For Quick Alerts
ALLOW NOTIFICATIONS  
For Daily Alerts

ಥರ್ಮಾ ಮೀಟರ್‍ಅನ್ನು ಗರ್ಭಧಾರಣೆಯ ಪರೀಕ್ಷಾ ಮಾಪಕವೆಂದು ತಿಳಿದುಕೊಂಡ ವಿನೋದ ಸಂಗತಿ ನೋಡಿ

|

ಯುವಕರು ಯೌವನದಲ್ಲಿ ಇರುವಾಗ ಅತಿಯಾದ ಹುಮ್ಮಸ್ಸು, ಎಲ್ಲವನ್ನೂ ಗೆಲ್ಲಬಲ್ಲೆ ಎನ್ನುವ ಭರವಸೆ, ಚಂಚಲ ಚಿತ್ತ ಮನಸ್ಸು, ಸದಾ ಹೊಸತನ ಹಾಗೂ ಆಕರ್ಷಣೆಯ ವಿಷಯದಲ್ಲಿ ಆಸಕ್ತಿ ಹೊಂದಿರುತ್ತಾರೆ. ಅವರ ಸಂತೋಷ ಹಾಗೂ ಸಂಭ್ರಮ ಎಲ್ಲವೂ ಭೂಮಿಯಲ್ಲಿ ನಿಂತು ಆಕಾಶವನ್ನು ಮುಟ್ಟಿದ್ದೇವೆ ಎನ್ನುವಂತಿರುತ್ತದೆ. ಅದಕ್ಕೆ ಯಾವ ಹೋಲಿಕೆಯು ಸರಿಸಾಟಿ ಆಗಲಾರದು ಎಂದೇ ಹೇಳಬಹುದು. ಹಾಗಾಗಿ ಆ ವಯಸ್ಸಿನಲ್ಲಿ ಮಾತನಾಡುವುದು, ಓಡಾಡುವುದು, ತಮ್ಮದೇ ಆದ ಸ್ನೇಹಿತರ ಗುಂಪನ್ನು ರಚಿಸಿಕೊಳ್ಳುವುದು ಹೀಗೆ ವಿಭಿನ್ನ ಬಗೆಯ ವರ್ತನೆಗಳನ್ನು ತೋರುತ್ತಿರುತ್ತಾರೆ. ಅವರನ್ನು ಅವರ ಪಾಡಿಗೆ ಬಿಟ್ಟಿದ್ದರೂ ಸಹ ಪಾಲಕರು ಒಂದು ಕಣ್ಣು ಅಥವಾ ಗಮನವನ್ನು ಅವರ ಮೇಲೆ ಹರಿಬಿಟ್ಟಿರಬೇಕಾಗುತ್ತದೆ. ಇಂತಹ ವರ್ತನೆಯೊಂದಿಗೆ ಹೆಚ್ಚು ಹುಡುಗಾಟದ ಬುದ್ಧಿಯನ್ನು ಹೊಂದಿರುವುದರಿಂದ ಅವರು ಯಾವ ಹಾದಿಯಲ್ಲಿ ಸಾಗುತ್ತಾರೆ ಎನ್ನುವುದು ಬಹಳ ಗಮನಾರ್ಹ ಸಂಗತಿಯಾಗಿರುತ್ತದೆ.

ಇತ್ತೀಚೆಗೆ ಯುವಕರು ಹೆಚ್ಚಿನ ಸಮಯವನ್ನು ಸಾಮಾಜಿಕ ತಾಣಗಳಲ್ಲಿ ಕಳೆಯುತ್ತಾರೆ. ಪರಸ್ಪರ ವಿರುದ್ಧ ಲಿಂಗದವರನ್ನು ಆಕರ್ಷಿಸುವುದು ಹಾಗೂ ಅವರಿಗೆ ಮಾತಿನಲ್ಲಿ ವಿನೋದ ಮಾಡುವುದು, ಚೇಡಿಸುವುದು ಸಾಮಾನ್ಯ. ವಿನೋದ ಉಂಟಾದ ಸಂಗತಿ ಹಾಗೂ ಹೊಸ ಸ್ಥಳಗಳಿಗೆ ಭೇಟಿನೀಡಿದ ವಿಚಾರ, ತಮ್ಮ ಜೀವನ ನಿತ್ಯ ದಿನಚರಿ ಹೀಗೆ ವಿವಿಧ ವಿಷಯಗಳನ್ನು ಸಾಮಾಜಿಕ ತಾಣಗಳಲ್ಲಿ ಬಿತ್ತರಿಸುತ್ತಾರೆ. ಸ್ನೇಹಿತರ ಬಳಗದಿಂದ ಇನ್ನಷ್ಟು ಸ್ನೇಹಿತರಿಗೆ ಹಂಚಿಕೆಯಾಗುವುದರ ಮೂಲಕ ಕೆಲವು ಮಾಹಿತಿಗಳು ಅಥವಾ ವಿಷಯಗಳು ಪ್ರಪಂಚದಾದ್ಯಂತ ಚರ್ಚಾಸ್ಪದ ಸುದ್ದಿಯಾಗಿಬಿಡುವುದು.

