For Quick Alerts
ALLOW NOTIFICATIONS  
For Daily Alerts

ಗ್ಯಾಸ್ ಟ್ರಬಲ್ ನಿವಾರಿಸುವ ಕರಿಬೇವು ಪುಡಿ

By Prasad
|
ಆರೋಗ್ಯವರ್ಧನೆಗಾಗಿ ಕರಿಬೇವು ಲೇಖನ ಓದಿದ ನಂತರ ಒಬ್ಬ ಓದುಗರು ಕರಿಬೇವು ಚಟ್ನಿಪುಡಿ ಮಾಡುವುದು ಹೇಗೆ ಅಂತ ಕೇಳಿದ್ದರು. ಅವರಿಗಾಗಿ ಇಲ್ಲಿದೆ ನೋಡಿ ಸರಳ ವಿಧಾನ ಲಿಂಕ್ ಕ್ಲಿಕ್ಕಿಸಿ . ಕರಿಬೇವು ಚಟ್ನಿಪುಡಿ ಜೊತೆಗೆ ಕರಿಬೇವು ಪುಡಿ ಕೂಡ ಮಾಡಬಹುದು. ಅತ್ಯಧಿಕ ಕಬ್ಬಿಣದ ಅಂಶವುಳ್ಳ ಕರಿಬೇವು ಪುಡಿ ಗ್ಯಾಸ್ ಟ್ರಬಲ್ ಇರುವವರಿಗೆ ಮನೇಲೇ ಸಿಗುವ ಅತ್ಯುತ್ತಮ ಔಷಧಿ. ಅದನ್ನು ತಯಾರಿಸುವ ವಿಧಾನ ಹೀಗಿದೆ ನೋಡಿ.

ಬೇಕಾಗುವ ಪದಾರ್ಥಗಳು : ಕರಿಬೇವು ಒಂದು ಬಟ್ಟಲು | ಜೀರಿಗೆ ಅರ್ಧ ಮುಟಿಗೆಯಷ್ಟು | ಮೆಣಸಿನ ಕಾಳು ಏಳೆಂಟು ಹತ್ತು | ರುಚಿಗೆ ಉಪ್ಪು.

ತಯಾರಿಸುವ ವಿಧಾನ

ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಇಷ್ಟೇ. ಆದರೆ, ಅದು ಆರೋಗ್ಯದ ಮೇಲೆ ಮಾಡುವ ಪರಿಣಾಮ ಮಾತ್ರ ಅಗಾಧ. ಸೋ, ಮೊದಲು ಕರಿಬೇವನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಗರಿಗರಿಯಾದ ನಂತರ ಅದಕ್ಕೆ ಹುರಿದ ಜೀರಿಗೆ ಮತ್ತು ಮೆಣಸಿನ ಕಾಳುಗಳನ್ನು ಉಪ್ಪಿನೊಂದಿಗೆ ಬೆರೆಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಚಟ್ನಿಪುಡಿಗಿಂದ ಸ್ವಲ್ಪ ನುಣ್ಣಗಾಗಿರಲಿ. ಇದೇ ಕರಿಬೇವು ಪುಡಿ.

ಕರಿಬೇವು ಪುಡಿಯನ್ನು ಬಿಸಿಬಿಸಿ ಅನ್ನ ಮತ್ತು ತುಪ್ಪದೊಡನೆ ಸೇರಿಸಿ ಸವಿಯಬಹುದು. ಗ್ಯಾಸ್ ಟ್ರಬಲ್ ನಿಂದ ಬಳಲುತ್ತಿರುವವರು ಜೆಲ್ಯುಸಿಲ್ ಅಥವಾ ಇನ್ನಾವುದೇ ಆಂಟ್ಯಾಸಿಡ್ ಔಷಧಿಯನ್ನು ಸೇವಿಸುವ ಬದಲು ಅನ್ನದ ಜೊತೆ ಕರಿಬೇವು ಪುಡಿಯನ್ನು ತಿನ್ನಬಹುದು. ಇದನ್ನು ಚಟ್ನಿಪುಡಿಯಂತೆ ಕೂಡ ಮೊಸರಿನೊಂದಿಗೆ ಕಲಿಸಿ ಚಪಾತಿ ಜೊತೆ ಮೆಲ್ಲಬಹುದು. ಟ್ರೈ ಮಾಡಿ ನೋಡಿ.

ಗಮನಿಸಿ

* ಊಟದಲ್ಲಿ ಕರಿಬೇವು ಬಂದಾಗ ಪಕ್ಕಕ್ಕೆ ತೆಗೆದಿಡಬೇಡಿ. ಅಗಿದು ತಿಂದುಬಿಡಿ.
* ಅಜೀರ್ಣ, ಮಧುಮೇಹ, ಬೇಧಿ, ಬೊಜ್ಜು ಕರಗಿಸಲು, ಕಾಮಾಲೆ ರೋಗಕ್ಕೆ ಇದು ದಿವ್ಯೌಷಧಿ .
* ಹೇರಳವಾಗಿ ದೊರೆಯುತ್ತಿದ್ದರೆ ಕರಿಬೇವು ಪುಡಿಯನ್ನೋ ಚಟ್ನಿಪುಡಿಯನ್ನೋ ಮಾಡಿ ತಿನ್ನಿರಿ.

X
Desktop Bottom Promotion