ಈ ಊರಿನಲ್ಲಿ ಪ್ರತಿಯೊಂದು ಮಹಿಳೆಗೂ ನಾಲ್ಕೈದು ಗಂಡಂದಿರಂತೆ!!

By: manu
Subscribe to Boldsky

ಭಾರತದಲ್ಲಿ ಬಹು ಪತ್ನಿತ್ವಕ್ಕೆ ಅವಕಾಶವಿಲ್ಲ. ಹಾಗೊಮ್ಮೆ ಒಂದಕ್ಕಿಂತ ಹೆಚ್ಚು ಹೆಂಡತಿಯನ್ನು ಹೊಂದಿದ್ದರೆ ಕಾನೂನು ಪ್ರಕಾರ ಅದು ಅಪರಾಧ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಬಹು ಪತಿತ್ವ ಹೊಂದಿದವರಿಗೆ ಏನು? ಎನ್ನುವುದು ಪ್ರಶ್ನೆ. ನಿಜ, ಒಂದು ಗಂಡಿಗೆ ಎರಡು ಹೆಂಡತಿ ಎನ್ನುವುದು ಅಷ್ಟಾಗಿ ಆಶ್ಚರ್ಯ ಹುಟ್ಟಿಸದು, ಇತ್ತೀಚಿನ ದಿನಗಳಲ್ಲಿ ಇದು ಮಾಮೂಲಿನ ಸಂಗತಿಯಾಗಿ ಬಿಟ್ಟಿದೆ!

ಅದು ಏನೇ ಇರಲಿ, ಅದೇ ಒಂದು ಹೆಣ್ಣಿಗೆ ಅನೇಕ ಪತಿಗಳು ಎನ್ನುವುದು ಹುಬ್ಬೇರಿಸುವಂತೆ ಮಾಡುತ್ತದೆ. ಇಂತಹ ಆಶ್ಚರ್ಯ ಹುಟ್ಟಿಸುವಂತಹ ವಿವಾಹ ಪದ್ಧತಿ ಭಾರತದಲ್ಲಿ ನಡೆಯುತ್ತಿದೆ. ಹೌದು, ಮಧ್ಯ ಪ್ರದೇಶದ ಮೆರೊನಾ ಜಿಲ್ಲೆ, ಅಲ್ಲಿಂದ 15 ಕಿ.ಮೀ. ದೂರದಲ್ಲಿ ಸರಾಯ್ ಚೋಳ ಎಂಬ ಸಣ್ಣ ಹಳ್ಳಿಯಿದೆ. ಈ ಹಳ್ಳಿಯಲ್ಲಿ ಬಹುಪತಿತ್ವದ ಸಂಪ್ರಾದಾಯ ಬಳಕೆಯಲ್ಲಿದೆ. ಇಲ್ಲಿ ಒಂದು ಕುಟುಂಬದ ಎಲ್ಲಾ ಸಹೋದರರು ಒಂದೇ ಮಹಿಳೆಯನ್ನು ಮದುವೆಯಾಗುತ್ತಾರೆ!  

ಈ ಊರಿನ ಹುಡುಗಿಯರು ತಮ್ಮ ತಂದೆಯನ್ನೇ ಪತಿಯಾಗಿ ಸ್ವೀಕರಿಸಬೇಕು!

ಈ ಪದ್ಧತಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದಕ್ಕೆ ಪ್ರಮುಖ ಕಾರಣ ಲಿಂಗಗಳ ಅಸಮಾನತೆ. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ, ಪ್ರತಿಯೊಬ್ಬ ಪುರುಷನಿಗೂ ಒಂದೊಂದು ಹೆಣ್ಣನ್ನು ಹುಡುಕಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಹಳ್ಳಿಯ ಜನರು.ಈ ಪದ್ಧತಿ ಹುಟ್ಟಿಕೊಳ್ಳಲು ಕಾರಣವಾದ ಆಶ್ಚರ್ಯಕರ ಸಂಗತಿಗಳನ್ನು ತಿಳಿಯಲು ಮುಂದೆ ಓದಿ... 

