For Quick Alerts
ALLOW NOTIFICATIONS  
For Daily Alerts

ಗಣರಾಜ್ಯೋತ್ಸವದ ಬಗೆ ತಿಳಿಯಬೇಕಾದ ಆಸಕ್ತಿಕರ ವಿಷಯಗಳಿವು

|

ಗಣರಾಜ್ಯೋತ್ಸವ ದಿನ ಬಂತೆಂದರೆ ಭಾರತೀಯನಿಗೆ ಹಬ್ಬವೋ ಹಬ್ಬ

republic day

ಜನವರಿ 26 ರ ಗಣರಾಜ್ಯೋತ್ಸವ ದಿನ ಪ್ರತಿಯೊಬ್ಬ ಭಾರತೀಯನಿಗೆ ಹಬ್ಬವೇ ಸರಿ. ಈ ವರ್ಷ 75ನೇ ಗಣರಾಜ್ಯೋತ್ಸವ ಹಬ್ಬವನ್ನು ಆಚರಿಸುತ್ತಿದ್ದೇವೆ. ಏಕೆಂದರೆ ಅಂದಿನ ದಿನ 1950 ನೇ ಇಸವಿಯಲ್ಲಿ ಭಾರತದ ಸಂವಿಧಾನ ನಮಗೆಲ್ಲರಿಗೂ ಸಿಕ್ಕಂತಹ ಗೌರವಯುತ ದಿನ. ಅದರಲ್ಲೂ ಬ್ರಿಟಿಷರು ರೂಪಿಸಿದ್ದ ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ 1935 ಅನ್ನು ಬದಲಿಸಿದ ದಿನ. ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆಯುವ ವಿಶೇಷ ಪೆರೇಡ್ ನೋಡಲು ನಿಜಕ್ಕೂ ಅದ್ಬುತ. ಈ ಲೇಖನದಲ್ಲಿ ಗಣರಾಜ್ಯೋತ್ಸವ ದಿನದ ಬಗೆಗಿನ ಕೆಲವೊಂದು ಮುಖ್ಯ ಮತ್ತು ಆಸಕ್ತಿಕರ ಅಂಶಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ.

ಏಕೆ ಗಣ ರಾಜ್ಯೋತ್ಸವ ದಿನ ಜನವರಿ 26ಕ್ಕೆ ಆಯ್ಕೆ ಮಾಡಲಾಯಿತು?

ಏಕೆ ಗಣ ರಾಜ್ಯೋತ್ಸವ ದಿನ ಜನವರಿ 26ಕ್ಕೆ ಆಯ್ಕೆ ಮಾಡಲಾಯಿತು?

ಗಣರಾಜ್ಯೋತ್ಸವದ ದಿವಸವನ್ನು ಜನವರಿ 26 ರಂದು ಆಯ್ಕೆ ಮಾಡಿದ ಕಾರಣವೆಂದರೆ, ಅದು ಪೂರ್ಣ ಸ್ವರಾಜ್ಯ ದಿನದವಾರ್ಷಿಕೋತ್ಸವ ದಿನವಾಗಿತ್ತು ( 26 ನೇ ಜನವರಿ 1930).

26 ನೇ ಜನವರಿಯ ದಿನದಂದೇ ಗಣರಾಜ್ಯೋತ್ಸವ ದಿನ ಎಂದು ಘೋಷಿಸಿದ ಕಾರಣ ಏನೆಂದರೆ, 1930 ನೇ ಇಸವಿಯ ಇದೇ ದಿನದಂದು ಬ್ರಿಟಿಷರ ಆಡಳಿತದಿಂದ ಹೊರ ತಂದ ಪ್ರಭುತ್ವ ಸ್ಥಿತಿಯ ವಿರುದ್ಧ ಬೇಸತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತದ ಸ್ವಾತಂತ್ರ್ಯ ( ಪೂರ್ಣ ಸ್ವರಾಜ್ ) ಎಂದು ಘೋಷಣೆ ಮಾಡಿತು. ಇದಕ್ಕೆ ಪೂರಕವೆಂಬಂತೆ ಹಾಲಿಡೇ ಐಕ್ಯೂ ನ ಪ್ರವಾಸಿ ಕೊಲ್ಕತ್ತಾದ ಸಯಂ ಮೈಟಿ ಯವರು ಹೀಗೆ ಹೇಳುತ್ತಾರೆ.

