For Quick Alerts
ALLOW NOTIFICATIONS  
For Daily Alerts

ಯಾವ್ಯಾವ ರಾಶಿಚಕ್ರದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಟಾಪರ್ ಆಗಿರುತ್ತಾರೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

|

ಜನ್ಮ ಜಾತಕ ಯಾವ ರೀತಿಯಲ್ಲಿ ಇರುತ್ತದೆಯೋ ಅದರಂತೆ ಪ್ರತಿಯೊಬ್ಬ ವ್ಯಕ್ತಿಯ ಜೀವನವು ರೂಪುವುಗೊಳ್ಳುವುದು. ಜನ್ಮ ಫಲವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಯಾಕೆಂದರೆ ಎಷ್ಟೇ ಪ್ರಯತ್ನಪಟ್ಟರೂ ಕೆಲವರಿಗೆ ತಮ್ಮ ಜನ್ಮಫಲಕ್ಕೆ ಅನುಗುಣವಾಗಿಯೇ ಸುಖ, ಸಂಪತ್ತು ಸಿಗುವುದು. ಇದಕ್ಕಿಂತ ಕಿಂಚಿತ್ತು ಕಡಿಮೆಯೂ ಇಲ್ಲ, ಹೆಚ್ಚು ಇಲ್ಲ. ನಮ್ಮ ಜೀವನದಲ್ಲಿ ಮುಂದೆ ನಾವು ಏನು ಆಗಬಹುದು, ಯಾವ ರೀತಿಯಲ್ಲಿ ಮುನ್ನಡೆಯಬಹುದು ಎನ್ನುವುದು ಕೂಡ ಜನ್ಮ ಕುಂಡಲಿಯಲ್ಲಿ ಇರುವುದು. ವಿದ್ಯೆ, ವೃತ್ತಿ. ವೈವಾಹಿಕ ಜೀವನ ಹೀಗೆ ಪ್ರತಿಯೊಂದು ಕೂಡ ನಿಮ್ಮ ಜನ್ಮ ಕುಂಡಲಿಗೆ ಅನುಗುಣವಾಗಿ ಇರುವುದು.

ಕೆಲವರಿಗೆ ಉನ್ನತ ಶಿಕ್ಷಣ ಸಿಕ್ಕಿದರೆ, ಇನ್ನು ಕೆಲವರು ಕಡಿಮೆ ಶಿಕ್ಷಣ ಪಡೆದರೂ ದೊಡ್ಡ ಮಟ್ಟದ ಉದ್ಯಮಿಯಾಗುವರು. ಇಂತಹ ಹಲವಾರು ಉದಾಹರಣೆಗಳು ಇವೆ. ಈ ಲೇಖನದಲ್ಲಿ ನಾವು ಇಂದು ಶಿಕ್ಷಣದ ಬಗ್ಗೆ ಹೇಳಲಿದ್ದೇವೆ. ಪರೀಕ್ಷೆಗಳು ಹತ್ತಿರ ಬರುತ್ತಿರುವಂತೆ ಶಿಕ್ಷಣದ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಪರೀಕ್ಷೆಗೆ ಓದಿಕೊಳ್ಳಲು ತುಂಬಾ ವ್ಯಸ್ತವಾಗಿರುವಂತಹ ವಿದ್ಯಾರ್ಥಿಗಳು ಕೂಡ ಇಲ್ಲಿ ಸ್ವಲ್ಪ ಸಮಯ ಕೊಟ್ಟರೆ ಅವರಿಗೆ ಅದರಿಂದ ಹೆಚ್ಚಿನ ಲಾಭವಾಗುವುದು. ರಾಶಿ ಚಕ್ರಕ್ಕೆ ಅನುಗುಣವಾಗಿ ನೀವು ಯಾವ ರೀತಿಯ ವಿದ್ಯಾರ್ಥಿಯಾಗಿರಲಿದ್ದೀರಿ ಎಂದು ತಿಳಿಯುವ....