ಲಿಂಗಗಳ ಅಸಮಾನತೆ

ಲಿಂಗಗಳ ಅಸಮಾನತೆ

ಮಹಿಳೆಯರ ಸಂಖ್ಯೆ ಅತೀ ಕಡಿಮೆ ಇರುವುದರಿಂದ ಇಲ್ಲಿ ಬಹು ಪತಿತ್ವ ರೂಢಿಯಲ್ಲಿದೆ. ಹಾಗಂತ ಇವರು ಮದುವೆಯಾಗುವುದು ಒಂದೇ ಕುಟುಂಬದ ಹಲವು ಸದಸ್ಯರನ್ನು. ಮನೆಯ ಒಬ್ಬ ಸಹೋದರ ಮದುವೆಯಾದರೆ ಅವನ ಹೆಂಡತಿ ಉಳಿದವರ ಹೆಂಡತಿಯೂ ಹೌದು...!

ಎಲ್ಲರಿಗೂ ಹಕ್ಕಿದೆ

ಎಲ್ಲರಿಗೂ ಹಕ್ಕಿದೆ

ಮನೆಗೆ ಬಂದ ಒಬ್ಬ ಸೊಸೆಯ ಮೇಲೆ ಆ ಕುಟುಂಬದ ಎಲ್ಲಾ ಸದಸ್ಯರಿಗೂ ಹಕ್ಕಿದೆ. ಸರಾಯ್ ಚೋಳ ಎಂಬ ಈ ಗ್ರಾಮದಲ್ಲಿ ಬಹು ಪತಿತ್ವ ಪದ್ಧತಿ ವ್ಯಾಪಕವಾಗಿ ಹರಡಿಕೊಂಡಿದೆ. ಒಬ್ಬ ಮಹಿಳೆ ಒಬ್ಬ ಪುರಷನನ್ನು ಮಾತ್ರ ವಿವಾಹವಾಗಿರುವುದು ಕೇವಲ ಬೆರಳೆಣಿಕೆಯಷ್ಟು ಕುಟುಂಬಗಳಷ್ಟೇ. ಉಳಿದ ಕುಟುಂಬದಲ್ಲಿ ಒಬ್ಬ ಮಹಿಳೆ 5-8 ಜನ ಸದಸ್ಯರನ್ನು ಪತಿಯನ್ನಾಗಿ ಸ್ವೀಕರಿಸಿದ್ದಾರೆ.

ಹಳ್ಳಿ-ಹಳ್ಳಿಯಲ್ಲೂ ಬಹು ಪತಿತ್ವ!

ಹಳ್ಳಿ-ಹಳ್ಳಿಯಲ್ಲೂ ಬಹು ಪತಿತ್ವ!

ಈ ಜಿಲ್ಲೆಯ ಸಮೀಪ ಇರುವ 12 ಹಳ್ಳಿಯಲ್ಲೂ ಈ ಪದ್ಧತಿ ರೂಢಿಯಲ್ಲಿದೆ. ಇದು ಭಾರತೀಯ ಆಧುನಿಕ ಸಮಾಜಕ್ಕೆ ಒಂದು ದುಃಖಕರ ವಿಷಯವಾದರೂ, ಇದು ಸತ್ಯ. ಇದಕ್ಕೆ ಮೂಲ ಕಾರಣ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರುವುದು.

