For Quick Alerts
ALLOW NOTIFICATIONS  
For Daily Alerts

ಶವಗಳ ಬಗ್ಗೆ ಇರುವ ಇಂತಹ ಕಟ್ಟು ಕಥೆಗಳು ಬರೀ ಸುಳ್ಳು! ಇದನ್ನೆಲ್ಲಾ ನಂಬಬೇಡಿ...

|

ಜೀವಂತ ಶರೀರವೇ ಒಂದು ವಿಚಿತ್ರಗಳ ಆಗರವಾಗಿದೆ. ಆದರೆ ಶರೀರದಿಂದ ಪ್ರಾಣ ಹೊರಟು ಹೋದ ಬಳಿಕ ಹಲವಾರು ಕುತೂಹಲಗಳು ಉಳಿದುಕೊಳ್ಳುತ್ತವೆ. ಮೃತದೇಹಗಳ ಬಗ್ಗೆ ಇರುವ ತಪ್ಪು ನಂಬಿಕೆಗಳನ್ನು ಸತ್ಯದಿಂದ ಬೇರ್ಪಡಿಸಲು ನಾವು ಹೆಚ್ಚಿನ ಸಮಯ ವ್ಯಯಿಸುವುದಿಲ್ಲ, ಮೂಲತಃ ನಾವು ಅನಿವಾರ್ಯ ಸಂದರ್ಭಗಳ ಹೊರತಾಗಿ ಶವಗಳ ಬಗ್ಗೆ ಉಲ್ಲೇಖಿಸುವುದೇ ಇಲ್ಲ.

ಶವಗಳು ಪ್ಲೇಗ್ ರೋಗಕ್ಕೆ ಮೂಲ, ಮೃತ ಶರೀರದಿಂದಲೂ ಕೆಲವು ಕಾಯಿಲೆಗಳನ್ನು ಗುಣಪಡಿಸಬಹುದು ಮೊದಲಾದವು ಜನರಿಂದ ಕೇಳಲ್ಪಡುವ ವಿಷಯಗಳಾದರೆ ಮೃತದೇಹಗಳನ್ನೇ ಪೂಜಿಸಿ ದೇವರ ಅನುಗ್ರಹ ಪಡೆಯುವಂತಹ ಆಘೋರಿಗಳೂ ನಮ್ಮ ದೇಶದಲ್ಲಿದ್ದಾರೆ. ಶವಗಳನ್ನು ಭೂತಗಳು ಆವರಿಸಿಕೊಳ್ಳುತ್ತವೆ ಎನ್ನುವವರೂ ಇದ್ದಾರೆ. ಇಂತಹ ಕೆಲವು ಮಿಥ್ಯೆಗಳು ಹಾಗೂ ಇವುಗಳ ಬಗ್ಗೆ ವೈಜ್ಞಾನಿಕ ವಿವರಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ...