ಮೇಷ

ಮೇಷ

ಬೆಂಕಿ ಹೆಚ್ಚಿ ಹತ್ತಿಕೊಂಡಷ್ಟು ಅದು ಹಬ್ಬುತ್ತಲೇ ಹೋಗುವುದು. ನೀವು ಸರಿಯಾಗಿಯೇ ತಿಳಿದುಕೊಂಡಿದ್ದೀರಿ. ಅಗ್ನಿ ಚಿಹ್ನೆಯಾಗಿರುವಂತಹ ಮೇಷ ರಾಶಿಯವರು ತಮ್ಮ ಶಿಕ್ಷಣದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳಬಹುದು. ಯಶಸ್ಸಿನ ಆಲೋಚನೆಯು ನಿಮ್ಮಲ್ಲಿ ಇನ್ನಷ್ಟು ಉನ್ನತವಾಗಿ ಕೆಲಸ ಮಾಡುವಂತೆ ಪ್ರೇರಪಣೆ ನೀಡುವುದು. ಇದರಿಂದಾಗಿ ನೀವು ಮತ್ತಷ್ಟು ಉತ್ತಮವಾಗುವಿರಿ. ವರ್ಷವು ಅಂತ್ಯವಾಗುತ್ತಲಿರುವಂತೆ ಮೇಷ ರಾಶಿಯವರಿಗೆ ಇನ್ನಷ್ಟು ಪ್ರಶಸ್ತಿಗಳು ಸಿಗಲಿದೆ. ಇವರು ಸಾಧಕರು ಎಂದು ಜನರಿಗೆ ತಿಳಿಯಬೇಕೆಂದು ಅವರು ಬಯಸುವರು.

ವೃಷಭ

ವೃಷಭ

ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳುವುದರ ಮಹತ್ವ ಏನೆಂದು ಇವರಿಗೆ ತಿಳಿದಿದೆ. ಆದರೆ ಈ ಸತ್ಯವು ಅವರ ಜೀವನದ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ. ವೃಷಭ ರಾಶಿಯವರು ತುಂಬಾ ಪ್ರಾಮಾಣಿಕವಾಗಿ ಇರುವರು. ಇವರು ಬೇರೆಯವರಿಗೆ ಉಪದೇಶ ಮಾಡುವ ಮೊದಲು ತಮಗೆ ತಾವೇ ಉಪದೇಶ ಮಾಡಿಕೊಳ್ಳುವರು. ಹೆಚ್ಚುವರಿ ಅಂಕಗಳನ್ನು ಪಡೆಯಲು ಅಧಿಕ ಸಮಯ ಮೀಸಲಿಡಬೇಕೆಂದರೂ ಇವರು ಅದನ್ನು ತುಂಬಾ ಸುಲಭವಾಗಿ ಮಾಡುವರು. ಪ್ರತಿನಿತ್ಯ ಮನೆಗೆಲಸವನ್ನು ಮುಗಿಸುವುದು ಮತ್ತು ಸರಿಯಾದ ಸಮಯದಲ್ಲಿ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು ಇವರ ಗುಣಗಳು. ಇವರು ಸರಾಸರಿ ಪ್ರದರ್ಶನ ನೀಡುವವರು ಎಂದು ಆಯ್ಕೆ ಮಾಡಬಹುದು. ಅದಾಗ್ಯೂ, ಪರೀಕ್ಷೆ ಸಮಯ ಬಂದಾಗ ಇವರು ತಮ್ಮ ಸ್ನೇಹಿತರನ್ನು ಕೂಡ ದೂರವಿಡುವರು.

Most Read: ಈ 5 ರಾಶಿಚಕ್ರದವರು 'ಐ ಲವ್ ಯು' ಅಂತ ಹೇಳಲು ತುಂಬಾನೇ ಕಷ್ಟ ಪಡುತ್ತಾರಂತೆ!

