿಸಬಹುದು ಅಲ್ಲದೆ ಒರಟು ಬ್ರಷ್ ನಿಮ್ಮ ಹಲ್ಲುಗಳ ದಂತಕವಚವನ್ನೂ ಹಾಳುಮಾಡಬಹುದು.

ತರಕಾರಿಗಳು

ತರಕಾರಿಗಳು

ಒಂದು ರೀತಿಯ ಕೋಸುಗಡ್ಡೆ , ಕ್ಯಾರೆಟ್ , ಕುಂಬಳಕಾಯಿ , ಇತ್ಯಾದಿಗಳಲ್ಲಿ ಜೀವಸತ್ವಗಳು ಸಮೃದ್ಧವಾಗಿರುವದರಿಂದ ಇವು ದಂತಕವಚದ ರಚನೆಗೆ ಸಹಾಯಕಾರಿಯಾಗಿವೆ . ಇವುಗಳನ್ನು ಹಸಿಯಾಗಿ ತಿನ್ನುವುದರಿಂದ ಒಸಡುಗಳಿಗೆ ಸ್ವಾಭಾವಿಕವಾಗಿ ಮಸಾಜ್ ಆಗುವುದು, ಹಲ್ಲಿನ ನಡುವಿನ ಭಾಗ ಸ್ವಚ್ಛಗೊಳ್ಳುವುದು ಮತ್ತು ಹಲ್ಲುಗಳ ಬಿಳುಪು ವೃದ್ಧಿಸುವುದು.

English summary

Turmeric Teeth Whitening Step By Step tips

In this article, we'll be providing you with remedies using a very common kitchen ingredient, that is, turmeric. Vitamin C, magnesium and selenium in turmeric help you in getting a strong set of teeth. Also, turmeric possesses anti-inflammatory properties that will help you in treating any kind of gum infections and inflammations. Now let us see how to use it.
X
Desktop Bottom Promotion