Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
ಮನೆಯಲ್ಲಿ ಟ್ವೀಟ್ ಮಾಡಿ ಸವಿಯುವಂತಹ ಆಸೆಯಿದ್ದರೆ ನೀವು ಹಲವು ರೀತಿಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಹಾಗೆ ಬೇಕರಿಯಿಂದ, ಅಂಗಡಿಯಿಂದ ಸ್ವೀಟ್ ತಂದು ಸವಿದಿರುತ್ತೀರಿ. ಸಾಮಾನ್ಯವಾಗಿ ಮನೆಯಲ್ಲಿ ಪೂಜೆ ಇದ್ದಾಗ, ಶುಭ ಕಾರ್ಯ ಇದ್ದಾಗ, ಅತಿಥಿಗಳು ಬರುವಂತಹ ಸಮಯದಲ್ಲಿ ಸಿಹಿ ತಿಂಡಿ ಇರಲೇಬೇಕು. ಹಾಗೆ ಮನೆಯಲ್ಲಿ ಮಕ್ಕಳಿಗೆ ಇಷ್ಟವಾಗುವಂತಹ ಸಿಹಿ ತಿಂಡಿ ಮಾಡಿ ನೀಡುವುದು ಸಹ ನೋಡಬಹುದು.
ಹಾಗೆ ಸಿಹಿ ತಿಂಡಿಯನ್ನು ಮಾಡಿ ಕೆಲವು ದಿನಗಳ ಕಾಲ ಇಟ್ಟು ಸವಿಯುವ ಬಯಕೆಯೂ ಇರಲಿದೆ. ಅಲ್ಲದೆ ಹಬ್ಬ ಆಗಮಿಸುವಾಗ ಹಲವರು ಮೊದಲೇ ಸಿಹಿ ತಿಂಡಿಯನ್ನು ಮಾಡಿಟ್ಟು ಹಬ್ಬದಲ್ಲಿ ಸವಿಯುತ್ತಾರೆ. ಹಾಗೆ ನಾವಿಂದು ಸುಲಭವಾಗಿ ಮಾಡಬಹುದಾದ ಸಿಹಿ ತಿಂಡಿಯಾಗಿರುವ ತೆಂಗಿನಕಾಯಿಯ ಬರ್ಫಿ ಮಾಡುವ ಕುರಿತಾಗಿ ಹೇಳಲಿದ್ದೇವೆ.

ನೀವು ಬೇಕರಿಗಳಲ್ಲಿ ವಿಭಿನ್ನ ಬಗೆಯ ಬರ್ಫೀಗಳ ನೋಡಿರುತ್ತೀರಿ. ಅದ್ರಲ್ಲೂ ತೆಂಗಿನಕಾಯಿ ತುರಿಯಿಂದಲೂ ಹಲವು ರೀತಿಯ ಬರ್ಫಿಗಳ ಮಾಡಬಹುದು. ನಾವಿಂದು ಕಡಿಮೆ ವಸ್ತುಗಳ ಬಳಸಿಕೊಂಡು, ಕಡಿಮೆ ಸಮಯದಲ್ಲಿ ಮಾಡುವಂತಹ ರುಚಿ ರುಚಿಯಾದ ಬರ್ಫಿ ಕುರಿತಾಗಿ ತಿಳಿದುಕೊಳ್ಳೋಣ. ಈ ಬರ್ಫಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.
ತೆಂಗಿನಕಾಯಿ ಅಥವಾ ಕೊಬ್ಬರಿ ತುರಿಯ ಬರ್ಫಿ ಮಾಡಲು ಬೇಕಾಗುವ ವಸ್ತುಗಳು
- ತೆಂಗಿನಕಾಯಿ ತುರಿ
- ಸಕ್ಕರೆ
- ಏಲಕ್ಕಿ ಪುಡಿ
- ಹಾಲು
- ತುಪ್ಪ
ತೆಂಗಿನಕಾಯಿ ತುರಿಯ ಬರ್ಫಿ ಮಾಡುವ ಸುಲಭದ ವಿಧಾನವೇನು?
ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಬಿಳಿ ಕೊಬ್ಬರಿ ಹಾಕಿಕೊಳ್ಳಿ. ಬಿಳಿ ಅಂಶವನ್ನು ಬಳಸಿದರೆ ಬರ್ಫಿ ಬಿಳಿ ಬಣ್ಣದಲ್ಲಿ ಬರಲಿದೆ. ಈ ಕೊಬ್ಬರಿ ತುರಿಯನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಅಂಗಡಿಯಲ್ಲಿ ಸಿಗುವ ಪುಡಿಯನ್ನೂ ಸಹ ಬಳಸಬಹುದು. ಅದೇ ಕಪ್ನಲ್ಲಿ ರುಚಿಗೆ ತಕ್ಕಷ್ಟು ಸಕ್ಕರೆ ಹಾಗೆ ಕಾಲು ಕಪ್ ಹಾಲು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಸಕ್ಕರೆ ಚೆನ್ನಾಗಿ ಕರಗಬೇಕು. ಇದು ಸ್ವಲ್ಪ ಗಟ್ಟಿಯಾಗುವವರೆಗೂ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಹಾಗೆ ಇದಕ್ಕೆ ಏಲಕ್ಕಿ ಪುಡಿ ಸಹ ಹಾಕಿಕೊಂಡು ತಿರುಗಿಸುತ್ತಾ ಇರಿ. ಇದು ಉಂಡೆ ಕಟ್ಟುವ ಹದಕ್ಕೆ ಬರಬೇಕು. 2 ನಿಮಿಷದಲ್ಲಿ ಈ ಹದಕ್ಕೆ ಬರಲಿದೆ. ನಿಮಗೆ ಗಟ್ಟಿಯಾಗಿ ಬರ್ಫಿ ಬೇಕಿದ್ದರೆ 3 ನಿಮಿಷ ಒಲೆ ಮೇಲೆ ಇಟ್ಟುಕೊಳ್ಳಿ. ಈಗ ಒಂದು ಪ್ಲೇಟ್ಗೆ ತುಪ್ಪ ಸವರಿಕೊಂಡು ಇಟ್ಟುಕೊಳ್ಳಿ.
ಅನಂತರ ಒಲೆ ಮೇಲಿನ ಮಿಶ್ರಣವನ್ನು ಈ ಪ್ಲೇಟ್ಗೆ ಹಾಕಿ ಚೆನ್ನಾಗಿ ಒತ್ತಿಕೊಂಡು ಸವರಿಕೊಳ್ಳಬೇಕು. ಅನಂತರ ಇದನ್ನು ಸಂಪೂರ್ಣ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಬೇಕು. ಈ ಸ್ವಿಟ್ ಅನ್ನು ಡಬ್ಬಿಯಲ್ಲಿ ಹಾಕಿಟ್ಟರೆ ಬಹಳ ಸಮಯ ಸವಿಯಬಹುದು. ಮಕ್ಕಳಿಗೆ ಬಹಳ ಇಷ್ಟವಾಗುವ ಬರ್ಫಿ ಇದು. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ. ಈ ತಿಂಡಿ ಮಕ್ಕಳಿಗೂ ಸಹ ಬಹಳ ಇಷ್ಟವಾಗುತ್ತೆ. ಹಾಗೆ ಮಾಡುವುದು ಕೂಡ ಬಹಳ ಸುಲಭ. ಕಡಿಮೆ ವಸ್ತುಗಳನ್ನು ಬಳಸಿಕೊಂಡು ಥಟ್ ಎಂದು ತಯಾರಿಸಬಹುದು. ಹಬ್ಬದ ಸಮಯದಲ್ಲಿ ಬಹಳಷ್ಟು ತಿಂಡಿಗಳ ಮಾಡುವ ನಡುವೆ ಈ ಬರ್ಫಿ ವಿಶೇಷ ಎನಿಸಲಿದೆ.



Click it and Unblock the Notifications