For Quick Alerts
ALLOW NOTIFICATIONS  
For Daily Alerts

ಕರಿದ ಅವರೆಕಾಳು -ಟೈಮ್ ಪಾಸ್ ಸ್ನ್ಯಾಕ್ಸ್

|

ಮೊನ್ನೆ ಅವರೆಕಾಳು ಮೇಳಕ್ಕೆ ಹೋಗಿದ್ದೆ. ಅಲ್ಲಿದ್ದ ಅವರೆಕಾಳಿನಿಂದ ಮಾಡಿದ ವಿವಿಧ ಬಗೆಯ ಭಕ್ಷ್ಯಗಳನ್ನು ನೋಡಿ ಅವರೆಕಾಳಿನಿಂದ ಇಷ್ಟೊಂದು ಬಗೆಯ ಅಡುಗೆಗಳನ್ನು ಮಾಡಬಹುದೇ ಎಂದು ಅಚ್ಚರಿ ಮೂಡಿತು. ಸಿಹಿ ಅಡುಗೆಯಲ್ಲಿ ಅವರೆ ಕಾಯಿ ಹಲ್ವಾ, ಪಾಯಸ, ಸೋನ್ ಪಪ್ಪಡಿ, ಬರ್ಫಿ ಇದ್ದರೆ ನಾನಾ ಬಗೆಯ ತಿಂಡಿಗಳು, ಅವರೆಕಾಯಿ ಉಪ್ಪಿಟ್ಟು, ಅವರೆಕಾಯಿ ಸಾಂಬಾರು ಮುಂತಾದ ಬ್ರೇಕ್ ಫಾಸ್ಟ್ ಅಡುಗೆಗಳು ಇದ್ದೆವು.

ಇದನ್ನು ನೋಡಿ ಅವುಗಳನ್ನು ಮಾಡುವ ವಿಧಾನವನ್ನು ತಿಳಿದು ನಿಮಗೂ ತಿಳಿಸಬೇಕೆನಿಸಿತು. ಇಲ್ಲಿ ಇವತ್ತು ಕರಿದ ಅವರೆಕಾಳಿನ ರೆಸಿಪಿ ನೀಡಿದ್ದೇನೆ ನೋಡಿ.

Roasted Averekalu Recipe

ಬೇಕಾಗುವ ಪದಾರ್ಥಗಳು :

ಹಿತಕಿದ ಅವರೆ ಬೇಳೆ 4 ಬಟ್ಟಲು
ಒಂದು ಅಥವಾ ಒಂದೂವರೆ ಚಮಚ ಖಾರದಪುಡಿ
ಒಂದು ಬಟ್ಟಲು ಶೇಂಗಾ ಬೀಜ
ಅರ್ಧ ಬಟ್ಟಲು ಹುರಿಗಡಲೆ
ಉಪ್ಪು, ಕರಿಬೇವಿನ ಎಲೆ
ಎಣ್ಣೆ

ಮಾಡುವ ವಿಧಾನ :

* ಮೊದಲು ಬಾಣಲೆಯಲ್ಲಿ ಎಣ್ಣೆ ಕಾದ ನಂತರ ಒಂದೊಂದು ಹಿಡಿ ಅವರೆ ಕಾಳನ್ನು ಹಾಕಿ ಗರಿಗರಿಯಾಗುವಂತೆ ಕರಿದು ಒಂದು ಪಾತ್ರೆಯಲ್ಲಿ ಹಾಕಿಡಿ.

* ಕಡಲೆ ಬೀಜವನ್ನು ಕೂಡ ಕರಿದಿಟ್ಟುಕೊಳ್ಳಬೇಕು.

* ಈಗ ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಕರಿಬೇವು, ಹುರಿಗಡಲೆ, ಖಾರದಪುಡಿ ಎಲ್ಲವನ್ನು ಹಾಕಿ ಒಂದು ನಿಮಿಷ ಹುರಿದಿಡಬೇಕು. ನಂತರ ಕರಿದ ಅವರೆಬೇಳೆ, ಕಡಲೆಬೀಜ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ ಎಲ್ಲವನ್ನೂ ಮಿಶ್ರ ಮಾಡಿ ಆರಿದ ನಂತರ ಗಾಳಿಯಾಡದ ಡಬ್ಬಕ್ಕೆ ತುಂಬಿಟ್ಟುಕೊಂಡರೆ ಬೇಕೆನಿಸಿದಾಗ ತಿನ್ನಬಹುದು.

English summary

Roasted Averekalu Recipe | Variety Of Snacks Recipe | ಕರಿದ ಅವರೆಕಾಳು ರೆಸಿಪಿ | ಅನೇಕ ಬಗೆಯ ತಿಂಡಿಯ ರೆಸಿಪಿ

If you prepare avarekalu roast, you can keep it for long time. It's very easy to prepare. This is a avarekalu season so you can make this recipe and can keep it for long time.
X
Desktop Bottom Promotion