" ವಸಂತ ಋತುವಿನ ಆ ಸಮಯದಲ್ಲಿ ನಾನು ಮತ್ತು ನನ್ನ ಕುಟುಂಬ ಕೆಂಪು ಕೋಟೆಯನ್ನು ನೋಡಲು ದೆಹಲಿಗೆ ಪ್ರವಾಸಕ್ಕೆಂದು ಬಂದಿದ್ದೆವು. ಕೆಂಪು ಕೋಟೆ ತುಂಬಾ ದೊಡ್ಡದಾಗಿದ್ದು, ವಿಶಾಲವಾದ ಜಾಗವನ್ನು ಆಕ್ರಮಿಸಿಕೊಂಡಿದೆ.

ನಾನಂತೂ ಕೆಂಪು ಕೋಟೆಯ ದರ್ಶನದಿಂದ ಬಹಳ ಪ್ರಸನ್ನನಾಗಿ ಚಾಂದಿನಿ ಚೌಕ್ ಮಾರ್ಕೆಟ್ ಗೆ ಹೋಗಿ ಬಹಳ ಕಡಿಮೆ ಬೆಲೆಗೆ ಸಿಗುವಂತಹ ಅತ್ಯುತ್ತಮ ವಸ್ತುಗಳನ್ನು ಕೊಂಡುಕೊಳ್ಳಲು ಶುರು ಮಾಡಿದೆ. ಅಂದಿನ ರಾತ್ರಿ ರಾಮಲೀಲಾ ಮೈದಾನದಲ್ಲಿ ರಾಮಾಯಣ ನಾಟಕವನ್ನು ಪ್ರದರ್ಶನ ಮಾಡಿದರು. ದೆಹಲಿ ಒಂದು ಸುಂದರ ರಮಣೀಯ ಸ್ಥಳವಾಗಿದ್ದು, ನೋಡಲು ಬರುವ ಪ್ರವಾಸಿಗರಿಗೆ ಐತಿಹಾಸಿಕ ಮಾಹಿತಿಯನ್ನು ಸಾರುವ ಒಂದು ಅದ್ಭುತ ಪ್ರದೇಶವಾಗಿದೆ.

ಆದ್ದರಿಂದ ನನ್ನ ಸಲಹೆ ಇಷ್ಟೇ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ದೆಹಲಿಗೆ ಭೇಟಿ ನೀಡಿ ಇಲ್ಲಿನ ರಮಣೀಯತೆಯನ್ನು ಕಣ್ತುಂಬಿಕೊಳ್ಳಬೇಕು. ಏಕೆಂದರೆ ಆಗಿನ ದೆಹಲಿ ಈಗಿನ ನವದೆಹಲಿ ಆಗಿದೆ. ಜೊತೆಗೆ ನಮ್ಮ ಭಾರತ ದೇಶದ ರಾಜಧಾನಿ ಬೇರೆ. ಅದೂ ಅಲ್ಲದೆ ಭಾರತವನ್ನು ಚಿನ್ನದ ಪಕ್ಷಿ ಎಂದು ಕೂಡ ಕರೆಯುತ್ತಾರೆ.

ಭಾರತದ ಸಂವಿಧಾನ ಇಡೀ ವಿಶ್ವದಲ್ಲೇ ಅತಿ ದೊಡ್ಡದು

ಭಾರತದ ಸಂವಿಧಾನ ಇಡೀ ವಿಶ್ವದಲ್ಲೇ ಅತಿ ದೊಡ್ಡದು

ಭಾರತೀಯ ಸಂವಿಧಾನ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಉದ್ದನೆಯ ಸಂವಿಧಾನ ಎಂದು ಗುರುತಿಸಲ್ಪಟ್ಟಿದೆ. ನಮ್ಮ ಸಂವಿದಾನದಲ್ಲಿ ಆರಂಭದ ಸಮಯದಲ್ಲಿ 395 ವಿಧಿಗಳಿದ್ದು, 22 ಭಾಗಗಳು ಮತ್ತು 8 ಸಂವಿಧಾನದ ಪರಿಚ್ಛೇದಗಳು ಸೇರಿವೆ. ಇದರಲ್ಲಿ ಏನಿಲ್ಲ ಅಂದರೂ ಸುಮಾರು 80000 ದಷ್ಟು ಪದಗಳಿವೆ.

