For Quick Alerts
ALLOW NOTIFICATIONS  
For Daily Alerts

ಈ 7 ರಾಶಿಚಕ್ರದವರು ಜೀವನದಲ್ಲಿ ಬಹಳ ಬೇಗನೆ ಪ್ರಸಿದ್ಧಿ ಪಡೆಯುತ್ತಾರಂತೆ!

|

ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ತಮ್ಮ ವೃತ್ತಿಗನುಸಾರವಾಗಿ ಪ್ರತಿಭೆಯನ್ನು ವ್ಯಕ್ತಪಡಿಸಿ ಯಶಸ್ಸು ಮತ್ತು ಕೀರ್ತಿಯನ್ನು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಾರೆ.ಅದಕ್ಕಾಗಿ ಏನೇನೋ ಪ್ರಯತ್ನಗಳನ್ನು ಮಾಡುತ್ತಾರೆ . ಸಾಮಾಜಿಕ ಜಾಲತಾಣ ಉಪಯೋಗಿಸುವವರಂತೂ ತಮ್ಮ ಬಗ್ಗೆ ಸ್ಟೇಟಸ್ ಹಾಕಿಕೊಂಡು ಕಾಮೆಂಟ್ಸ್ ಹಾಗು ಲೈಕ್ಸ್ ಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮೊಬೈಲ್ ನೋಡಿಕೊಂಡು ಕಾದು ಕುಳಿತಿರುತ್ತಾರೆ.

ಅಪ್ಪಿ ತಪ್ಪಿ ಅವರ ಅದೃಷ್ಟ ಚೆನ್ನಾಗಿದ್ದು ಅವರ ಯಾವುದಾದರೂ ಒಂದು ವಿಡಿಯೋ ಪೋಸ್ಟ್ ಮಾಡಿದ್ದರೆ ಅದಕ್ಕೆ ಸಾವಿರಾರು ಲೈಕ್ಸ್ ಬಂದು ರಾತ್ರೋರಾತ್ರಿ ಇಡೀ ವಿಶ್ವದ ತುಂಬೆಲ್ಲಾ ಪ್ರಸಿದ್ದಿ ಪಡೆಯುತ್ತಾರೆ.ಸಾಮಾಜಿಕ ಜಾಲತಾಣಕ್ಕಿರುವ ಶಕ್ತಿ ಅಂಥಹುದು. ಯಾರನ್ನು ಬೇಕಾದರೂ ಅಟ್ಟದ ಮೇಲಕ್ಕೇರಿಸುತ್ತದೆ . ಯಾರನ್ನು ಬೇಕಾದರೂ ಪಾತಾಳದ ಕೆಳಗೆ ಇಳಿಸುತ್ತದೆ. ಯಾಕೆಂದರೆ ಒಬ್ಬ ವ್ಯಕ್ತಿ ಹಾಕಿರುವ ಪೋಸ್ಟ್ ಅನ್ನು ನೋಡಿದ ಬೇರೆಯವರು ಅದನ್ನು ಇತರರ ಜೊತೆ ಹಂಚಿಕೊಳ್ಳಲು ಬಯಸುತ್ತಾರೆ ಅಂತೆಯೇ ಮಾಡುತ್ತಾರೆ ಕೂಡ.

