For Quick Alerts
ALLOW NOTIFICATIONS  
For Daily Alerts

ತಮ್ಮತ್ತ ಗಮನ ನೀಡಬೇಕೆಂದು ಬಯಸುವ ಐದು ರಾಶಿಚಕ್ರದವರು!

|

ಪ್ರತಿಯೊಂದು ರಾಶಿಚಕ್ರಗಳು ಒಂದೇ ರೀತಿಯಾಗಿ ಇರುವುದಿಲ್ಲವೆನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಯಾಕೆಂದರೆ ಪ್ರತಿಯೊಂದು ರಾಶಿ ಕೂಡ ಭಿನ್ನ ಹಿನ್ನೆಲೆಯಿಂದ ಬಂದಿರುವ ಕಾರಣದಿಂದ ಇವುಗಳ ವ್ಯಕ್ತಿತ್ವ, ನಡವಳಿಕೆ ಮತ್ತು ಗುಣಗಳು ಸಂಪೂರ್ಣವಾಗಿ ಭಿನ್ನವಾಗಿರುವುದು. ಕೆಲವೊಂದು ರಾಶಿಗಳು ತುಂಬಾ ಶಾಂತ ಸ್ವಭಾವ ಹೊಂದಿದ್ದರೆ, ಇನ್ನು ಕೆಲವು ರಾಶಿಗಳು ಉಗ್ರ ರೂಪವನ್ನು ಹೊಂದಿರುವವರು. ಆದರೆ ಇದಕ್ಕೆ ಅವುಗಳ ಅಧಿಪತಿ ಇತ್ಯಾದಿಗಳು ಕಾರಣವಾಗಿವೆ. ಕೆಲವು ರಾಶಿಯವರಿಗೆ ತುಂಬಾ ದಾನ ಮಾಡುವ ಗುಣವಿದ್ದರೆ, ಇನ್ನು ಕೆಲವು ರಾಶಿಯವರಿಗೆ ಮೋಸ, ವಂಚನೆ ಹಾಗೂ ಕೇವಲ ಪಡೆಯುವ ಗುಣ ಮಾತ್ರ ಇರುವುದು.

Zodiac Signs

ಕೆಲವು ರಾಶಿಯವರು ತುಂಬಾ ಆರೈಕೆ, ಕಾಳಜಿ ಮಾಡುವಂತಹ ಗುಣ ಹೊಂದಿರುವರು. ಆದರೆ ತಮ್ಮನ್ನು ಕೂಡ ತುಂಬಾ ಕಾಳಜಿ ಮಾಡಬೇಕು ಮತ್ತು ಆರೈಕೆ ಮಾಡಬೇಕು ಎನ್ನುವ ರಾಶಿ ಚಕ್ರದವರು ಇದ್ದಾರೆ. ಸಂಬಂಧದಲ್ಲಿ ಬೆಸೆದುಕೊಂಡ ಬಳಿಕ ಇಂತಹ ರಾಶಿಯವರನ್ನು ಕಡೆಗಣಿಸಿದರೆ ಆಗ ಖಂಡಿತವಾಗಿಯೂ ದೊಡ್ಡ ಮಟ್ಟದ ಅನಾಹುತ ಸಂಭವಿಸುವುದು. ಯಾಕೆಂದರೆ ಇವರಿಗೆ ಸಂಬಂಧದಲ್ಲಿ ಯಾವಾಗಲೂ ಆರೈಕೆ ಬೇಕು ಮತ್ತು ಇವರತ್ತ ಯಾವಾಗಲೂ ಗಮನ ಹರಿಸುತ್ತಾ ಇರಬೇಕು. ಸಂಬಂಧದಲ್ಲಿ ಇರುವಾಗ ಈ ರಾಶಿಯವರು ಗಮನ ನೀಡಬೇಕೆಂದು ಬಯಸುತ್ತಾರೆ. ಇಂತಹ ರಾಶಿಯವರು ನೀವಾಗಿದ್ದರೆ ಇದನ್ನು ಓದುತ್ತಾ ಸಾಗಿ. ನಿಮ್ಮ ಸಂಗಾತಿಯು ಈ ರಾಶಿಯವರೇ ಎಂದು ತಿಳಿದು ಅವರೊಂದಿಗೆ ಹೇಗೆ ವರ್ತಿಸಬೇಕೆಂದು ತಿಳಿಯಲು ಈ ಲೇಖನ ಓದಲೇ ಬೇಕು. ಅಂತಹ ಐದು ರಾಶಿಗಳು ಯಾವುದು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗಿದೆ.

