Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್‌ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು!
ಬೇಸಿಗೆಯ ತಾಪದಲ್ಲಿ ನಾವು ಹೆಚ್ಚಾಗಿ ದ್ರವ ರೂಪದ ಆಹಾರ ಸೇವಿಸಲು ಮುಂದಾಗುವುದು ಹೆಚ್ಚು. ಅದ್ರಲ್ಲೂ ಜ್ಯೂಸ್, ಎಳನೀರು, ತಂಪು ಪಾನಿಯಗಳು ಸೇರಿದಂತೆ ಹಣ್ಣುಗಳ ಸೇವಿಸುವುದು ಕಾಮನ್. ಇವು ಬೇಸಿಗೆಯ ಉರಿ ಬಿಸಿಲಿನಲ್ಲಿ ದೇಹಕ್ಕೆ ತಂಪು ತರಲಿದೆ. ಹಾಗೆ ನಾವು ಚಟುವಟಿಕೆಯಿಂದ ಕೆಲಸಗಳಲ್ಲಿ ಭಾಗಿಯಾಗುವಂತೆ ಮಾಡಲಿದೆ. ಹಾಗೆ ಬಿಸಿಲಿನಲ್ಲಿ ನಾವು ಹಲವು ವಸ್ತುಗಳನ್ನು ತಣ್ಣಗೆ ಮಾಡಿ ಸವಿಯೋದು ಸಹ ನೋಡಬಹುದು. ಮನೆಯಲ್ಲಿ ಫ್ರಿಡ್ಜ್ ಇದ್ದರೆ ಅದರಲ್ಲಿ ಶೇಖರಿಸಿ ಇಟ್ಟು ಸವಿಯುತ್ತೇವೆ.
ತಂಪು ಪಾನಿಯ ಅಥವಾ ಹಣ್ಣುಗಳನ್ನು ಸೇರಿ ಹಲವು ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟು ಸವಿಯೋದು ನೋಡಬಹುದು. ಆದ್ರೆ ಕೆಲವು ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟು ಸವಿಯೋದು ಬಹಳ ಅಪಾಯಕಾರಿ. ಅದ್ರಲ್ಲೂ ಬೇಸಿಗೆಯಲ್ಲಿ ಕೆಲವು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟು ಸವಿಯೋದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅದ್ರಲ್ಲೂ ನಿಮಗೆ ಶೀತ, ಜ್ವರದಂತಹ ಸಾಮಾನ್ಯ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ.

ಹಾಗಾದ್ರೆ ಈ ಬೇಸಿಗೆಯಲ್ಲಿ ಯಾವೆಲ್ಲಾ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟು ಸವಿಯಬಾರದು? ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಬಾಳೆಹಣ್ಣುಗಳು
ಬಾಳೆಹಣ್ಣುಗಳನ್ನು ಎಂದಿಗೂ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಾರದು. ರೆಫ್ರಿಜರೇಟರ್‌ನಲ್ಲಿ ಇರಿಸಿದಾಗ ಅವುಗಳ ಸಿಪ್ಪೆಗಳು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ, ಇದು ಅನೇಕರಲ್ಲಿ ಅನಾರೋಗ್ಯ ತರಬಹುದು. ಪ್ರಮುಖವಾಗಿ ಮಕ್ಕಳು ಈ ಬಾಳೆಹಣ್ಣು ಸೇವಿಸುವುದು ಶೀತ, ಜ್ವರದಂತಹ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇರಲಿದೆ. ಹಾಗೆ ಇದು ಮಧ್ಯಾಹ್ನದ ಸಮಯದಲ್ಲಿ ನೇರವಾಗಿ ಫ್ರಿಡ್ಜ್‌ನಿಂದ ತೆಗೆದು ಸೇವಿಸುವುದು ದೇಹದಲ್ಲಿ ಹಲವು ರೀತಿಯ ಬದಲಾವಣೆಗಳ ತರಬಹುದು.