ಅದನ್ನು ಪಡೆದ ಮತ್ತೊಬ್ಬರು ಅದೇ ಮಾಡುತ್ತಾರೆ.ಹಾಗಾಗಿ ವಿಶ್ವವೇ ನಮ್ಮ ಕೈಯಲ್ಲಿ ಎಂದರೆ ತಪ್ಪಾಗಲಿಕ್ಕಿಲ್ಲ .ನಿಮಗೆ ಒಮ್ಮೊಮ್ಮೆ ಅನ್ನಿಸಿರಬಹುದು. ಈ ವ್ಯಕ್ತಿ ಏನೇ ಮಾಡಿದರೂ ಅದಕ್ಕೆ ಜನಮನ್ನಣೆ ಸಿಗುತ್ತಲೇ ಇದೆಯಲ್ಲಾ .ಎಲ್ಲಾ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆಗಳೇ ಬರುತ್ತಿವೆಯಲ್ಲಾ. ಅಷ್ಟು ಚೆನ್ನಾಗಿದೆಯಾ ಇವನ ಅದೃಷ್ಟ ಎಂದು. ಖಂಡಿತಾ ಹೌದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಉತ್ತರವಿದೆ. ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. ಏಕೆಂದರೆ ಇದಕ್ಕೆಲ್ಲಾ ಕಾರಣ ಅವರ ಜನ್ಮ ಫಲ ಹಾಗು ರಾಶಿ ಚಕ್ರ.ಇರುವ ಹನ್ನೆರಡು ರಾಶಿಗಳಲ್ಲಿ ಕೆಲ ರಾಶಿಗಳವರು ಜೀವನದಲ್ಲಿ ಬಹಳ ಪ್ರಸಿದ್ದಿ ಪಡೆಯುತ್ತಾರೆ.ಬಹಳ ಅಭಿವೃದ್ಧಿ ಹೊಂದುತ್ತಾರೆ . ಹಾಗಾದರೆ ಯಾವ ರಾಶಿಗಳವರು ತುಂಬಾ ಅದೃಷ್ಟವಂತರು ಎಂದು ತಿಳಿದುಕೊಳ್ಳುವ ತವಕವೇ ? ಇನ್ನೇಕೆ ತಡ . ನಾವು ಕೆಳಗೆ ಉಲ್ಲೇಖಿಸಿರುವ ಲೇಖನವನ್ನೊಮ್ಮೆ ಕಣ್ಣಾಡಿಸಿ ಹಾಗು ನಿಮ್ಮ ರಾಶಿ ಇದರಲ್ಲಿ ಇದೆಯೇ ಎಂಬುದನ್ನ ಖಾತ್ರಿ ಪಡಿಸಿಕೊಳ್ಳಿ.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯು ಅಗ್ನಿತತ್ವಕ್ಕೆ ಸೇರಿದ ರಾಶಿಯಾಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಅಗ್ನಿ ಅಂದರೆ ಬೆಂಕಿ ಇರುವುದೇ ಉರಿಯುವುದಕ್ಕಾಗಿ ಎಂದು.ಅದಕ್ಕೆ ಎಂದೂ ಸೋಲಿಲ್ಲ. ಎದುರಿಗೆ ಸಿಕ್ಕದ್ದನ್ನೆಲ್ಲಾ ದಹಿಸುವ ಶಕ್ತಿ ಇದೆ.