Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ಗರ್ಭಿಣಿಯರೇ, ಚೈನೀಸ್ ಆಹಾರದ ಕಡೆ ಕಣ್ಣೆತ್ತಿಯೂ ನೋಡಬೇಡಿ!
ಗಡಿ ಬದಲಾದಂತೆ ಭಾಷೆ, ಸಂಪ್ರದಾಯ ಮತ್ತು ಆಹಾರ ಕ್ರಮ ಪ್ರತಿಯೊಂದು ಬದಲಾಗುತ್ತಾ ಹೋಗುತ್ತದೆ. ಭಾರತದಲ್ಲೇ ಹಲವಾರು ರೀತಿಯ ಆಹಾರ ಕ್ರಮವನ್ನು ಕಾಣಬಹುದು. ಎಲ್ಲಾ ರೀತಿಯ ಭಾರತೀಯ ಅಡುಗೆಗಳ ರುಚಿ ನೋಡಬೇಕಾದರೆ ಎಷ್ಟೋ ವರ್ಷಗಳು ಬೇಕಾಗಬಹುದು. ಆದರೆ ಇಂದಿನ ದಿನಗಳಲ್ಲಿ ವಿದೇಶಿ ಆಹಾರಗಳು ಪ್ರತಿಯೊಂದು ಹೋಟೆಲ್ ಗಳಲ್ಲಿ ಕಾಣಸಿಗುತ್ತದೆ. ಗರ್ಭಿಣಿಯರೇ ಹಣ್ಣು-ತರಕಾರಿಗಳೆಂದರೆ ಮುಖ ಸಿಂಡರಿಸಬೇಡಿ
ಅದರಲ್ಲೂ ನಮ್ಮ ನೆರೆಯ ದೇಶ ಚೀನಾದ ಆಹಾರಗಳು ಸಿಗದೆ ಇರುವಂತಹ ಹೋಟೆಲ್ ಗಳು ಇಲ್ಲವೆನ್ನಬಹುದು! ಅಷ್ಟೊಂದು ಚೀನಾದ ಆಹಾರಗಳು ಇಲ್ಲಿ ಜನಪ್ರಿಯವಾಗಿ ಬಿಟ್ಟಿದೆ. ಅದರಲ್ಲೂ ನೂಡಲ್ಸ್, ಫ್ರೈಡ್ ರೈಸ್ ಮತ್ತು ಗೋಬಿ ಮಂಚೂರಿ ಪ್ರತಿಯೊಬ್ಬರ ಇಷ್ಟದ ಆಹಾರವಾಗಿದೆ. ಚೀನಾದ ಆಹಾರವು ಈಗ ಭಾರತದಲ್ಲಿ ಮನೆಮಾತಾಗಿರುವುದು ಸುಳ್ಳಲ್ಲ. ಆದರೆ ಈ ಆಹಾರವು ಗರ್ಭಿಣಿ ಮಹಿಳೆಯರಿಗೆ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಕಾಡುತ್ತದೆ. ಗರ್ಭಿಣಿಯರೇ ರಸ್ತೆಬದಿಯ ತಿಂಡಿಗಳಿಗೆ ಮರುಳಾಗದಿರಿ
ಮಹಿಳೆ ಏನೇ ತಿಂದರೂ ಅದು ನೇರವಾಗಿ ಗರ್ಭದಲ್ಲಿರುವ ಮಗುವನ್ನು ಸೇರುವುದು. ಇದರಿಂದ ಗರ್ಭಿಣಿ ಮಹಿಳೆಯರಿಗೆ ತಿನ್ನಬೇಕೆಂಬ ಆಸೆಯು ಹೆಚ್ಚಾಗಿರುತ್ತದೆ. ರುಚಿರುಚಿಯಾದ ಆಹಾರವನ್ನು ತಿನ್ನಬೇಕು ಎನ್ನುವ ಆಸೆ ಗರ್ಭಿಣಿಯರಲ್ಲಿ ಮೂಡುವುದು ಹಾರ್ಮೋನು ಬದಲಾವಣೆಯಿಂದಾಗಿ. ಆದರೆ ಚೈನೀಸ್ ಆಹಾರವನ್ನು ತಿನ್ನುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಇದು ಗರ್ಭಿಣಿ ಮಹಿಳೆಯರಿಗೆ ಹಾನಿಕರವೇ? ಅಥವಾ ಆರೋಗ್ಯಕಾರಿಯೇ ಎಂದು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ....