ಮಿಥುನ

ಮಿಥುನ

ಬೇರೆಯವರು ಏನು ಬಯಸುತ್ತಾರೆಯಾ ಅದನ್ನು ಮಾಡಲು ಇವರಿಗೆ ಇಷ್ಟವಿರುವುದಿಲ್ಲ. ಇವರು ತಮ್ಮ ಮನಸ್ಸಿಗೆ ತೋಚಿದ್ದನ್ನು ಮಾಡುವರು. ಪುಸ್ತಕ, ಪ್ರಾಜೆಕ್ಟ್ ಮತ್ತು ಅಸೈನ್ಮೆಂಟ್ ಗಳ ಒತ್ತಡವು ಮತ್ತಷ್ಟು ಒತ್ತಡವನ್ನು ಇವರ ಮೇಲೆ ಹಾಕುವುದು. ವಿದ್ಯಾರ್ಥಿಯಾಗಿ ಇವರು ಇದೆಲ್ಲವನ್ನು ತುಂಬಾ ದ್ವೇಷ ಮಾಡುವರು. ಪ್ರಾಜೆಕ್ಟ್ ಮಾಡಿ ಅದನ್ನು ನೀಡುವುದು ಇವರಿಗೆ ಯಾವುದೇ ಆಸಕ್ತಿ ಮೂಡಿಸುವುದಿಲ್ಲ, ಬದಲಿಗೆ ಇವರಿಗೆ ಅದರಿಂದ ತುಂಬಾ ಕಿರಿಕಿರಿ ಆಗುತ್ತದೆ. ಭವಿಷ್ಯವನ್ನು ರೂಪಿಸುವಂತಹ ವಿಷಯದಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇರುವುದು. ಬೇರೆ ಎಲ್ಲವನ್ನು ಇವರು ಸ್ನೇಹಿತರಿಂದ ನಕಲು ಮಾಡಿಕೊಳ್ಳುವರು.

ಕರ್ಕಾಟಕ

ಕರ್ಕಾಟಕ

ಕರ್ಕಾಟಕ ರಾಶಿಯವರು ತರಗತಿಯಲ್ಲಿ ಇರುವುದು ದೊಡ್ಡ ಮಟ್ಟಿನ ಸಂಭ್ರಮ. ಹಿಂದಿನ ಬೆಂಚಿನಲ್ಲಿ ಕುಳಿತುಕೊಂಡು, ಎಲ್ಲವನ್ನು ನೋಡುತ್ತಾ, ಸಮಯದಲ್ಲಿ ಅಸೈನ್ಮೆಂಟ್ ಗಳನ್ನು ಪೂರೈಸುವ ವಿದ್ಯಾರ್ಥಿ ಬಗ್ಗೆ ನೆನಪಿದೆಯಾ? ಹೆಚ್ಚಿನ ವಿದ್ಯಾರ್ಥಿಗಳು ಪ್ರಶ್ನೆ ಕೇಳಿದ ವೇಳೆ ತಮ್ಮ ಕೈ ಮೇಲೆತ್ತುವರು. ಆದರೆ ಕರ್ಕಾಟಕ ರಾಶಿಯವರು ಮಾತ್ರ ತಮ್ಮಲ್ಲಿ ಕೇಳಿದಾಗ ಮಾತ್ರ ಉತ್ತರ ಹೇಳುವರು. ಅದು ಕೂಡ ಬೇರೆಯವರು ಹೇಳಿರುವುದಕ್ಕಿಂತಲೂ ತುಂಬಾ ಒಳ್ಳೆಯ ಉತ್ತರ. ತರಗತಿಯಲ್ಲಿ ಯಾವಾಗಲೂ ಇವರು ತಮಾಷೆ ಮಾಡುತ್ತಾ ಇರುತ್ತಾರೆ. ಅದೇ ರೀತಿಯಾಗಿ ಇವರು ಸರಾಸರಿ ವಿದ್ಯಾರ್ಥಿಯಾಗಿರುವುದು ಇವರೇ ಮಾಡಿಕೊಂಡ ಆಯ್ಕೆ.