ಅಗ್ನಿಯನ್ನು ಯೋಧನಿಗೆ ಹೋಲಿಸಲಾಗಿದೆ. ಹೇಗೆ ಯೋಧ ಒಬ್ಬ ಕಮ್ಯಾಂಡರ್ ಆಗಿ ಮುನ್ನುಗ್ಗಿ ತನ್ನ ಸೈನ್ಯವನ್ನು ಮುನ್ನಡೆಸುವ ಗುಣ ಹೊಂದಿರುತ್ತಾನೋ ಮತ್ತು ಸಹಜವಾಗಿಯೇ ಪ್ರಸಿದ್ದಿ ಪಡೆಯುತ್ತಾನೋ ಆ ರೀತಿಯ ಗುಣ ಸ್ವಭಾವಗಳನ್ನು ಮೇಷ ರಾಶಿಯವರು ಹೊಂದಿರುತ್ತಾರೆ.ಇವರು ಈ ರೀತಿಯಲ್ಲೇ ಇತರರ ಗಮನ ತಮ್ಮತ್ತ ಸೆಳೆದು ಪ್ರಶಂಸೆ ಪಡೆಯುತ್ತಾರೆ.ಹಾಗೆ ತಮ್ಮ ನೈಜ ಹೃದಯದಿಂದ ಜನಪ್ರಿಯತೆ ಗಳಿಸುತ್ತಾರೆ.ನಿಮಗೆ ತಿಳಿದಿರುವ ಹಾಗೆ ಯಾವ ಕಡೆ ಆಕರ್ಷಣೆ ಇರುತ್ತದೋ ಆ ಕಡೆಯೇ ಶಕ್ತಿಯ ಅಲೆಗಳು ಸಂಚರಿಸುತ್ತವೆ ಎಂದು. ಅಂತೆಯೇ ಅಗ್ನಿಯ ಗುಣ ತತ್ವ ಹೊಂದಿರುವ ಮೇಷ ರಾಶಿಯವರೂ ಕೂಡ ಜನಪ್ರಿಯತೆ ಎಂಬ ತಣ್ಣನೆಯ ಅಲೆಗಳನ್ನು ತಮ್ಮತ್ತ ಸೆಳೆಯುವಲ್ಲಿ ಯಾವಾಗಲೂ ಸಫಲರಾಗುತ್ತಾರೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ನೋಡಲು ಸುಂದರವಾಗಿರುವ ಹಾಡುವ ಕುಣಿಯುವ ಚಿತ್ರ ಬಿಡಿಸುವ ಇತ್ಯಾದಿ ಗುಣಗಳನ್ನು ಹೊಂದಿರುವ ರಾಶಿ ಯಾವುದಾದರೂ ಇದ್ದರೆ ಅದು ಕರ್ಕಾಟಕ ರಾಶಿ.ಇವರು ಕಲೆಯನ್ನು ಗೌರವಿಸುತ್ತಾರೆ.ಇವರು ಯಾವುದೇ ಕ್ರಿಯೆ ಮಾಡದಿರುವ ಸಮಯದಲ್ಲೂ ಜನರಿಂದ ಒಳ್ಳೆಯ ಪ್ರತಿಕ್ರಿಯೆಯಂತೂ ಇದ್ದೆ ಇರುತ್ತದೆ. ಅಂತಹ ಅದೃಷ್ಟ ಇವರದು.ಇವರು ಒಮ್ಮೆ ಸಾಧನೆ ಮಾಡಿ ಸುಮ್ಮನಾದರೆ ಸಾಕು ಜನರು ಇವರನ್ನು ಎಲ್ಲ ಸಮಯದಲ್ಲೂ ನೆನೆಯುತ್ತಾರೆ. ಅಂತಹ ಮರೆಯಲಾಗದ ನೆನಪಿನಲ್ಲಿ ಉಳಿಯುವಂತಹ ಒಳ್ಳೆಯ ಸಾಧನೆ ಮಾಡುವುದರಲ್ಲಿ ಕರ್ಕಾಟಕ ರಾಶಿಯವರು ಯಾವಾಗಲೂ ಮುಂದಿರುತ್ತಾರೆ.