ಮರಣಾನಂತರವೂ ಕೂದಲು ಮತ್ತು ಉಗುರು ಬೆಳೆಯುತ್ತವೆ

ಮರಣಾನಂತರವೂ ಕೂದಲು ಮತ್ತು ಉಗುರು ಬೆಳೆಯುತ್ತವೆ

ಸರ್ವಥಾ ಇಲ್ಲ! ನಮ್ಮ ದೇಹದ ಉಗುರು ಮತ್ತು ಕೂದಲುಗಳು ಸಹಾ ಜೀವಕೋಶಗಳಿಂದಲೇ ನಿರ್ಮಿಸಲ್ಪಟ್ಟಿವೆ ಹಾಗೂ ಇತರ ಜೀವಕೋಶಗಳಂತೆಯೇ ಇವು ಸಹಾ ಜೀವಕೋಶಗಳ ವಿಭಜನೆಯಿಂದಲೇ ಬೆಳವಣಿಗೆ ಪಡೆಯುತ್ತವೆ. ಈ ಬೆಳವಣಿಗೆಗೆ ಹೃದಯದಿಂದ ಸತತವಾಗಿ ಆಮ್ಲಜನಿಕ ಭರಿತ ರಕ್ತಪರಿಚಲನೆಯ ಅಗತ್ಯವಿದೆ. ಜೀವ ಇಲ್ಲದ ಶರೀರದ ಹೃದಯವೇ ಸ್ಥಗಿತಗೊಂಡಿರುವಾಗ, ರಕ್ತಪೂರೈಕೆಯಾಗುವುದಿಲ್ಲ ಹಾಗೂ ಯಾವುದೇ ಜೀವಕೋಶ ವಿಭಜನೆಗೊಳ್ಳುವುದಿಲ್ಲ, ಉಗುರು ಕೂದಲುಗಳ ಸಹಿತ! ಆದರೆ ಹೊರನೋಟಕ್ಕೆ ಉಗುರು ಕೂದಲುಗಳು ಬೆಳೆದಂತೆ ತೋರುತ್ತವೆ. ಏಕೆಂದರೆ ಮೃತ ಶರೀರದ ಚರ್ಮ ಸತತವಾಗಿ ತನ್ನ ಆರ್ದ್ರತೆಯನ್ನು ಕಳೆದುಕೊಳ್ಳುತ್ತಾ ಹೋಗುವ ಕಾರಣ ಹೆಚ್ಚು ಹೆಚ್ಚು ಮುದುಡುತ್ತಾ ಹೋಗುತ್ತದೆ.

ಮರಣಾನಂತರವೂ ಕೂದಲು ಮತ್ತು ಉಗುರು ಬೆಳೆಯುತ್ತವೆ

ಮರಣಾನಂತರವೂ ಕೂದಲು ಮತ್ತು ಉಗುರು ಬೆಳೆಯುತ್ತವೆ

ಇದೇ ರೀತಿ ಉಗುರುಗಳ ಬುಡದ ಚರ್ಮನ್ನೂ ಮುದುಡಿ ಹಿಂದೆ ಸರಿಯುತ್ತದೆ. ಪರಿಣಾಮವಾಗಿ ಉಗುರಿನ ಬುಡದ ಭಾಗ ಈಗ ಪ್ರಕಟಗೊಂಡು ಈಗಾಗಲೇ ಹೊರಗಿಣಿಕಿದ್ದ ಭಾಗದ ಜೊತೆಗೂಡಿ ಉದ್ದವಾದಂತೆ ತೋರುತ್ತದೆ. ಇದೇ ರೀತಿ ತಲೆಯ ಚರ್ಮವೂ ಮುದುಡಿ ನೆತ್ತಿಯ ಚರ್ಮವನ್ನು ಸೆಳೆಯುತ್ತದೆ ಹಾಗೂ ಇದರಿಂದ ಕೂದಲುಗಳು ನೆಟ್ಟಗೆ ನಿಂತುಕೊಳ್ಳುತ್ತವೆ ಎಂದು ಬಿಬಿಸಿ ಗೆ ಕ್ಲಾಡಿಯಾ ಹ್ಯಾಮಂಡ್ ಎಂಬುವರು ವಿವರಿಸಿದ ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೇ ಚರ್ಮದ ಒಣಗುವಿಕೆಯಿಂದ ಸಂಕುಚಿತಗೊಳ್ಳುವ ಕಾರಣ ಕೂದಲುಗಳು ನೆಟ್ಟಗೆ ನಿಂತುಕೊಳ್ಳತೊಡಗುತ್ತವೆ. ಹೀಗೆ ನಿಂತ ಕೂದಲು ಸಹಾ ಬೆಳೆದಂತೆ ತೋರುತ್ತದೆ.

ಮೃತದೇಹಗಳು ಅಪಾಯಕಾರಿ!

ಮೃತದೇಹಗಳು ಅಪಾಯಕಾರಿ!