ಆದರೆ ಈಗಿನ ಅಂದರೆ ಸಪ್ಟಂಬರ್ 2012 ರ ಸಂವಿಧಾನ ತನ್ನಲ್ಲಿ ಪ್ರಸ್ತಾವನೆಯ ಭಾಗವನ್ನು ಹೊಂದಿ, 25 ಭಾಗಗಳಾಗಿ ವಿಂಗಡನೆಗೊಂಡು 448 ವಿಧಿಗಳನ್ನು, 12 ಸಂವಿಧಾನದ ಪರಿಚ್ಛೇದಗಳನ್ನು, 5 ಅನುಬಂಧ ಮತ್ತು 100 ತಿದ್ದುಪಡಿಗಳನ್ನು ಒಳಗೊಂಡಿದೆ. ನೆನಪಿರಲಿ, ಹೊಸ ಸಂವಿಧಾನ 1 ನೇ ಆಗಸ್ಟ್ 2015 ರಂದು ಜಾರಿಗೆ ಬಂದಿತು.

ಪ್ರವಾಸಿಗರಾದ ಸೋಹನ್ ಶ್ರೀ ಅವರು ಹೇಳುವ ಪ್ರಕಾರ " ದೆಹಲಿ ನೋಡುಗನಿಗೆ ಒಂದು ಸುಂದರ ಐತಿಹಾಸಿಕ ಸ್ಥಳ. ಮೊದಲಿಗೆ ನಾನು ಸುಂದರವಾದ ಮತ್ತು ಶಾಂತಿಯುತವಾದ ಅಕ್ಷರಧಾಮಕ್ಕೆ ಭೇಟಿ ಕೊಟ್ಟು ಇನ್ನೆರಡು ಸುಂದರ ಸ್ಥಳಗಳಾದ ರಾಜಪಥ ಮತ್ತು ಇಂಡಿಯಾ ಗೇಟ್ ಗೆ ಹೋದೆ. ನಂತರ ಅಲ್ಲಿಂದ ಐತಿಹಾಸಿಕ ಮೌಲ್ಯವನ್ನು ಹೊಂದಿದ ಲಾಲ್ ಕಿಲಾ ಗೆ ಬೇಟಿ ಕೊಟ್ಟೆ.

ವಿದ್ಯಾರ್ಥಿಗಳಿಗೆ ಮತ್ತು ಇತಿಹಾಸವನ್ನು ಇಷ್ಟ ಪಡುವವರಿಗೆ ಹೇಳಿ ಮಾಡಿಸಿದ ಜಾಗ ಎಂದರೆ ಅದು ಇಂದಿರಾ ಗಾಂಧಿ ರಾಷ್ಟ್ರೀಯ ವಸ್ತು ಸಂಗ್ರಹಾಲಯ. ನಾನಂತೂ ಅಲ್ಲಿ ಬಹಳ ಖುಷಿ ಪಟ್ಟೆ. ಇನ್ನು ರಾತ್ರಿಯಾಗುತ್ತಿದ್ದಂತೆ ಅಮರ್ ಜವಾನ್ ಜ್ಯೋತಿ ನೋಡಲು ನಯನ ಮನೋಹರ. ವಾಸ್ತು ಶಿಲ್ಪಕ್ಕೆ ಒಳ್ಳೆಯ ಹೆಸರನ್ನು ಪಡೆದ ಲೋಕಸಭಾ ಹೌಸ್ ಕೂಡ ದೆಹಲಿಯಲ್ಲಿದೆ.

3. ಸಂವಿಧಾನ ರಚನೆಗೆ ತೆಗೆದುಕೊಂಡ ಸಮಯ

3. ಸಂವಿಧಾನ ರಚನೆಗೆ ತೆಗೆದುಕೊಂಡ ಸಮಯ

ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರಿಗೆ ಸಂವಿಧಾನವನ್ನು ರೂಪುಗೊಳಿಸಲು ಸುಮಾರು 2 ವರ್ಷ, 11 ತಿಂಗಳು ಮತ್ತು 18 ದಿನಗಳೇ ಬೇಕಾಯಿತು.