ಹೆಣ್ಣು ಮಗು ಬೇಡ

ಹೆಣ್ಣು ಮಗು ಬೇಡ

ಈ ಹಳ್ಳಿಗಳಲ್ಲಿ ಹೆಣ್ಣು ಜನಿಸಿದರೆ ಹುಡೂ ಎಂದು ಕರೆಯುತ್ತಾರೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿಯವರಿಗೆ ಮಗಳಾಗುವುದು ಇಷ್ಟವಿಲ್ಲ. ಬದಲಿಗೆ ಸೊಸೆಯಂದಿರು ಬೇಕು ಎನ್ನುವ ಅಭಿಪ್ರಾಯದಲ್ಲಿ ಇದ್ದಾರೆ. ಮಗಳಿದ್ದರಷ್ಟೇ ಸೊಸೆ ಬರಲು ಸಾಧ್ಯ ಎನ್ನುವ ಅರಿವಾಗಬೇಕಿದೆ.

ಈಗ ಅರಿವಾಗಿದೆ

ಈಗ ಅರಿವಾಗಿದೆ

ಹೆಣ್ಣು ಎಷ್ಟು ಪ್ರಮುಖವಾದವಳು ಎನ್ನುವುದು ಇಲ್ಲಿಯ ಜನರಿಗೆ ಈಗ ಅರಿವಾಗುತ್ತಿದೆ. ಬಹುಪತಿತ್ವದಿಂದ ಕೊಂಚ ಬೇಸರಕ್ಕೆ ಒಳಗಾಗುತ್ತಿದ್ದಾರೆ. ಹೆಣ್ಣಿಗೆ ಹೆಚ್ಚು ಪ್ರಾಮುಖ್ಯತೆ ನೀಡಲು ಪ್ರಾರಂಭಿಸಿದ್ದಾರೆ.

ಇಲ್ಲಿಗಷ್ಟೇ ಸೀಮಿತವಲ್ಲ

ಇಲ್ಲಿಗಷ್ಟೇ ಸೀಮಿತವಲ್ಲ

ಈ ಪದ್ಧತಿ ಕೇವಲ ಮಧ್ಯಪ್ರದೇಶದಲ್ಲಿ ಮಾತ್ರವಲ್ಲ. ಉತ್ತರಖಂಡದ ಡೆಹ್ರಾಡೂನ್ ಸಮೀಪದ ಸಣ್ಣ ಗ್ರಾಮದಲ್ಲಿ 21 ವರ್ಷದ ಒಬ್ಬ ಮಹಿಳೆಗೆ ಐದು ಗಂಡಂದಿರು, ಅವರೆಲ್ಲರಿಂದ ಒಂದು ಮಗುವನ್ನು ಪಡೆದು ಬಹು ಪತಿತ್ವಕ್ಕೆ ಸಾಕ್ಷಿಯಾಗಿ ನಿಂತಿದ್ದಾಳೆ.

ಸಂಸಾರದಲ್ಲಿ ಖುಷಿಯಿದೆ

ಸಂಸಾರದಲ್ಲಿ ಖುಷಿಯಿದೆ

ರಾಜೋ ಎನ್ನುವವನು ಗುಡ್ಡು ಎನ್ನುವ ಮಹಿಳೆಯನ್ನು ವಿವಾಹವಾಗಿದ್ದಾನೆ. ಕಾನೂನು ಪ್ರಕಾರ ಗುಡ್ಡುವಿಗೆ ರಾಜೋ ಮಾತ್ರ ಪತಿ. ಆದರೆ ಸಂಸಾರದಲ್ಲಿ ಅವನ ನಾಲ್ಕು ಸಹೋದರರು ಸಹ ಪತಿಯಂದಿರೆ. ರಾಜೋ ಹೇಳುವ ಪ್ರಕಾರ ಕುಟುಂಬ ದೊಡ್ಡದೆನಿಸಿದರೂ ಸಂತೋಷವಾಗಿದ್ದೇವೆ ಎನ್ನುತ್ತಾರೆ.

English summary

A town where one woman has multiple husbands

Fifteen kilometers from Morena district in Madhya Pradesh there is a small village known as Sarai Chola, here the tradition of polygamy is still in practice. It is to be noted that Polygamy is banned in India. Here in one family all the brothers of one family get married to a single woman. This has been practice for many years in this area.
Subscribe Newsletter