For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ರುಚಿಕರ ನುಗ್ಗೆಕಾಯಿ ಸಾಂಬಾರ್

By * ಕುಮುದಾ ಶಂಕರ್, ಸೌದಿ ಅರೇಬಿಯಾ
|
Drumstick or nuggekayi sambar
ಅತ್ಯಧಿಕ ಪ್ರೊಟೀನ್ ಇರುವ ನುಗ್ಗೆಕಾಯಿ ಯ ಸಾಂಬಾರ್ ಆರೋಗ್ಯಕರವಷ್ಟೇ ಅಲ್ಲ ರುಚಿಕರ ಕೂಡ. ಸಮಾಧಾನದ ಸಂಗತಿಯೆಂದರೆ, ಈರುಳ್ಳಿ, ಟೊಮೆಟೊ, ದೊಡ್ಡಮೆಣಸಿನಕಾಯಿ, ಕ್ಯಾರಟ್, ಬೀನ್ಸ್ ಗಳಂತೆ ನುಗ್ಗೆಕಾಯಿಯ ದರ ಅಂತಹ ಜಾಸ್ತಿಯೇನಿರುವುದಿಲ್ಲ. ಮಾರುಕಟ್ಟೆಯಲ್ಲಿ ಯಾವುದೇ ಕಾಲದಲ್ಲೂ ಸಿಗುವ ನುಗ್ಗೆಕಾಯಿ ಬಲಿತಿರದಿದ್ದರೆ ಸಾಕು, ರುಚಿಯಾದ ಸಾಂಬಾರ್ ತಯಾರಿಸಲು.

ಬೇಕಾಗುವ ಸಾಮಗ್ರಿಗಳು

ನುಗ್ಗೆಕಾಯಿ - 2 ಅಥವಾ 3 ಇಂಚಿನಷ್ಟು ಕತ್ತರಿಸಿಕೊಳ್ಳಿ
ತೊಗರಿಬೇಳೆ - 1 ಬಟ್ಟಲು
ಈರುಳ್ಳಿ ಹೆಚ್ಚಿದ್ದು ಸ್ವಲ್ಪ
ಟೊಮೆಟೊ ಹೆಚ್ಚಿದ್ದು ಸ್ವಲ್ಪ
ಹುಣಸೆರಸ ಒಂದು ಚಮಚ
ಸಾಂಬಾರ್ / ಸಾರಿನ ಪುಡಿ ರುಚಿಗೆ
ಉಪ್ಪು ರುಚಿಗೆ
ಎಣ್ಣೆ, ಸಾಸಿವೆ
ಅರಿಶಿಣ
ಇಂಗು ಕರಿಬೇವಿನ ಸೊಪ್ಪು

ತಯಾರಿಸುವ ವಿಧಾನ

ಮೊದಲು ತೊಗರಿಬೇಳೆಯನ್ನು ನೀರು, ಅರಿಶಿಣ ಮತ್ತು ಒಂದು ಚಮಚ ಎಣ್ಣೆ ಹಾಕಿ, ಬೇಯಿಸಿಕೊಂಡು ಅದಕ್ಕೆ ನುಗ್ಗೆಕಾಯಿ, ಟೊಮೆಟೊ, ಹುಣಸೆರಸ, ಸಾಂಬಾರ್ ಪುಡಿ ಮತ್ತು ಉಪ್ಪು ಹಾಕಿ ನುಗ್ಗೆಕಾಯಿ ಬೇಯುವವರೆಗೂ ಬೇಯಿಸಿ, ಸಾರಿನ ಹದಕ್ಕೆ ತಕ್ಕಂತೆ ನೀರು ಬೆರೆಸಿಕೊಳ್ಳಿ. ಕಾಯಿ ಸ್ವಲ್ಪ ಗಟ್ಟಿಯಾಗಿರುವಾಗಲೆ ಇಳಿಸಿ. ಇದಕ್ಕೆ ಒಗ್ಗರಣೆ ಹಾಕಿ ಬೆರೆಸಿ.

ಒಗ್ಗರಣೆಗೆ : ಪುಟ್ಟ ಪಾತ್ರೆಯಲ್ಲಿ ಒಂದೆರಡು ಚಮಚ ಎಣ್ಣೆಯನ್ನು ಬಿಸಿಮಾಡಿ ಸಾಸಿವೆ ಹಾಕಿ ಚಟಪಟ ಸಿಡಿದ ನಂತರ ಕರಿಬೇವು, ಇಂಗು ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಬೆರೆಸಿ. ಒಂದೆರಡು ನಿಮಿಷ ಬಾಡಿಸಿದ ನಂತರ ಅದನ್ನು ಸಾರಿಗೆ ಬೆರೆಸಿ. ನುಗ್ಗೆಕಾಯಿ ಸಾರು ಸಿದ್ಧ. ಇದನ್ನು ಅನ್ನದ ಜೊತೆ ಕೊಡಿ.

* ನುಗ್ಗೆಕಾಯಿಯನ್ನು ಮೊದಲೆ ಬೇರೆ ಪಾತ್ರೆಯಲ್ಲಿ ಬೇಯಿಸಿ ಕೂಡ ಹಾಕಬಹುದು, ಇದು ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮೈಕ್ರೋವೆವ್ ಇರುವವರು ಅದರಲ್ಲಿ ಬೇಯಿಸಿಕೊಳ್ಳಬಹುದು. ಇದು ಬಹಳ ಸುಲಭ ಮತ್ತು ಬೇಗ ಆಗುತ್ತದೆ. ತುಂಬಾ ಬೇಯಿಸಿದರೆ ಮಾಡಿದರೆ ನುಗ್ಗೆಕಾಯಿಗಳು ಒಡೆದು ಹೋಗುತ್ತವೆ. ನೋಡಿಕೊಂಡು ಬೇಯಿಸಿಕೊಳ್ಳಿ.

* ಕಾಯಿ ಬೇಯಿಸಿ ಹಾಕಿದರೆ ಬೇಳೆ ಜೊತೆ ಹಾಕಿದಾಗ ಒಂದೆರಡು ಕುದಿ ಕುದ್ದ ಮೇಲೆ ಸ್ಟೌವ್ ಆಫ್ ಮಾಡಿ. [ಪ್ರೊಟೀನ್]

English summary

Tasty drumstick sambar | Healthy Nuggekayi sambar | Karnataka cuisine | ರುಚಿಕರ ನುಗ್ಗೆಕಾಯಿ ಸಾಂಬಾರ್ | ಪ್ರೊಟೀನ್ ಯುಕ್ತ ನುಗ್ಗೆಕಾಯಿ | ಕರ್ನಾಟಕ ಅಡುಗೆಮನೆ

Drumstick sambar or nuggekayi sambar is not just healthy but also very tasty. Karnataka cuisine by Kumuda Shankar, Saudi Arabia.
X
Desktop Bottom Promotion