For Quick Alerts
ALLOW NOTIFICATIONS  
For Daily Alerts

ನಾನ್ ವೆಜ್ ಪ್ರಿಯರಿಗೆ ಸಿಹಿ ಸುದ್ದಿ-'ಚಿಕನ್ ಲಿವರ್‌' ಆರೋಗ್ಯಕ್ಕೆ ಒಳ್ಳೆಯದು

|

ಕೋಳಿಮಾಂಸವೆಂದರೆ (ಚಿಕನ್) ಪ್ರತಿಯೊಬ್ಬರು ಬಾಯಿ ಚಪ್ಪರಿಸುವವರೇ. ಅದರಲ್ಲೂ ಕೆಲವರಿಗೆ ಚಿಕನ್ ಲಿವರ್(ಯಕೃತ್) ತುಂಬಾ ಇಷ್ಟ. ಹೋಟೆಲ್ ಗೆ ಹೋದರೂ ಚಿಕನ್ ಲಿವರ್ ನ ವಿವಿಧ ರೀತಿಯ ಖಾದ್ಯಗಳು ಲಭ್ಯವಾಗುವುದು. ಚಿಕನ್ ಲಿವರ್ ನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಕೋಳಿ ಲಿವರ್ ನಲ್ಲಿ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಅಂಶವಿದೆ. ಆದರೆ ಇದರಲ್ಲಿ ಕೊಲೆಸ್ಟ್ರಾಲ್ ಮಾತ್ರವಲ್ಲದೆ ಇತರ ಕೆಲವೊಂದು ಅಂಶಗಳು ಕೂಡ ಇವೆ. ಚಿಕನ್ ಲಿವರ್ ನ್ನು ಮಿತವಾಗಿ ಸೇವನೆ ಮಾಡುತ್ತಲಿದ್ದರೆ ಆಗ ಇದು ನಿಮ್ಮ ಆರೋಗ್ಯಕ್ಕೆ ತುಂಬಾ ನೆರವಾಗುವುದು. ನೀವು ಚಿಕನ್ ಲಿವರ್ ಸೇವನೆ ಮಾಡುತ್ತಲಿದ್ದರೆ ಆಗ ಅಧಿಕ ಕೊಲೆಸ್ಟ್ರಾಲ್ ಇರುವಂತಹ ಬೇರೆ ಆಹಾರಗಳ ಸೇವನೆ ಕಡಿಮೆಯಾಗುವುದು.

Suprising Health Benefits of Chicken Liver

ಒಂದು ಪ್ಲೇಟ್ ಬೇಯಿಸಿದ ಚಿಕನ್ ಲಿವರ್ ನಲ್ಲಿ ಸುಮಾರು 45 ಕ್ಯಾಲರಿ, ಒಂದು ಗ್ರಾಂ ಕೊಬ್ಬು, 15 ಮಿ.ಗ್ರಾಂ. ಸೋಡಿಯಂ ಮತ್ತು ಯಾವುದೇ ಕಾರ್ಬ್ರೋಹೈಡ್ರೇಟ್ಸ್ ಗಳಿಲ್ಲ. ಆದರೆ ಪ್ರೋಟೀನ್ ಉನ್ನತ ಮಟ್ಟದಲ್ಲಿದ್ದು, ಒಂದು ಪ್ಲೇಟ್ ನಲ್ಲಿ 7 ಗ್ರಾಂ ಇರುವುದು. ದುರಾದೃಷ್ಟವೆಂದರೆ ಇಷ್ಟೇ ಪ್ರಮಾಣದ ಚಿಕನ್ ಲಿವರ್ ನಲ್ಲಿ 180 ಮಿ.ಗ್ರಾಂ. ಕೊಲೆಸ್ಟ್ರಾಲ್ ಇದೆ. ಚಿಕನ್ ಲಿವರ್ ಪ್ರೈ ತಿನ್ನುವ ವೇಳೆ ಇದಕ್ಕೆ ಹೆಚ್ಚಿನ ಕೊಬ್ಬು ಹಾಗೂ ಕ್ಯಾಲರಿ ಸೇರಿರುವುದು ಎಂದು ನೆನಪಿರಲಿ. ಈ ಲೇಖನದಲ್ಲಿ ಚಿಕನ್ ಲಿವರ್ ನ ಆರೋಗ್ಯ ಲಾಭಗಳ ಬಗ್ಗೆ ತಿಳಿಯಿರಿ.

