For Quick Alerts
ALLOW NOTIFICATIONS  
For Daily Alerts

ಚಳಿಯಲ್ಲಿ ಮೆಲ್ಲಬಹುದು ಜೋಳದ ಮಂಚೂರಿಯನ್

|
American Sweet Corn Manchurian
ಇದು ಚಳಿಗಾಲ. ಸಂಜೆ ಹೊತ್ತು ಬೀಸುವ ಥಂಡಿ ಗಾಳಿಗೆ ಬಾಯಲ್ಲಿ ಬಿಸಿಯಾಗಿ ಏನಾದರೂ ಇರಬೇಕು ಎನಿಸುವುದು ಸಹಜ. ಇಂತಹ ಸಂದರ್ಭದಲ್ಲಿ ಅಮೆರಿಕನ್ ಸ್ವೀಟ್ ಕಾರ್ನ್ ಮಂಚೂರಿ ಮಾಡಿ ತಿಂದರೆ ಬಾಯಿ ಬಯಕೆ ತೀರಿದಂತೆ. ಈ ಅಮರಿಕನ್ ಸ್ವೀಟ್ ಕಾರ್ನ್ ಮಸಾಲಾ ಮಂಚೂರಿಯನ್ ತಯಾರಿಸುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಜೋಳದ ಮಂಚೂರಿಯನ್ ಗೆ ಬೇಕಾಗುವ ಸಾಮಗ್ರಿ:
ಹಿಟ್ಟಿಗೆ: 1 ಕಪ್ ಬಿಡಿಸಿ ಬೇಯಿಸಿದ ಜೋಳ, 2 ದೊಡ್ಡ ಚಮಚ ಕಾರ್ನ್ ಫ್ಲೋರ್, ಬ್ರೆಡ್ ತುಂಡು, 1 ಚಮಚ ಮೈದಾ ಹಿಟ್ಟು, 1 ಚಮಚ ಕಡಲೆ ಹಿಟ್ಟು, ಉಪ್ಪು, 1/2 ಚಮಚ ಕೆಂಪು ಮೆಣಸಿನ ಪುಡಿ, ಸ್ವಲ್ಪ ಸೋಡಾ
ಮಂಚೂರಿಯನ್ ಗೆ: 1 ಕ್ಯಾಪ್ಸಿಕಂ, 1 ಈರುಳ್ಳಿ, ಸ್ವಲ್ಪ ಮೆಣಸು, 1 ಚಮಚ ಶುಂಠಿ ಪೇಸ್ಟ್, 1 ಚಮಚ ಟೊಮೆಟೊ ಸಾಸ್, 1 ಚಮಚ ಸೋಯಾ ಸಾಸ್, ಉಪ್ಪು, ಎಣ್ಣೆ

ಜೋಳದ ಮಸಾಲಾ ಮಂಚೂರಿಯನ್ ತಯಾರಿಸುವ ವಿಧಾನ:
1. ಹಿಟ್ಟಿಗೆಂದು ಮೇಲೆ ತಿಳಿಸಿರುವ ಎಲ್ಲಾ ಸಾಮಾನುಗಳನ್ನು ಬೆರೆಸಿ ಸ್ವಲ್ಪ ಹದವಾಗಿ ಹಿಟ್ಟನ್ನು ಕಲೆಸಿಕೊಳ್ಳಬೇಕು. (ಜೋಳವನ್ನು ಹೊರತುಪಡಿಸಿ)

2. ಬೇಯಿಸಿ ಬಿಡಿಸಿದ ಜೋಳವನ್ನು ಕಲೆಸಿದ ಹಿಟ್ಟಿನಲ್ಲಿ ಹಾಕಿ ಅದನ್ನು ಸ್ವಲ್ಪ ಎಣ್ಣೆಯೊಂದಿಗೆ ಕೆಂಪಗಾಗುವ ತನಕ ಹುರಿಯಬೇಕು.

3. ಪ್ರತ್ಯೇಕ ಬಾಣಲೆಗೆ ಸ್ವಲ್ಪ ಎಣ್ಣೆ ಕಾಯಿಸಿ ಅದರಲ್ಲಿ ಕ್ಯಾಪ್ಸಿಕಂ, ಈರುಳ್ಳಿ, ಶುಂಠಿ, ಮೆಣಸು, ಟೊಮೆಟೊ ಮತ್ತು ಸೋಯಾ ಸಾಸನ್ನು ಬೆರೆಸಿ ಹುರಿಯಬೇಕು.

4. ಈ ಮಿಶ್ರಣಕ್ಕೆ ಹುರಿದ ಜೋಳವನ್ನು ಬೆರೆಸಿ ಕೆಲವು ನಿಮಿಷ ಹುರಿಯಬೇಕು.

ಈಗ ರುಚಿಯಾದ ಜೋಳದ ಮಸಾಲಾ ಮಂಚೂರಿಯನ್ ತಿನ್ನಲು ರೆಡಿ. ಇದನ್ನು ಬಿಸಿಯಾಗಿದ್ದಲೇ ತಿನ್ನಬೇಕು.

English summary

American Sweet Corn Manchurian | Manchurian Recipe | ಜೋಳದ ಮಸಾಲಾ ಮಂಚೂರಿಯನ್ ಮಾಡುವ ವಿಧಾನ | ಮಂಚೂರಿಯನ್ ರೆಸಿಪಿ

Winter is here and it is time to make tasty American sweet corn manchurian. Make sweet corn manchurian at home and surprise friends and family with the new taste. Have a look to know the procedure of manchurian recipe.
Story first published: Thursday, December 1, 2011, 15:19 [IST]
X
Desktop Bottom Promotion