Just In
Don't Miss
- Movies
ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?
- News
ಭೂತಾನ್ಗೆ 1.5 ಲಕ್ಷ ಕೋವಿಶೀಲ್ಡ್ ಲಸಿಕೆಯನ್ನ ಉಡುಗೊರೆ ನೀಡಿದ ಭಾರತ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ ಮತ್ತು ಬೆಂಗಳೂರು ತಂಡಗಳ ಅದೃಷ್ಟ ಪರೀಕ್ಷೆ
- Automobiles
ಎಂಜಿ ಜೆಡ್ಎಸ್ ಪೆಟ್ರೋಲ್ ಕಾರಿನ ಮೊದಲ ಇಂಟಿರಿಯರ್ ಚಿತ್ರಗಳು ಬಹಿರಂಗ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಹಾ 'ಬ್ರೆಡ್ ಕಟ್ಲೆಟ್', ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತೆ!
ಒಂದು ಕಾಲದಲ್ಲಿ ಬ್ರೆಡ್ ಅಂದರೆ ರೋಗಿಗಳಿಗೆ ಮೀಸಲಾದ ಆಹಾರ ಎಂಬ ಭಾವನೆಯಿತ್ತು. ಮಲೆನಾಡಿನಲ್ಲಿ ಈಗಲೂ ಈ ಭಾವನೆ ಇದೆ. ಬ್ರೆಡ್ ಕೊಳ್ಳುವವರಿಗೆ ಮನೆಯಲ್ಲಿ ಯಾರಿಗೆ ಹುಷಾರಿಲ್ಲ? ಎಂದು ವಿಚಾರಿಸುವುದು ಮಲೆನಾಡಿನಲ್ಲಿ ಸಾಮಾನ್ಯ. ಆದರೆ ಇಂದಿನ ದಿನಗಳಲ್ಲಿ ಕಛೇರಿಗೆ ಧಾವಿಸುವ ಉದ್ಯೋಗಸ್ಥರಿಗೆ ಈ ಬ್ರೆಡ್ ಆಪದ್ಬಾಂಧವ ಆಹಾರ.
ಎರಡು ಎಸಳುಗಳಿಗೆ ಬಟರ್ ಜಾಮ್ ಸವರಿದರೆ ಆಯಿತು, ಬ್ರೇಕ್ ಫಾಸ್ಟ್ ದಿಢೀರ್ ರೆಡಿ. ಇನ್ನೂ ಕೊಂಚ ಸಮಯವಿದ್ದರೆ ಬಿಸಿಮಾಡಿ ಬ್ರೆಡ್ ರೋಸ್ಟ್ ಮಾಡಿಕೊಳ್ಳಬಹುದು. ಕೆಲವರಂತೂ ಬ್ರೆಡ್ ಮತ್ತು ಇದರಿಂದ ತಯಾರಾದ ತಿಂಡಿಗಳನ್ನು ಮಧ್ಯಾಹ್ನ ಊಟಕ್ಕೂ ಕೊಂಡು ಹೋಗುತ್ತಾರೆ. ಮಕ್ಕಳಿಗೆ ಮಾಡಿ ಟೇಸ್ಟಿ ಬ್ರೆಡ್ ಕಟ್ಲೆಟ್
ಹಿಂದಿನ ದಿನಗಳಲ್ಲಿ ಉಪ್ಪಿಟ್ಟು ಪಡೆದಿದ್ದ ಸ್ಥಾನವನ್ನು ಇಂದು ಅದಕ್ಕಿಂತಲೂ ಹೆಚ್ಚೇ ಪ್ರಮಾಣದಲ್ಲಿ ಬ್ರೆಡ್ ಆವರಿಸಿದೆ. ಉಪ್ಪಿಟ್ಟು ರುಚಿಕರವಾದರೂ ಪದೇ ಪದೇ ತಿನ್ನುವ ಕಾರಣಕ್ಕೇ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಬ್ರೆಡ್ ಸಹಾ ಅಷ್ಟೇ, ಎಷ್ಟೇ ಅನುಕೂಲಕರವಾಗಿದ್ದರೂ ಪದೇ ಪದೇ ಒಂದೇ ರುಚಿಯನ್ನು ನಮ್ಮ ನಾಲಿಗೆ ಒಪ್ಪುವುದಿಲ್ಲ. ಇದರಿಂದ ಬ್ರೆಡ್ ಸಹಾ ಇಂದು ಬೋರು ಹೊಡೆಸುತ್ತಿದೆ.
ಆದರೆ ಇದನ್ನೇ ನಾಲಿಗೆಗೆ ಇಷ್ಟವಾಗುವಂತೆ ಕೊಂಚವೇ ಬದಲಿಸಿ ರುಚಿಕರವಾಗಿಸಿದರೆ? ಆಗದೇ ಏನು? ಈ ಬ್ರೆಡ್ ಕಟ್ಲೆಟ್ ಭಿನ್ನವಾದ ರುಚಿ ಹೊಂದಿದ್ದು ಎಲ್ಲರ ಮನಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಇದರ ವರ್ಣನೆ ಕೇಳಿಯೇ ಬಾಯಿಯಲ್ಲಿ ನೀರೂರಿರಬೇಕಾದರೆ ಇದನ್ನು ಮಾಡುವುದು ಕಷ್ಟ ಎಂದು ಅನ್ನಿಸಬಹುದು.