ಕಲ್ಲಂಗಡಿ
ಬೇಸಿಗೆಯಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಲ್ಲಂಗಡಿ ಹಣ್ಣುಗಳನ್ನು ಸೇವಿಸುವುದು ನೋಡಬಹುದು. ದೇಹಕ್ಕೆ ಬಹಳ ತಂಪು ತರುವ ಈ ಹಣ್ಣನ್ನು ಸೇವಿಸುವುದು ಉತ್ತಮ ಹವ್ಯಾಸ. ಆದ್ರೆ ಫ್ರಿಡ್ಜ್‌ನಲ್ಲಿ ಇಟ್ಟ ಕಲ್ಲಂಗಡಿ ಸೇವನೆ ನಿಮಗೆ ಹಾನಿ ಮಾಡಬಹುದು. ಹೌದು ಕಲ್ಲಂಗಡಿಯು ತಣ್ಣಗಾಗಲು ಅಥವಾ ಹಾಳಾಗದಂತೆ ತಡೆಯಲು ಫ್ರಿಡ್ಜ್‌ನಲ್ಲಿ ಇಟ್ಟರೆ ಅದು ತನ್ನ ಗುಣವನ್ನು ಕಳೆದುಕೊಳ್ಳಲಿದೆ. ಬಹುತೇಕರಿಗೆ ಈ ಕಲ್ಲಂಗಡಿ ಶೀತ, ಜ್ವರದಂತಹ ಸಮಸ್ಯೆ ತರಬಹುದು. ಅದ್ರಲ್ಲೂ ಕಲ್ಲಂಗಡಿ ತನ್ನ ಉತ್ಕರ್ಷಣ ನಿರೋಧಕಗಳನ್ನು ಕಳೆದುಕೊಳ್ಳಲಿದೆ.
ಪಪ್ಪಾಯ
ಪಪ್ಪಾಯಿಯನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸುವುದರಿಂದ ಅದರ ರುಚಿ ಮತ್ತು ವಿನ್ಯಾಸದಲ್ಲಿ ಬದಲಾವಣೆಗಳು ಉಂಟಾಗಬಹುದು. ಫ್ರಿಡ್ಜ್‌ನ ಕಡಿಮೆ ತಾಪಮಾನವು ಪಪ್ಪಾಯಿ ಹಣ್ಣಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹಾಗೆ ಅದರಲ್ಲಿನ ಬಿಳಿ ಬಣ್ಣದ ಕಹಿ ಅಂಶ ಹಾಗೆಯೇ ಉಳಿಯುವಂತೆಯೂ ಮಾಡಲಿದೆ. ಅಲ್ಲದೆ ಬೇಸಿಗೆಯ ಸಮಯದಲ್ಲಿ ಇದು ವಿಪರಿತ ತಂಪಾಗುತ್ತದೆ. ಹೀಗಾಗಿ ಫ್ರಿಡ್ಜ್‌ನಲ್ಲಿಟ್ಟು ನೇರವಾಗಿ ಸೇವಿಸಬೇಡಿ. ಫ್ರಿಡ್ಜ್‌ನಿಂದ ತೆಗೆದು ಹೊರಗೆ ಇಟ್ಟು ಕೆಲ ಗಂಟೆಯ ಬಳಿಕ ಸವಿಯಬಹುದು.
ಕಿತ್ತಳೆ
ಬೇಸಿಗೆಯ ಸಮಯದಲ್ಲಿ ಕಿತ್ತಳೆ ಹಣ್ಣು ದೇಹದ ತಾಪ ಕಡಿಮೆ ಮಾಡುವಲ್ಲಿ ಬಹಳ ಮುಖ್ಯ ಅಂಶಗಳನ್ನು ತನ್ನಲ್ಲಿಟ್ಟುಕೊಂಡಿದೆ. ಕಿತ್ತಳೆಯನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಅದು ತನ್ನ ದ್ರಾವಣವನ್ನು ಕಳೆದುಕೊಳ್ಳುತ್ತದೆ. ಇದು ಹಣ್ಣುಗಳು ಒಣಗಲು ಕಾರಣವಾಗುತ್ತದೆ. ಸುವಾಸನೆ ಮತ್ತು ತಾಜಾತನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆ ವಿಪರಿತ ತಂಪಾಗುವ ಕಾರಣ ಮಕ್ಕಳಿಗೆ ಈ ಫ್ರಿಡ್ಜ್‌ನಲ್ಲಿಟ್ಟ ಕಿತ್ತಳೆ ಹಣ್ಣು ನೀಡುವುದು ಶೀತ ಕೆಮ್ಮು, ಜ್ವರದಂತಹ ಸಮಸ್ಯೆ ತರಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
