For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಮಾರ್ನಿಂಗ್ ಸಿಕ್‌ನೆಸ್‌ಗೆ ಹೇಳಿ ಮಾಡಿಸಿದ ಹಣ್ಣು ಸೀತಾಫಲ

|

ಗರ್ಭಿಣಿಯರು ಪೋಷಕಾಂಶ ಭರಿತ ಹಣ್ಣು ತರಕಾರಿಯ ಸೇವನೆ ಮಾಡಬೇಕು. ಪ್ರೋಟಿನ್,ಮಿನರಲ್, ಕಾರ್ಬೋಹೈಡ್ರೇಟ್, ಕೊಬ್ಬಿನಾಂಶ ಸೇರಿದಂತೆ ಅಗತ್ಯ ಪೋಷಕಾಂಶಗಳು ತಾಯಿ ಸೇವಿಸುವ ಆಹಾರದ ಮೂಲಕ ಮಗುವಿಗೆ ದೊರೆಯುತ್ತದೆ. ಉತ್ತಮ ಆಹಾರ ಕ್ರಮ ಮಗುವಿನ ಆರೋಗ್ಯಯುತ ಬೆಳವಣಿಗೆಗೆ‌ ಸಹಕಾರಿ. ಆ ನಿಟ್ಟಿನಲ್ಲಿ ಸೀತಾಫಲ ಬಹಳ ಪ್ರಯೋಜನಕಾರಿ.

Custard Apple Benefits During Pregnancy

ಭಾರತದಲ್ಲಿ ಸೀತಾಫಲ ಎನ್ನುವ ಈ ಹಣ್ಣು ದಕ್ಷಿಣ ಅಮೇರಿಕಾದಲ್ಲಿ ಚೆರಿಮೊಯಾ ಎಂದು ಕರೆಯಲಾಗುತ್ತದೆ. ವಿದೇಶಿ ಡಯಟ್ ನಲ್ಲಿ ಇದಕ್ಕೆ ಬಹಳ ಪ್ರಾಮಖ್ಯತೆ ಇದೆ. ಶಬರಿಯು ರಾಮಸೀತೆಗೆ ನೀಡಿದ ಹಣ್ಣು ಎಂಬ ಪ್ರತೀತಿಯೂ ಇದೆ.

ಗರ್ಭಿಣಿ ಸ್ತ್ರೀಯರಿಗೆ ಈ ಹಣ್ಣಿನಿಂದ ಬಹಳ ಲಾಭವಿದೆ. ಸಿಹಿಯಾಗಿರುವ ಇದು ದಪ್ಪವಾಗಿ, ಕಪ್ಪು ಬೀಜವನ್ನು ತೆಗೆದರೆ ಕ್ರೀಮ್ ‌ ನಂತೆ ಇರುತ್ತದೆ. ತಾಯಿಯಾಗುವವರು ಸೇವಿಸಲೇಬೇಕಾದ ಹಣ್ಣಿದು. ವಿಟಮಿನ್ ಗಳು, ಮಿನರಲ್ ಗಳು, ಪ್ರೊಟೀನ್,ಕಾರ್ಬೊಹೈಡ್ರೇಟ್, ಫೈಬರ್ ಮತ್ತು ಅಗತ್ಯ ಕೊಬ್ಬಿನಾಂಶ ಇದರಲ್ಲಿ ಇದೆ.

ವಿಟಮಿನ್‌ ಎ ಮತ್ತು ಸಿ

ವಿಟಮಿನ್‌ ಎ ಮತ್ತು ಸಿ

ಚರ್ಮ, ಕೂದಲು, ಕಣ್ಣುಗಳು ಮತ್ತು ದೇಹದ ಟಿಶ್ಯೂಗಳ ಬೆಳವಣಿಗೆಗೆ ಸಹಾಯ ಮಾಡುವ ಅಂಶಗಳಾಗಿರುವ ಈ ಎರಡು ವಿಟಮಿನ್ ಗಳು ಸೀತಾಫಲದಿಂದ ಸಿಗುತ್ತದೆ. ಅಷ್ಟೇ ಅಲ್ಲದೆ ಹೊಟ್ಟೆಯೊಳಗಿರುವ ಮಗುವಿನ ನರವ್ಯೂಹದ ಬೆಳವಣಿಗೆಗೂ ಕೂಡ ಇದು ನೆರವು ನೀಡುತ್ತದೆ.

ಕ್ಯಾಲೊರಿಗಳು

ಕ್ಯಾಲೊರಿಗಳು

ಬೇರೆ ಹಣ್ಣುಗಳಿಗೆ ಹೋಲಿಸಿದರೆ ಇದರಲ್ಲಿ ಅಧಿಕ ಕ್ಯಾಲೋರಿ ಇರುತ್ತದೆ. (100 ಗ್ರಾಂನಲ್ಲಿ 101 ಕ್ಯಾಲೋರಿ ಇದೆ.)ತಾಯಿಯಾಗುವವಳು ಇಬ್ಬರಿಗಾಗಿ ತಿನ್ನಬೇಕು ಎನ್ನುವಾಗ ಇದು ಹೇಳಿ ಮಾಡಿಸಿದ ಉಪಾಯ. ಅಂದರೆ ಈ ಹಣ್ಣಿನ ಸೇವನೆ ಬಹಳ ಒಳ್ಳೆಯದು. ಸೀತಾಫಲ ಹಣ್ಣಿನಲ್ಲಿ ಫ್ಯಾಟ್ ಅಥವಾ ಕೊಲೆಸ್ಟ್ರಾಲ್ ಇಲ್ಲ. ಹೆಚ್ಚಿನ ಕ್ಯಾಲೊರಿ ಇದರಲ್ಲಿರುವ ಕಾರ್ಬೊಹೈಡ್ರೇಟ್ ನಿಂದಲೇ ಸಿಗುತ್ತದೆ.

 ಫೈಬರ್

ಫೈಬರ್

ಸೀತಾಫಲದಲ್ಲಿ 2.4 ಗ್ರಾಂನಷ್ಟು ಫೈಬರ್ ಅಂಶವನ್ನು 100g ನಲ್ಲಿ ಹೊಂದಿರುತ್ತದೆ. ಹೆಚ್ಚು ಫೈಬರ್ ಅಂಶವನ್ನು ಗರ್ಭಿಣಿ ಸ್ತ್ರೀಯರು ಸೇವಿಸುವುದರಿಂದ ಮಲಬದ್ಧತೆ ಯನ್ನು ತಡೆಯಬಹುದು.

ತಾಮ್ರ

ತಾಮ್ರ

ಪ್ರಗ್ನೆನ್ಸಿಯಲ್ಲಿ ಪ್ರತಿದಿನ 100 mg ನಷ್ಟು ಕಾಪರ್ ಅಂಶ ಗರ್ಭಿಣಿಯರಿಗೆ ಬೇಕಾಗುತ್ತದೆ.ಈ ಮಿನರಲ್ ಅಂಶವು ರಕ್ತದ ಹಿಮೋಗ್ಲೋಬಿನ್‌ ಮಟ್ಟವನ್ನು ಹೆಚ್ಚಿಸುವುದಕ್ಕೆ ನೆರವಾಗುತ್ತದೆ. ಅಷ್ಟೇ ಅಲ್ಲ ಬೇಗನೆ ಡೆಲಿವರಿ ಆಗುವ ಸಾಧ್ಯತೆ ಯನ್ನು ತಡೆಯುತ್ತದೆ. ಆರೋಗ್ಯಯುತವಾಗಿರುವ ಚರ್ಮ, ಮಗುವಿನ ರಕ್ತದ ಮಟ್ಟ ಇತ್ಯಾದಿಗಳ ಬಲವರ್ಧನೆಗೆ ಇದು ನೆರವಾಗುತ್ತದೆ.

 ವಿಟಮಿನ್ ಬಿ6

ವಿಟಮಿನ್ ಬಿ6

ಸೀತಾಫಲದಲ್ಲಿ ಉತ್ತಮವಾಗಿರುವ ವಿಟಮಿನ ಬಿ6 ಅಂಶವಿದೆ. ಇದು ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ಪರಿಹಾರ ನೀಡುವ ಶಕ್ತಿ ಹೊಂದಿದೆ. ಯಾರು ಮಾರ್ನಿಂಗ್ ಸಿಕ್ ನೆಸ್ ನ್ನು ಗರ್ಭಾವಸ್ಥೆಯಲ್ಲಿ ಅನುಭವಿಸುತ್ತಾರೋ ಅವರಿಗೆ ಇದು ಹೇಳಿ ಮಾಡಿಸಿದ ಹಣ್ಣು.