ಯಾವುದೇ ಮೃತದೇಹ ಕೊಳೆಯತೊಡಗಿದ ತಕ್ಷಣ ಅಪಾಯಕಾರಿಯಾಗುತ್ತದೆ ಎಂಬ ವಾದವನ್ನು ಸಮರ್ಥಿಸುವ ಯಾವುದೇ ಪುರಾವೆ ವಿಜ್ಞಾನದ ಬಳಿ ಇಲ್ಲ. ಸಾಮಾನ್ಯವಾಗಿ ಪ್ರಾಣಿಗಳ ಮೃತದೇಹ ಕೊಳೆಯುವಾಗ ಇವನ್ನು ತಿನ್ನಲು ಆಗಮಿಸುವ ಕ್ರಿಮಿಕೀಟಗಳು ಕಾಯಿಲೆಯ ಸಂಕೇತವೆಂದೇ ತಿಳಿದಿರುವ ನಾವು ಇದೇ ನಂಬಿಕೆಯನ್ನು ಶವಕ್ಕೂ ಅನ್ವಯಿಸಿಬಿಡುತ್ತೇವೆ. ಹತ್ತೊಂಭತ್ತನೆಯ ಶತಮಾನದಲ್ಲಿದ್ದ ವೈದ್ಯರು ಮತ್ತು ನಾಗರಿಕ ಸಂಘಟನೆಯೊಂದರ ಸದಸ್ಯರ ನಂಬಿಕೆಯೊಂದು ಮಿಯಾಸ್ಮಾಟಿಕ್ ಸಿದ್ದಾಂತ (Miasmatic theory) ದ ರೂಪದಲ್ಲಿ ಪ್ರಸ್ತುತಗೊಂಡಿತ್ತು.

ಮೃತದೇಹಗಳು ಅಪಾಯಕಾರಿ!

ಮೃತದೇಹಗಳು ಅಪಾಯಕಾರಿ!

ಈ ಸಿದ್ದಾಂತದ ಪ್ರಕಾರ "ಕೊಳೆಯಲು ಆರಂಭಿಸಿದ ಶವದಿಂದ ಹೊರಹೊಮ್ಮುವ ಅನಿಲಗಳು, ಅಥವಾ ಈಗಾಗಲೇ ರೋಗಪೀಡಿತರಾಗಿರುವ ವ್ಯಕ್ತಿಗಳು ಬಿಟ್ಟ ಉಸಿರು ಅಥವಾ ಕೊಳೆಯುತ್ತಿರುವ ತರಕಾರಿಯಿಂದ ಹೊಮ್ಮುವ ಅನಿಲಗಳು ಕಾಯಿಲೆಗಳನ್ನು ಹರಡಲು ಕಾರಣವಾಗುತ್ತದೆ" ಇಲ್ಲಿ ಮಿಯಾಸ್ಮಾ ಎಂಬ ಪದಕ್ಕೆ ಗ್ರೀಕ್ ಭಾಷೆಯಲ್ಲಿ ಪ್ರದೂಷಣೆ ಎಂಬ ಅರ್ಥವಿದ್ದು ಇದೇ ಪದವನ್ನು ಸಿದ್ದಂತಕ್ಕೂ ನೀಡಲಾಗಿತ್ತು. ಆದರೆ ಶೀಘ್ರದಲ್ಲಿಯೇ ಈ ಸಿದ್ದಾಂತವನ್ನು ಅಲ್ಲಗಳೆದು ಇದರ ಬದಲಿಗೆ ವ್ಯತಿರಿಕ್ತ ಹೇಳಿಕೆ ನೀಡುವ ಜರ್ಮ್ ಸಿದ್ದಾಂತವನ್ನು ಮಂಡಿಸಲಾಯಿತು.

