For Quick Alerts
ALLOW NOTIFICATIONS  
For Daily Alerts

ಸಂಬಂಧವನ್ನು ಸುಧಾರಿಸಿಕೊಳ್ಳಬೇಕೆ? ಅಪ್ಪಿಕೊಳ್ಳುವುದನ್ನು ರೂಢಿಸಿಕೊಳ್ಳಿ!

By Staff
|

ಅಪ್ಪಿಕೊಳ್ಳುವುದರಿಂದ ನೀವು ಒಬ್ಬ ವ್ಯಕ್ತಿಯನ್ನು ಎಷ್ಟು ಪ್ರೀತಿಸುತ್ತೀರಿ ಎಂದು ತೋರಿಸಿಕೊಳ್ಳಬಹುದು. ಆದರೂ ವ್ಯಕ್ತಿಯಿಂದ ವ್ಯಕ್ತಿಗೆ ಈ ಅಪ್ಪಿಕೊಳ್ಳುವ ಬಗೆಯು ಭಿನ್ನವಾಗಿರುತ್ತದೆ. ನೀವು ನಿಮ್ಮ ಮಗುವನ್ನು, ತಾಯಿಯನ್ನು, ಸ್ನೇಹಿತರನ್ನು ಮತ್ತು ಹೆಂಡತಿಯನ್ನು ಅಪ್ಪಿಕೊಳ್ಳುವುದರಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಅವೆಲ್ಲವುಗಳಲ್ಲಿ ಇರುವ ಸಾಮ್ಯತೆ ಎಂದರೆ ಅರ್ಥ ಮತ್ತು ಭಾವನೆಯ ಏಕರೂಪತೆಯೊಂದೆ.

ನಿಮ್ಮ ಸಂಬಂಧವನ್ನು ಗಟ್ಟಿಯಾಗಿರಿಸಿಕೊಳ್ಳಬೇಕು ಎಂದು ನಿಮಗೆ ತೋರಿದಲ್ಲಿ ಅದಕ್ಕಾಗಿ ಅಪ್ಪಿಕೊಳ್ಳುವುದನ್ನು ರೂಢಿಸಿಕೊಳ್ಳಿ. ಭದ್ರತೆ ಮತ್ತು ಸಾನ್ನಿಧ್ಯವನ್ನು ಸಾರುವುದರ ಜೊತೆಗೆ ಇದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದು ಪ್ರಾಣ ಸಂಬಂಧಿ ಮತ್ತು ಸ್ಪರ್ಶ ಸಂಬಂಧಿ ಕೇಂದ್ರಗಳನ್ನು ಉದ್ಧೀಪನಗೊಳಿಸುತ್ತದೆ. ಇದರ ಜೊತೆಗೆ ಇದು ಆಕ್ಸಿಟೊಸಿನ್ ಎಂಬ ಮೂಡ್‍ಗೆ ಸಂಬಂಧಿಸಿದ ಹಾರ್ಮೋನನ್ನು ಸಹ ಬಿಡುಗಡೆ ಮಾಡುತ್ತದೆ.

ಕುತೂಹಲಕಾರಿ ವಿಚಾರವೇನೆಂದರೆ, ಅಪ್ಪಿಕೊಳ್ಳುವ ಸಮಯದಲ್ಲಿ ಅತ್ಯುತ್ತಮವಾದ ಸಲ್ಲಾಪ ಅಥವಾ ಚರ್ಚೆ ಮಾಡುವ ಅವಕಾಶ ನಮಗೆ ದೊರೆಯುತ್ತದೆ. ವರ್ಷಗಳು ಕಳೆದಂತೆಲ್ಲ, ಸಂಬಂಧದಲ್ಲಿ ಅಪ್ಪುಗೆ, ಮುತ್ತು ಮತ್ತು ಸ್ಪರ್ಶಗಳು ಸಹ ಕಳೆದುಕೊಳ್ಳುವ ಸಂಭವವಿರುತ್ತದೆ. ಹುಡುಗರ ಪ್ರಥಮ ಪ್ರೀತಿಗೆ ಯಶಸ್ವಿ ಸೂತ್ರಗಳು

Want To Improve Your Relationship? Try Cuddling!