ನಿಜ, ಇಂತಹದ್ದೇ ಒಂದು ಘಟನೆಯು ಇತ್ತೀಚೆಗಷ್ಟೆ ಸಾಮಾಜಿಕ ತಾಣದಲ್ಲಿ ಸಾಕಷ್ಟು ವಿನೋದದೊಂದಿಗೆ ಹರಿದಾಡುತ್ತಿದೆ. ಯುವ ಜೋಡಿಯೊಂದರ ನಡುವೆ ನಡೆದ ತಮಾಷೆಯ ಸುದ್ದಿಯೊಂದನ್ನು ಆ ಹುಡುಗಿಯೇ ತನ್ನ ಸಂಗಾತಿಯೊಂದಿಗೆ ನಡೆದ ನೈಜ ಸಂಗತಿಯ ಸನ್ನಿವೇಶ ಎಂದು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾಳೆ. ಆಕೆಯ ಸಂಗಾತಿ ಥರ್ಮಾ ಮೀಟರ್ ಅನ್ನು ನೋಡಿ ಅದು ಗರ್ಭಧಾರಣೆಯ ನಿರ್ಣಾಯಕ ಸಾಧನ ಎಂದು ತಪ್ಪು ತಿಳಿದಿದ್ದ ಎನ್ನುವ ವಿಷಯವಾಗಿದೆ.

ಕ್ಯಾಲಿಫೋರ್ನಿಯಾದ ಜೋಡಿಗಳು

ಕ್ಯಾಲಿಫೋರ್ನಿಯಾದ ಕೋಸ್ಟಾ ಮೆಸಾ ಎಂಬ ಊರಿನವರಾದ ಇವರು 18 ವರ್ಷದ ವಯೋಮಿತಿಯವರು. ಇಜಾಕ್ ಟೊರ್ರೆಸ್ ಎಂಬ ಹುಡುಗನ ಪ್ರೇಯಸಿ ಹಾಗೂ ಗೆಳತಿ ವೆನೆಸ್ಸಾ ಮೇರಿ. ಇವಳು 100 ಡಿಗ್ರಿ ಉಷ್ಣತೆಯನ್ನು ತೋರುತ್ತಿದ್ದ ಡಿಜಿಟಲ್ ಥರ್ಮಾಮೀಟರ್‍ನ ಫೋಟೋವನ್ನು ಕಳುಹಿಸಿದ್ದಾಳೆ. ಅದನ್ನು ನೋಡಿದ ಅವಳ ಗೆಳೆಯ ಸಾಕಷ್ಟು ಗೊಂದಲ ಹಾಗೂ ಭಯಕ್ಕೆ ಒಳಗಾದ. ಇದು ಒಂದು ಕ್ಷಣ ಅವನ ಮಾನಸಿಕ ಸ್ಥಿತಿಯನ್ನು ಅಲ್ಲಾಡಿಸಿತ್ತು ಎಂದು ಹೇಳಲಾಗುತ್ತಿದೆ.

ಅವಳು ಅವನಿಗೆ ಥರ್ಮಾಮೀಟರ್ ಛಾಯಾಚಿತ್ರವನ್ನು ಕಳುಹಿಸಿದ್ದಳು

ವೆನೆಸ್ಸಾ ತನ್ನ ದೇಹದ ಉಷ್ಣಾಂಶವನ್ನು ಪರಿಶೀಲಿಸಿದ ಬಳಿಕ, ಡಿಜಿಟಲ್ ಥರ್ಮಾಮೀಟರ್ ತೋರಿಸುತ್ತಿರುವ ಉಷ್ಣಾಂಶದ ಮಾಹಿತಿಯ ಚಿತ್ರವನ್ನು ತನ್ನ ಹುಡುಗನಿಗೆ ಕಳುಹಿಸಿದ್ದಾಳೆ. ಜೊತೆಗೆ ಅದರಲ್ಲಿ ಅವಳು ತಾವು ಅನುಭವಿಸಿದ್ದ ಸುಂದರ ಕ್ಷಣಗಳ ಫಲಿತಾಂಶ ಇದು ಎಂದು ಬರೆದಿದ್ದಳು.

