Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಜಸ್ಥಾನದ ಈ ಹಳ್ಳಿಯ ಪ್ರತಿ ಪುರುಷನಿಗೂ ಇಬ್ಬರು ಪತ್ನಿಯರಂತೆ!
ಓರ್ವ ವಿವಾಹವಾಗಲು ಅತಿ ಗಿಡ್ಡ ಇರುವ ಹೆಣ್ಣನ್ನೇ ಹುಡುಕುತ್ತಿದ್ದನಂತೆ? ಏಕಪ್ಪಾ ಗಿಡ್ಡ ಹೆಂಡತಿ? ಎಂದು ಕೇಳಿದರೆ-ತೊಂದರೆ, ಚಿಕ್ಕದಿದ್ದಷ್ಟೂ ಒಳ್ಳೆಯದು ಎಂದನಂತೆ! ನಗೆಹನಿ ನಗು ಬರಿಸಿದರೂ ಒಂದು ವಿವಾಹವಾಗುವುದೇ ದೊಡ್ಡ ತೊಂದರೆಯನ್ನು ಆಹ್ವಾನಿಸಿದಂತೆ ಎಂದು ಹೆಚ್ಚಿನವರ ಅಭಿಪ್ರಾಯವಾಗಿದೆ. ಆದರೆ ಇಬ್ಬರನ್ನು ವಿವಾಹವಾಗುವುದೆಂದರೆ? ತೊಂದರೆ ದ್ವಿಗುಣವಾಗುವುದಿಲ್ಲವೇ?
ಈ ಪ್ರಶ್ನೆಯನ್ನು ಭಾರತದ ಒಂದು ಹಳ್ಳಿಯ ಜನರಲ್ಲಿ ಕೇಳಿದರೆ ನಿಮಗೆ ಅಚ್ಚರಿಯಾಗುವ ಉತ್ತರವೇ ದೊರಕೀತು, ಏಕೆಂದರೆ ಈ ಹಳ್ಳಿಯಲ್ಲಿ ಪ್ರತಿ ಪುರುಷನೂ ಇಬ್ಬರು ಪತ್ನಿಯರನ್ನು ಹೊಂದಿದ್ದಾನೆ! ಇದು ಇತ್ತೀಚನದ್ದಲ್ಲ, ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಬನ್ನಿ, ಈ ಹಳ್ಳಿ ಯಾವುದು, ಇಬ್ಬರು ಪತ್ನಿಯರ ಮುದ್ದಿನ ಪತಿಯಾಗುವ ಅದೃಷ್ಟ ಪಡೆಯಲು ಎಲ್ಲಿ ಹೋಗಬೇಕು ಎಂಬುದನ್ನು ನೋಡೋಣ...

ಈ ಹಳ್ಳಿ ಎಲ್ಲಿದೆ?
ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿರುವ ದೇರಾಸರ್ ಎಂಬ ಗ್ರಾಮದಲ್ಲಿ ಸುಮಾರು ಎಪ್ಪತ್ತು ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ. ತಮ್ಮ ಸಂಪ್ರದಾಯದ ಪ್ರಕಾರ ಈ ಪಂಗಡದ ಪುರುಷ ಇಬ್ಬರು ಮಹಿಳೆಯರನ್ನು ವಿವಾಹವಾಗಬಹುದು ಹಾಗೂ ದ್ವಿಪತ್ನಿಯರನ್ನು ಹೊಂದಿರುವ ಎಲ್ಲಾ ಪುರುಷರು ಇಲ್ಲಿ ಸುಖಕರ ಜೀವನವನ್ನು ನಡೆಸುತ್ತಿದ್ದಾರೆ.
ಈ ನಂಬಿಕೆಯ ಹಿಂದೆ ಏನಿದೆ?
ಈ ನಂಬಿಕೆಗೆ ಕಾರಣವನ್ನು ಕಂಡುಕೊಂಡರೆ ಕೊಂಚ ಆಘಾತವಾಗಬಹುದು. ಈ ಸಂಪ್ರದಾಯದಲ್ಲಿ ಮೊದಲ ಪತ್ನಿಯಿಂದ ಮಕ್ಕಳನ್ನು ಪಡೆಯುವಂತಿಲ್ಲ! ಹಾಗಾಗಿ ಮಕ್ಕಳನ್ನು ಪಡೆಯಬೇಕಾದರೆ ಎರಡನೆಯ ವಿವಾಹ ಮಾಡಿಕೊಳ್ಳಬೇಕಾಗುತ್ತದೆ. ಪರಿಣಾಮವಾಗಿ, ಪ್ರತಿ ಪುರುಷನಿಗೂ ಇಲ್ಲಿ ಇಬ್ಬರು ಪತ್ನಿಯರಿದ್ದಾರೆ.