Most Read: ರಾಶಿ ಚಕ್ರದ ಅನುಸಾರ ಯಾವ ಕೆಲಸವನ್ನು ಮಾಡಬೇಕು? ಯಾವುದನ್ನು ಮಾಡಬಾರದು?

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯನ್ನು ನಿಗೂಢ ರಾಶಿ ಎಂದೇ ಹೇಳಬೇಕು. ಏಕೆಂದರೆ ಮಿಥುನ ರಾಶಿಯವರು ಹೆಚ್ಚು ಮಾತನಾಡ ಬಯಸುವುದಿಲ್ಲ . ಒಂದು ವೇಳೆ ಮಾತನಾಡಿದರೆ ಅದರಲ್ಲೇ ಒಂದು ರೀತಿಯ ಛಾಪು ಮೂಡಿಸುತ್ತಾರೆ. ಅವರ ಮಾತಿನಲ್ಲಿ ಅಂತಹ ತೂಕ ಇರುತ್ತದೆ. ಅವರ ಬುದ್ಧಿವಂತಿಕೆಯ ಸಮಯೋಚಿತ ಮಾತುಗಳು ಜನರ ಮನಸ್ಸಿಗೆ ನೇರವಾಗಿ ನಾಟುತ್ತವೆ ಮತ್ತು ಇವರು ಈ ಗುಣದಿಂದಲೇ ಜೀವನದಲ್ಲಿ ಬಹಳ ಪ್ರಸಿದ್ದಿ ಪಡೆಯುತ್ತಾರೆ ಮತ್ತು ಜನರ ಹೃದಯ ಗೆಲ್ಲುತ್ತಾರೆ . ಪ್ರೀತಿ ಸಂಪಾದಿಸುತ್ತಾರೆ. ಆಗಲೇ ಹೇಳಿದಂತೆ ಇವರು ಪರಿಚಯ ಇಲ್ಲದಿರುವ ವ್ಯಕ್ತಿಗಳೊಡನೆ ಹೆಚ್ಚು ಮಾತನಾಡುವುದಿಲ್ಲ. ಅದೇ ಗೆಳೆಯರ ಮಧ್ಯದಲ್ಲಿ ಇದ್ದರೆ ಇವರದೇ ಮಾತು. ಇವರಾಡುವ ಮಾತುಗಳಿಗೆ ಮನ್ನಣೆ ಕೂಡ ಸಿಗುತ್ತದೆ ಮತ್ತು ಇದೇ ಇವರನ್ನು ಪ್ರಚಲಿತರಾಗುವಂತೆ ಮಾಡಿ ಉತ್ತುಂಗಕ್ಕೇರಿಸುತ್ತದೆ.

ಸಿಂಹ ರಾಶಿ

ಸಿಂಹ ರಾಶಿ

ಕಾಡಿನ ರಾಜ ಸಿಂಹ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಅದು ಸುಮ್ಮನಿದ್ದರೂ ಸರಿ ಘರ್ಜಿಸಿದರೂ ಸರಿ , ಸಿಂಹಕ್ಕೆ ಸಿಂಹವೇ ಸಾಟಿ.ಅದು ತನ್ನ ಗಾಂಭೀರ್ಯ ದಿಂದಲೇ ಪ್ರಸಿದ್ದಿ ಪಡೆದಿದೆ.ಅದು ಎಲ್ಲೇ ನಿಂತಿದ್ದರೂ ಸುಮ್ಮನೆ ಕುಳಿತಿದ್ದರೂ ಕಂಡುಹಿಡಿಯಲು ಕಷ್ಟವೇ ? ಅಂತೆಯೇ ಸಿಂಹ ರಾಶಿಯವರೂ ಕೂಡ ಎಲ್ಲೇ ಇದ್ದರೂ ತಮ್ಮದೇ ಆದ ಖ್ಯಾತಿ ಹೊಂದಿರುತ್ತಾರೆ ಮತ್ತು ಅದನ್ನು ಉಳಿಸಿಕೊಳ್ಳುವುದರಲ್ಲಿ ಸಫಲರಾಗುತ್ತಾರೆ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರು ಬೇರೆಯವರು ತಮ್ಮ ಮೇಲೆ ಗಮನ ಹರಿಸಲಿ ಎಂದು ಕಾದು ಕೂರುವವರಲ್ಲ. ಬದಲಿಗೆ ಬೇರೆಯವರ ಗಮನ ತಮ್ಮತ್ತ ಸುಳಿಯುವಂತೆ ಮಾಡುತ್ತಾರೆ.ಇವರಿಗೆ ಯಾವ ಸಮಯದಲ್ಲಿ ಯಾವ ಶಸ್ತ್ರ ಉಪಯೋಗಿಸಿದರೆ ಯಾವ ಕೆಲಸ ಆಗುತ್ತದೆ ಎಂಬ ಅರಿವು ಚೆನ್ನಾಗಿಯೇ ಇರುತ್ತದೆ.ಇವರ ಸರಿಯಾದ ಸಮಯಪ್ರಜ್ಞೆ ಇವರನ್ನು ಎಲ್ಲಾ ಸಮಯದಲ್ಲೂ ಜನಪ್ರಿಯರನ್ನಾಗಿ ಮಾಡುತ್ತದೆ ಮತ್ತು ಅದಕ್ಕಾಗಿ ಪ್ರಯತ್ನ ಪಡುತ್ತಾರೆ .