ಇಲ್ಲ, ಇದು ಸುಲಭವಾಗಿ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳದ ತಿಂಡಿಯಾಗಿದ್ದು ನಿಮ್ಮ ನೆಚ್ಚಿನ ಟೀ, ಕಾಫಿ ಅಥವಾ ಬೇಸಿಗೆ ಸಂಜೆಯ ಹಿತಗಾಳಿಯ ಜೊತೆ ಸವಿಯಬಹುದಾದ ತಿಂಡಿಯಾಗಿದೆ. ಕೊಂಚ ಟೊಮೆಟೋ ಸಾಸ್ ಇದರ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬನ್ನಿ, ಇದನ್ನು ತಯಾರಿಸುವ ಬಗೆಯನ್ನು ಕಲಿಯೋಣ:
ಪ್ರಮಾಣ: ನಾಲ್ಕು ಕಟ್ಲೆಟ್ ಗಳು
*ಬೇಕಾಗುವ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಹದಿನೈದು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು
*ಬಿಳಿಯ ಬ್ರೆಡ್ ಎಸಳುಗಳು: ಹತ್ತು
*ಹಸಿಮೆಣಸು : 7 ರಿಂದ 8
*ಕೆಂಪು ಮೆಣಸಿನ ಪುಡಿ: ಅರ್ಧ ಟೀ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಒಂಚು ಚಿಕ್ಕ ಚಮಚ)
*ಗರಂ ಮಸಾಲಾ: ಅರ್ಧ ಟೀ ಚಮಚ
*ಈರುಳ್ಳಿ: ಒಂದು ಕಪ್
*ಬೇಯಿಸಿದ ಆಲೂಗಡ್ಡೆ: ಒಂದು ಕಪ್
*ಹಸಿರು ಬಟಾಣಿ: ಅರ್ಧ ಕಪ್
*ಜೀರಿಗೆ : ಅರ್ಧ ಚಿಕ್ಕ ಚಮಚ
*ಅಕ್ಕಿ ಹಿಟ್ಟು : ಎರಡು ಚಿಕ್ಕ ಚಮಚ
*ಲಿಂಬೆರಸ: ಅರ್ಧ ಚಿಕ್ಕ ಚಮಚ
*ಉಪ್ಪು : ರುಚಿಗನುಸಾರ
*ಎಣ್ಣೆ: ಅಗತ್ಯಕ್ಕೆ ತಕ್ಕಂತೆ ಪನ್ನೀರ್ ಕಟ್ಲೆಟ್- ಒಮ್ಮೆ ಮಾಡಿ, ಸವಿದು ನೋಡಿ
ವಿಧಾನ:
* ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಬ್ರೆಡ್ ಮತ್ತು ಆಲೂಗಡ್ಡೆ ಹಾಕಿ.
* ಬ್ರೆಡ್ ಮತ್ತು ಆಲೂಗಡ್ಡೆಗಳನ್ನು ಚೆನ್ನಾಗಿ ಕೈಗಳಿಂದಲೇ ಹಿಸುಕಿ ಮಿಶ್ರಣ ಮಾಡಿ.
* ಈಗ ಇದಕ್ಕೆ ಹಸಿಮೆಣಸು, ಮೆಣಸಿನ ಪುಡಿ, ಗರಂಮಸಾಮ ಪೌಡರ್, ಈರುಳ್ಳಿ, ಬಟಾಣಿ ಜೀರಿಗೆ, ಉಪ್ಪು ಮತ್ತು ಅಕ್ಕಿಹಿಟ್ಟು ಹಾಕಿ ಬೆರೆಸಿ
* ಎಲ್ಲವನ್ನೂ ಚೆನ್ನಾಗಿ ಕಲಕಿ ಚಪಾತಿ ಹಿಟ್ಟಿನಂತಾಗುವಂತೆ ನಾದಿ
* ಈಗ ಲಿಂಬೆರಸ ಬೆರೆಸಿ
* ನಂತರ ಚೆನ್ನಾಗಿ ಮಿಶ್ರಣ ಮಾಡಿ
* ಈಗ ಈ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನಾಗಿಸಿ ನಿಮಗಿಷ್ಟವಾದ ಕಟ್ಲೆಟ್ ಆಕಾರದಲ್ಲಿ ಲಟ್ಟಿಸಿ
* ಇದೇ ವೇಳೆ ಒಂದು ಕಾವಲಿಯಲ್ಲಿ ಕೊಂಚವೇ ಎಣ್ಣೆ ಹಾಕಿ ಬಿಸಿಮಾಡಿ
* ಈಗ ಲಟ್ಟಿಸಿದ ಕಟ್ಲೆಟುಗಳನ್ನು ಕಾವಲಿಯ ಮೇಲಿರಿಸಿ ಮಧ್ಯಮ ಉರಿಯಲ್ಲಿ ಎರಡೂ ಬದಿಗಳು ಕೊಂಚ ಕೆಂಪಗಾಗುವಷ್ಟು ಹುರಿಯಿರಿ.
* ಹುರಿದ ಕಟ್ಲೆಟುಗಳನ್ನು ಒಂದು ತಟ್ಟೆಯ ಮೇಲೆ ಹರಡಿ ಬಿಸಿಬಿಸಿಯಾಗಿಯೇ ಟೊಮಾಟೋ ಸಾಸ್‌ನೊಂದಿಗೆ ಬಡಿಸಿ, ಮೆಚ್ಚುಗೆ ಗಳಿಸಿ.