Most Read: ಈ 7 ರಾಶಿಚಕ್ರದವರು ಜೀವನದಲ್ಲಿ ಬಹಳ ಬೇಗನೆ ಪ್ರಸಿದ್ಧಿ ಪಡೆಯುತ್ತಾರಂತೆ!

ಅವನು ಭಾವೋದ್ವೇಗನಾಗಿಬಿಟ್ಟ

ಕಳುಹಿಸಿದ ಚಿತ್ರ ಗರ್ಭ ಪರೀಕ್ಷೆಯದ್ದು ಎನ್ನುವುದು ತಿಳಿಯುತ್ತಿದ್ದಂತೆ ಇಜಾಕ್ ಅತ್ಯಂತ ಗಾಬರಿಗೆ ಒಳಗಾಗಿಬಿಟ್ಟ. ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯೊಂದಿಗೆ ಒಮ್ಮೆಲೇ ಭಾವೋದ್ವೇಗಕ್ಕೆ ಒಳಗಾದ. ಅವನು ಜನ್ಮ ನಿಯಂತ್ರಣವನ್ನು ಅನುಸರಿಸುತ್ತಿದ್ದರು ಅದು ಹೇಗೆ ಪರೀಕ್ಷೆಯಲ್ಲಿ ಗರ್ಭವತಿ ಎನ್ನುವುದು ತೋರುತ್ತಿದೆ? ಎನ್ನುವ ಆತಂಕ ಹಾಗೂ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಿದ್ದ. ಆಮೇಲೆ ಸ್ವಲ್ಪ ನಿಧಾನವಾಗಿ ಶಾಂತ ಮನಸ್ಸಿನಿಂದ ಯೋಚಿಸಿದಾಗ ಅವನಿಗೆ ತಿಳಿಯಿತು ಅದು ಥರ್ಮಾಮೀಟರ್ ಗರ್ಭಧಾರಣೆಯ ಪರೀಕ್ಷಕ ಮಾಪನ ಅಲ್ಲ ಎನ್ನುವುದು.

Most Read: ಒಬ್ಬನೇ ಬಾಯ್ ಫ್ರೆಂಡ್‌ನ್ನು ಹಂಚಿಕೊಂಡ ಅವಳಿ ಸಹೋದರಿಯರು!

ಈ ವಿಷಯವು ಈಗ ಎಲ್ಲೆಡೆ ಹಬ್ಬಿದೆ

ಇಜಾಕ್ ತಾನು ತಪ್ಪಾಗಿ ಗ್ರಹಿಸಿದ ಎಲ್ಲಾ ಸಂಗತಿಗಳು ಬೇರೆಯೇ ಅರ್ಥವನ್ನು ನೀಡಿತು. ಅದು ಒಂದು ಸಮಯದ ತನಕ ಸಾಕಷ್ಟು ಗೊಂದಲ ಹಾಗೂ ಗಾಬರಿಯನ್ನು ಉಂಟುಮಾಡಿತು ಎನ್ನುವುದನ್ನು ನಂತರ ಅರಿತುಕೊಂಡರು. ಈ ಜೋಡಿಯ ನಡುವೆ ನಡೆದ ಈ ವಿನೋದದ ಸಂಗತಿಯನ್ನು ಅವನ ಗೆಳತಿಯು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳಲು ನಿರ್ಧರಿಸಿದಳು. ಅವಳ ನಿರ್ಧಾರದಂತೆ ಸಾಮಾಜಿಕ ತಾಣದಲ್ಲೆಲ್ಲೆಡೆ ಹರಿದಾಡುತ್ತಿದೆ. ಇದೀಗ ಸಾಕಷ್ಟು ಪ್ರಚಾರವನ್ನು ಪಡೆದುಕೊಂಡಿರುವ ವಿನೋದದ ಸಂಗತಿಯಾಗಿದೆ. ಈ ವಿಷಯದ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯ ಏನೆಂದು ಹೇಳಿ.

English summary

He Mistook Thermometer For Preg Test

There are so many funny instances that people share on their social sites, and they become the talk of the town. Here is one such hilarious case of a young couple where the girl shared a funny incident of her boyfriend misunderstanding a thermometer to be a pregnancy test!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more