ಆ ಸಮಯದಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಕಾನ್ಸ್ಟಿಟ್ಯುಯೆಂಟ್ ಅಸಂಬ್ಲಿ ಸಂವಿಧಾನವನ್ನು ರೂಪುಗೊಳಿಸಲು ಒಂದು ಡ್ರಾಫ್ಟಿಂಗ್ ಕಮಿಟಿಯನ್ನು ಏರ್ಪಾಡು ಮಾಡಿತು. ಈ ಕಮಿಟಿ ಸಂವಿಧಾನದ ಕರಡನ್ನು ಸಿದ್ಧಪಡಿಸಲು ಹಲವಾರು ಸಭೆಗಳನ್ನು ಕರೆದು, ಅನೇಕ ಮಜಲುಗಳನ್ನು ದಾಟಿ ಸರಿ ಸುಮಾರು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು. ಇನ್ನೊಬ್ಬ ಪ್ರವಾಸಿಗರಾದ ಪಾರ್ಥ ಸಬರ್ವಲ್ ಹೇಳುವ ಪ್ರಕಾರ ಹೊಸ ದೆಹಲಿ ಭಾರತದ ರಾಜಧಾನಿಯಾಗಿದ್ದು, ಭಾರತದ ರಾಷ್ಟ್ರಪತಿಗಳು ಮತ್ತು ನಮ್ಮ ಪ್ರಧಾನಿಗಳು ಇಲ್ಲೇ ನೆಲೆಸುತ್ತಾರೆ. ದೆಹಲಿಯಲ್ಲಿ ಎಲ್ಲಾ ವರ್ಗದ ಜನರು ವಾಸವಿದ್ದು, ಅನೇಕ ಗುರುದ್ವಾರಗಳು, ದೇವ ಮಂದಿರಗಳು, ಮಸೀದಿಗಳು ಮತ್ತು ಕ್ರೈಸ್ತ ಧರ್ಮದ ಚರ್ಚೆಗಳು ಇಲ್ಲಿವೆ. ಇಲ್ಲಿನ ಬಹಳಷ್ಟು ಜನರು ಪಂಜಾಬಿ ಭಾಷೆಯನ್ನು ಮಾತನಾಡುತ್ತಾರೆ. ಚಾಂದಿನಿ ಚೌಕ್ ನಿಜಕ್ಕೂ ಒಳ್ಳೆಯ ಆಹಾರಕ್ಕೆ ಪ್ರಸಿದ್ಧಿ ಪಡೆದಿದೆ, ಬಹಳಷ್ಟು ಹೋಲ್ಸೇಲ್ ಮಾರುಕಟ್ಟೆಗಳಾದ ಸದರ್ ಬಜಾರ್ ಮತ್ತು ಗಾಂಧಿನಗರ ಕೂಡ ದೆಹಲಿಯಲ್ಲಿ ಇವೆ. ಒಟ್ಟಿನಲ್ಲಿ ಹೇಳುವುದಾದರೆ ಹೊಸ ದೆಹಲಿ ಪ್ರವಾಸಿಗರಿಗೆ ಉಳಿದುಕೊಳ್ಳಲು ಒಳ್ಳೆಯ ತಾಣವಾಗಿದೆ.

4. ಮೊದಲ ಗಣರಾಜ್ಯೋತ್ಸವ ಮೆರವಣಿಗೆ

4. ಮೊದಲ ಗಣರಾಜ್ಯೋತ್ಸವ ಮೆರವಣಿಗೆ

ರಾಜಪಥದಲ್ಲಿ ಮೊದಲನೆಯ ಗಣರಾಜ್ಯೋತ್ಸವ ದಿನದ ಮೆರವಣಿಗೆಯನ್ನು 1955 ರಲ್ಲಿ ನಡೆಸಲಾಯಿತು.

ಐತಿಹಾಸಿಕ ರಾಜಪಥ ಜನವರಿ 26ರ ಪೆರೇಡಿಗೆ ಉದಾಹರಣೆಯಾಗಿದೆ. ಮೊದಲನೆಯ ಗಣರಾಜ್ಯೋತ್ಸವದ ಪೆರೇಡನ್ನು ಹೊಸ ದೆಹಲಿಯಲ್ಲಿ 1950 ರಲ್ಲಿ ನಡೆಸಲಾಯಿತು. ಆ ಸಮಯದಲ್ಲಿ ರಾಜೇಂದ್ರ ಪ್ರಸಾದ್ ರವರು ರಾಷ್ಟ್ರಪತಿಗಳಾಗಿದ್ದರು.

