Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಾವ ಕನಸುಗಳು ಯಾವ ಅರ್ಥ ನೀಡಲಿದೆ? ಸ್ವಪ್ನಶಾಸ್ತ್ರ ಹೇಳೋದೇನು?
ಮಲಗಿದಾಗ ಕನಸುಗಳು ಬೀಳುವುದು ಸಾಮಾನ್ಯ. ಕನಸುಗಳು ಬೀಳದೆ ಇದ್ದರೆ ಮನೋವೈಜ್ಞಾನಿಕವಾಗಿ ನಿಮಗೆ ಹಲವು ರೀತಿಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರಲಿದೆ. ನಿಮ್ಮ ಸುಪ್ತ ಚೇತನದಲ್ಲಿನ ಹಲವು ಆಸೆಗಳನ್ನು, ಬಯಕೆಗಳನ್ನು ಈಡೇರಿಸಿಕೊಳ್ಳಲು ಆಗದೇ ಇದ್ದಾಗ ಕನಸಿನ ರೂಪದಲ್ಲಿ ಅದನ್ನು ಈಡೇರಿಸಿಕೊಳ್ಳುವುದು ಮನಸ್ಸಿಗೆ ನೀವು ನೀಡುವ ಪರಿಣಾಮಕಾರಿ ಚಿಕಿತ್ಸೆಯಾಗಿರಲಿದೆ. ಹೀಗಾಗಿ ಕನಸುಗಳು ಒಂದು ರೀತಿ ಲಾಭದಾಯಕ ಪ್ರಕ್ರಿಯೆ.
ಆದ್ರೆ ಕೆಲವೊಮೆಮ ಕನಸುಗಳೇ ಭಯ ಉಟ್ಟಿಸುವಂತಿರುತ್ತವೆ. ಹಾಗೆ ಕೆಲವೊಂದು ಕನಸುಗಳು ನಿದ್ದೆಯಿಂದ ಎಚ್ಚರಗೊಂಡ ಬಳಿಕವೂ ಕಾಡುತ್ತಿರುತ್ತವೆ. ಇನ್ನು ಸ್ವಪ್ನ ಶಾಸ್ತ್ರದಲ್ಲಿ ಒಂದೊಂದು ಕನಸುಗಳಿಗೂ ಒಂದೊಂದು ರೀತಿಯ ಅರ್ಥವನ್ನು ಹೇಳಲಾಗಿದೆ. ಕನಸುಗಳು ಸುಮ್ಮನೆ ಬರುವುದಲ್ಲ. ಅದಕ್ಕೆ ನಿಖರ ಕಾರಣಗಳು, ನೈಜ ಘಟನೆಗಳು, ಭವಿಷ್ಯದ ದಿನಗಳು ಅಡಗಿರುತ್ತದೆ.

ಒಬ್ಬ ವ್ಯಕ್ತಿಯ ಜೀವನವನ್ನು ಅರ್ಥ ಮಾಡಿಕೊಳ್ಳಲು ಆತನಿಗೆ ಬೀಳುವ ಕನಸುಗಳನ್ನು ವಿಶ್ಲೇಷಿಸಿದರೆ ಸಾಕು ಎಂದು ಸ್ವಪ್ನಶಾಸ್ತ್ರವು ಹೇಳುತ್ತದೆ. ಹಲವು ಕನಸುಗಳು ನಿಮಗೆ ಅರ್ಥವಾಗದೆ ಉಳಿಯಬಹುದು, ಅಥವಾ ನಿಮಗೆ ಸಂಬಂಧಿಸಿದ್ದಲ್ಲ ಎನಿಸಬಹುದು. ಆದ್ರೆ ಎಲ್ಲಾ ಕನಸುಗಳಿಗೂ ನಿಮ್ಮ ಜೀವನಕ್ಕೂ ಒಂದಕ್ಕೊಂದು ಸಂಬಂಧ ಇದ್ದೇ ಇದೆ. ಹಾಗಾದ್ರೆ ಯಾವೆಲ್ಲಾ ಕನಸುಗಳಿಗೆ ಯಾವ ಅರ್ಥವಿದೆ. ಯಾವ ರೀತಿಯ ಕನಸುಗಳು ಬೀಳೂವುದು ಉತ್ತಮ ಹಾಗೂ ಶುಭ ಸೂಚಕ, ಸ್ವಪ್ನಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಕನಸಿನಲ್ಲಿ ಕುದುರೆ ಬರುವುದು
ಹಲವು ಬಾರಿ ಕನಸಿನಲ್ಲಿ ಒಂಟಿ ಕುದುರೆಯೊಂದು ನಿಮಗೆ ಕಾಣಿಸಿಕೊಂಡಿರಬಹುದು. ಕುದುರೆ ಕನಸಿನಲ್ಲಿ ಕಾಣಿಸಿವುದು ವಿಶೇಷ ವಿದ್ಯಮಾನ ಎಂದು ಸ್ವಪ್ನಶಾಸ್ತ್ರದಲ್ಲಿ ಹೇಳಲಾಗಿದೆ. ಕನಸಿನಲ್ಲಿ ಬಿಳಿ ಕುದುರೆಯನ್ನು ನೋಡುವುದು ಯಶಸ್ಸು ಮತ್ತು ಗೌರವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಓಡುವ ಕುದುರೆಯು ವೃತ್ತಿಜೀವನದ ಬೆಳವಣಿಗೆಯನ್ನು ಸೂಚಿಸುತ್ತದೆ. ನೀವು ಕುದುರೆ ಸವಾರಿ ಮಾಡುತ್ತಿರುವ ಕನಸು ಕಂಡರೆ, ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಬಹುದು ಎಂದು ಸ್ವಪ್ನಶಾಸ್ತ್ರವು ವಿವರಿಸುತ್ತದೆ.
