For Quick Alerts
ALLOW NOTIFICATIONS  
For Daily Alerts

ಉಷ್ಣ ದೇಹಿಗಳಿಗೆ ಹಿತಕರವಾದ ರಾಗಿ ದೋಸೆ

By Staff
|
Healthy recipe Ragi Dose
ಎಷ್ಟು ಬಾರಿ ತಿಂದ್ರೂ ಬೇಜಾರಾಗದ ತಿಂಡಿ ಅಂದ್ರೆ ದೋಸೆ. ಮನೆಯಲ್ಲೇ ದೋಸೆ ಮಾಡಲು ಅವಕಾಶವಿದ್ದರೂ ದೋಸೆ ಕ್ಯಾಂಪ್ ಗಳಿಗೆ ಹೋಗಿ ನಾನಾ ವಿಧದ ದೋಸೆಗಳನ್ನು ಕುಟುಂಬ ಸಮೇತರಾಗಿ ತಿಂದು ಬರುವುದು ಬೆಂಗಳೂರಿನಂಥ ನಗರಗಳಲ್ಲಿ ಶೋಕಿಯಾಗಿದೆ. ತಿಂದವರಿಗೆ ವೈವಿಧ್ಯ, ಹೊಟೇಲಿನವರಿಗೆ ಭರ್ಜರಿ ವ್ಯಾಪಾರ. ಪ್ರತಿಬಾರಿ ದೋಸೆ ಕ್ಯಾಂಪಿಗೆ ಹೋಗಿ ರಾಗಿ ದೋಸೆಯನ್ನು ಮನೆಯಲ್ಲಿಯೇ ತಯಾರಿಸಬಹುದು. ರಾಗಿ ಉಷ್ಣ ದೇಹಿಗಳಿಗೆ ಹಿತಕರ ಮತ್ತು ಆರೋಗ್ಯಕರ ಕೂಡ.

* ಭಾರತಿ ಎಚ್. ಎಸ್., ಬೆಂಗಳೂರು

ಬೇಕಾಗುವ ಪದಾರ್ಥಗಳು

ಉದ್ದಿನಬೇಳೆ 1 ಕಪ್
ರಾಗಿ ಹಿಟ್ಟು 3 ಕಪ್
ಮೆಂತ್ಯ 2 ಸ್ಪೂನ್ - ಬೇಕಾದಲ್ಲಿ
ಅವಲಕ್ಕಿ 1 ಸ್ಪೂನ್ - ಬೇಕಾದಲ್ಲಿ
ಉಪ್ಪು ರುಚಿಗೆ

ಮಾಡುವ ವಿಧಾನ

* ಉದ್ದಿನ ಬೇಳೆಯನ್ನು 8 ಗಂಟೆಗಳ ಕಾಲ ನೆನೆ ಹಾಕಿ.
* ಮೆಂತ್ಯ ಮತ್ತು ಅವಲಕ್ಕಿಯನ್ನು ಉದ್ದಿನಬೇಳೆಯ ಜೊತೆ ನೆನೆ ಹಾಕಿ.
* ಎಲ್ಲವನ್ನು ನುಣ್ಣಗೆ ರುಬ್ಬಿ ಕೊಳ್ಳಿ.
* ಆಮೇಲೆ ರಾಗಿ ಹಿಟ್ಟು ಮತ್ತು ಉಪ್ಪನ್ನು ರುಬ್ಬಿದ ಮಿಶ್ರಣಕ್ಕೆ ಬೆರೆಸಿ ಇಡಿ.
* ಬೆಳಗ್ಗೆ ಹಿಟ್ಟು ಚೆನ್ನಾಗಿ ಹುದುಗು ಬಂದಿರುತ್ತದೆ.
* ಕಾದ ತವ ಮೇಲೆ ಹಿಟ್ಟು ಹುಯ್ದು ದೋಸೆ ಹಾಕಿ ಎರಡು ಬದಿ ಬೇಯಿಸಿ. ರುಚಿಯಾದ ದೋಸೆ ಸಿದ್ದ. ಕಾಯಿಚಟ್ನಿಯ ಜೊತೆ ಸವಿಯಿರಿ.
* ನಾನ್ ಸ್ಟಿಕ್ ತವಾ ಆಗಿದ್ದರೆ ಎಣ್ಣೆ ಹುಯ್ಯುವ ಅಗತ್ಯವಿಲ್ಲ. ಕಬ್ಬಿಣದಾಗಿದ್ದರೆ ಹಂಚಿಗೆ ಎಣ್ಣೆ ಹಚ್ಚಿ ಹಿಟ್ಟು ಹಾಕಿದರೆ ದೋಸೆ ಅಂಟಿಕೊಳ್ಳದೆ ಎದ್ದುಬರುತ್ತದೆ.

Story first published: Friday, September 18, 2009, 13:23 [IST]
X
Desktop Bottom Promotion