ಹಾಗಾಗಿ ಇದನ್ನು ನಿಮ್ಮ ಸಂಗಾತಿಯ ಜೊತೆಗೆ ಒಮ್ಮೆ ಹಂಚಿಕೊಂಡಾಗ ನಿಮಗೆ ಕಳೆದುಕೊಂಡದ್ದನ್ನು ಮತ್ತೆ ಪಡೆದ ಅನುಭವ ದೊರೆಯುತ್ತದೆ. ಅಪ್ಪಗೆಯು ಲೈಂಗಿಕತೆಗೆ ಹೊರತಾದ ದೈಹಿಕ ಸ್ಪರ್ಶದ ಮುದವನ್ನು ನೀಡುತ್ತದೆ. ಬನ್ನಿ ಅಪ್ಪಿಕೊಳ್ಳುವುದರಿಂದ ಸಂಬಂಧದಲ್ಲಿ ದೊರೆಯುವ ಹೊಸ ಸುಧಾರಣೆಗಳ ಕುರಿತು ತಿಳಿದುಕೊಳ್ಳೋಣ. ಇದನ್ನು ತಿಳಿದ ಮೇಲೆ ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಅಪ್ಪಿಕೊ ಚಳುವಳಿಯನ್ನು ಮಾಡುತ್ತೀರಾ!!.

ಇದು ಸಂಬಂಧವನ್ನು ಗಟ್ಟಿಗೊಳಿಸುತ್ತದೆ
ನೀವು ಒಬ್ಬ ವ್ಯಕ್ತಿಯ ಜೊತೆಗೆ ಎಷ್ಟರ ಮಟ್ಟಿಗೆ ಅನ್ಯೋನ್ಯತೆಯನ್ನು ಹೊಂದಿದ್ದೀರಾ ಎಂಬುದನ್ನು ಅಪ್ಪಿಕೊಂಡಾಗ ತಿಳಿಯಬಹುದು. ಇದು ನಿಮ್ಮ ನಡುವೆ ಇರುವ ಪ್ರೀತಿಗೆ ಯಾವುದೇ ಕಂದಕಗಳಿಲ್ಲ ಎಂಬುದನ್ನು ಸಾಭೀತು ಮಾಡುತ್ತದೆ. ಈ ಅನ್ಯೋನ್ಯತೆಯೇ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಹಾಗು ನಿಮ್ಮ ಕುಟುಂಬವನ್ನು ಬೆಸೆಯುತ್ತದೆ. ಇದಕ್ಕಾಗಿ ನೀವು ನಿಮ್ಮ ಪ್ರೀತಿ ಪಾತ್ರರಿಗಾಗಿ ಕೆಲ ಸಮಯವನ್ನು ಮೀಸಲಾಗಿರಿಸಬೇಕಾಗುತ್ತದೆ.

ಭದ್ರತೆಯನ್ನು ಖಾತ್ರಿಪಡಿಸುತ್ತದೆ
ಇದು ಮಕ್ಕಳಿಗೆ ಅನ್ವಯಿಸುತ್ತದೆ. ಮಕ್ಕಳಿಗೆ ದೂರವಾದಷ್ಟು ಅವರು ಬೇರೆಯಾದ ಭಾವನೆಯನ್ನು ಮನಸ್ಸಿನಲ್ಲಿ ತೆಗೆದುಕೊಂಡು, ಉದ್ವೇಗ ಮುಂತಾದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಆಗ ಅಪ್ಪುಗೆಯು ಅವರ ಪಾಲಿಗೆ ಸಂಜೀವಿನಿಯಂತೆ ನೆರವಿಗೆ ಬರುತ್ತದೆ. ಇದು ನಿಮ್ಮ ಮತ್ತು ಮಕ್ಕಳ ನಡುವೆ ಒಂದು ಅನುಬಂಧವನ್ನು ಹೆಚ್ಚಿಸುತ್ತದೆ. ಇದರಿಂದ ಅವರಲ್ಲಿ ಭದ್ರತೆಯನ್ನು ಖಾತ್ರಿಪಡಿಸುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ
ನಿಮ್ಮ ಸಂಗಾತಿಯಿಂದ ಒಂದು ಬಿಗಿಯಾದ ಅಪ್ಪುಗೆ! ಸಾಕು, ನೀವು ನಿಮ್ಮ ಕಚೇರಿಯಲ್ಲಿ ಎಷ್ಟು ಮಟ್ಟಿಗೆಯಾದರು ಒತ್ತಡವನ್ನು ಅನುಭವಿಸುತ್ತ ಇರಿ, ಅದನ್ನು ನಿವಾರಿಸಿ ನಿಮಗೆ ಒಂದು ಆರಾಮವನ್ನು ನೀಡಲು ಇದು ಸಾಕಾಗುತ್ತದೆ. ಹೀಗೆ ಅಪ್ಪುಗೆಯು ಸುಲಭವಾದ ಅಡ್ಡ ಪರಿಣಾಮಗಳಿಲ್ಲದ ಒಂದು ದಿವ್ಯೌಷಧಿಯಾಗಿ ದಾಂಪತ್ಯವನ್ನು ಸುಖಮಯಗೊಳಿಸುತ್ತದೆ. ಇದರ ಜೊತೆಗೆ ಅಪ್ಪಿಕೊಳ್ಳಲು ಯಾವುದೇ ಮಾತುಗಳು ಮತ್ತು ನಾಟಕಗಳು ಅವಶ್ಯಕತೆಯಿಲ್ಲ. ಸುಮ್ಮನೆ ಅಪ್ಪಿಕೊಂಡರೆ ಸಾಕು, ಅದೇ ನಿಮ್ಮಲ್ಲಿರುವ ಎಲ್ಲಾ ಭಾವನೆಗಳನ್ನು ಹೃದಯದಿಂದ ಹೃದಯಕ್ಕೆ ವರ್ಗಾಯಿಸುತ್ತದೆ.