ಕನಸಿನಲ್ಲಿ ಮಳೆ ನೋಡುವುದು
ಕನಸಿನಲ್ಲಿ ಹಲವರು ಮಳೆಯನ್ನು ಅನುಭವಿಸುತ್ತಾರೆ. ಮಳೆಗಾಲ ಅಲ್ಲದ ಸಮಯದಲ್ಲಿ ಕನಸಿನಲ್ಲಿ ಮಳೆ ನೋಡುವುದು ಸಕಾರಾತ್ಮಕ ಹಾಗೂ ಧನಾತ್ಮಕ ದಿನದ ಮುನ್ಸೂಚನೆಯಂತೆ. ಮುಂಬರುವ ದಿನಗಳಲ್ಲಿ ನಿಮ್ಮ ಬಾಕಿ ಇರುವ ಕೆಲಸಗಳನ್ನು ಪೂರ್ಣ ಮಾಡುವಿರಿ. ಕೆಲಸಗಳು, ವ್ಯವಹಾರಗಳಲ್ಲಿನ ಅಡ್ಡಿಗಳೂ ಮಳೆಯಂತೆ ಸುರಿದು ಅಡ್ಡಿಗಳ ನಿವಾರಣೆಯಾಗಲಿದೆ. ಮಳೆಯೊಂದಿಗೆ ಮಳೆಬಿಲ್ಲು ಕಾಣಿಸಿಕೊಂಡರೆ, ಅದನ್ನು ಇನ್ನೂ ಹೆಚ್ಚು ಶುಭ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಕಷ್ಟದ ಸಮಯಗಳು ದೂರಾಗುವ ಸಮಯವೂ ಹೌದು.
ಕನಸಿನಲ್ಲಿ ದೇವಾಲಯ ದರ್ಶನ
ಕನಸಿನಲ್ಲಿ ದೇವಾಲಯ ನೋಡುವುದನ್ನು ದೈವಿಕ ಅನುಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಬಹುದು. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಹಾಗೆ ನೀವು ಆಧ್ಯಾತ್ಮಿಕವಾಗಿ ಪೂರೈಸಬೇಕಿದ್ದ ವಿಚಾರವೊಂದನ್ನು ಬಹುಬೇಗ ನಿವಾರಿಸಿಕೊಳ್ಳುವಿರಿ. ಹಾಗೆ ನಿಮ್ಮ ಹಣಕಾಸು ಸಂಬಂಧಿತ ವಿಚಾರದಲ್ಲಿ ಶುಭ ಸಮಯಗಳು ಹತ್ತಿರವಾಗುತ್ತಿದೆ. ಹಾಗೆ ದೇವಾಲಯ ಭೇಟಿಯ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಬೇಕಾದ ಸಮಯವಿದು ಎಂಬ ಸೂಚಕ ಇದಾಗಿದೆ. ಹಾಗೆ ಕುಟುಂಬಸ್ಥರೊಂದಿಗೆ ನೀವು ಸದ್ಯದಲ್ಲೇ ದೇವಾಲಯ ಭೇಟಿಯ ಸಂಭವವಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಈ ಸಮಸ್ಯೆಗೆ ಪರಿಹಾರ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಲು ಸಲಹೆ ನೀಡಲಾಗುತ್ತದೆ)



Click it and Unblock the Notifications