Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
ದೇಹದ ಈ ಅಂಗದ ಮೇಲೆ ಮಚ್ಚೆ ಇದ್ದರೆ, ಲೈಂಗಿಕತೆಯ ವಿಷಯದಲ್ಲಿ ಅಂದುಕೊಂಡಿರುವುದಕ್ಕಿಂತಲೂ ಹೆಚ್ಚಿನ ಅದೃಷ್ಟವಂತರು ಎಂದರ್ಥ
ಮಾನವನ ದೇಹ ಎಂದರೆ ಎಲುಬಿನ ಮೇಲೆ ಮಾಂಸ ಮತ್ತು ಚರ್ಮದ ಹೊದಿಕೆ. ನಮ್ಮ ಇಡೀ ದೇಹ ಹೀಗೇ ಕೂಡಿರುತ್ತದೆ. ಒಬ್ಬೊಬ್ಬರ ಚರ್ಮ ಒಂದೊಂದು ಬಣ್ಣ ಹೊಂದಿರುತ್ತದೆ. ಕೆಲವರು ಕಪ್ಪಗಿದ್ದರೆ ಇನ್ನೊಬ್ಬರು ಬೆಳ್ಳಗಿರುತ್ತಾರೆ.ಕೆಲವರು ದಪ್ಪ ಇದ್ದರೆ ಕೆಲವರು ಸಣ್ಣ ಇರುತ್ತಾರೆ.ಕೆಲವರು ಉದ್ದ ಇದ್ದರೆ ಕೆಲವರು ಕುಳ್ಳಗೆ ಇರುತ್ತಾರೆ.ಯಾರು ಹೇಗೆ ಇದ್ದರೂ ಚರ್ಮವೇ ಅವರಿಗೆ ರಕ್ಷಾ ಕವಚ. ಚರ್ಮ ಎಂದ ಮೇಲೆ ರೋಮಗಳು ಮತ್ತು ರೋಮಗಳ ಮಧ್ಯದಲ್ಲಿ ಅಲ್ಲಲ್ಲಿ ಮಚ್ಚೆಗಳು ಇರುವುದು ಸಾಮಾನ್ಯ. ದೇಹದ ಮೇಲಿನ ಒಂದೊಂದು ಭಾಗದಲ್ಲಿರುವ ಒಂದೊಂದು ಮಚ್ಚೆಗೆ ಒಂದೊಂದು ರೀತಿಯ ಅರ್ಥವಿರುತ್ತದೆ.ಮಚ್ಚೆಗಳು ನಮ್ಮ ಹಿಂದಿನ ಜನ್ಮದ ರಹಸ್ಯಗಳನ್ನು ತಿಳಿಸುತ್ತವೆ.
ನಾವು ಹಿಂದಿನ ಜನ್ಮದಲ್ಲಿ ಬದುಕಿದ ರೀತಿಗೆ ತಕ್ಕಂತೆ ನಾವು ಮಾಡಿದ ಪಾಪ ಕರ್ಮಗಳಿಗೆ ಅನುಗುಣವಾಗಿ ನಮ್ಮ ದೇಹದ ಮೇಲೆ ಹುಟ್ಟುತ್ತಲೇ ಮಚ್ಚೆಗಳು ಮೂಡುತ್ತವೆ. ಇವುಗಳನ್ನು ಹುಟ್ಟು ಮಚ್ಚೆಗಳು ಎಂತಲೂ ಕರೆಯುತ್ತಾರೆ .ಜ್ಯೋತಿಷಿಗಳ ಪ್ರಕಾರ ನಮ್ಮ ದೇಹದ ಭಾಗಗಳ ಮೇಲಿನ ಕೆಲ ಮಚ್ಚೆಗಳು ಒಳ್ಳೆಯದಕ್ಕೆಂದೂ ಇನ್ನೂ ಕೆಲವು ಕೆಟ್ಟದ್ದಕೆಂದೂ ನಂಬಲಾಗುತ್ತದೆ. ಇದನ್ನು ಕೆಲವರು ಅದೃಷ್ಟದ ಮಚ್ಚೆಗಳು ಮತ್ತು ದುರದೃಷ್ಟದ ಮಚ್ಚೆಗಳು ಎಂದು ಕರೆಯುತ್ತಾರೆ.ಏಕೆಂದರೆ ಇದೇ ಮಚ್ಚೆಗಳ ಮರ್ಮ. ನಮ್ಮ ಜೀವನದ ಮುಂದಿನ ಬದುಕಿನ ಒಳಗುಟ್ಟನ್ನು ದೇಹದ ಮೇಲಿನ ಮಚ್ಚೆಗಳು ಸೂಚಿಸುತ್ತವೆ....

