ಗರ್ಭಿಣಿಯರೇ ಹಣ್ಣು-ತರಕಾರಿಗಳೆಂದರೆ ಮುಖ ಸಿಂಡರಿಸಬೇಡಿ

Posted By:
Subscribe to Boldsky

ಹೆಣ್ಣಿಗೆ ಗರ್ಭಿಣಿಯಾಗುವುದೆಂದರೆ ಅದು ಜೀವನದ ಅತೀ ರೋಮಾಂಚನದ ಕ್ಷಣ. ಅದರಲ್ಲೂ ಹೆರಿಗೆಯಾಗಿ ಮಗುವಿನ ಮುಖ ವೀಕ್ಷಿಸಿದರೆ ಆಗ ಆಕೆಗೆ ಸ್ವರ್ಗವೇ ಧರೆಗಿಳಿದಂತೆ. ಹೆಣ್ಣಿಗೆ ಗರ್ಭಧಾರಣೆಯೇ ಒಂದು ಅದ್ಭುತ ಅನುಭವ, ಅದರಲ್ಲೂ ಸ್ತ್ರೀಯೋರ್ವಳು ಗರ್ಭಿಣಿಯಾಗಿರುವಳೋ, ಇಲ್ಲವೋ ಎ೦ಬುದನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುವ ಪರೀಕ್ಷೆಯು ಧನಾತ್ಮಕವಾಗಿದೆ ಎ೦ದು ಕ೦ಡುಬ೦ದಲ್ಲಿ, ಆಗ ಆಕೆಯಲ್ಲಿ ಉ೦ಟಾಗುವ ಭಾವೋದ್ವೇಗವನ್ನು ವರ್ಣಿಸಲು ಪದಗಳೇ ಸಾಲದು..!

ಹಾಗಾಗಿ ಇಂತಹ ಸಂತಸವನ್ನು ಇನ್ನಷ್ಟು ಇಮ್ಮಡಿಗೊಳಿಸಲು ತಾವು ಸೇವಿಸುವ ಆಹಾರ ಕ್ರಮವೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಹೌದು ಆಹಾರದ ವಿಷಯಕ್ಕೆ ಬಂದಾಗ ಇತರ ದಿನಗಳಿಗಿಂತಲೂ ಹೆಚ್ಚಿನ ಪೋಷಕಾಂಶಭರಿತ ಆಹಾರಗಳನ್ನು ಗರ್ಭಿಣಿ ಸೇವಿಸುವುದು ಅತ್ಯಗತ್ಯ. ಅಲ್ಲದೆ ಇದೇ ಹೊತ್ತಿನಲ್ಲಿ ಕೆಲವು ಆಹಾರಗಳು ಗರ್ಭಿಣಿಗೆ ಆರೋಗ್ಯಕ್ಕೆ ಮಾರಕವಾಗಬಹುದು ಎಂಬುದನ್ನು ಕೂಡ ಗರ್ಭಿಣಿಯರು ಮರೆಯಬಾರದು. ಉದಾಹರಣೆಗೆ ಹಸಿ ಪಪ್ಪಾಯಿ, ಹಾಗಲಕಾಯಿ ಇವುಗಳನ್ನು ಅಪ್ಪಿತಪ್ಪಿಯೂ ಸೇವಿಸಬಾರದು. ಬನ್ನಿ ಕೆಲವೊಂದು ಪೋಷಕಾಂಶ ಭರಿತ ಆಹಾರಗಳು ಯಾವುದು ಎಂಬುದನ್ನು ನೋಡೋಣ..  ಗರ್ಭಿಣಿಯರೇ ಎಚ್ಚರ: ದಿನನಿತ್ಯ ಆಹಾರ ಶೈಲಿಯ ಬಗ್ಗೆ ಎಚ್ಚರವಿರಲಿ!

ಸೊಪ್ಪು

ಒಡಲ ಕಂದನ ಆರೋಗ್ಯಕ್ಕೂ ರಕ್ತ ಅಗತ್ಯವಿರುವುದರಿಂದ ಗರ್ಭಿಣಿಯರು ಬಹುವಾಗಿ ರಕ್ತಹೀನತೆಯಿಂದ ಬಳಲುತ್ತಾರೆ. ಇದಕ್ಕೆ ಪ್ರಮುಖ ಕಾರಣ ಆಹಾರದಲ್ಲಿ ಕಬ್ಬಿಣದ ಕೊರತೆ. ಇದನ್ನು ನೀಗಿಸಲು ಬಸಲೆ ಪಾಲಕ್ ಮೊದಲಾದ ಗಾಢಹಸಿರು ಸೊಪ್ಪುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇವಿಸಲು ಮರೆಯದಿರಿ

ನೀರು

Healthy Diet Food During Pregnancy

ಗರ್ಭಿಣಿಯಾಗಿರುವಾಗ ನೀರನ್ನು ಯಾಕೆ ಸೇವಿಸಬೇಕು ಎಂದು ನಿಮಗೆ ಖಂಡಿತವಾಗಿಯೂ ವಿವರಿಸಬೇಕಾದ ಅವಶ್ಯಕತೆ ಇಲ್ಲ. ನೀರು, ನಿಮ್ಮ ಶರೀರದಲ್ಲಿ ಸಂಗ್ರಹವಾದ ಆoತರಿಕ ವಿಷವಸ್ತುಗಳನ್ನು ನಿವಾರಿಸಲು ಸಹಕರಿಸುವುದು ಮಾತ್ರವಲ್ಲದೇ ಇದು ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಡುವ ಮೂತ್ರನಾಳಗಳ ಸೋoಕಿನಿದಲೂ ಕೂಡ ನಿಮ್ಮನ್ನು ರಕ್ಷಿಸುತ್ತದೆ.