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಇವರು ಬಹು ಕಾರ್ಯ ಚತುರರು. ಇವರ ಕಾರ್ಯ ವ್ಯಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ.ಇದಕ್ಕೆ ಉದಾಹರಣೆಗೆ ಹೊಂದಿಕೊಳ್ಳುವ ವ್ಯಕ್ತಿಯೆಂದರೆ ಬಿಲ್ ಗೇಟ್ಸ್. ಇವರಿಗೆ ಗೌರವ ಸಂಪಾದಿಸುವುದು ಸಂಪಾದಿಸಿದ ಗೌರವವನ್ನು ಉಳಿಸಿಕೊಳ್ಳುವುದು ಇವೆಲ್ಲ ಇವರಿಗೆ ಕಷ್ಟದ ವಿಷಯವೇನಲ್ಲ. ತಮ್ಮ ಬಹುಕಾರ್ಯ ವ್ಯಕ್ತಿತ್ವದಿಂದ ಇದನ್ನು ಗಳಿಸುತ್ತಾರೆ .

Most Read: ಒಬ್ಬನೇ ಬಾಯ್ ಫ್ರೆಂಡ್‌ನ್ನು ಹಂಚಿಕೊಂಡ ಅವಳಿ ಸಹೋದರಿಯರು!

ಧನು ರಾಶಿ

ಧನು ರಾಶಿ

ಪ್ರಪಂಚದಲ್ಲಿ ಯಾವಾಗಲೂ ಖುಷಿಯಿಂದ ಪಾರ್ಟಿ ಮಾಡುತ್ತಾ , ಪ್ರಪಂಚ ಸುತ್ತುತ್ತಾ , ಯಾವಾಗಲೂ ಹೊರಗಡೆ ಕಾಲ ಕಳೆಯುತ್ತಾ ಜೀವನವನ್ನು ಮಜವಾಗಿ ನಡೆಸುವವರು ಧನು ರಾಶಿಯವರು.ಇವರು ಜನ ಬವಣಿಕೆಯ ವ್ಯಕ್ತಿಗಳು .ಯಾವಾಗಲೂ ಜನರ ಮಧ್ಯದಲ್ಲೇ ಇರಬೇಕೆಂದು ಇಚ್ಛೆ ಪಡುತ್ತಾರೆ .ಇವರು ಸಾಹಸಿ ಮನೋಭಾವದವರು ಮತ್ತು ತಮ್ಮ ಸಾಹಸಗಳಿಂದಲೇ ಜನರಿಗೆ ಚಿರಪರಿಚಿತರಾಗುತ್ತಾರೆ.ನಾನೊಬ್ಬನೇ ಬದುಕಬೇಕು ಎನ್ನುವ ಮನೋಭಾವದ ಬದಲು ನಾವೆಲ್ಲರೂ ಬದುಕಬೇಕು ಎನ್ನುವ ಮನೋಭಾವವನ್ನು ಹೊಂದಿರುವವರಾಗಿರುತ್ತಾರೆ.

English summary

These 7 Zodiac Signs Most Likely To Be Famous

Isn't it strange how some people have to make those extra efforts out of their comfort zones just for a few likes and subscribers, and yet some others just become popular overnight even with a not so cool post? While effort and choice do matter, astrology says people of some zodiacs are actually more likely to be famous.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more