ಸಿಂಹ

ಸಿಂಹ

ಯಾವಾಗಲೂ ಖುಷಿ ಹಾಗೂ ಸಂತೋಷವಾಗಿ ಇರುವುದು ಸಿಂಹ ರಾಶಿಯವರ ಗುಣ. ಇವರು ತುಂಬಾ ಸಂತೋಷ ಹಾಗೂ ಅದೃಷ್ಟವಂತ ವ್ಯಕ್ತಿಗಳು . ಇವರು ತಾವು ಕೇಳುವುದನ್ನೆಲ್ಲವನ್ನು ನಂಬುವಂತಹ ವ್ಯಕ್ತಿಗಳು ಅಲ್ಲ. ಜೀವನದಲ್ಲಿ ಇವರು ಯಾವಾಗಲೂ ಜೀವಕಳೆ ತುಂಬುವಂತೆ ತರಗತಿಯಲ್ಲಿ ಕೂಡ ಹೀಗೆ ಮಾಡುವರು. ತರಗತಿ ಎನ್ನುವುದು ಇವರಿಗೆ ಕಲಿಯುವುದಕ್ಕಿಂತಲೂ ಹೆಚ್ಚಿನದ್ದು. ಇವರು ತುಂಬಾ ಅನುಭವ ಹಂಚಿಕೊಳ್ಳುವರು. ಇವರು ಒಳ್ಳೆಯ ರೀತಿಯಲ್ಲಿ ಕಲಿಯುವರು. ಆದರೆ ಒಂದೇ ವಿಷಯದಲ್ಲಿ ಬೇಗನೆ ಬೇಸರಗೊಳ್ಳುವರು.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರು ಯಾವಾಗಲೂ ಕ್ಯಾಂಪಸ್ ನಲ್ಲಿ ನಾಯಕರಾಗಿರುವರು. ಇವರು ಕೂಡ ಮೇಷ ರಾಶಿಯವರಂತೆ ಕೆಲಸವನ್ನು ಮಾಡುವವರು. ಒಂದು ಸಾಧಣೆಯು ಮತ್ತೊಂದು ಸಾಧನೆ ಮಾಡಲು ಸ್ಪೂರ್ತಿ ಎಂದು ನಂಬಿರುವರು. ಜೀವನದ ಬಗ್ಗೆ ಇವರು ತುಂಬಾ ಸರಳವಾಗಿ ಇದ್ದರೂ ಒಂದು ನಿಗದಿತ ದಿನಚರಿ ಪಾಲಿಸುವರು. ಇವರ ನಡವಳಿಕೆ, ಮನೋಭಾವ ಅಥವಾ ಮನಸ್ಥಿತಿಯು ಬದಲಾಗಬಹುದು. ಆದರೆ ಇವರ ಅಗ್ರಸ್ಥಾನ ಮಾತ್ರ ಬದಲಾಗದು. ಅದಾಗ್ಯೂ, ಇವರು ಒಂದು ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡು ಬಳಿಕ ಇದರಲ್ಲಿ ದೊಡ್ಡ ಸಾಧನೆ ಮಾಡುವರು.

ತುಲಾ

ತುಲಾ

ಬಹುಕಾರ್ಯ ಮಾಡುವವರು, ಹೌದು, ತುಲಾ ರಾಶಿಯವರನ್ನು ನೀವು ಈ ರೀತಿಯಾಗಿ ಬಣ್ಣಿಸಬಹುದು. ಇವರು ನೂರಾರು ಕೆಲಸಗಳನ್ನು ಮಾಡಬಹುದು ಮತ್ತು ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ರೀತಿಯಲ್ಲಿ ತಮ್ಮ ಮನೆಗೆಲಸ ಪೂರ್ತಿ ಮಾಡುವರು. ಇವರು ಭಾಗವಹಿಸುವಂತಹ ಇನ್ನಿತರ ಕ್ಷೇತ್ರಗಳೆಂದರೆ ಅದು ಪಠ್ಯೇತರ ಚಟುವಟಿಕೆಗಳು. ಇವರು ಶೈಕ್ಷಣಿಕವಾಗಿ ದೊಡ್ಡ ಸಾಧನೆ ಮಾಡುವ ಸಾಮರ್ಥ್ಯ ಹೊಂದಿರುವರು. ಆದರೆ ಸರಾಸರಿಯಾಗಿ ಉಳಿದುಬಿಡುವರು.