ಎರಡು ಅಥಹೆಚ್ಚಿನ ಶವಗಳು ಒಂದೇ ಕಡೆ ಇದ್ದರೆ ಇನ್ನೂ ಹೆಚ್ಚಿನ ಅಪಾಯಕಾರಿ

ಎರಡು ಅಥಹೆಚ್ಚಿನ ಶವಗಳು ಒಂದೇ ಕಡೆ ಇದ್ದರೆ ಇನ್ನೂ ಹೆಚ್ಚಿನ ಅಪಾಯಕಾರಿ

"ಮೃತ ದೇಹಗಳು ರೋಗಗಳನ್ನು ಹರಡುವುವುದು ವಿಪತ್ತು ಪರಿಹಾರ ಕಾರ್ಯಕ್ಕೆ ಬಲವಾದ ಅಡ್ಡಿಯಾಗಿದೆ. ಸಾಮಾನ್ಯವಾಗಿ ನೈಸರ್ಗಿಕ ವಿಕೋಪಗಳ ಬಳಿಕ ಒಂದೇ ಸಮಯದಲ್ಲಿ ದೊರಕುವ ಹೆಚ್ಚು ಜನರ ಶವಗಳು ಉಳಿದವರಲ್ಲಿ ಭಾರೀ ಹೆದರಿಕೆಯನ್ನುಂಟುಮಾಡುತ್ತವೆ ಹಾಗೂ ಈ ಮೃತಶರೀರಗಳನ್ನು ಅತಿಶೀಘ್ರವೇ ಮಣ್ಣು ಮಾಡಲು ಅವಸರಿಸುತ್ತಾರೆ. ಈ ಒತ್ತಡ ವಿಪತ್ತು ಪರಿಹಾರ ಕಾರ್ಯಗಳಿಗೆ ಧಕ್ಕೆಯುಂಟುಮಾಡುತ್ತದೆ. ಸಾಮಾನ್ಯವಾಗಿ ಮೃತದೇಹಗಳು ಕೊಳೆಯಲು ಈ ಸೂಕ್ಷ್ಮಜೀವಿಗಳು ನೆರವಾಗುತ್ತವೆಯೇ ಹೊರತು ರೋಗಗಳನ್ನು ಹರಡುವುದಿಲ್ಲ. ಅಲ್ಲದೇ ರೋಗ ಹರಡುವ ವೈರಸ್ಸು ಮತ್ತು ಬ್ಯಾಕ್ಟೀರಿಯಾಗಳೂ ಮೃತದೇಹದಲ್ಲಿದ್ದರೂ ಕೆಲವು ಗಂಟೆಗಳಿಗೂ ಮೀರಿ ಬದುಕುವುದಿಲ್ಲ"

Most Read:ಅಚ್ಚರಿ ಪಡುವ ಮಾಹಿತಿಗಳು-ಶವವನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ನೋಡಿ...

ಎರಡು ಅಥಹೆಚ್ಚಿನ ಶವಗಳು ಒಂದೇ ಕಡೆ ಇದ್ದರೆ ಇನ್ನೂ ಹೆಚ್ಚಿನ ಅಪಾಯಕಾರಿ

ಎರಡು ಅಥಹೆಚ್ಚಿನ ಶವಗಳು ಒಂದೇ ಕಡೆ ಇದ್ದರೆ ಇನ್ನೂ ಹೆಚ್ಚಿನ ಅಪಾಯಕಾರಿ

ಆದರೆ ಈ ವಿಷಯದಲ್ಲಿ ಕೆಲವು ವಿಷಯಗಳನ್ನು ಹೊರತುಪಡಿಸಬೇಕಾಗುತ್ತದೆ. ಒಂದು ವೇಳೆ ಮೃತದೇಹಗಳಲ್ಲಿ ಎಬೋಲಾ ಎಂಬ ವೈರಸ್ಸು ಇದ್ದರೆ ಇದು ಕಾಳಜಿಗೆ ಕಾರಣವಾಗುತ್ತದೆ. ಈ ವೈರಸ್ಸಿನ ಧಾಳಿಯಿಂದಲೇ ಸಾವು ಸಂಭವಿಸಿದ್ದರೆ ಈ ಪ್ರಬಲ ವೈರಸ್ಸಿನ ಸೋಂಕನ್ನು ನಿರೋಧಿಸುವ ಗುಣ ಹೊಂದಿರುವ ರಕ್ಷಾಕವಚವನ್ನು ತೊಟ್ಟ ಸಿಬ್ಬಂದಿ ಮಾತ್ರವೇ ಈ ದೇಹಗಳನ್ನು ಆದಷ್ಟೂ ಬೇಗನೇ ಮಣ್ಣು ಮಾಡಬೇಕಾಗುತ್ತದೆ. ಒಂದು ವೇಳೆ ಮೃತದೇಹವನ್ನು ಶೀತಲಪೆಟ್ಟಿಗೆಯಲ್ಲಿರಿಸಿದ್ದರೆ ಈ ದೇಹದಲ್ಲಿದ್ದ ಹೆಚ್ ಐ ವಿ ವೈರಸ್ಸುಗಳು ಸುಮಾರು ಹದಿನಾರು ದಿನಗಳ ಕಾಲ ಬದುಕಿರಬಲ್ಲವು. ರಕ್ತದ ಮೂಲಕ ಸೋಂಕು ಹರಡುವ ಹೆಪಟೈಟಿಸ್ ಮೊದಲಾದ ವೈರಸ್ಸುಗಳು, ಕ್ಷಯರೋಗ ಮತ್ತು ಜಠರ ಮತ್ತು ಕರುಳುಗಳಲ್ಲಿ ಸೋಂಕು ಉಂಟುಮಾಡುವ ವೈರಸ್ಸುಗಳು ಅನಾರೋಗ್ಯ ಹರಡಲು ಕಾರಣವಾಗಬಹುದು. ಆದರೆ ಈ ಹರಡುವಿಕೆಯನ್ನು ತಡೆಯಲು ಅಗತ್ಯ ರಕ್ಷಣಾ ಕ್ರಮ ಮತ್ತು ಸಾಕಷ್ಟು ನೈರ್ಮಲ್ಯದ ವಿಧಾನಗಳನ್ನು ಪಾಲಿಸುವುದು ಅಗತ್ಯವಾಗಿದೆ.

