Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತನ್ನ ತಾಯಿ ಶವವನ್ನು ತಿಂಗಳುಗಟ್ಟಲೆ ಜೊತೆಗಿಟ್ಟುಕೊಂಡವಳ ಖತರ್ನಾಕ್ ಸ್ಟೋರಿ ಇದು!
ಹೆಣ ನೋಡಿದರೆ ನಮಗೆ ಭೀತಿಯಾಗುವುದು. ಶವದೊಂದಿಗೆ ಹಲವಾರು ದಿನಗಳನ್ನು ಕಳೆದಿರುವಂತಹ ಕೆಲವು ಸುದ್ದಿಗಳನ್ನು ನೀವು ಓದಿರಬಹುದು. ಇಂತಹ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಗಳು ಕೂಡ ಇರುವರು. ಆದರೆ ಮಾದಕ ದ್ರವ್ಯ, ಅಕ್ರಮ ಆಯುಧವನ್ನು ಹಿಟ್ಟುಕೊಳ್ಳುವಂತೆ ಶವವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪರಾಧ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

ಈ ಲೇಖನದಲ್ಲಿ ತನ್ನ ತಾಯಿ ಶವದೊಂದಿಗೆ ತಿಂಗಳುಗಟ್ಟಲೆ ಉಳಿದುಕೊಂಡಿರುವ ಮಹಿಳೆಯೊಬ್ಬಳ ಬಗ್ಗೆ ನಿಮಗೆ ಹೇಳಿಕೊಡಲಿದ್ದೇವೆ. ಆಕೆ ಸಾವಿನ ವಿವಿಧ ಹಂತಗಳನ್ನು ತಿಳಿಯಲು ಬಯಸಿದ್ದಾಳೆಂದು ತಿಳಿದುಬಂತು. ಈ ವಿಚಿತ್ರ ಸುದ್ದಿ ಬಗ್ಗೆ ನೀವು ವಿವರ ತಿಳಿಯಿರಿ.

ತಿಂಗಳ ಬಳಿಕ ಸ್ಮಶಾನಕ್ಕೆ ಹೋದಳು
ಡೊನಾ ಸು ಹಡ್ಗಿನ್ಸ್ ಎಂಬಾಕೆ ತನ್ನ ತಾಯಿ ಮೃತಪಟ್ಟ ಒಂದು ತಿಂಗಳ ಬಳಿಕ ಸ್ಮಶಾನಕ್ಕೆ ತೆರಳಿದಳು. ನನ್ನ ತಾಯಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಮತ್ತು ಎಎಂಎಸ್ ಮೃತದೇಹವನ್ನು ಎಲ್ಲಿ ತೆಗೆದುಕೊಂಡು ಹೋಗಿದ್ದಾರೆಂದು ನನಗೆ ತಿಳಿದಿಲ್ಲ ಮತ್ತು ಇದರಿಂದ ತಾನು ಅಲ್ಲಿಂದ ತೆರಳಿದೆ ಎಂದು ಹೇಳಿದಳು.

ಸ್ಮಶಾನದಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು
ಮಹಿಳೆಯಿಂದ ಇದರ ಬಗ್ಗೆ ಕೇಳಿದ ಸ್ಮಶಾನದ ಸಿಬ್ಬಂದಿ, ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮಹಿಳೆಯು ಕೆಲವು ದಿನ ಮೊದಲೇ ಸಾವನ್ನಪ್ಪಿರುವುದು ಕಂಡುಕೊಂಡರು.

ಪೊಲೀಸರು ತನಿಖೆ ಮಾಡಿದರು
ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದರು ಮತ್ತು ಇದೇ ವೇಳೆ ಮನೆಯಲ್ಲಿ ತಿಂಗಳುಗಳಿಂದ ಕೊಳೆತು ನಾರುತ್ತಿರುವ ಆಕೆಯ ತಾಯಿಯ ಶವ ಕೂಡ ಪತ್ತೆ ಮಾಡಿದರು.

ಸಾವಿನ ಹಂತದ ಬಗ್ಗೆ ತಿಳಿಯಲು ಬಯಸಿದಳು
ಡೊನಾ ಸು ಹಡ್ಗಿನ್ಸ್ ತಾಯಿಯು ಮರಣವನ್ನಪ್ಪಿರುವುದನ್ನು ಪೊಲೀಸರು ದೃಢಪಡಿಸಿಕೊಂಡಾಗ ಅವರು ಮಹಿಳೆಯ ಉತ್ತರ ಕೇಳಿ ದಂಗಾದರು. ಸಾವಿನ ವಿವಿಧ ಹಂತದ ಬಗ್ಗೆ ತಿಳಿಯಲು ಬಯಸಿದ್ದೆ ಎಂದು ಆಕೆ ಹೇಳಿದಳು. ಇದರಿಂದ ತಿಂಗಳುಗಳ ಕಾಲ ತಾಯಿಯ ಶವವನ್ನು ಇಟ್ಟು ನೋಡುತ್ತಿದ್ದೆ ಎಂದಳು.

ಆಕೆ ವಿರುದ್ಧ ಪ್ರಕರಣ ದಾಖಲಾಯಿತು
ತನ್ನ ಮನೆಗೆ ಸಂಬಂಧಿಕರಿಗೆ ಹಾಗೂ ನೆರೆಮನೆಯವರಿಗೆ ಭೇಟಿ ನೀಡಲು ಹಡ್ಗಿನ್ಸ್ ಯಾಕೆ ಬಿಡುತ್ತಿರಲಿಲ್ಲವೆಂದು ಎಲ್ಲರಿಗೂ ತಿಳಿದು ಅಚ್ಚರಿಪಟ್ಟರು. ಹೊರಗಿನವರು ಯಾರಾದರೂ ಹೇಳಿದರೆ ತನ್ನ ತಾಯಿ ನಿದ್ರಿಸುತ್ತಿದ್ದಾರೆ ಎನ್ನುತ್ತಿದ್ದಳು. ತನ್ನ ತಾಯಿಗೆ ಬರುತ್ತಿದ್ದ ಸರ್ಕಾರಿ ಹಣವನ್ನು ಪಡೆಯಲು ಹೀಗೆ ಮಾಡಿರಬಹುದು ಎಂದು ಕೆಲವರು ಹೇಳಿದರೆ, ಮಹಿಳೆಗೆ ಮಾನಶಾಸ್ತ್ರಜ್ಞರ ನೆರವು ಬೇಕು ಎಂದು ಇನ್ನು ಕೆಲವರು ಹೇಳಿದ್ದಾರೆ.
ಇಂತಹ ಅಪರಾಧ ಜಗತ್ತಿನ ಸುದ್ದಿಗಳ ಬಗ್ಗೆ ನಿಮಗೆ ಇನ್ನಷ್ಟು ಓದಲು ಇಷ್ಟವೇ ಎಂದು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications
