For Quick Alerts
ALLOW NOTIFICATIONS  
For Daily Alerts

ಈರುಳ್ಳಿ ಹಾಗು ಹೆಸರುಬೇಳೆ ಪಲ್ಯ

|
Sunanda Arunkumar Gosi
ಹೆಸರುಬೇಳೆ, ತೊಗರಿಬೇಳೆ, ಕಡಲೆಬೇಳೆ, ಹೆಸರುಕಾಳು, ಮಡಿಕೆಕಾಳು ಹಾಗೂ ಕಡಲೆಕಾಳುಗಳಲ್ಲಿ ನಾನಾ ತರಹದ ಪಲ್ಯಗಳನ್ನು ಮಾಡಬಹುದು. ಹಾಗೂ ನಿಯಮಿತವಾಗಿ ಕಚೇರಿ, ಕಾರ್ಖಾನೆ ಕೆಲಸಕ್ಕೆ ಹೋಗುವವರಿಗಂತೂ ತುಂಬಾ ಸುಲಭವೆ. ಹಾಗು ಈ ಬೇಳೆ, ಕಾಳುಗಳಲ್ಲಿ ಅಪಾರ ಪ್ರೊಟೀನ್ ಅಂಶ ಇರುವುದರಿಂದ ಶರೀರಕ್ಕೆ ಒಳ್ಳೆಯದು. ಬೇಳೆಕಾಳು ಸೊಪ್ಪು ಹಸಿರು ತರಕಾರಿಗಳಿಂದ ಹೊರಕುವ ಪೋಷಕಾಂಶಗಳನ್ನು ಮುಖ್ಯವಾಗಿ ಸಸ್ಯಾಹಾರಿಗಳು ತಪ್ಪದೆ ಸೇವಿಸಬೇಕು. ಬೆಳೆಯುವ ಮಕ್ಕಳಿಗೆ ಪೂಸಿ ಹೊಡೆದು ತಿನ್ನಿಸಿಬೇಕು!

ಉತ್ತರ ಕರ್ನಾಟಕದ ಮಂದಿ ಮಾಡುವ ನಾನಾಬಗೆಯ ಪಲ್ಯೇವುಗಳನ್ನು ನಮ್ಮ ಅಡುಗೆ ಇಂಡೆಕ್ಸ್ ಪುಟದಲ್ಲಿ ದಾಖಲಿಸಲಾಗುತ್ತದೆ. ಮುಖ್ಯವಾಗಿ ವಿವಿಧ ಬೇಳೆಗಳು ಮತ್ತು ನಾನಾ ಜಾತಿಯ ಸೊಪ್ಪುಗಳೇ ಈ ಆಹಾರಕ್ಕೆ ಮೂಲಾಧಾರ. ಪ್ರತಿದಿನ ಒಂದು ಪಲ್ಯದ ರೆಸಿಪಿಯನ್ನು ಪ್ರಕಟಿಸುವುದರೊಂದಿಗೆ ಉತ್ತರ ಕರ್ನಾಟಕ ಆಹಾರ ಸಪ್ತಾಹವನ್ನು ಆಚರಿಸಲಾಗುವುದು - ಸಂಪಾದಕ.

1. ಈರುಳ್ಳಿ ಹಾಗು ಹೆಸರುಬೇಳೆ ಪಲ್ಯ

* ಸುನಂದ ಅರುಣಕುಮಾರ್ ಗೋಸಿ, ಬೆಂಗಳೂರು

ಬೇಕಾಗುವ ಸಾಮಗ್ರಿಗಳು :

* ಈರುಳ್ಳಿ - 4
* ಹೆಸರುಬೇಳೆ - 1/2 ಕಪ್
* ಗರಂ ಮಸಾಲ - 1/4 ಚಮಚ
* ಅಚ್ಚ ಖಾರದಪುಡಿ - 1/2 ಚಮಚ
* ಹುಚ್ಚೆಳ್ಳು ಪುಡಿ - 1/2 ಚಮಚ
* ಅರಿಶಿಣ ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿಸೊಪ್ಪು ಸ್ವಲ್ಪ
* ಒಗ್ಗರೆಣೆಗೆ ಸಾಸಿವೆ, ಜೀರಿಗೆ, ಕರಿಬೇವು.

ಮಾಡುವ ವಿಧಾನ :

ಮೊದಲಿಗೆ ಹೆಸರುಬೇಳೆಯನ್ನು ಹದವಾಗಿ ಹುರಿದುಕೊಳ್ಳಬೇಕು. ಈರುಳ್ಳಿಯನ್ನು ಉದ್ದವಾಗಿ ಹೆಚ್ಚಿಟ್ಟುಕೊಳ್ಳಬೇಕು. ಒಗ್ಗರಣೆ ಮಾಡಲು ಬಾಣಲೆಗೆ 2 ಚಮಚ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಕರಿಬೇವು ಹಾಗು ಉದ್ದವಾಗಿ ಹೆಚ್ಚಿದ ಈರುಳ್ಳಿ ಹಾಕಿ. ಆಮೇಲೆ ಹುರಿದ ಹೆಸರುಬೇಳೆ, ಅರಿಶಿಣ, ಗರಂ ಮಸಾಲ, ಹುಚ್ಚೆಳ್ಳು ಪುಡಿ, ಆಚ್ಚ ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಹೆಸರುಬೇಳೆ ಬೇಯುವಷ್ಟು ನೀರು ಹಾಕಿ. ಬೆಂದ ನಂತರ ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ. ಇದು ಅನ್ನ, ಚಪಾತಿ, ರೊಟ್ಟಿಗೆ ತುಂಬಾ ಚೆನ್ನಾಗಿರುತ್ತದೆ.

ನಾಳೆ, ಹೆಸರುಬೇಳೆ ಹಾಗು ಮೆಂತೆ ಸೊಪ್ಪಿನ ಪಲ್ಯ ಮಾಡುವುದು ಹೇಗೆಂದು ತಿಳಿಯೋಣ.

Story first published: Thursday, October 15, 2009, 12:49 [IST]
X
Desktop Bottom Promotion