Most Read: ತನ್ನ ತಾಯಿ ಶವವನ್ನು ತಿಂಗಳುಗಟ್ಟಲೆ ಜೊತೆಗಿಟ್ಟುಕೊಂಡವಳ ಖತರ್ನಾಕ್ ಸ್ಟೋರಿ ಇದು!

ಸಂರಕ್ಷಕಗಳನ್ನು ಸವರಿ ರಕ್ಷಿಸುವುದರಿಂದ ಶವ ’ಸುರಕ್ಷಿತ’ ವಾಗುತ್ತದೆ

ಸಂರಕ್ಷಕಗಳನ್ನು ಸವರಿ ರಕ್ಷಿಸುವುದರಿಂದ ಶವ ’ಸುರಕ್ಷಿತ’ ವಾಗುತ್ತದೆ

the Funeral Consumer's Alliance (ಶವಸಂಸ್ಕಾರವನ್ನು ಲಾಭರಹಿತವಾಗಿ ನಿರ್ವಹಿಸಿಕೊಡುವ ಒಂದು ಸಂಸ್ಥೆ) ನೀಡಿರುವ ವರದಿಯ ಪ್ರಕಾರ ಶವಗಳು ಕೆಡದಂತೆ ಉಳಿಸಲು ಸವರುವ ಕ್ರಮಗಳಿಂದ ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಈ ಕ್ರಮಗಳನ್ನು ಕೆನಡಾದ Centers for Disease Control ಮತ್ತು ಇತರ ಸಂಬಂಧಿತ ಸಂಸ್ಥೆಗಳು ಅನುಸರಿಸಿಕೊಂಡು ಬರುತ್ತಿವೆ. ಶವವನ್ನು ಮಣ್ಣುಮಾಡುವ ಮೊದಲು ಸಂರಕ್ಷಕಗಳನ್ನು ಸವರುವುದರಿಂದ ದೇಹ ವಿರೂಪಗೊಳ್ಳುದೇ ಅಂತಿಮ ದರ್ಶನ, ಶವದ ಅಂತಿಮ ಸಂಸ್ಕಾರ ಮೊದಲಾದವುಗಳು ಸಾಂಗವಾಗಿ ನೆರವೇರುತ್ತವೆ ಎಂದು ಹೇಳುವ ಈ ಸಂಸ್ಥೆಗಳ ಕ್ರಮಗಳಿಗೆ ಸಾಮಾನ್ಯವಾಗಿ ಯಾವುದೇ ಕಾನೂನಿನ ಅಗತ್ಯತೆಯಿಲ್ಲ. ಅಲ್ಲದೇ ಮೃತದೇಹವೇ ಮೊದಲಾಗಿ ಅಪಾಯಕಾರಿಯಲ್ಲ ಹಾಗೂ ಇದಕ್ಕೆ ಸವರುವ ಸಂರಕ್ಷಕಗಳಿಂದಲೇ ಇವುಗಳನ್ನು ನಿರಪಾಯಕಾರಿಯಾಗಿಸಲಾಗಿದೆ ಎಂಬುವುದೂ ಸತ್ಯವಲ್ಲ.

Most Read: ವರ್ಷಗಳೇ ಕಳೆದರೂ, ಇಲ್ಲಿನ ಶವಗಳು ಕೊಳೆಯುವುದಿಲ್ಲ!