ರಕ್ತಹೀನತೆಯಿಂದ ತಡೆಯುವುದು

ರಕ್ತಹೀನತೆಯಿಂದ ತಡೆಯುವುದು

ಚಿಕನ್ ಲಿವರ್ ನ ಮೊದಲ ಆರೋಗ್ಯ ಲಾಭವೆಂದರೆ ಇದು ರಕ್ತಹೀನತೆಯಿಂದ ರಕ್ಷಿಸುವುದು. ರಕ್ತದಲ್ಲಿ ಕೆಂಪುರಕ್ತದ ಕಣಗಳು ಕಡಿಮೆಯಾದರೆ ರಕ್ತಹೀನತೆ ಕಾಯಿಲೆ ಬರುವುದು. ರಕ್ತಹೀನತೆ ಸಮಸ್ಯೆಯಿದ್ದರೆ ಆಗ ನೀವು ಸ್ವಲ್ಪ ಕೆಲಸ ಮಾಡಿದರೂ ಆಯಾಸ ಕಾಡುವುದು. ಇದು ನಿಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುವುದು. ಆದರೆ ನೀವು ಇದರ ಬಗ್ಗೆ ಚಿಂತೆ ಮಾಡಬೇಕೆಂದಿಲ್ಲ. ಯಾಕೆಂದರೆ ಚಿಕನ್ ಲಿವರ್ ನಿಮ್ಮನ್ನು ಇದರಿಂದ ರಕ್ಷಿಸುವುದು. ಚಿಕನ್ ಲಿವರ್ ನಲ್ಲಿ ವಿಟಮಿನ್ ಎ ಮತ್ತು ಕಬ್ಬಿನಾಂಶವು ಇರುವ ಕಾರಣದಿಂದಾಗಿ ಇದು ಕೋಶಗಳ ಚಟುವಟಿಕೆ ಸುಧಾರಿಸುವುದು ಮತ್ತು ನೈಸರ್ಗಿಕವಾಗಿ ರಕ್ತಹೀನತೆ ತಡೆಯುವುದು. ಇದು ದೇಹಕ್ಕೆ ಬೇಕಾಗಿರುವಂತಹ ವಿಟಮಿನ್ ಬಿ12 ನ್ನು ನೀಡುವುದು. ಇದು ಕೆಂಪು ರಕ್ತ ಕಣಗಳ ಉತ್ಪತ್ತಿಗೆ ನೆರವಾಗುವುದು. ಲಿವರ್ ನಲ್ಲಿ ಫಾಲಟೆ, ಕಬ್ಬಿನಾಂಶ ಮತ್ತು ವಿಟಮಿನ್ ಗಳು ಇರುವ ಕಾರಣದಿಂದ ಇದು ಸೇವನೆಗೆ ಯೋಗ್ಯವಾಗಿದೆ. ಕಬ್ಬಿನಾಂಶವು ದೇಹದಲ್ಲಿ ಕೆಂಪುರಕ್ತದ ಕಣಗಳನ್ನು ಉತ್ಪಾದಿಸಲು ಪ್ರಮುಖ ಪಾತ್ರ ವಹಿಸುವುದು.

