For Quick Alerts
ALLOW NOTIFICATIONS  
For Daily Alerts

ಜೀವನದ ಚೈತನ್ಯ ನುಂಗುವ ಟ್ರಾಫಿಕ್

|

ಆದರೆ ಇದೇ ಸ್ವರ್ಗ ಈ ಕೆಳಗಿನ ಕಾರಣಗಳಿಂದ ನರಕ ಅನಿಸುತ್ತದೆ.

1. ಟ್ರಾಫಿಕ್: ಇಲ್ಲಿ ಇಷ್ಟವಾಗದ ಮುಖ್ಯವಾದ ವಿಷಯವೆಂದರೆ ಇಲ್ಲಿಯ ಟ್ರಾಫಿಕ್. ದಿನದ ಅರ್ಧ ಜೀವನವನ್ನು ಟ್ರಾಫಿಕ್ ನಲ್ಲಿ ಕಳೆದಿರುತ್ತೇವೆ. ಟ್ರಾಫಿಕ್ ನೆನೆಸಿಕೊಂಡರೆ ಎಲ್ಲೂ ಹೋಗುವುದು ಬೇಡ ಅನಿಸುತ್ತದೆ. ಕೆಲಸ ಮುಗಿಸಿ ಮನೆ ತಲುಪುವಷ್ಟರಲ್ಲಿ ಜೀವನದ ಚೈತನ್ಯವನ್ನು ಟ್ರಾಫಿಕ್ ನುಂಗಿ ಬಿಟ್ಟಿರುತ್ತದೆ.

2. ಒಂಟಿತನ: ಏನೇ ಇದ್ದರೂ ಇದು ಈ ಬೆಂಗಳೂರಿನಲ್ಲಿ ಯಾರೂ ನಮ್ಮವರು ಇಲ್ಲ ಅಂತ ಅನಿಸುತ್ತಾರೆ. ತುಂಬಾ ಒಂಟಿತನ ಕಾಡಿ ಬಿಡುತ್ತದೆ. ಪಿಜಿ, ರೂಮಿಲ್ಲಿದ್ದರೆ ರುಚಿಯಾದ ಮನೆ ಊಟಕ್ಕೆ ಆಸೆಯಾಗುತ್ತದೆ. ಸ್ನೇಹಿತರೆಲ್ಲರೂ ಜೊತೆಯಾಗಿ ತಂಗಿದ್ದರೂ ಎಲ್ಲರೂ ಫೋನಿನಲ್ಲಿ ಮುಳುಗಿರುವುದರಿಂದ ಒಂಟಿತನ ಕಾಡಲಾರಂಭಿಸುತ್ತದೆ.

ಆಗ ನಮ್ಮ ಭಾವನೆಯನ್ನು ಹೇಳಿಕೊಳ್ಳಲು ಯಾರಾದರೂ ಬೇಕೆನಿಸಲಾರಂಭಿಸುತ್ತದೆ. ಆದ್ದರಿಂದಲೆ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್, ಫ್ಲರ್ಟ್ ಅನ್ನುವ ಟ್ರೆಂಡ್ ಇಲ್ಲಿ ಹೆಚ್ಚಾಗಿದೆ ಎಂದು ನನಗೆ ಅನಿಸುತ್ತಿರುತ್ತದೆ. ಅತಿರೇಕದ ಸ್ವಚ್ಛಂದತೆ ನೋಡುವಾಗ ಭಾರತೀಯ ಸಂಸ್ಕೃತಿ ಮರೆಯಾಗುತ್ತಿದೆಯೆ ಎಂದು ದಿಗಿಲು ಉಂಟಾಗುತ್ತದೆ.

3. ಅಪರಿಚಿತರು: ವರ್ಷಗಟ್ಟಲೆ ಅಕ್ಕ-ಪಕ್ಕದ ಮನೆಯಲ್ಲಿ ವಾಸವಿದ್ದರೂ ಪರಸ್ಪರ ಮಾತಿಲ್ಲ, ಅಪರಿಚಿತರು! ನಾನು ನನ್ನದು ಅನ್ನುವ ಪ್ರಪಂಚ. ದಾರಿಯಲ್ಲಿ ಒಬ್ಬ ವ್ಯಕ್ತಿ ಕುಸಿದು ಬಿದ್ದರೂ ಯಾರೂ ಕೇಳಲ್ಲ, ಅವರರವರ ಪಾಡಿಗೆ ಹೋಗುತ್ತಲೆ ಇರುತ್ತಾರೆ. ನಂಬಿಕೆ, ಸ್ನೇಹ ಕಡಿಮೆಯಾಗಿ ಯಾಂತ್ರಿಕ ಬದುಕು ಆಗಿ ಬಿಟ್ಟಿದೆ. ಐ ಹೇಟ್ ದಿಸ್ ಮೆಷಿನ್ ಲೈಫ್.