ಮೇಷ

ಮೇಷ

ಮೇಷ ರಾಶಿಯವರು ತಮ್ಮದೇ ರೀತಿಯಲ್ಲಿ ಗಮನ ಬಯಸುವ ಗುಣ ಹೊಂದಿರುವರು. ಇವರು ತಮ್ಮತ್ತ ಗಮನಹರಿಸಬೇಕೆಂದು ಬೇಡಿಕೆ ಇಡುವರು. ಮೇಷ ರಾಶಿಯವರು ಯಾವತ್ತೂ ಹಿಂಜರಿಯಲ್ಲ ಮತ್ತು ಭಾವನೆಗಳನ್ನು ತಮ್ಮ ಮನಸ್ಸಿನಲ್ಲಿ ಕಟ್ಟಿಕೊಂಡು ಇರಲ್ಲ. ಮೇಷ ರಾಶಿಯವರು ತುಂಬಾ ಅಧಿಕಾರ ಸಾಧಿಸುವವರು ಮತ್ತು ಅದೇ ರೀತಿಯಾಗಿ ಬೇಡಿಕೆಯನ್ನು ಇಡುವವರು.

ಮೇಷ

ಮೇಷ

ಯಾರಿಂದಲಾದರೂ ಉದ್ದೇಶಪೂರ್ವಕವಲ್ಲದೆ ಗಮನ ಹರಿಸುವಂತೆ ಬೇಡಿಕೆಯನ್ನು ಇಡುವುದು ಹೇಗೆ ಎಂದು ಮನವರಿಕೆ ಮಾಡಿಕೊಳ್ಳಲು ಅವರಿಗೆ ತುಂಬಾ ಕಷ್ಟ ಆಗುವುದು. ಮೇಷ ರಾಶಿಯವರು ಯಾವಾಗಲೂ ನೀವು ಗಮನಹರಿಸಬೇಕೆಂದು ಬಯಸುತ್ತಾ ಇದ್ದರೆ ಆಗ ನೀವು ಅವರ ಹೃದಯದಲ್ಲಿ ಪ್ರೀತಿಯು ಇದೆ ಎಂದು ತಿಳಿದುಕೊಳ್ಳಬೇಕು. ಬೇರೆಯವರ ಕಡೆ ಯಾವಾಗ ಗಮನಹರಿಸಬೇಕು ಎನ್ನುವ ಬಗ್ಗೆ ಕೂಡ ಅವರು ಸರಿಯಾಗಿ ಅರ್ಥ ಮಾಡಿಕೊಂಡಿರುವುದು ಅವರ ವಿಶೇಷ ಗುಣವಾಗಿದೆ.

ಕರ್ಕಾಟಕ

ಕರ್ಕಾಟಕ

ತುಂಬಾ ಸೂಕ್ಷ್ಮ ಆತ್ಮವಾಗಿರುವಂತಹ ಕರ್ಕಾಟಕ ರಾಶಿಯವರಿಗೆ ಯಾವಾಗಲೂ ನಿಮ್ಮ ಗಮನವಿಡಲಾಗುತ್ತಿದೆ ಮತ್ತು ಕಾಳಜಿ ಮಾಡಲಾಗುತ್ತಿದೆ ಎಂದು ಮನವರಿಕೆ ಮಾಡುತ್ತಲೇ ಇರಬೇಕಾಗುತ್ತದೆ. ಈ ರಾಶಿಯವರು ಯಾವಾಗಲೂ ತುಂಬಾ ಸಂತೋಷವಾಗಿ ಇರಬೇಕೆಂದು ನೀವು ಬಯಸುವುದೇ ಆದರೆ ಆಗ ನೀವು ಗಮನಹರಿಸುತ್ತಲೇ ಇರಬೇಕಾಗುತ್ತದೆ. ಇವರು ಎಷ್ಟು ಸೂಕ್ಷವಾಗಿದ್ದಾರೆಯಾ ಅದೇ ರೀತಿಯಾಗಿ ಸಂಬಂಧದಲ್ಲಿ ಇವರು ತುಂಬಾ ಅರ್ಥ ಮಾಡಿಕೊಳ್ಳಬಲ್ಲ ಮತ್ತು ಪ್ರೌಢರಾಗಿರುವ ರಾಶಿಯವರು. ನಿಮ್ಮ ಬದ್ಧತೆಗಳನ್ನು ಅರ್ಥ ಮಾಡಿಕೊಳ್ಳಿ ಎಂದು ನಿರೀಕ್ಷೆ ಮಾಡಿಕೊಂಡರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನೀವು ಅವರ ಬಗ್ಗೆ ಸ್ವಲ್ಪ ಮಟ್ಟಿನ ಗಮನಹರಿಸಬೇಕಾಗಿರುವುದು ಮಾತ್ರ ಮುಖ್ಯವಾಗಿರುವುದು.