ಅಂಗೈ ಮೇಲಿನ ಮಚ್ಚೆ
ನಿಮ್ಮ ಅಂಗೈ ಮೇಲೆ ಮಚ್ಚೆ ಇದೆಯೇ ಎಂದು ಈಗಲೇ ನೋಡಿಕೊಳ್ಳಿ . ಒಂದು ವೇಳೆ ಇದ್ದರೆ ನಿಮ್ಮಂಥ ಅದೃಷ್ಟವಂತರು ಬೇರೆ ಯಾರೂ ಇರಲು ಸಾಧ್ಯವಿಲ್ಲ. ಏಕೆಂದರೆ ಅಂಗೈ ಮೇಲಿನ ಮಚ್ಚೆ ನಿಮ್ಮ ಜೀವನಕ್ಕೆ ಬಹಳ ಒಳ್ಳೆಯ ಅದೃಷ್ಟದಾಯಕ ಚಿಹ್ನೆ. ಅದರಲ್ಲೂ ಅಂಗೈನ ಯಾವುದಾದರೂ ಒಂದು ಮೂಲೆಯಲ್ಲಿ ಇದ್ದರಂತೂ ನೀವು ತುಂಬಾ ಚೆನ್ನಾಗಿ ಬಾಳುತ್ತೀರಿ ಮತ್ತು ನಿಮ್ಮ ಸಂಗಾತಿಯನ್ನು ಬಹಳವೇ ಪ್ರೀತಿಸುತ್ತೀರಿ ಎಂದರ್ಥ. ಅದೂ ಅಲ್ಲದೆ ನಿಮಗೆ ಯಥೇಚ್ಛವಾದ ಲೈಂಗಿಕ ಶಕ್ತಿ ಇರುತ್ತದೆ ಮತ್ತು ನಿಮ್ಮ ಸಂಗಾತಿಯನ್ನು ಸಂತೋಷಪಡಿಸುತ್ತೀರಿ. ಆದರೆ ಒಂದು ಗಮನಿಸಬೇಕಾದ ಅಂಶ ಅಂದರೆ ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮಷ್ಟೇ ಲೈಂಗಿಕವಾಗಿ ಸಾಮರ್ಥ್ಯವುಳ್ಳವರಾಗಿರದಿದ್ದರೆ ಅವರಿಗೆ ಸ್ವಲ್ಪ ಕಷ್ಟವಾಗಬಹುದು.
Most Read: ಅಂಗೈಯ ಹುಟ್ಟು ಮಚ್ಚೆ-ವ್ಯಕ್ತಿಯ ವ್ಯಕ್ತಿತ್ವ ಹೇಳುವ ಭವಿಷ್ಯವಾಣಿ!

ತುಟಿಗಳ ಮೇಲಿನ ಮಚ್ಚೆ
ತುಟಿಗಳ ಮೇಲೆ ಮಚ್ಚೆ ಇದ್ದರೆ ಅದು ಲೈಂಗಿಕತೆಯ ಸಂಕೇತ. ಅದರಲ್ಲೂ ಮಹಿಳೆಯರಿಗೆ ತುಟಿಯ ಮೇಲೆ ಒಂದು ಸಣ್ಣ ಮಚ್ಚೆ ಇದ್ದರೂ ಅವರು ಸೌಂದರ್ಯದ ಚಿಲುಮೆಯಾಗಿರುತ್ತಾರೆ. ಮೇಗಳ ತುಟಿ ಕಾಮದೇವನ ಆಸ್ಥಾನವೆಂದು ಅಲ್ಲಿ ಮಚ್ಚೆ ಹೊಂದಿರುವ ವರು ಲೈಂಗಿಕತೆಯ ವಿಷಯದಲ್ಲಿ ಅಂದು ಕೊಂಡಿ ರುವುದಕ್ಕಿಂತಲೂ ಹೆಚ್ಚಿನ ಅದೃಷ್ಟವಂತರೆಂದು ಪರಿಗಣಿಸಲಾಗುತ್ತದೆ.