ಕಣ್ಣಿನ ದೃಷ್ಟಿ ಸುಧಾರಣೆ

ಕಣ್ಣಿನ ದೃಷ್ಟಿ ಸುಧಾರಣೆ

ಚಿಕನ್ ಲಿವರ್ ನಲ್ಲಿರುವ ಅಂಶವು ಕಣ್ಣಿನ ದೃಷ್ಟಿಗೆ ಒಳ್ಳೆಯದು. ಚಿಕನ್ ಲಿವರ್ ನಲ್ಲಿ ಶೇ.288ರಷ್ಟು ವಿಟಮಿನ್ ಎ ಇದೆ ಮತ್ತು ಇದು ಕಣ್ಣಿನ ದೃಷ್ಟಿಯ ಆರೋಗ್ಯಕ್ಕೆ ಹೆಚ್ಚಿನ ನೆರವಾಗುವುದು. ಚಿಕನ್ ಲಿವರ್ ನಲ್ಲಿ ವಿಟಮಿನ್ `ಎ' ಯು ರೆಟಿನಾಲ್, ಅಲ್ಪಾ ಮತ್ತು ಬೆಟಾ ಕ್ಯಾರೋಟಿನ್ ರೂಪದಲ್ಲಿದೆ. ವಿಟಮಿನ್ ಗಳಲ್ಲಿ ವಿಟಮಿನ್ ಎ ಪ್ರಮುಖವಾಗಿರುವಂತದ್ದಾಗಿದೆ ಮತ್ತು ಕಣ್ಣಿನ ದೃಷ್ಟಿಗೆ ಇದು ಅತೀ ಅಗತ್ಯವಾಗಿದೆ. ವಿಟಮಿನ್ `ಎ' ಯಿಂದಾಗಿ ಕಣ್ಣಿನ ಪೊರೆ ಮತ್ತು ಅಕ್ಷಿಪಟಲದ ಅವನತಿಯನ್ನು ತಡೆಯುವುದು ಮತ್ತು ಅಕ್ಷಿಪಟಲದ ಉರಿಯೂತವನ್ನು ತಡೆಯುವುದು ಎಂದು ವೈಜ್ಞಾನಿಕ ವರದಿಗಳು ಹೇಳಿವೆ. ಇನ್ನು ನೀವು ಕಣ್ಣಿನ ದೃಷ್ಟಿಯ ಆರೋಗ್ಯಕ್ಕೆ ಕೇವಲ ಕ್ಯಾರೆಟ್ ತಿಂದರೆ ಸಾಲದು. ಚಿಕನ್ ಲಿವರ್ ಕೂಡ ಕಣ್ಣಿನ ದೃಷ್ಟಿ ಕಾಪಾಡುವುದು.

Most Read: ಮೆಂತೆ ಕಾಳುಗಳನ್ನು ಹಾಕಿ ಕುದಿಸಿದ ನೀರು ಕುಡಿದರೆ,ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ಶಕ್ತಿ, ಮಾನಸಿಕತೆಗೆ ಪೂರಕ ಮತ್ತು ಪ್ರತಿರೋಧಕ ವ್ಯವಸ್ಥೆ ವೃದ್ಧಿಸುವುದು

ಶಕ್ತಿ, ಮಾನಸಿಕತೆಗೆ ಪೂರಕ ಮತ್ತು ಪ್ರತಿರೋಧಕ ವ್ಯವಸ್ಥೆ ವೃದ್ಧಿಸುವುದು

ಚಿಕನ್ ಲಿವರ್ ನಲ್ಲಿ ಕಬ್ಬಿನಾಂಶವಿದೆ ಎಂದು ನಾವು ಈಗಾಗಲೇ ಮಾತನಾಡಿದ್ದೇವೆ. ಇದು ಶೇ.72ರಷ್ಟು ರಕ್ತಹೀನತೆ ತಡೆಯುವುದು, ಪ್ರತಿರೋಧಕ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು. ಇದರಲ್ಲಿ ಉತ್ತಮ ಪ್ರಮಾಣದ ಸತು, ಪೋಸ್ಪರಸ್ ಮತ್ತು ಮೆಗ್ನಿಶಿಯಂ ಇದೆ. ಈ ಎಲ್ಲಾ ವಿಟಮಿನ್ ಗಳು ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು ಮತ್ತು ದೇಹವು ಸರಿಯಾಗಿ ಬೆಳವಣಿಗೆಯಾಗಲು ನೆರವಾಗುವುದು. ನಿಮಗೆ ಆಯಾಸವಾಗಿದ್ದರೆ ಮತ್ತು ಮನಸ್ಸು ಸರಿಯಾಗಿಲ್ಲವೆಂದಾದರೆ ಆಗ ನೀವು ಚಿಕನ್ ಲಿವರ್ ತಿನ್ನಿ.