4. ಮಾಲಿನ್ಯ: ಊರಿನ ಕೆಮ್ಮಣ್ಣಿನ ದೂಳಿನಲ್ಲಿ ನಡೆಯಲು ಹಿತವಾದರೆ ಬೆಂಗಳೂರಿನ ದೂಳು ನಮ್ಮ ಆರೋಗ್ಯವನ್ನೆ ಹದಗೆಡಿಸುತ್ತದೆ. ಕಸದ ರಾಶಿಗಳು, ಶುದ್ಧ ಗಾಳಿಗಾಗಿ ಪಾರ್ಕಿಗೆ ಹೋಗ ಬೇಕಾದ ಪರಿಸ್ಥಿತಿ ಇವೆಲ್ಲಾ ಇಷ್ಟವಾಗುವುದಿಲ್ಲ.

5. ಭಯ: ಬೆಂಗಳೂರಿನಲ್ಲಿ ಕಳ್ಳತನ, ಕೊಲೆಗಳು ಹೆಚ್ಚಾಗಿ ಆಗುವುದರಿಂದ ಒಂಥರಾ ಭಯದ ಜೀವನ ನಡೆಸುತ್ತಾರೆ. ಅಪರಿಚಿತರು ಮಾತನಾಡಿಸಿದರೆ ಸಂಶಯದಿಂದಲೆ ನೋಡುತ್ತಾರೆ( ಇಲ್ಲಿಯ ಅನುಭವ ನಮ್ಮನ್ನು ಹಾಗೆ ಮಾಡಿಸುತ್ತದೆ). ಶಿಫ್ಟ್ ವರ್ಕ್ ನಲ್ಲಿ ಗಂಡ-ಹೆಂಡತಿ ಪ್ರೀತಿಯಿಂದ ಕುಳಿತು ಮಾತನಾಡಲು ಸಮಯವಿರುವುದಿಲ್ಲ. ರೆಸ್ಟೋರೆಂಟ್ ಗಳಲ್ಲಿ ವಾರಕ್ಕೊಮ್ಮೆ ಹೋಗಿ ಎಲ್ಲರೂ ಜೊತೆಯಾಗಿ ತಿನ್ನುವುದಕ್ಕಿಂತ ಕಾಫಿ ತೋಟದಲ್ಲಿ ದುಡಿದು ಬಂದ ಅಪ್ಪನಿಗೆ ಅಮ್ಮ ಕೈಯಾರೆ ಮಾಡಿದ ಅಡುಗೆ ಬಡಿಸಿ, ನಮಗೂ ಬಡಿಸಿ ತಿನ್ನುವುದೆ ಸ್ವರ್ಗ ಅನಿಸುತ್ತದೆ.

ಇಷ್ಟೆಲ್ಲಾ ಹೇಳುವಳು ಇಲ್ಲಿ ಏಕೆ ಇದ್ದೀಯಾ, ನಿನ್ನ ಊರಿಗೆ ಹೋಗು ಅಂದು ನೀವು ಬೈಯ್ದುಕೊಳ್ಳುತ್ತಿದ್ದರೆ ನನಗೆ ಹೇಳಲಿರುವುದಿಷ್ಟೆ ಓದಿದ ಮೇಲೆ ಏನಾದರೂ ಸಾಧಿಸಬೇಕೆಂಬ ಕನಸು, ಅದಕ್ಕೆ ಇದೇ ಸರಿಯಾದ ಜಾಗ!

English summary

Why I Don't Like Bangalore | Life Of Bangalore | ನನಗೆ ಬೆಂಗಳೂರು ಅಂದ್ರೆ ಏಕೆ ಇಷ್ಟವಿಲ್ಲಾ ಗೊತ್ತಾ? | ಬೆಂಗಳೂರಿನ ಜೀವನ ಶೈಲಿ

For some reason i hate this Banglore life. This my personal view. I hope this is personal experience of being a Bangalorean.
Story first published: Friday, March 30, 2012, 18:22 [IST]
X