ಎಳನೀರನ್ನು ಸೇವಿಸಿ

ಎಳನೀರನ್ನು ನಿಯಮಿತವಾಗಿ ಪ್ರತಿನಿತ್ಯ ಕುಡಿಯುವುದರಿಂದ ಗರ್ಭಿಣಿಯರಲ್ಲಿ ಮಲಬದ್ಧತೆ ಕಾಣಿಸಿಕೊಳ್ಳುವುದಿಲ್ಲ. ಇನ್ನು ಕೆಲವೊಂದು ಮೂಲಗಳ ಪ್ರಕಾರ ಎಳನೀರು ಕುಡಿಯುವುದರಿಂದ ಗರ್ಭಿಣಿಯರಲ್ಲಿ ಎದೆ ಉರಿ ಕಾಣಿಸಿಕೊಳ್ಳುವುದಿಲ್ಲವಂತೆ. ಇದು ಗರ್ಭಿಣಿಯರಿಗೆ ವರದಾನವಾಗುವ ಒಂದು ಪ್ರಯೋಜನವಾಗಿದೆ.

ಪ್ರೋಟೀನ್

ಗರ್ಭಿಣಿಯಾಗಿರುವಾಗ ನೀವು ತೆಗೆದುಕೊಳ್ಳುವ ಪ್ರೋಟೀನ್‌ನ ಪ್ರಮಾಣವು 10 ಗ್ರಾಂ ಗಳಷ್ಟು ಹೆಚ್ಚಾಗಬೇಕು.ನಿಮ್ಮ ಮತ್ತು ನಿಮ್ಮ ಶಿಶುವಿನ ಶರೀರಗಳ ಜೀವಕೋಶ ಮತ್ತು ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಸಹಕಾರಿಯಾಗಿದೆ. ಮೊಟ್ಟೆ ಮತ್ತು ಚಿಕನ್‌ಗಳು ಪ್ರೋಟೀನ್ನ ಅತ್ಯುತ್ತಮ ಆಗರಗಳಾಗಿವೆ. ನೀವು ಒಂದು ವೇಳೆ ಸಸ್ಯಹಾರಿಯಾಗಿದ್ದರೆ, ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಅನ್ನು ಪಡೆಯಲು ಎಲ್ಲಾ ವಿಧದ ಧಾನ್ಯಗಳು, ಸೋಯಾ, ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ನಿಮ್ಮ ಊಟದ ತಟ್ಟೆಯಲ್ಲಿ ಸೇರಿಸಿಕೊಳ್ಳಿರಿ.

ಹಣ್ಣುಗಳು

Healthy Diet Food During Pregnancy

ವಿವಿಧ ಬಣ್ಣಗಳ ಮತ್ತು ಎಲ್ಲಾ ವಿಧದ ಹಣ್ಣುಗಳನ್ನು ಧಾರಾಳವಾಗಿ ಸೇವಿಸಿರಿ. ಗರ್ಭಿಣಿಯಾಗಿರುವಾಗ, ಪ್ರತಿದಿನ ಐದು ಭಾಗಗಳಷ್ಟು ಹಣ್ಣುಗಳನ್ನು ಸೇವಿಸಬೇಕೆಂದು ಶಿಫಾರಸು ಮಾಡಲಾಗಿದೆ. ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಹಣ್ಣುಗಳಾದ ಕಲ್ಲಂಗಡಿ, ನೇರಳೆ, ದ್ರಾಕ್ಷಿ ಇತ್ಯಾದಿಗಳನ್ನು ಸೇವಿಸಿರಿ. ವಿಟಾಮಿನ್ C ನಿಂದ ಸಮೃದ್ಧವಾಗಿರುವ ಕಿತ್ತಲೆಗಳು ಕಬ್ಬಿಣದ ಅಂಶವು ಶರೀರದಲ್ಲಿ ಹಿರಲ್ಪಡಲು ಸಹಕಾರಿಯಾಗಿದೆ ಹಾಗೂ ಸೇಬುಗಳು ನಾರಿನಂಶದಿಂದ ಕೂಡಿರುವುದರಿಂದ, ಗರ್ಭಿಣಿಯಾಗಿರುವಾಗ ಸಾಮಾನ್ಯವಾಗಿ ತಲೆದೋರುವ ಮಲಬದ್ಧತೆಯನ್ನು ನಿವಾರಿಸಲು ಸಹಕಾರಿಯಾಗಿವೆ.

English summary

Healthy Diet Food During Pregnancy

Healthy eating is of prime importance during pregnancy. But what you eat is more important than simply adding calories to your plate. Often, women miss on essential nutrients which contributes towards maternal and fetal well-being.
Subscribe Newsletter