ಚರ್ಮ, ಕೂದಲು ಮತ್ತು ಉಗುರಿನ ಆರೋಗ್ಯ ಕಾಪಾಡುವುದು

ಚರ್ಮ, ಕೂದಲು ಮತ್ತು ಉಗುರಿನ ಆರೋಗ್ಯ ಕಾಪಾಡುವುದು

ಇದು ಹೇಗೆ ಎಂದು ನೀವು ಪ್ರಶ್ನಿಸಬಹುದು. ಚಿಕನ್ ಲಿವರ್ ನಲ್ಲಿ ಶೇ. 52ರಷ್ಟು ಪ್ರೋಟೀನ್ ಇದೆ. ಇದು ಚರ್ಮ, ಕೂದಲು ಮತ್ತು ಉಗುರಿನ ಆರೋಗ್ಯವನ್ನು ಕಾಪಾಡುವುದು ಮತ್ತು ಅದನ್ನು ಸುಸ್ಥಿತಿಯಲ್ಲಿ ಇಡುವುದು. ದೇಹಕ್ಕೆ ವಿಟಮಿನ್ ಗಳಿಂದ ಗರಿಷ್ಠ ಲಾಭವಿದೆ ಎಂದು ಹೆಚ್ಚಿನ ವೈದ್ಯರು ಅಥವಾ ಆಹಾರ ತಜ್ಞರು ಅಭಿಪ್ರಾಯಪಡುತ್ತಾರೆ. ಈ ಕಾರಣದಿಂದಲೂ ಚಿಕನ್ ಲಿವರ್ ನಲ್ಲಿ ಇರುವಂತಹ ವಿಟಮಿನ್ ಗಳು ಚರ್ಮ, ಕೂದಲು ಮತ್ತು ಉಗುರಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚರ್ಮ ಹಾಗೂ ಕೂದಲಿಗೆ ಬೇರೆಲ್ಲಾ ಪ್ರಯೋಗ ಮಾಡುವ ಬದಲು ನಿಮಗೆ ಇಷ್ಟವಾಗಿರುವಂತಹ ಚಿಕನ್ ಲಿವರ್ ತಿಂದರೆ ಸಾಕು.