Most Read: ದೇಹದ ಈ ಅಂಗದ ಮೇಲೆ ಮಚ್ಚೆ ಇದ್ದರೆ, ಲೈಂಗಿಕತೆಯ ವಿಷಯದಲ್ಲಿ ಅಂದುಕೊಂಡಿರುವುದಕ್ಕಿಂತಲೂ ಹೆಚ್ಚಿನ ಅದೃಷ್ಟವಂತರು ಎಂದರ್ಥ

ವೃಶ್ಚಿಕ

ವೃಶ್ಚಿಕ

ರಹಸ್ಯವಾಗಿ ಅಂಕ ಗಳಿಸುವವರು. ವೃಶ್ಚಿಕ ರಾಶಿಯವರು ಪರೀಕ್ಷೆ ಬರೆದ ಬಳಿಕ ನಾನು ಅನುತ್ತೀರ್ಣನಾಗುತ್ತೇನೆ ಎಂದು ಹೇಳಬಹುದು. ಆದರೆ ಫಲಿತಾಂಶ ಬಂದಾಗ ಅವರು ಹೆಚ್ಚಿನ ಅಂಕ ಗಳಿಸಿರುವರು. ಇವರು ಎಲ್ಲಾ ರೀತಿಯಲ್ಲಿ ತಯಾರಿ ಮಾಡಿಕೊಂಡಿರುವರು ಮತ್ತು ನಾನು ಏನೂ ತಯಾರಿ ಮಾಡಿಲ್ಲವೆಂದು ಹೇಳಬಹುದು. ಬೇರೆಯವರ ಜತೆಗೆ ಸ್ಪರ್ಧಿಸಲು ಇವರು ಈ ತಂತ್ರ ಬಳಸುವರು. ಸ್ಪರ್ಧಿಗಳು ಇದನ್ನು ಹೇಗೆ ತಿಳಿಯಬೇಕು? ವೃಶ್ಚಿಕ ರಾಶಿಯವರು ತುಂಬಾ ಯಶಸ್ವಿ, ವೃತ್ತಿಪರ ಹಾಗೂ ಸ್ಪರ್ಧಾತ್ಮಕವಾಗಿರುವರು. ಇವರು ಶಿಕ್ಷಕರಿಗೂ ತುಂಬಾ ಪ್ರಿಯರಾಗಿರುವರು.

ಧನು

ಧನು

ಧನು ರಾಶಿಯವರಲ್ಲಿ ಪ್ರತಿಷ್ಠೆಯ ಸಾಧನೆಗೆ ಅಗ್ನಿಯು ಪ್ರಜ್ವಲಿಸುವುದು ಮಾತ್ರವಲ್ಲದೆ, ಅವರು ಮನರಂಜನೆ ಮತ್ತು ಸಾಹಸಕ್ಕಾಗಿಯೂ ಇದನ್ನು ಮೀಸಲಿಡುವರು. ಇವರು ಹೆಚ್ಚು ಅಂಕಗಳನ್ನು ಪಡೆಯುವರು. ಇದಕ್ಕಾಗಿ ಇವರು ನಕಲು ಮಾಡಲು ಚೀಟಿ ಕೂಡ ಕೊಂಡು ಹೋಗುವರು. ಇವರು ರಾತ್ರಿಯಿಡಿ ನಿದ್ರೆ ಬಿಟ್ಟು ಓದಿಕೊಂಡು ತುಂಬಾ ಕಠಿಣ ಪರಿಶ್ರಮ ಪಡುವರು. ಇವರು ತುಂಬಾ ಒಳ್ಳೆಯ ರೀತಿಯಲ್ಲಿ ಅಂಕಗಳನ್ನು ಪಡೆಯಲು ಬಯಸುವರು. ಇವರು ತುಂಬಾ ವೇಗ ಹಾಗೂ ಚಾಣಾಕ್ಷವಾಗಿ ಕಲಿಯುವರು. ಮನೆಗೆಲಸದ ವಿಚಾರಕ್ಕೆ ಬಂದರೆ ಇವರು ಅಷ್ಟು ಸಮಯ ಪಾಲನೆ ಮಾಡುವುದಿಲ್ಲ. ಕೆಲವೊಂದು ಸಲ ತರಗತಿಗೆ ಗೈರು ಹಾಜರಾಗಬಹುದು. ಆದರೆ ಪರೀಕ್ಷೆಯಲ್ಲಿ ಅಂಕ ಹೇಗೆ ಗಳಿಸುವುದು ಎಂದು ಇವರಿಗೆ ತಿಳಿದಿರುವುದು.

