Just In
Don't Miss
- Movies
ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?
- News
ಭೂತಾನ್ಗೆ 1.5 ಲಕ್ಷ ಕೋವಿಶೀಲ್ಡ್ ಲಸಿಕೆಯನ್ನ ಉಡುಗೊರೆ ನೀಡಿದ ಭಾರತ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ ಮತ್ತು ಬೆಂಗಳೂರು ತಂಡಗಳ ಅದೃಷ್ಟ ಪರೀಕ್ಷೆ
- Automobiles
ಎಂಜಿ ಜೆಡ್ಎಸ್ ಪೆಟ್ರೋಲ್ ಕಾರಿನ ಮೊದಲ ಇಂಟಿರಿಯರ್ ಚಿತ್ರಗಳು ಬಹಿರಂಗ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬರೀ 15 ನಿಮಿಷದಲ್ಲಿ ಟೊಮೇಟೊ ಚಟ್ನಿ ರೆಡಿ!
ಇಂದಿನ ಆಧುನಿಕ ಯುಗದಲ್ಲಿ ಸರಳವಾದ ಆಹಾರವನ್ನು ಯಾರು ಇಷ್ಟಪಡುವುದಿಲ್ಲ ಹೇಳಿ? ಗಡಿಬಿಡಿಯ ಜೀವನದಲ್ಲಿ ಸರಳವಾಗಿ ತಯಾರಿಸಬಹುದಾದ ಮತ್ತು ದೀರ್ಘಕಾಲ ಬಾಳಿಕೆ ಬರುವ ಖಾದ್ಯವನ್ನು ಎಲ್ಲರೂ ಇಷ್ಟಪಡುತ್ತಾರೆ. ಆಫೀಸ್ ಕೆಲಸಕ್ಕೆ ಹೋಗುವ ಆಧುನಿಕ ಮಹಿಳೆಯರಿಗೆ ಮನೆಯ ಹೊರಗೂ ಒಳಗೂ ದುಡಿಯಬೇಕಾದ ಸ್ಥಿತಿ ಇರುತ್ತದೆ. ಈ ಸಮಯದಲ್ಲಿ ಅವರು ಹೆಚ್ಚಾಗಿ ಸರಳ ಆಹಾರ ತಯಾರಿಯನ್ನೇ ಕೈಗೆತ್ತಿಕೊಳ್ಳುತ್ತಾರೆ.
ರೆಡಿಮೇಡ್ ಆಹಾರ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಸ್ವಾದಿಷ್ಟವಾಗಿ ನಿಮ್ಮ ಕೈಯಲ್ಲೇ ಮಾಡಿ ತಯಾರಿಸಬಹುದಾದ ಖಾದ್ಯಗಳು ನಿಮಗೂ ಖುಷಿಯನ್ನು ನೀಡುತ್ತದೆ ಜೊತೆಗೆ ನಿಮ್ಮ ಮನೆಯವರಿಗೂ ಆನಂದನ್ನು ಉಂಟುಮಾಡುತ್ತದೆ.
ಇಂದಿನ ಲೇಖನದಲ್ಲಿ ಅಂತಹುದೇ ಸರಳ ರೆಸಿಪಿಯೊಂದಿಗೆ ನಾವು ಬಂದಿದ್ದು ಈ ರೆಸಿಪಿ ರುಚಿಗೂ ಸೈ ಎನ್ನಿಸಿದೆ. ಟೊಮೇಟೊ ಚಟ್ನಿಯನ್ನು ಈರುಳ್ಳಿಯೊಂದಿಗೆ ಹುರಿದು ಬೇರೆ ಮಸಾಲಾ ಸಾಮಾಗ್ರಿಗಳೊಂದಿಗೆ ಅದನ್ನು ರುಬ್ಬಿ ನಂತರ ಬೇಯಿಸಿ ಮಾಡುವ ಚಟ್ನಿಯಿಂದ ಬಾಯಲ್ಲಿ ನೀರೂರುವುದು ಖಂಡಿತ. ನಿಮ್ಮೆಲ್ಲಾ ತಿಂಡಿಗೆ ಇದು ಉತ್ತಮ ಸಾಥ್ ಕೂಡ ನೀಡುತ್ತದೆ. ಹಾಗಿದ್ದರೆ ತಡ ಮಾಡದೇ ಆ ರೆಸಿಪಿ ಬಗ್ಗೆ ತಿಳಿದುಕೊಳ್ಳೋಣ..
ಸಿದ್ಧತಾ ಸಮಯ- 15 ನಿಮಿಷ
ಅಡುಗೆಗೆ ಬೇಕಾದ ಸಮಯ- ಅರ್ಧ ಗಂಟೆ
ಸಾಮಾಗ್ರಿಗಳು
*ಟೊಮೇಟೊ - 1/2 ಕೆ.ಜಿ
*ಈರುಳ್ಳಿ - 2
*ಬೆಳ್ಳುಳ್ಳಿ - 10 ಎಸಳು
*ಒಣಮೆಣಸಿನಕಾಯಿ - 2- 3 (ಸಣ್ಣದಾಗಿ ಕತ್ತರಿಸಲಾಗಿರುವ)
*ಹುಣಸೆಹಣ್ಣು - ಸಣ್ಣ ತುಂಡು
*ಉಪ್ಪು -ರುಚಿಗೆ ತಕ್ಕಷ್ಟು
*ಕೊತ್ತಂಬರಿ ಸೊಪ್ಪು - ಸ್ವಲ್ಪ (ಸಣ್ಣದಾಗಿ ಕತ್ತರಿಸಲಾಗಿರುವ)
*ಕರಿಬೇವಿನ ಸೊಪ್ಪು- 4-5 ಎಸಳು
ಒಗ್ಗರಣೆಗೆ
*ಸಾಸಿವೆ - ಅರ್ಧ ಚಮಚ
*ಜೀರಿಗೆ - ಅರ್ಧ ಚಮಚ
*ಇಂಗು - ಚಿಟಿಕೆಯಷ್ಟು
ತಯಾರಿಸುವ ವಿಧಾನ:
*ಮೊದಲಿಗೆ ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಬೆಳ್ಳುಳ್ಳಿ ಟೊಮೇಟೋ ಮತ್ತು ಒಣಮೆಸಿನಕಾಯಿಯನ್ನು ಚೆನ್ನಾಗಿ ಹುರಿದುಕೊಳ್ಳಿ
*ಚೆನ್ನಾಗಿ ಹುರಿದುಕೊಂಡ ನಂತರ ಕೊತ್ತಂಬರಿ ಸೊಪ್ಪು, ಕರಿಬೇವಿನೆಸಳು, ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ
*ಇನ್ನು ಸಾಸಿವೆ, ಇಂಗು, ಜೀರಿಗೆಯ ಒಗ್ಗರಣೆಯನ್ನು ರೆಡಿ ಮಾಡಿ ಈ ಚಟ್ನಿಗೆ ಸೇರಿಸಿ. ನಂತರ ಈ ಟೊಮೇಟೊ ಚಟ್ನಿಯನ್ನು ಚೆನ್ನಾಗಿ ಕುದಿಸಿಕೊಳ್ಳಿ. ಈ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿಕೊಳ್ಳಿ.
*ದೋಸೆ ಚಪಾತಿಗೆ ನೆಂಜಿಕೊಳ್ಳಲು ಇದು ಅತ್ಯುತ್ತಮ ಕಾಂಬಿನೇಶನ್ ಆಗಿದೆ.