ಆಸ್ಪತ್ರೆಯ ಮಂಚದಲ್ಲಿ ಶವ ಎದ್ದು ಕುಳಿತುಕೊಳ್ಳುತ್ತದೆ!

ಆಸ್ಪತ್ರೆಯ ಮಂಚದಲ್ಲಿ ಶವ ಎದ್ದು ಕುಳಿತುಕೊಳ್ಳುತ್ತದೆ!

ಭಯಾನಕ ಚಲನಚಿತ್ರಗಳಲ್ಲಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲು ಉಪಯೋಗಿಸುವ ತಂತ್ರ ವಾಸ್ತವದಲ್ಲಿ ಅಪ್ಪಟ ಸುಳ್ಳಾಗಿದೆ. ಕೊಳೆಯುವ ಹಂತದಲ್ಲಿರುವ ಶವದ ಕೆಲವು ಅಂಗಗಳು ವಿಪರಿತವಾದ ಸೆಳೆತಕ್ಕೆ ಒಳಗಾಗುವುದರಿಂದ ಕೊಂಚ ತಿರುಚಿಕೊಳ್ಳಬಹುದು ಹಾಗೂ ಚಿಕ್ಕದಾದ ಸದ್ದುಗಳನ್ನೂ ಹೊರಡಿಸಬಹುದು. ಕೊಳೆಸುತ್ತಿರುವ ಬ್ಯಾಕ್ಟೀರಿಯಾಗಳು ಹೊರಡಿಸುವ ಅನಿಲಗಳೂ ದೇಹದಿಂದ ಹೊರಹೊಮ್ಮುವಾಗ ಸದ್ದು ಹೊರಡಿಸಬಹುದು. ಮರಣಾನಂತರದ ಬದಲಾವಣೆಗಳ ಹಂತದಲ್ಲಿ ದೇಹ ಅಲ್ಲಲ್ಲಿ ಚಲನೆಯನ್ನು ಪ್ರಕಟಿಸುತ್ತದೆ. ಆದರೆ ಎದ್ದು ಕುಳಿತುಕೊಳ್ಳುವಷ್ಟೇನೂ ಇರುವುದಿಲ್ಲ.

ಶವಪೆಟ್ಟಿಗೆಯಲ್ಲಿಡದೇ ಶವದ ಅಂತಿಮ ಸಂಸ್ಕಾರ ಮಾಡಿದರೆ ಇದರಿಂದ ಅಂತರ್ಜಲ ಕಲುಶಿತಗೊಳ್ಳುತ್ತದೆ!

ಶವಪೆಟ್ಟಿಗೆಯಲ್ಲಿಡದೇ ಶವದ ಅಂತಿಮ ಸಂಸ್ಕಾರ ಮಾಡಿದರೆ ಇದರಿಂದ ಅಂತರ್ಜಲ ಕಲುಶಿತಗೊಳ್ಳುತ್ತದೆ!