ವಾಸ್ತವ #1
ಚೈನೀಸ್ ಆಹಾರಗಳಾದ ನೂಡಲ್ಸ್, ಮಂಚೂರಿ, ಫ್ರೈಡ್ ರೈಸ್, ಮೊಮೊಸ್ ಇತ್ಯಾದಿಗಳ ರುಚಿಯನ್ನು ಹೆಚ್ಚಿಸುವ ಸಲುವಾಗಿ ಅದಕ್ಕೆ ಕೆಲವೊಂದು ಹಾನಿಕಾರಕ ಪದಾರ್ಥಗಳನ್ನು ಸೇರಿಸಿರುತ್ತಾರೆ.

ವಾಸ್ತವ #2
ಚೈನೀಸ್ ಆಹಾರದಲ್ಲಿ ಕಂಡುಬರುವಂತಹ ಈ ವಿಷವನ್ನು ಮೋನೋಸೋಡಿಯಂ ಗ್ಲುಟಮೇಟ್ ಆಥವಾ ಎಂಎಸ್ ಜಿ ಎಂದು ಕರೆಯಲಾಗುತ್ತದೆ.

ವಾಸ್ತವ #3
ಮೋನೋಸೋಡಿಯಂ ಗ್ಲುಟಮೇಟ್ ಒಂದು ರೀತಿಯ ಉಪ್ಪು. ಇದನ್ನು ಗ್ಲುಟಮೇಟ್ ಆಮ್ಲದಿಂದ ತಯಾರಿಸಲಾಗುತ್ತದೆ. ಇದು ಆಹಾರಕ್ಕೆ ಮತ್ತಷ್ಟು ರುಚಿ ನೀಡುವುದು.

ವಾಸ್ತವ #4
ಚೈನೀಸ್ ಆಹಾರದಲ್ಲಿ ಕಂಡುಬರುವಂತಹ ಎಂಎಸ್ ಜಿಯಿಂದಾಗಿ ಜೀರ್ಣಕ್ರಿಯೆ ಸಮಸ್ಯೆ, ತಲೆನೋವು, ಅಲರ್ಜಿ, ಅಸ್ತಮಾ, ಗಂಟು ನೋವು, ತೂಕ ಹೆಚ್ಚಳ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಎಂದು ಹಲವಾರು ಅಧ್ಯಯನಗಳಿಂದ ದೃಢಪಟ್ಟಿದೆ.

ವಾಸ್ತವ #5
ಗರ್ಭಿಣಿ ಮಹಿಳೆಯರು ಚೈನೀಸ್ ಆಹಾರವನ್ನು ತಿಂದಾಗ ಅದರಲ್ಲಿರುವ ಎಂಎಸ್ ಜಿ ನೇರವಾಗಿ ಭ್ರೂಣವನ್ನು ತಲುಪಿ ಅದರ ಬೆಳವಣಿಗೆಗೆ ತೊಂದರೆಯುಂಟು ಮಾಡುವುದು.

ವಾಸ್ತವ #6
ಎಂಎಸ್ ಜಿಯಲ್ಲಿರುವಂತಹ ಅಗತ್ಯವಲ್ಲದ ಅಮಿನೋ ಆಮ್ಲವು ಭ್ರೂಣದಲ್ಲಿರುವ ಮಗುವಿನ ಎಲುಬುಗಳ ಬೆಳವಣಿಗೆಯನ್ನು ಕುಂದಿಸುವುದು. ಇದರಿಂದ ಅಂಗವೈಕಲ್ಯತೆ ಉಂಟಾಗಬಹುದು.

ವಾಸ್ತವ #7
ಎಂಎಸ್ ಜಿಯನ್ನು ಹೊರತುಪಡಿಸಿ ಚೈನೀಸ್ ಆಹಾರದಲ್ಲಿ ಅತಿಯಾದ ಸೋಡಿಯಂ ಒಳಗೊಂಡಿರುತ್ತದೆ. ಇದರಿಂದ ಗರ್ಭಿಣಿ ಮಹಿಳೆಯರಲ್ಲಿ ಬೆಳಗಿನ ಅನಾರೋಗ್ಯ, ಸ್ನಾಯು ಸೆಳೆತ ಮತ್ತು ಹೊಟ್ಟೆಯುಬ್ಬರ ಕಂಡುಬರಬಹುದು.

ವಾಸ್ತವ #8
ಇದರಿಂದ ನಿಯಮಿತವಾಗಿ ಚೈನೀಸ್ ಆಹಾರವನ್ನು ಸೇವನೆ ಮಾಡುವುದು ಗರ್ಭಿಣಿ ಮಹಿಳೆಯ ಆರೋಗ್ಯಕ್ಕೆ ಒಳ್ಳೆಯದಲ್ಲ.



Click it and Unblock the Notifications