ಹಲ್ಲುಗಳು ಹಾಗೂ ಮೂಳೆಗಳಿಗೆ ಒಳ್ಳೆಯದು

ಹಲ್ಲುಗಳು ಹಾಗೂ ಮೂಳೆಗಳಿಗೆ ಒಳ್ಳೆಯದು

ಚಿಕನ್ ಲಿವರ್ ನ ಇತರ ಲಾಭಗಳೆಂದರೆ ಅದು ಹಲ್ಲುಗಳು ಹಾಗೂ ಮೂಳೆಗಳ ಗುಣಮಟ್ಟ ಕಾಪಾಡುವುದು. ಹಲ್ಲುಗಳು ಬಲ ಹಾಗೂ ಆರೋಗ್ಯವಾಗಿರುವುದು ಪ್ರತಿಯೊಬ್ಬರ ಇಚ್ಛೆಯಾಗಿರುವುದು. ಇದರ ಬಗ್ಗೆ ಯಾವುದೇ ಸಂದೇಹವೇ ಬೇಡ. ಆದರೆ ಜೀವನಶೈಲಿ ಬದಲಾವಣೆಯಿಂದಾಗಿ ಇರುವುದೆಲ್ಲವನ್ನು ತಿನ್ನುವ ಕಾರಣದಿಂದಾಗಿ ಹಲ್ಲುಗಳ ಮೇಲೆ ಹಾನಿಕಾರ ಪರಿಣಾಮ ಉಂಟಾಗುವುದು. ಇಂತಹ ಸಮಸ್ಯೆಗಳಿಗೆ ಚಿಕನ್ ಲಿವರ್ ಒಳ್ಳೆಯ ಪರಿಹಾರವಾಗಬಹುದು. ಒಂದು ಔನ್ಸ್ ಚಿಕನ್ ಲಿವರ್ ನಲ್ಲಿ ಶೇ. 40ರಷ್ಟು ಪೋಸ್ಪರಸ್ ಇದೆ. ಕೇವಲ ಪೋಸ್ಪರಸ್ ಮಾತ್ರ ಹಲ್ಲುಗಳು ಹಾಗೂ ಮೂಳೆಗಳನ್ನು ಬೆಳೆಸಲು ಸಾಧ್ಯವಿಲ್ಲವೆಂದು ನಮಗೆ ತಿಳಿದಿದೆ. ಇದಕ್ಕೆ ಚಿಕನ್ ಲಿವರ್ ನಲ್ಲಿರುವ ಇತರ ಕೆಲವು ಖನಿಜಾಂಶಗಳು ಅಗತ್ಯವಾಗಿ ಬೇಕು.

Most Read: ಬುದ್ಧಿವಂತ ಮಗು ಹುಟ್ಟಬೇಕೆ? ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರಗಳ ಡಯಟ್ ಹೀಗಿರಲಿ

ಅಲ್ಝೈಮರ್ ತಡೆಯುವುದು

ಅಲ್ಝೈಮರ್ ತಡೆಯುವುದು

ಅಲ್ಝೈಮರ್ ಕಾಯಿಲೆಯು ನರ ಅವನತಿಯ ಕಾಯಿಲೆಯಾಗಿದ್ದು, ಇದು ನಿಧಾನವಾಗಿ ಬಂದು, ಸಮಯ ಕಳೆದಂತೆ ಮತ್ತಷ್ಟು ಕೆಟ್ಟದಾಗುವುದು. ಅಲ್ಝೈಮರ್ ಕಾಯಿಲೆ ಬಂದಿರುವ ರೋಗಿಗಳಿಗೆ ನೆನಪಿನ ಶಕ್ತಿಯು ತುಂಬಾ ಕಡಿಮೆಯಿರುವುದು. ಇದು ಕೆಲವು ಸಾಮಾನ್ಯ ಲಕ್ಷಣವಾಗಿದೆ. ಭಾಷೆಯ ಸಮಸ್ಯೆ, ದಿಗ್ಭ್ರಮೆ, ಪ್ರೇರಣೆ ಕೊರತೆ ಇತ್ಯಾದಿಗಳು ಬರಬಹುದು. ಚಿಕನ್ ಲಿವರ್ ನಲ್ಲಿ ವಿಟಮಿನ್ ಬಿ12 ಇದೆ. ಈ ವಿಟಮಿನ್ ಅಲ್ಝೈಮರ್ ಕಾಯಿಲೆ ಹೊಂದಿರುವವರಿಗೆ ತುಂಬಾ ನೆರವಾಗುವುದು. ವಿಟಮಿನ್ ಬಿ12 ಅಲ್ಝೈಮರ್ ರೋಗಿಗಳಲ್ಲಿ ನೆನಪಿನ ಶಕ್ತಿ ಹೆಚ್ಚಿಸುವುದು.

English summary

Suprising Health Benefits of Chicken Liver

Chicken liver provide a lot of nutrient and the best source of vitamin A, good for us. We have listed some health benefits of chicken liver.
X
Desktop Bottom Promotion