Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ!
ಬೆಳಗ್ಗೆ ತಿಂಡಿಯ ಸಮಯದಲ್ಲಿ ದೋಸೆ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ದೋಸೆಯಲ್ಲೂ ಹತ್ತು ಹಲವು ವಿಧಗಳಿವೆ. ಅಕ್ಕಿಯಿಂದ ಮಾಡುವ ದೋಸೆಯಂತು ಎಲ್ಲರ ಮನೆಯ ಸಾಮಾನ್ಯ ತಿಂಡಿಯಾಗಿರಲಿದೆ. ಹಾಗೆ ಇದ್ರಲ್ಲಿ ಮಸಾಲೆ ದೋಸೆ, ಈರುಳ್ಳಿ ದೋಸೆ, ರವೆ, ದೋಸೆ, ಸೆಟ್ ದೋಸೆ, ನೀರ್ ದೋಸೆಯಂತಹ ವಿವಿಧ ಬಗೆಯ ದೋಸೆ ಮಾಡಿ ಸವಿಯೋದು ಇದ್ದೇ ಇದೆ.
ಆದ್ರೆ ಅಕ್ಕಿ ಹಿಟ್ಟಿನ ದೋಸೆಯ ಜೊತೆಗೆ ಗೋಧಿ ದೋಸೆ, ರಾಗಿ ದೋಸೆಗಳಂತಹ ವಿಶೇಷ ರುಚಿಯ ಹಾಗೆ ಆರೋಗ್ಯಕ್ಕೂ ಉತ್ತಮವಾಗಿರುವ ದೋಸೆಗಳ ಮಾಡಿರಬಹುದು. ರಾಗಿ ದೋಸೆಯು ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮ. ಫೈಬರ್ ತುಂಬಿತುವ ಈ ರಾಗಿ ದೋಸೆಯು ತೂಕ ಇಳಿಸಲು ಸಹಕಾರಿಯಾಗಲಿದೆ. ಆದ್ರೆ ರಾಗಿ ದೋಸೆ ಮಾಡಿದ್ರೆ ಬಹಳ ದಪ್ಪವಾಗುತ್ತೆ ಅನ್ನೋದು ಹಲವರ ದೂರು.
ಆದ್ರೆ ನಾವಿಂದು ಪೇಪರ್‌ನಂತೆ ತೆಳುವಾದ ಹಾಗೆ ರುಚಿ ರುಚಿಯಾದ ರಾಗಿ ದೋಸೆಯನ್ನು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ರಾಗಿ ದೋಸೆಯನ್ನು ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಪೇಪರ್‌ನಂತಹ ರಾಗಿ ದೋಸೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ರಾಗಿ
- ಮೈದಾ ಹಿಟ್ಟು
- ರವೆ
- ನೀರು
- ಜೀರಿಗೆ
- ಉಪ್ಪು
- ಎಣ್ಣೆ
ಪೇಪರ್‌ನಂತಹ ರಾಗಿ ದೋಸೆ ಮಾಡುವ ವಿಧಾನವೇನು?
ಒಂದು ಮಿಕ್ಸಿ ಜಾರ್‌ಗೆ 1 ಕಪ್ ರಾಗಿ ಹಿಟ್ಟು, ಅರ್ಧ ಕಪ್ ರವೆ, 2 ಸ್ಪೂನ್ ಮೈದಾ ಹಿಟ್ಟು, ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ನುಣ್ಣಗೆ ಈ ಹಿಟ್ಟು ಬರಬೇಕು. ನಂತರ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಇದಕ್ಕೆ ಮತ್ತೆ ನೀರು ಹಾಕಿ ಹಿಟ್ಟನ್ನು ತೆಳು ಮಾಡಿಕೊಳ್ಳಿ. ನೀರ್ ದೋಸೆಯ ಹಿಟ್ಟಿನ ಹದಕ್ಕೆ ಇದು ಬರಬೇಕು. ಬಹಳ ತೆಳುವಾಗಿರಬೇಕು.
ನಂತರ ಈ ಹಿಟ್ಟಿಗೆ ಜೀರಿಗೆ ಹಾಗೂ ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ 15 ನಿಮಿಷ ಬಿಡಬೇಕು. 15 ನಿಮಿಷದ ಬಳಿಕ ಮತ್ತೆ ಮಿಕ್ಸ್ ಮಾಡಬೇಕು. ಈಗ ಒಲೆ ಮೇಲೆ ಕಾವಲಿ ಇಟ್ಟು ಎಣ್ಣೆ ಹಚ್ಚಿ ಬಿಸಿಯಾಗಲು ಬಿಡಬೇಕು. ಕಾವಲಿಗೆ ಈರುಳ್ಳಿ ಬಳಸಿ ಉಜ್ಜಿಕೊಂಡರೆ ಉತ್ತಮವಾಗುತ್ತದೆ. ನಂತರ ಹಿಟ್ಟನ್ನು ನೀರ್ ದೋಸೆಗೆ ಹಾಕುವಂತೆ ತೆಳುವಾಗಿ ಹಾಕಿಕೊಳ್ಳಬೇಕು.
ಉರಿ ಹೆಚ್ಚಾಗಿ ಇಟ್ಟುಕೊಂಡು ಕಾವಲಿ ಮೇಲೆ ಹಿಟ್ಟನ್ನು ಹಾಕಿ. ಬೇಕಿದ್ದ ನೀವು ಕೊತ್ತಂಬರಿ ಸೊಪ್ಪು, ಈರುಳ್ಳಿ ಸಹ ಕತ್ತರಿಸಿಕೊಂಡು ಹಿಟ್ಟಿನೊಂದಿಗೆ ಬೆರೆಸಿ ಹಾಕಿಕೊಳ್ಳಬಹುದು. ಚೆನ್ನಾಗಿ ದೋಸೆ ಬೇಯಿಸಿಕೊಂಡು ತೆಗೆದು ಇಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ರಾಗಿ ದೋಸೆ ಸಿದ್ದವಾಗಿರುತ್ತೆ. ಇದು ಬಹಳ ತೆಳುವಾಗಿರುವ ಕಾರಣ ಎಲ್ಲರಿಗೂ ಇಷ್ಟವಾಗುತ್ತೆ.
ತೂಕ ಇಳಿಸಲು ಸಹಕಾರಿಯಾಗುವ ಈ ದೋಸೆಯನ್ನು ಎಲ್ಲರು ತಪ್ಪದೆ ಸವಿದು ನೋಡಿ. ಇದರೊಂದಿಗೆ ಚಟ್ನಿ, ಸಾಂಬಾರ್ ಇದ್ದರೆ ರುಚಿ ದುಪ್ಪಟ್ಟಾಗಲಿದೆ. ನೀವು ಸಹ ಒಮ್ಮೆ ಮಾಡಿ ಸವಿದು ನೋಡಿ.



Click it and Unblock the Notifications