ಮಕರ

ಮಕರ

ಇಷ್ಟು ಗಂಭೀರವಾಗಿ ಇರುವುದು ಯಾಕೆ? ಪ್ರತಿನಿತ್ಯ ತರಗತಿ ಇರುವುದು, ಕಲಿಯಲು ಇರುವುದು ಮತ್ತು ಪ್ರತಿನಿತ್ಯವು ಆಟವಾಡಬಹುದು. ಆರೋಗ್ಯಕರ ದೇಹವಿದ್ದರೆ ಆಗ ಮನಸ್ಸು ಆರೋಗ್ಯಕರವಾಗಿರುವುದು. ಈ ಎಲ್ಲಾ ಸಿದ್ಧಾಂತಗಳು ಸಂಭಾವಿತ ಅಥವಾ ಮಹಿಳಾ ಧೋರಣೆಯಿಂದ ಜೊತೆಗೂಡಿರುವುದು. ಅದೇ ರೀತಿಯಾಗಿ ಮಕರ ರಾಶಿಯ ವಿದ್ಯಾರ್ಥಿ ಕೂಡ. ಇವರು ಒಳ್ಳೆಯ ರೀತಿಯಲ್ಲಿ ಕಲಿತು, ಹೆಚ್ಚಿನ ಅಂಕ ಪಡೆಯುವರು. ದೊಡ್ಡವರಾದ ಬಳಿಕ ಯಶಸ್ಸನ್ನು ಪಡೆಯಬೇಕು ಎಂದು ಇವರು ಬಾಲ್ಯದಿಂದಲೇ ಕನಸನ್ನು ಕಟ್ಟಿಕೊಂಡಿರುವರು. ಇವರು ಕಲಿಯುವಷ್ಟೇ ಆಟವಾಡುವರು. ಯಾಕೆಂದರೆ ಫಿಟ್ ಆಗಿ ಇರುವುದು ಇವರ ಉದ್ದೇಶ. ಇವರು ತಮಾಷೆ ಮಾಡುವುದು ಕಡಿಮೆಯಾದರೂ ಒಳ್ಳೆಯ ರೀತಿಯಿಂದ ತಮಾಷೆ ಮಾಡುವರು. ಇವರು ಯಾವತ್ತಿದ್ದರೂ ಶಿಕ್ಷಕರಿಗೆ ತುಂಬಾ ಪ್ರಿಯರಾಗಿರುವರು.

Most Read: ಈ ದೇಶಗಳಲ್ಲಿ ಮದುವೆಯಾಗಲು ಪುರುಷರಿಗೆ ಹೆಣ್ಣು ಸಿಗುವುದು ತುಂಬಾ ಕಷ್ಟ!