Most Read: ಮುಂಬರಲಿರುವ ಹೊಸ ವರ್ಷದಲ್ಲಿ ಈ 4 ರಾಶಿಯವರು ತುಂಬಾನೇ ಸಂತೋಷವಾಗಿರುತ್ತಾರಂತೆ!

ಸಿಂಹ

ಸಿಂಹ

ಸಿಂಹ ರಾಶಿಯವರು ಯಾವಾಗಲೂ ತುಂಬಾ ಆತ್ಮವಿಶ್ವಾದ ವ್ಯಕ್ತಿಗಳು ಮತ್ತು ಯಾವುದೇ ರೀತಿಯ ಭೀತಿಯಿಲ್ಲದೆ ಇರುವಂತವರು. ಇವರು ಕೂಡ ತಮ್ಮ ಬಗ್ಗೆ ಗಮನ ನೀಡಬೇಕೆಂದು ಬಯಸುತ್ತಾರೆಯಾ ಎಂದು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಇಂತಹ ಗುಣ ಹೊಂದಿರುವ ಸಿಂಹ ರಾಶಿಯವರು ಕೂಡ ತಮ್ಮತ್ತ ಗಮನ ನೀಡಬೇಕೆಂದು ಬಯಸುವರು.

ಸಿಂಹ

ಸಿಂಹ

ಸಿಂಹ ರಾಶಿಯವರನ್ನು ನೀವು ಯಾವತ್ತಾದರೂ ಟೀಕೆ ಮಾಡಲು ಹೋದರೆ ಆಗ ನೀವು ಅವರ ಶತ್ರುಗಳು ಎಂದು ಪರಿಗಣಿಸಲ್ಪಡುವರು. ಇದರಿಂದಾಗಿ ಸಿಂಹ ರಾಶಿಯವರ ಕಡೆ ಗಮನ ಇಡುವುದು ಎಂದರೆ ಅವರನ್ನು ಯಾವಾಗಲೂ ಹೊಗಳುತ್ತಾ ಇರಬೇಕು. ಅವರನ್ನು ಎಷ್ಟು ಹೊಗಳಿದರೂ ಸಾಲದು. ಎಲ್ಲಾ ಸಮಯದಲ್ಲಿ ಶ್ರೇಷ್ಠ ಕಾರಣಗಳಿಂದಾಗಿ ಎಲ್ಲರ ಆಕರ್ಷಣೆಯಾಗಬೇಕು ಎಂದು ಬಯಸುವ ಸಿಂಹ ರಾಶಿಯರ ಅಹಂ ಇದರಿಂದಾಗಿಯೇ ಹೆಚ್ಚಾಗುವುದು. ಸಿಂಹ ರಾಶಿಯವರ ಹೃದಯ ಗೆಲ್ಲಬೇಕಾದರೆ ಯಾವಾಗಲೂ ಅವರು ವಿಶೇಷ ಎಂದು ತೋರಿಸಿಕೊಡುವುದು ತುಂಬಾ ಮುಖ್ಯವಾಗಿರುವುದು.

ತುಲಾ

ತುಲಾ

ತುಲಾ ರಾಶಿಯ ಚಿಹ್ನೆಯೇ ತಕ್ಕಡಿಯಾಗಿದೆ. ಇದರಿಂದಾಗಿ ಅವರು ತಮ್ಮ ಸಂಬಂಧದಲ್ಲಿ ಕೂಡ ಸಮಾನವಾದ ತೂಕ ಬಯಸುವರು. ಅಂದರೆ ತಾವು ನೀಡುವಂತೆ ಗಮನವು ತಮ್ಮತ್ತ ಕೂಡ ಇರಬೇಕೆಂದು ಬಯಸುವರು. ಯಾವುದೇ ಸಂಬಂಧಕ್ಕೂ ಸಂವಹನವು ದೊಡ್ಡ ಬುನಾದಿ ಎಂದು ಅವರು ತಿಳಿದಿರುವರು.

