For Quick Alerts
ALLOW NOTIFICATIONS  
For Daily Alerts

ಸಂಜೆಗೆ ಸ್ಪೆಷಲ್-ಆಲೂ ಟಿಕ್ಕಿ ಚಾಟ್

|

ಮನೆ ಮಂದಿಯೆಲ್ಲಾ ಕೂತು ಸಂಜೆ ಟೀ ಜೊತೆ ಸವಿಯಲು ಸ್ವಾದಿಷ್ಟಕರ ಚಾಟ್ ಇದಾಗಿದೆ. ದಹೀ ವಡೆಯಂತೆ ಆಲೂ ಟಿಕ್ಕಿಗೆ ಮೊಸರು ಹಾಕಿ ಚಾಟ್ ಸಾಮಾಗ್ರಿಗಳು ಮತ್ತು ಹಪ್ಪಳವನ್ನು ಸೇರಿಸಿ ಮಾಡುವ ಈ ಚಾಟ್ ದಹೀ ವಡೆಗಿಂತ ಹೆಚ್ಚು ರುಚಿಕರವಾಗಿರುತ್ತದೆ.

ಚಾಟ್ಸ್ ಪದಾರ್ಥಗಳಿದ್ದರೆ ಈ ಚಾಟ್ಸ್ ಮಾಡುವ ಸರಳವಾಗಿರುವುದರಿಂದ ಸುಲಭದಲ್ಲಿಯೇ ಇದನ್ನು ಮಾಡಬಹುದು. ಇದರ ರೆಸಿಪಿಯನ್ನು ಈ ಕೆಳಗೆ ನೀಡಲಾಗಿದೆ ನೋಡಿ:

Aloo Tikki Chaat Recipe

ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ 4
ಸ್ವಲ್ಪ ಕೊತ್ತಂಬರಿ ಸೊಪ್ಪು
ಹಸಿ ಮೆಣಸಿನಕಾಯಿ 2
ಬ್ಲ್ಯಾಕ್ ಸಾಲ್ಟ್ (ರುಚಿಗೆ ತಕ್ಕಷ್ಟು)
ಚಿಟಿಕೆಯಷ್ಟು ಇಂಗು
ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ(ಚಿಕ್ಕದಾಗಿ ಕತ್ತರಿಸಿ)
ಖಾರದ ಪುಡಿ ಅರ್ಧ ಚಮಚ/1 ಚಮಚ
ಎಣ್ಣೆ 2 ಚಮಚ

ಇತರ ಸಾಮಾಗ್ರಿಗಳು
ಬೇಯಿಸಿದ ಬಟಾಣಿ ಅರ್ಧ ಕಪ್
ಮೊಸರು 1/4 ಕಪ್
ಹುಣಸೆ ಹಣ್ಣಿನ ರಸ 2 ಚಮಚ
ಹಸಿ ಮೆಣಸಿನಕಾಯಿ ಪೇಸ್ಟ್ 1/2 ಚಮಚ
ರೋಸ್ಟ್ ಮಾಡಿದ ಜೀರಿಗೆ 1/4 ಚಮಚ
ಖಾರದ ಪುಡಿ 1/4 ಚಮಚ
ಹಪ್ಪಳ 5-6
ಸೇವ್ 2 ಚಮಚ

ತಯಾರಿಸುವ ವಿಧಾನ
* ಆಲೂಗಡ್ಡೆಯನ್ನು ಬೇಯಿಸಿ ಅದನ್ನು ಚೆನ್ನಾಗಿ ಹಿಸುಕಿ, ಅದಕ್ಕೆ ಖಾರದ ಪುಡಿ, ಹಸಿ ಮೆಣಸಿನಕಾಯಿ, ಇಂಗು, ಕೊತ್ತಂಬರಿ ಸೊಪ್ಪು, ಬ್ಲ್ಯಾಕ್ ಸಾಲ್ಟ್ ಹಾಕಿ ಮಿಕ್ಸ್ ಮಾಡಿ.

* ಈಗ ಇವುಗಳನ್ನು ಉಂಡೆ ಮಾಡಿ ಟಿಕ್ಕಿಯ ಆಕಾರಕ್ಕೆ ತಟ್ಟಿ.

*ಈಗ ತವಾಕ್ಕೆ 2 ಚಮಚ ಎಣ್ಣೆ ಹಾಕಿ ಅದರಲ್ಲಿ ತಟ್ಟಿದ ಸ್ವಲ್ಪ ಆಲೂ ಹಾಕಿ ಕಂದು ಬಣ್ಣ ಬರುವವರೆಗೆ ಬೇಯಿಸಿ.

* ಈಗ ಈ ಟಿಕ್ಕಿಯನ್ನು ತಟ್ಟೆಗೆ ಹಾಕಿ ಅದರ ಮೇಲೆ ಮೊಸರು ಸುರಿದು, ಮೆಣಸಿನಕಾಯಿ ಪೇಸ್ಟ್, ಹುಣಸೆ ಹಣ್ಣಿನ ರಸ ಹಾಕಿ ರೋಸ್ಟ್ ಮಾಡಿದ ಜೀರಿಗೆಯನ್ನು ಉದುರಿಸಿ, ಚಾಟ್ ಮಸಾಲಾ , ಖಾರದ ಪುಡಿ ಹಾಕಿ ಕೊತ್ತಂಬರಿ ಸೊಪ್ಪು ಹಾಕಿ, ನಂತರ ಸೇವ್ ಮತ್ತು ಹಪ್ಪಳವನ್ನು ಪುಡಿ ಮಾಡಿ ಹಾಕಿದರೆ ಸವಿರುಚಿಯ ಆಲೂ ಟಿಕ್ಕಿ ಚಾಟ್ ರೆಡಿ.

English summary

Aloo Tikki Chaat Recipe | Variety Of Chaats Recipe | ಆಲೂ ಟಿಕ್ಕಿ ಚಾಟ್ ರೆಸಿಪಿ | ಅನೇಕ ಬಗೆಯ ಚಾಟ್ ರೆಸಿಪಿ

Here we spend many a evening eating our favorite aloo chaat, relishing its magical, addictive flavours. And why not? It is a comforting food that warms the palate. Aloo chaat can be best served with chilled yogurt and tamarind chutney.
X
Desktop Bottom Promotion