Just In
Don't Miss
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಳಿಯಲ್ಲಿ ತಿನ್ನಿ ಬಿಸಿಬಿಸಿ ಹೆಸರುಬೇಳೆ ಸಮೋಸ
ತಿಂಡಿಪೋತರಿಗೆ ಚಾಟ್ ಮನೆಗಳಲ್ಲಿ ತಟ್ಟೆಯ ಮೇಲೆ ದುಂಡಗೆ ಇಟ್ಟ ಡುಮ್ಮನೆ ಇರುವ ಆಲೂಗಡ್ಡೆ ಸಮೋಸಗಳನ್ನು ಕಂಡ ಕೂಡಲೆ ತಿನ್ನದೆ ಇರಲು ಸಾಧ್ಯವೇ ಇಲ್ಲ. ಅಯ್ಯೋ ಸಿಕ್ಕಾಪಟ್ಟೆ ಗ್ಯಾಸು ಗೀಸು ಅಂತ ಆರೋಗ್ಯವೂ ಹಾಳು ಅಂತೀರಾ? ಆದರೇನು ಮಾಡ್ತೀರಾ, ತಿನ್ನಬೇಕೆನಿಸಿದಾಗ ಆ ಜಿಹ್ವಾ ಚಾಪಲ್ಯವನ್ನು ಹಿಡಿದಿಟ್ಟುಕೊಳ್ಳಲೂಬಾರದು. ಎಂತೆಂಥದೋ ಎಣ್ಣೆಯಲ್ಲಿ ಕರಿದ, ಆರೋಗ್ಯವನ್ನೂ ಹಾಳುಗೆಡವುವ ಆಲೂ ಸಮೋಸ ಬದಲು ಹೆಸರುಬೇಳೆಯ ಸಮೋಸವನ್ನು ಮನೆಯಲ್ಲೇ ಮಾಡಿ ಆರೋಗ್ಯವನ್ನೂ ದಿವಿನಾಗಿಟ್ಟುಕೊಳ್ಳಿ. ಈ ಚಳಿಗಾಲದಲ್ಲಿ ಸಂಜೆಯ ವೇಳೆಗೆ ಕಾಫಿ ಅಥವಾ ಚಹಾದ ಜೊತೆಗೆ ಒಳ್ಳೆ ಟೈಮ್ ಪಾಸ್ ತಿಂಡಿಯೂ ಹೌದು.
ಬೇಕಾಗುವ ಸಾಮಗ್ರಿಗಳು
ಮೈದಾ - 1 ಬಟ್ಟಲು
ರವೆ - 1 ಬಟ್ಟಲು
ಹೆಸರುಬೇಳೆ - 1 ಬಟ್ಟಲು
ಈರುಳ್ಳಿ - ದೊಡ್ಡ ಗಾತ್ರದ್ದು 4 (ತುಟ್ಟಿಯಾಗಿರುವುದರಿಂದ 3 ಸಾಕು)
ಗರಂ ಮಸಾಲ - ಅರ್ಧ ಚಮಚ
ಚಾಟ್ ಮಸಾಲ - ಅರ್ಧ ಚಮಚ
ಖಾರದಪುಡಿ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಎಣ್ಣೆ ಕರಿಯಲು
ಟೊಮೆಟೊ ಸಾಸ್ - 1 ಚಮಚ
ಮಾಡುವ ವಿಧಾನ
* ಮೈದಾ ಮತ್ತು ರವೆಗೆ ನೀರು ಸೇರಿಸಿ ಚಪಾತಿ ಹಿಟ್ಟಿನಂತೆ ಕಲಸಿ, ಸ್ವಲ್ಪ ತುಪ್ಪ ಸೇರಿಸಿ ನಾದಿ ಮುಚ್ಚಿಡಿ.
* ಹೆಸರುಬೇಳೆಯನ್ನು ಕುಕ್ಕರಿನಲ್ಲಿ ಒಂದೆರಡು ಕೂಗನ್ನು ಕೂಗಿಸಿ ಸ್ಟೌವಿನಿಂದ ಕೆಳಗಿಳಿಸಿ.
* ಇನ್ನೊಂದೆಡೆ ಒಗ್ಗರಣೆಯನ್ನು ತಯಾರಿಸಿಕೊಂಡು ಹೆಚ್ಚಿಕೊಂಡ ಈರುಳ್ಳಿ ಹಾಕಿ ಚೆನ್ನಾಗಿ ತಾಳಿಸಿ.
* ಅದಕ್ಕೆ ಬೇಯಿಸಿಟ್ಟ ಹೆಸರುಬೇಳೆ ಬೆರೆಸಿ, ಚಾಟ್ ಮಸಾಲ, ಗರಂ ಮಸಾಲ, ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಎಲ್ಲ ಸೇರಿಸಿ ಪಲ್ಯ ತಯಾರಿಸಿಕೊಳ್ಳಿ.
* ನಂತರ ಹಿಟ್ಟನ್ನು ತ್ರಿಕೋನಾಕಾರದಲ್ಲಿ ಲಟ್ಟಿಸಿಕೊಂಡು ಅದರಲ್ಲಿ ಪಲ್ಯ ತುಂಬಿ, ಅಂಚುಗಳನ್ನು ಸರಿಯಾಗಿ ಮುಚ್ಚಿ, ಚೆನ್ನಾಗಿ ಕಾದ ಎಣ್ಣೆಯಲ್ಲಿ ಕರಿಯಿರಿ.
* ಮುಂದ? ಮುಂದೇನು? ಟೊಮೆಟೊ ಸಾಸ್ ಹಾಕಿಕೊಂಡು ಬಿಸಿಯಿರುವಾಗಲೇ ಜಮಾಯಿಸಿ.