ತುಲಾ

ತುಲಾ

ಆದರೆ ಕೆಲವೊಂದು ಸಲ ತಮತ್ತ ಗಮನ ಹರಿಸಬೇಕು ಮತ್ತು ಕಾಳಜಿ ವಹಿಸಬೇಕು ಎಂದು ಬಯಸುವರು. ಇದರಿಂದಾಗಿಯೇ ತುಲಾ ರಾಶಿಯವರು ಯಾವಾಗಲೂ ಫ್ಲರ್ಟ್ ಮಾಡುವರು. ತುಲಾ ರಾಶಿಯವರಿಗೆ ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತಾ ಇದ್ದಾರೆ ಎಂದು ತೋರಿಸಿಕೊಡಬೇಕು. ಹೀಗಿದ್ದರೂ ಅವರ ಕಡೆ ಗಮನಹರಿಸುವುದು ಅತೀ ಅಗತ್ಯವಾಗಿರುವುದು.

ವೃಶ್ಚಿಕ

ವೃಶ್ಚಿಕ

ತಮ್ಮತ್ತ ಗಮನ ನೀಡಬೇಕು ಎನ್ನುವ ಪಟ್ಟಿಯಲ್ಲಿ ವೃಶ್ಚಿಕ ರಾಶಿಯವರು ಕೂಡ ಇದ್ದಾರೆ. ಸಂಬಂಧದಲ್ಲಿ ತಮ್ಮ ಪ್ರಯತ್ನಗಳಿಗೆ ಯಾವುದೇ ರೀತಿಯ ಬೆಲೆ ನೀಡದೆ ಇದ್ದರೆ ಅವರು ಒಂದು ರೀತಿಯಲ್ಲಿ ಭ್ರಾಂತಿಗೆ ಒಳಗಾಗುವರು. ಆದರೆ ಇವರು ತಮ್ಮ ಭಾವನೆಗಳನ್ನು ಯಾವತ್ತೂ ಬೇರೆಯವರೊಂದಿಗೆ ಹೇಳಿಕೊಳ್ಳುವುದಿಲ್ಲ.

Most Read: 2019ರ ಅದೃಷ್ಟ ಹಾಗೂ ದುರಾದೃಷ್ಟದ ರಾಶಿಚಕ್ರಗಳ ಕಂಪ್ಲೀಟ್ ಡಿಟೇಲ್ಸ್

ವೃಶ್ಚಿಕ

ವೃಶ್ಚಿಕ

ಅವರು ತಮ್ಮ ಭಾವನೆಗಳನ್ನು ನಿಮ್ಮಲ್ಲಿ ಹೇಳಿಕೊಳ್ಳಬೇಕು ಎಂದು ನೀವು ಭಾವಿಸಿದರೆ ಆಗ ಅವರ ಕಡೆ ಹೆಚ್ಚಿನ ಗಮನ ಹರಿಸುವುದು ಅತೀ ಅಗತ್ಯವಾಗಿರುವುದು. ಇವರು ತುಂಬಾ ಪ್ರಾಮಾಣಿಕ ಹಾಗೂ ಸತ್ಯವನ್ನು ಹೇಳುವವರು. ಇವರ ಇಂತಹ ಗುಣಗಳ ಕಡೆಗೆ ನೀವು ಯಾವಾಗಲೂ ಗಮನಹರಿಸಬೇಕು ಎನ್ನುವ ಬಯಕೆ ಅವರಲ್ಲಿ ಇರುವುದು. ಇದರಿಂದಾಗಿ ವೃಶ್ಚಿಕ ರಾಶಿಯವರ ಕಡೆ ಗಮನಹರಿಸಿದರೆ ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯಲು ನಿಮಗೆ ನೆರವಾಗಲಿದೆ.

English summary

Zodiac Signs Who Seek Attention The Most

All the twelve zodiac signs have some or the other characteristics that separate them from one another. These differences are based on some determining factors, such as the basic elements that the zodiacs include. Thus, one's sign can hint towards a whole lot of other things as well about a person. There are 5 zodiac signs that seek attention the most.
Story first published: Friday, December 21, 2018, 12:28 [IST]
X
Desktop Bottom Promotion