For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಮಾಡಿ ಟೇಸ್ಟಿ ಬ್ರೆಡ್ ಕಟ್ಲೆಟ್

By Super
|
Bread Cutlet Recipe
ಮಕ್ಕಳಿಗೆ ತಿಂಡಿಯೆಂದರೆ ಅಚ್ಚುಮೆಚ್ಚು. ಅದರಲ್ಲೂ ಕುರುಕಲು ತಿಂಡಿಯೆಂದರೆ ಇನ್ನೂ ಖುಷಿ. ನಿಮ್ಮ ಮಕ್ಕಳಿಗೆ ವಿಶೇಷವಾದ ಬ್ರೆಡ್ ಕಟ್ಲೆಟ್ ಮಾಡಿಕೊಟ್ಟರೆ ಅವರಿಗೆ ಸಂತೋಷವಾಗೋದಂತು ಗ್ಯಾರಂಟಿ. ಈ ಬ್ರೆಡ್ ಕಟ್ಲೆಟ್ ಸುಲಭವಾಗಿ ಮಾಡೋದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಬ್ರೆಡ್ ಕಟ್ಲೆಟ್ ಗೆ ಬೇಕಾಗುವ ಪದಾರ್ಥ:

* ಬ್ರೆಡ್ (ಬ್ರೆಡ್ ಸುತ್ತಲಿನ ಭಾಗವನ್ನು ತೆಗೆದಿರಬೇಕು)
* 2 ದೊಡ್ಡ ಆಲೂಗಡ್ಡೆ (ಬೇಯಿಸಿ ಸಿಪ್ಪೆ ತೆಗೆದಿರಬೇಕು)
* 1 ಈರುಳ್ಳಿ (ಕತ್ತರಿಸಿರಬೇಕು)
* 1 ಕಪ್ ಹಸಿರು ಬಟಾಣಿ (ಬೇಯಿಸಿದ್ದು)
* 3 ಹಸಿರು ಮೆಣಸಿನಕಾಯಿ
* 1 ಚಮಚ ಕೆಂಪುಮೆಣಸಿನ ಪುಡಿ
* 1/2 ಚಮಚ ಅರಿಶಿಣ
* 1 ಚಮಚ ಗರಂ ಮಸಾಲಾ ಪುಡಿ
* ಕತ್ತರಿಸಿದ ಕೊತ್ತಂಬರಿ ಮತ್ತು ಪುದೀನಾ
* 1 ಕಪ್ ಮೊಸರು
* 2-3 ಚಮಚ ಅಕ್ಕಿ ಹಿಟ್ಟು
* 1 ಲೋಟ ನೀರು
* ಸಣ್ಣ ರವೆ
* ಎಣ್ಣೆ, ಸಾಸಿವೆ, 1/2 ಚಮಚ ಕಡಲೆ ಮತ್ತು ಉದ್ದಿನ ಬೇಳೆ
* ಉಪ್ಪು

ಬ್ರೆಡ್ ಕಟ್ಲೆಟ್ ಮಾಡುವ ವಿಧಾನ:

* ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಸಾಸಿವೆ, ಕಡಲೆ ಉದ್ದಿನ ಬೇಳೆ, ಅರಿಶಿಣ, ಹಸಿರು ಮೆಣಸಿನಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ತಿರುಗಿಸಬೇಕು.
* ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ನಾದಿ ಈ ಮಿಶ್ರಣಕ್ಕೆ ಹಾಕಬೇಕು.
* ಮೊಸರಿನಲ್ಲಿ ಬ್ರೆಡ್ ನೆನೆಸಿ ಅದರಲ್ಲಿನ ನೀರನ್ನು ತೆಗೆಯಬೇಕು. ಈಗ ಬಾಣಲೆಯ ಮಿಶ್ರಣಕ್ಕೆ ಈ ನೆನೆಸಿದ ಬ್ರೆಡ್ಡನ್ನು ಹಾಕಿ ಮಸಾಲೆ ಪುಡಿಗಳನ್ನು, ಉಪ್ಪು, ಬೇಯಿಸಿದ ಬಟಾಣಿ, ಪುದೀನಾ, ಕೊತ್ತಂಬರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
* ಈಗ ಈ ಮಿಶ್ರಣವನ್ನು ತಟ್ಟೆಯಲ್ಲಿ ಸಮತಟ್ಟಾಗಿ ಹಾಕಿಕೊಳ್ಳಬೇಕು.
* ಅಕ್ಕಿ ಹಿಟ್ಟನ್ನು ಸ್ವಲ್ಪ ನೀರಿನೊಂದಿಗೆ ಕಲೆಸಿ ಅಕ್ಕಿ ಹಿಟ್ಟಿನಲ್ಲಿ ಬ್ರೆಡ್ ಕಟ್ಲೆಟ್ಟನ್ನು ಅದ್ದಿ ಸಣ್ಣ ರವೆ ಮೇಲೆ ಉರುಳಿಸಬೇಕು.
* ಈಗ ಎಣ್ಣೆಯಲ್ಲಿ ಕೆಂಪಗಾಗುವವರೆಗೂ ಈ ಬ್ರೆಡ್ ಪೀಸ್ ಗಳನ್ನು ಬೇಯಿಸಿದರೆ ಬ್ರೆಡ್ ಕಟ್ಲೆಟ್ ತಿನ್ನಲು ಸಿದ್ಧವಾಗಿರುತ್ತದೆ. ಸಾಸ್ ಜೊತೆಗೆ ಈ ಕಟ್ಲೆಟ್ ತಿನ್ನಬಹುದು.

English summary

Bread Cutlet Recipe | Tasty Snack | ಬ್ರೆಡ್ ಕಟ್ಲೆಟ್ | ರುಚಿಕರ ತಿಂಡಿ

Sometimes your kids demand for something special to munch in the evening. So here is simple Indian recipe that requires bread slices and potatoes to make tasty cutlets. Take a look to know how to go about with the bread cutlet recipe.
Story first published: Wednesday, January 18, 2012, 14:12 [IST]
X
Desktop Bottom Promotion