ದೈಹಿಕ ಅನ್ಯೋನ್ಯತೆ
ಇದುವರೆಗು ಬೆಳೆದು ಬಂದಿರುವ ಲಿಂಗ ತಾರತಮ್ಯವನ್ನು ಮರೆತುಬಿಡಿ. ಗಂಡು ಮತ್ತು ಹೆಣ್ಣು ಇಬ್ಬರು ಅಪ್ಪಿಕೊಳ್ಳಲು ಇಷ್ಟಪಡುತ್ತಾರೆ. ಇದರಿಂದ ಇವರ ಮಧ್ಯೆ ದೈಹಿಕ ಅನ್ಯೋನ್ಯತೆಯು ಸಹ ಅಧಿಕವಾಗುತ್ತದೆ. ಸಂಬಂಧದಲ್ಲಿ ಅಪ್ಪುಗೆಯೇ ಸಂವಹನವಾಗಿಬಿಡುತ್ತದೆ. ಅಪ್ಪಿಕೊಂಡರೆ ಸಾಕು ಅವರ ಭಾವನೆಗಳೇನು ಎಂಬುದು ಇಬ್ಬರಿಗು ತಿಳಿಯುತ್ತದೆ.

ಭಾವನಾತ್ಮಕ ಸಂಪರ್ಕ
ಭಾವನಾತ್ಮಕ ಮತ್ತು ದೈಹಿಕ ಸಂಪರ್ಕಗಳು ವೈವಾಹಿಕ ಜೀವನದಲ್ಲಿ ಒಂದರ ಜೊತೆಗೊಂದು ಕೂಡಿಕೊಂಡು ಹೋಗುತ್ತವೆ. ಸಂಬಂಧಗಳಲ್ಲಿ ಸ್ಪರ್ಷ ಮತ್ತು ಅಪ್ಪುಗೆಗಳು ನಮ್ಮ ಭಾವನಾತ್ಮಕ ಸಂಪರ್ಕವನ್ನು ಗಟ್ಟಿಗೊಳಿಸುತ್ತವೆ. ನೀವು ಪರಸ್ಪರ ಅಪ್ಪಿಕೊಂಡಾಗ ಪ್ರೀತಿಯನ್ನು ತೋರ್ಪಡಿಸುತ್ತಿರಿ. ಇದರಿಂದ ನಿಮ್ಮ ಸಂಬಂಧದಲ್ಲಿ ತಾಜಾತನ ಬಂದು, ಸಂಬಂಧಗಳು ಗಟ್ಟಿಯಾಗುತ್ತವೆ.

English summary

Want To Improve Your Relationship? Try Cuddling!

Cuddling is the perfect way to express your love and care for a person. However, the type and degree of cuddles may vary with different persons. The way you cuddle your mother, friend, wife and child may be different, but they all carry the same meaning and feeling
X
Desktop Bottom Promotion