ನಿಶಾಂತ್ ಭಾರತಿ ಎಂಬ ಪ್ರವಾಸಿಗರು ಹೇಳುವ ಪ್ರಕಾರ, " ಭಾರತೀಯ ಪ್ರದೇಶದಲ್ಲಿ ನವದೆಹಲಿ ಕೂಡ ಒಂದು. ಇದು ತನ್ನ ಹಳೆಯ ಸ್ಮಾರಕಗಳಾದ ಕೆಂಪು ಕೋಟೆ, ವಿಧಾನಸೌಧ ಕಟ್ಟಡ, ಇಂಡಿಯಾ ಗೇಟ್, ಜಂತರ್ ಮಂತರ್ ರಾಷ್ಟ್ರಪತಿಗಳ ನಿವಾಸ ಇತ್ಯಾದಿಗಳಿಗೆ ಬಹಳ ಪ್ರಸಿದ್ಧಿ ಪಡೆದಿದೆ.

ಅದರಲ್ಲೂ ಅಕ್ಬರನ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಕೆಂಪು ಕೋಟೆ ಇಡೀ ದೇಶದಲ್ಲೇ ಬಹಳ ಹಳೆಯ ಸ್ಮಾರಕ ಎಂದು ಪ್ರಸಿದ್ಧಿ ಪಡೆದಿದೆ. ದೆಹಲಿಯಲ್ಲಿ ಬಹಳ ದೊಡ್ಡದಾದ ಕ್ರಿಕೆಟ್ ಮೈದಾನ ಇದೆ. ಇದಕ್ಕೆ ಫಿರೋಜ್ ಶಾ ಕೋಟ್ಲಾ ಕ್ರಿಕೆಟ್ ಗ್ರೌಂಡ್ ಎಂದು ಕರೆಯುತ್ತಾರೆ. ನಾನಂತೂ ಅಲ್ಲಿನ ಪಾನಿಪುರಿ ಮತ್ತು ಇನ್ನಿತರ ರಸ್ತೆ ಬದಿಯ ಆಹಾರಗಳನ್ನು ಬಹಳ ಇಷ್ಟಪಟ್ಟು ಸೇವಿಸಿದೆ. ಬಹಳಷ್ಟು ರೆಸ್ಟೋರೆಂಟ್ ಮತ್ತು ಕೆಫೆಗಳಿಗೆ ಭೇಟಿ ಕೊಟ್ಟು ತುಂಬಾ ಖುಷಿಯಾದೆ. ಇಲ್ಲಿನ ರೆಸ್ಟೋರೆಂಟ್ ಗಳು ನಿಜಕ್ಕೂ ಅದ್ಭುತ. ಏಕೆಂದರೆ ಪ್ರಪಂಚದ ಮೂಲೆ ಮೂಲೆಗಳ ಪ್ರಸಿದ್ಧ ಅಡುಗೆಗಳನ್ನು ಇಲ್ಲಿನ ಒಂದೇ ರೆಸ್ಟೋರೆಂಟ್ ನಲ್ಲಿ ಸವಿಯಬಹುದು.

ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಪ್ರವಾಸ ನಿಜಕ್ಕೂ ನೆನಪಿನಲ್ಲಿ ಇಡಬಹುದಾಂತಹ ಪ್ರವಾಸವಾಗಿತ್ತು. ನವದೆಹಲಿಯ ಒಂದೊಂದು ಸ್ಥಳವನ್ನು ಸಹ ಬಹಳ ಇಷ್ಟಪಟ್ಟು ನೋಡಿದೆವು. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ಕೊಡಿ ಎಂದು ನಾನು ನನ್ನ ಪ್ರವಾಸಿಗ ಗೆಳೆಯರಿಗೆ ವಿನಂತಿ ಮಾಡುತ್ತೇನೆ. ರೈಲಿನಲ್ಲಿ ದೆಹಲಿಗೆ ಬಂದರೆ ಸುತ್ತಮುತ್ತಲಿನ ನಯನ ಮನೋಹರವಾದ ಸಸ್ಯರಾಶಿಗಳು ನಿಮ್ಮ ಕಣ್ಣು ಕುಕ್ಕುತ್ತವೆ. ಆದರೆ ರೈನ್ ಕೋಟ್, ಶೂ ಛತ್ರಿ ಇತ್ಯಾದಿಗಳನ್ನು ತರಲು ಮರೆಯಬೇಡಿ.