ಗರ್ಭಿಣಿಯರಿಗೆ ಉತ್ತಮವಾದ ಹಣ್ಣೇ ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಹಾಗಾಗಿ ಕೆಲವು ಸನ್ನಿವೇಶಗಳಲ್ಲಿ ನೀವು ಸೀತಾಫಲದಿಂದ ಜಾಗೃತರಾಗಿರಬೇಕಾದ ಅಗತ್ಯವಿದೆ.

ಸಿಪ್ಪೆ‌ತೆಗೆಯದ ಸೀತಾಫಲವನ್ನು ಸೇವಿಸಬೇಡಿ, ಇದು ನಿಮ್ಮ ಹೊಟ್ಟೆಯನ್ನು ಹಿಂಸಿಸಬಹುದು. ಇದರಿಂದಾಗಿ ಜೀರ್ಣಕ್ರಿಯೆ ಸಮಸ್ಯೆ ಬರಬಹುದು. ಕಪ್ಪು ಬೀಜಗಳನ್ನು ತಿನ್ನಬೇಡಿ. ಇವುಗಳು ನಿಮಗೆ ಕೆಟ್ಟದ್ದು ಮಾಡಬಹುದು. ಹಾಗಾಗಿ ತಿನ್ನುವ ಮುನ್ನ ಇವುಗಳನ್ನು ತೆಗೆಯಿರಿ. ಒಂದು ವೇಳೆ ನಿಮಗೆ ಪ್ರಗ್ನೆನ್ಸಿ ಶುಗರ್ ಕಾಣಿಸಿಕೊಂಡಿದ್ದರೆ ಇದನ್ನು ತಿನ್ನಬೇಡಿ ಯಾಕೆಂದರೆ ಇದರಲ್ಲಿ ಶುಗರ್ ಮಟ್ಟ ತುಂಬಾ ಇರುತ್ತದೆ.

ಉತ್ತಮ ಹಣ್ಣಿನ ಆಯ್ಕೆ

ಉತ್ತಮ ಹಣ್ಣಿನ ಆಯ್ಕೆ

ಸೀತಾಫಲದ ಮೇಲಿನ ಹಸಿರು ಸಿಪ್ಪೆಯನ್ನು ತೆಗೆಯಿರಿ. ಜ್ಯೂಸ್ ನಂತೆಯೂ ನೀವಿದನ್ನು ಸೇವಿಸಬಹುದು. ಹೆಚ್ಚು ಗಾಢ ಹಸಿರು ಬಣ್ಣದಲ್ಲಿರುವ ಹಣ್ಣು ಅಧಿಕ ಸಿಹಿಯಾಗಿರುತ್ತದೆ. ಫ್ರಿಡ್ಜ್ ನಲ್ಲಿ ಇಡಬೇಡಿ. ಬದಲಾಗಿ ನಿಮ್ಮ ನೈಜ ವಾತಾವರಣದಲ್ಲಿರುವ ಹಣ್ಣು ಹೆಚ್ಚು ಆರೋಗ್ಯಕ್ಕೆ‌ ಶ್ರೇಯಸ್ಕರ.

ಇದಕ್ಕೆ ನೀವು ಸ್ವಲ್ಪ ನಿಂಬೆರಸ ಸೇರಿಸಿಯೂ ಸೇವಿಸಬಹುದು. ಸೀತಾಫಲದ ಐಸ್ ಕ್ರೀಮ್ ಕೂಡ ಸಿಗುತ್ತದೆ. ನೀವೂ ಕೂಡ ಇದರ ಸ್ಮೂದಿ ಮತ್ತು ಐಸ್ ಕ್ರೀಮ್ ನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು.

English summary

Benefits of Custard Apple During Pregnancy

Here we are discussing about Custard Apple Benefits During Pregnancy. Custard apples are an ideal fruit for expectant mothers, and have an impressive array of nutrients including vitamins, minerals, protein, carbs, fiber, and essential fats. Read more.
X
Desktop Bottom Promotion