ಇಲ್ಲ! ಸಾಮಾನ್ಯವಾಗಿ ಶವವನ್ನು ಮೂರುವರೆ ಅಡಿಯ ಹೊಂಡದಲ್ಲಿ ತೋಡಲಾಗುತ್ತದೆ. ಅಂತರ್ಜಲ ಸಿಗಬೇಕಿದ್ದರೆ ಕನಿಷ್ಟ ಎಪ್ಪತ್ತೈದು ಅಡಿಯಾದರೂ ಕೆಳಕ್ಕಿಳಿಯಲೇಬೇಕು. ಈ ಆಳ ಅತಿ ಸಮೃದ್ದ ನೀರಿರುವಲ್ಲಿ ಮಾತ್ರವೇ ಹೊರತು ಉಳಿದಂತೆ ಸಾಮಾನ್ಯ ಇನ್ನೂರು ಅಡಿ ಕೆಳಗೆ, ಹಲವೆಡೆ ಮುನ್ನೂರು ಅಡಿಗೂ ಹೆಚ್ಚು ಆಳದಲ್ಲಿ ತೋಡಲಾಗುತ್ತದೆ. ಹಾಗಾಗಿ ಒಂದು ವೇಳೆ ಅಂತರ್ಜಲಕ್ಕೆ ಅಪಾಯ ಎದುರಾಗುವುದೇ ಇದ್ದಲ್ಲಿ ಇದಕ್ಕೆ ಬೇರೆ ಕಾರಣಗಳಿರುತ್ತದೆ. ಅಲ್ಲದೇ ಈಗಾಗಲೇ ತಿಳಿದಿರುವ ನೀರಿನ ಸೆಲೆಗಳಿಗೆ ನೀಡಲಾಗಿದ್ದ ಸುರಕ್ಷತಾ ಕ್ರಮಗಳನ್ನೂ ಈ ನೀರು ಅಪಾಯಕಾರಿಯಲ್ಲ ಎಂದು ಮನವರಿಕೆಯಾದ ಬಳಿಕ ಹಿಂತೆಗೆದುಒಳ್ಳಲಾಗಿದೆ ಎಂದು ದ ಗ್ರೀನ್ ಬರಿಯಲ್ ಕೌಂಸಿಲ್ ಸಂಸ್ಥೆ ತಿಳಿಸುತ್ತದೆ. ಶವವನ್ನು ಮಣ್ಣು ಮಾಡಿದ ಬಳಿಕ ಮಣ್ಣಿನಲ್ಲಿದ್ದ ಸೂಕ್ಷ್ಮಕ್ರಿಮಿಗಳು ಶರೀರವನ್ನು ಕೊಳೆಸಿ ಗೊಬ್ಬರವಾಗಿಸುತ್ತವೆಯೇ ಹೊರತು ವಿಷವಾಗಿಸುವುದಿಲ್ಲ.

ದಹನಕ್ರಿಯೆಯ ಬಳಿಕ ಉಳಿಯುವುದು ಬೂದಿ

ದಹನಕ್ರಿಯೆಯ ಬಳಿಕ ಉಳಿಯುವುದು ಬೂದಿ

ಸಾಮಾನ್ಯವಾಗಿ ಶವವನ್ನು ಉರಿಸಿ ಭಸ್ಮವಾಗಿಸುವ ಸಂಸ್ಕಾರಗಳ ಬಳಿಕ ಉಳಿದ ಬೂದಿಯನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಈ ಕ್ರಿಯೆಯನ್ನು ಸ್ವಯಂಚಾಲಿತವಾಗಿ ನಡೆಸುವ ಯಂತ್ರಗಳ ಕಾರ್ಯವಿಧಾನ ಕೊಂಚ ಭಿನ್ನವಾಗಿದೆ. ಶವವನ್ನು ಅತಿ ತಾಪಮಾನದಲ್ಲಿ ಸುಡಲಾಗುತ್ತದೆ ಹಾಗೂ ಉಳಿದ ಮೂಳೆ ಮೊದಲಾದ ಗಟ್ಟಿಭಾಗವನ್ನು ಕ್ರೆಮುಲ್ಯೇಟರ್ ಎಂಬ ಯಂತ್ರದಲ್ಲಿ ಅರೆಯಲಾಗುತ್ತದೆ ಇಲ್ಲಿ ಬಾಲ್ ಬೇರಿಂಗ್ ಅಥವಾ ತಿರುಗುತ್ತಿರುವ ಬ್ಲೇಡುಗಳು ಮೂಳೆಗಳನ್ನು ಚಿಕ್ಕದಾಗಿ ತುಂಡರಿಸಿ ರವೆಯಂತಹ ಬೂದುಬಣ್ಣದ ಪುಡಿಯನ್ನು ನೀಡುತ್ತದೆ, ಆದರೆ ಇದು ಬೂದಿಯಲ್ಲ ಎಂದು ಹೌಸ್ಟಫ್ ವರ್ಕ್ಸ್ ಎಂಬ ತಾಣ ವಿವರಿಸುತ್ತದೆ.

English summary

Myths About Dead Bodies!

Bodies are weird enough, but it's the dead ones that hold real intrigue. The fact that most of us just don't spend that much time around them means it's hard to separate truth from fiction; corpses have been thought to be responsible for plagues, as well as to carry magic healing properties. Below, some dead body myths that won't give up the ghost—and explanations for the real-life science behind them.
X
Desktop Bottom Promotion