ಈ ನಂಬಿಕೆಯ ಮಿಥ್ಯೆ
ಈ ನಂಬಿಕೆಯನ್ನು ಸರ್ವಥಾ ಪಾಲಿಸಿಕೊಂಡು ಬರುತ್ತಿರುವ ಪಂಗಡದಲ್ಲಿ ಯಾರಿಗೂ ಪ್ರಥಮ ಪತ್ನಿಯಿಂದ ಮಕ್ಕಳಿಲ್ಲ ಹಾಗೂ ಎರಡನೆಯ ಪತ್ನಿಯಿಂದ ಮಾತ್ರವೇ ಮಕ್ಕಳಾಗುತ್ತಿವೆ. ಇದು ಒಂದು ಮನೆಯ ಕಥೆಯಲ್ಲ, ಬದಲಿಗೆ ಇಡಿಯ ಪಂಗಡದಲ್ಲಿಯೇ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಈ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದು ಇಂದಿಗೂ ಜಾರಿಯಲ್ಲಿದೆ.
ಈ ಸಂಪ್ರದಾಯವನ್ನು ಮುರಿದವರ ಕಥೆ?
ಆದರೆ ಈ ಸಂಪ್ರದಾಯಕ್ಕೆ ಯಾವುದೇ ಆಧಾರವಿಲ್ಲ ಹಾಗೂ ಈ ನಂಬಿಕೆಗೆ ಸೆಡ್ಡು ಹೊಡೆದು ಓರ್ವಳೇ ಪತ್ನಿಯನ್ನು ಹೊಂದಿರುವ ಕೆಲವು ಪುರುಷರಿದ್ದಾರೆ. ಆದರೆ ಇವರಿಗೆ ಸಂತಾನ ಭಾಗ್ಯ ಲಭಿಸದೇ ಇರುವುದು ಈ ನಂಬಿಕೆಯ ಹಿಂದಿರುವ ರಹಸ್ಯವನ್ನು ಇನ್ನಷ್ಟು ಸೋಜಿಗಕ್ಕೆ ಒಳಪಡಿಸುತ್ತದೆ.
ವಿಚಿತ್ರವಾದರೂ ನಿಜ
ಸಾಮಾನ್ಯವಾಗಿ ಯಾವುದೇ ಮಹಿಳೆ ತನ್ನ ಪತಿಯನ್ನು ಇನ್ನೊಬ್ಬ ಮಹಿಳೆಯೊಂದಿಗೆ ಇರುವುದನ್ನು ಸಹಿಸಲಾರಳು! ಆದರೆ ಈ ಸಮಾಜದಲ್ಲಿ ಮೊದಲ ಪತ್ನಿ ತನ್ನ ಪತಿಯ ಎರಡನೆಯ ಪತ್ನಿಯನ್ನು ಅಸೂಯೆಯಿಂದಲ್ಲದೇ ಗೌರವದಿಂದ ಕಾಣುವುದು ಮಾತ್ರವಲ್ಲದೇ ಆಕೆಯ ಮಕ್ಕಳನ್ನೂ ತನ್ನ ಮಕ್ಕಳಂತೆಯೇ ಕಂಡು ಸಾಮರಸ್ಯದಿಂದ ಜೀವಿಸುತ್ತಿರುವುದು ಮಾತ್ರ ನಿಜವಾಗಿದೆ. ಈ ಪರಿಯಿಂದ ಇಡಿಯ ಹಳ್ಳಿಯ ಜನರು ಸುಖವಾಗಿ ಬಾಳುತ್ತಿದ್ದಾರೆ. ಈ ವಿಚಿತ್ರ ಸಂಪ್ರದಾಯದ ಬಗ್ಗೆ ನಿಮಗೇನೆನಿಸಿತು? ಬನ್ನಿ, ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ತಿಳಿಸಿ.
ಈ ಊರಿನಲ್ಲಿ ಪ್ರತಿಯೊಂದು ಮಹಿಳೆಗೂ ನಾಲ್ಕೈದು ಗಂಡಂದಿರಂತೆ!!



Click it and Unblock the Notifications