5. 21 ಗನ್ನುಗಳ ಗೌರವ ಅಭಿನಂದನೆಯ ಹಿಂದಿನ ರಹಸ್ಯ : -

5. 21 ಗನ್ನುಗಳ ಗೌರವ ಅಭಿನಂದನೆಯ ಹಿಂದಿನ ರಹಸ್ಯ : -

ಭಾರತದ ರಾಷ್ಟ್ರಪತಿಗಳು ತಿರಂಗ ರಾಷ್ಟ್ರ ಧ್ವಜವನ್ನು ಹಾರಿಸುವ ಸಮಯದಲ್ಲಿ ನೌಕಾದಳ ಮತ್ತು ಸೇನಾದಳ 21 ಗನ್ನುಗಳಿಂದ ಮದ್ದು ಹಾರಿಸಿ ಅಭಿನಂದನೆ ಸಲ್ಲಿಸುತ್ತಾರೆ. ಇದು ನೋಡಲು ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ ಮತ್ತು ಮೈ ರೋಮಾಂಚನಗೊಳ್ಳುತ್ತದೆ.

ಹೈದರಾಬಾದ್ ನ ಪ್ರವಾಸಿಗರಾದ ದೀಪಂಶು ಮಲಿಕ್ ಅವರು ಹೀಗೆ ಹೇಳುತ್ತಾರೆ. " ನವದೆಹಲಿ ಭಾರತ ರಾಷ್ಟ್ರದ ರಾಜಧಾನಿಯಾಗಿರುವುದರಿಂದ ಪ್ರತಿಯೊಬ್ಬ ಭಾರತೀಯ ಪ್ರಜೆ ನನ್ನ ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ಕೊಡಬೇಕು. ದೆಹಲಿ ತನ್ನ ವೈವಿಧ್ಯಮಯ ಆಹಾರದ ರುಚಿಗಳಿಗೆ ಬಹಳ ಪ್ರಸಿದ್ಧಿ. ಇಲ್ಲಿನ ರಸ್ತೆ ಬದಿಯ ತಿಂಡಿಗಳು ಬಹಳಷ್ಟು ರುಚಿ ಕೊಡುತ್ತದೆ. ಪ್ರವಾಸಿಗರು ಯಾವುದೇ ಕಾರಣಕ್ಕೂ ಚಾಂದಿನಿ ಚೌಕ್, ಹಳೆಯ ಕೋಟೆ ಇತ್ಯಾದಿಗಳಿಗೆ ಮಿಸ್ ಮಾಡದೆ ಹೋಗಬೇಕು.

ಎಲ್ಲಾ ಪ್ರವಾಸಿಗರಿಗೆ ನನ್ನದೊಂದು ವಿನಂತಿ ಎಂದರೆ ಇಲ್ಲಿ ನೀವು ಬಹಳಷ್ಟು ಜಾಗರೂಕತೆಯಿಂದ ಇರಬೇಕು. ಏಕೆಂದರೆ ದೆಹಲಿ ಈಗಾಗಲೇ ಜನರ ಸುರಕ್ಷತೆಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೂ ಇಲ್ಲಿನ ಆಹಾರಗಳ ರುಚಿ ಮರೆಯುವಂತಿಲ್ಲ. ನನ್ನ ಪ್ರಕಾರ ಹೇಳುವುದಾದರೆ ರಾಷ್ಟ್ರರಾಜಧಾನಿಯಲ್ಲಿ ತಯಾರಾಗುವ ಅಡುಗೆಗೆ ಸರಿಸಾಟಿ ಮತ್ತೊಂದಿಲ್ಲ. ಯಾವುದೇ ಅನುಮಾನವಿಲ್ಲದೆ ಪ್ರವಾಸಿಗರು ಇಲ್ಲಿಗೆ ಬರಲೇಬೇಕು."

English summary

Interesting Facts About Republic Day Every Indian Should Know

Every year we celebrate Republic Day On January 26, But Do you know why we celebrate on particulate day, To know the interesting facts about Republic day Read on.
X
Desktop Bottom Promotion