ಕಣ್ಣಿನ ಮೇಲಿನ ಮಚ್ಚೆ
ಕಣ್ಣಿನ ಮೇಲಿನ ಮಚ್ಚೆ ಸದಾ ಉತ್ಸಾಹಭರಿತ ಸೌಂದರ್ಯವಾದ ವದನಾರವಿಂದದ ಪ್ರತೀಕ. ಇದರ ಅರ್ಥ ಇಷ್ಟೇ. ಮಚ್ಚೆಯನ್ನು ಈ ಜಾಗದಲ್ಲಿ ಹೊಂದಿರುವವರು ತಮ್ಮ ಸಂಗಾತಿಯ ಬಗ್ಗೆ ಸಾಗರೋಪಾದಿಯಲ್ಲಿ ಪ್ರೀತಿಯನ್ನು ತಮ್ಮ ಹೃದಯದಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ. ಅವರ ದೇಹದ ಇಂಚಿಂಚೂ ಇದನ್ನೇ ಸಾರಿ ಹೇಳುತ್ತದೆ.ಈ ವ್ಯಕ್ತಿಗಳು ತಮ್ಮ ಲೈಂಗಿಕ ಪ್ರಚೋದನೆಯಿಂದ ಎಂದೂ ಹಿಂದೆ ಸರಿಯುವುದಿಲ್ಲ.

ಜನನಾಂಗಗಳ ಮೇಲಿನ ಮಚ್ಚೆ
ಇದು ಒಂದು ಗಂಭೀರವಾದ ವಿಷಯವೆಂದೇ ಹೇಳಬಹುದು. ಯಾಕೆಂದರೆ ಯಾರಿಗೆ ತಮ್ಮ ಜನನಾಂಗಗಳ ಮೇಲೆ ಮಚ್ಚೆ ಇರುತ್ತದೋ ಅವರು ಯಾವಾಗಲೂ ಇದರಲ್ಲೇ ಮಗ್ನರಾಗಿರುತ್ತಾರೆ ಮತ್ತು ತಮ್ಮ ಲೈಂಗಿಕ ಆಸಕ್ತಿಯನ್ನು ಬಹು ಬೇಗನೆ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.

ತೊಡೆಗಳ ಮೇಲಿನ ಮಚ್ಚೆ
ಯಾರು ತಮ್ಮ ತೊಡೆಗಳ ಮೇಲೆ ಮಚ್ಚೆ ಹೊಂದಿರುತ್ತಾರೋ ಅವರಿಗೆ ಲೈಂಗಿಕ ಶಕ್ತಿ ಒಂದು ದೇವರ ವರದಾನವಾಗಿದೆ ಮತ್ತು ಯಾವಾಗಲೂ ತಾವು ಪ್ರೀತಿಸುವ ಸಂಗಾತಿಯ ಜೊತೆ ಮಂಚ ಹತ್ತಲು ಕಾತುರರಾಗಿರುತ್ತಾರೆ.

ಎದೆಯ ಮೇಲಿನ ಮಚ್ಚೆ
ಯಾರು ತಮ್ಮ ಎದೆಯ ಮೇಲೆ ಮಚ್ಚೆಯನ್ನು ಹೊಂದಿರುತ್ತಾರೋ ಅವರು ಅವರ ಸಂಗಾತಿಗೆ ಸರಿಯಾದ ಜೋಡಿ ಎಂದು ಹೇಳಲಾಗುತ್ತದೆ. ಏಕೆಂದರೆ ಅವರು ಯಾರನ್ನು ತಮ್ಮ ಸಂಗಾತಿ ಎಂದುಕೊಂಡಿರುತ್ತಾರೋ ಇವರನ್ನು ತುಂಬಾ ಪ್ರೀತಿಸುತ್ತಾರೆ. ಮತ್ತು ತಮ್ಮನ್ನು ಆರೈಕೆ ಮಾಡಿಕೊಂಡಷ್ಟೇ ತಮ್ಮ ಸಂಗಾತಿಯನ್ನೂ ಎಲ್ಲಾ ವಿಷಯದಲ್ಲೂ ಆರೈಕೆ ಮಾಡುತ್ತಾರೆ .



Click it and Unblock the Notifications