ಕುಂಭ

ಕುಂಭ

ಇವರ ಮನಸ್ಸು ಒಂದು ಸ್ಥಳದಲ್ಲಿ ಇರುವುದೇ ಇಲ್ಲ. ಆದರೆ ಆಲೋಚನೆಗಳು ಬರುತ್ತಲೇ ಇರುವುದು. ತರಗತಿಯಲ್ಲಿ ಇರುವಾಗ ಕೂಡ ಇವರ ಮನಸ್ಸು ಅಲ್ಲೇ ಇದೆ ಎಂದು ಹೇಳಲು ಆಗದು. ಇದರಿಂದ ದೈಹಿಕವಾಗಿ ಇವರು ತರಗತಿಯಲ್ಲಿ ಹಾಜರಿರುವರು, ಆದರೆ ಮಾನಸಿಕವಾಗಿ ಅಲ್ಲಿ ಇರುವುದಿಲ್ಲ. ಕುಂಭ ರಾಶಿಯವರು ಹೆಚ್ಚಿನ ಸಮಯದಲ್ಲಿ ಹೀಗೆ ಮಾಡುವರು. ಇದಕ್ಕೆ ಹೊರತಾಗಿಯೂ ಇವರು ಒಳ್ಳೆಯ ಅಂಕ ಗಳಿಸುವರು ಮತ್ತು ಇದರಿಂದಾಗಿ ಶಿಕ್ಷಕರಿಗೂ ಇವರು ಮೆಚ್ಚುಗೆ. ಕುಂಭ ರಾಶಿಯವರು ಯಾವಾಗಲೂ ಶಿಕ್ಷಕರ ಒಳ್ಳೆಯ ಪುಸ್ತಕದಲ್ಲಿ ಜಾಗ ಪಡೆಯುವರು.

ಮೀನ

ಮೀನ

ಮೀನ ರಾಶಿಯವರಿಗೆ ಮನಸ್ಸು ಎನ್ನುವುದು ತುಂಬಾ ಶಕ್ತಿಶಾಲಿ ಅಸ್ತ್ರವಾಗಿರುವುದು. ಭಾವನೆಗಳು ಇವರ ಬುದ್ಧಿ ಮೇಲೆ ಪರಿಣಾಮ ಬೀರಲು ಇವರು ಅವಕಾಶ ನೀಡುವರು. ಇವರು ಯಾವುದೇ ಪರೀಕ್ಷೆ ಉತ್ತೀರ್ಣರಾದರೆ ಆಗ ಶಿಕ್ಷಕರು ಒಳ್ಳೆಯದಾಗಿದ್ದರು ಅಥವಾ ಪರೀಕ್ಷೆ ಸುಲಭವಾಗಿತ್ತು ಅಥವಾ ಅದೃಷ್ಟವು ಇವರ ಪರವಾಗಿತ್ತು. ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಲು ವಿಫಲರಾದರೆ ಆಗ ಇವರು ತಮಗೆ ತಾವೇ ಶಪಿಸಿಕೊಳ್ಳುವರು. ಸರಿಯಾಗಿ ಪ್ರಯತ್ನಿಸಿಲ್ಲವೆಂದು ಭಾವಿಸುವರು. ಭಾವನೆಗಳು ಇವರ ಮೇಲೇರಿ ಹೋಗುವುದು. ಮೀನ ರಾಶಿಯವರು ಏನು ಓದುತ್ತಾರೆಯಾ ಮತ್ತು ಬರೆಯುತ್ತಾರೆಯಾ ಅದಕ್ಕೆ ಖಂಡಿತವಾಗಿಯೂ ಒಳ್ಳೆಯ ಅಂಕಗಳನ್ನು ಪಡೆಯುವರು. ಮೀನ ರಾಶಿಯ ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ಹೀಗಿದ್ದರೆ ಯಶಸ್ಸು ಖಂಡಿತ ಸಿಗುವುದು.

English summary

The Kind Of Student You Are Based On Your Zodiac

Are you the topper in the class? Or you prefer scoring just average? Or is it that you just like to take up the assignments that you are intrested in? Well, the exams are around the corner and preparations need to be in full swing. Amidst all that astrology can tell you what kind of a student you are based on your zodiac sign, just for a break.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more