Latest Updates
-
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್
ಬೆಂಗಳೂರು ಅಂದ್ರೆ ಸ್ವರ್ಗ ಮತ್ತು ನರಕ!

ನನ್ನ ಹಾಗೆ ಬೆಂಗಳೂರಿಗೆ ಬಂದು ಇಲ್ಲಿ ರೂಮ್, ಪ್ಲಾಟ್, ಪಿಜಿಯಲ್ಲಿ ವಾಸಿಸುತ್ತಾ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬೆಂಗಳೂರು ಕೆಲವೊಂದು ಕಾರಣಗಳಿಗೆ ತುಂಬಾ ಇಷ್ಟವಾಗುತ್ತದೆ, ಮತ್ತೆ ಕೆಲವೊಂದು ಕಾರಣಗಳಿಂದ ಇಷ್ಟವಾಗುವುದಿಲ್ಲ. ಬೆಂಗಳೂರಿನ ಬಗ್ಗೆ ನನ್ನ ಅಭಿಪ್ರಾಯ ನೋಡಿ ಇಲ್ಲಿದೆ. ನೀವು ನಿಮ್ಮ ಅಭಿಪ್ರಾಯ ತಿಳಿಸಬಹುದು.
ಈ ಕೆಳಗಿನ ಕಾರಣಗಳಿಂದ ಬೆಂಗಳೂರು ಅಂದರೆ ನನಗೆ ಇಷ್ಟ:
1. ಬೆಳೆಯಲು ಅವಕಾಶ: ಬೆಂಗಳೂರಿನಲ್ಲಿ ಬೆಳೆಯುವ ಅವಕಾಶ ತುಂಬಾ ಇದೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಗುರಿಯಿಟ್ಟುಕೊಂಡು ಬೆಂಗಳೂರಿಗೆ ಬಂದರೆ ಅದು ಇಲ್ಲಿ ಸಾಧ್ಯವಾಗುತ್ತದೆ. ಏಕೆಂದರೆ ನೀನು ಅದು ಮಾಡ ಬೇಡ , ಇದು ಮಾಡ ಬೇಡ ಎಂದು ಹೇಳುವವರು ಯಾರೂ ಇರುವುದಿಲ್ಲ. ಅರ್ಹತೆ ಇದ್ದರೆ ಕೆಲಸದ ಅವಕಾಶಗಳು ತುಂಬಾ ಇದೆ. ಆದ್ದರಿಂದ ಈ ಬೆಂಗಳೂರು ನನಗೆ ಇಷ್ಟವಾಗುತ್ತದೆ.
2. ಸ್ವತಂತ್ರ: ಬೆಂಗಳೂರಿಗೆ ಬಂದ ಮೇಲೆ ಸ್ವತಂತ್ರ ಮನೋಭಾವ ಬೆಳೆಯುತ್ತದೆ. ಪಕ್ಕದ ಮನೆಯಲ್ಲಿ ಏನು ಆಗುತ್ತಿದೆ ಎಂದು ನೋಡಲು ಯಾರಿಗೂ ಪುರುಸೊತ್ತು ಇರುವುದಿಲ್ಲ.
3. ಪಾರ್ಕ್: ಗಲ್ಲಿ-ಗಲ್ಲಿಯಲ್ಲಿ ಪಾರ್ಕ್ ಗಳಿರುವುದರಿಂದ ಬೆಂಗಳೂರು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಒಂಟಿಯಾಗಿರುವಾಗ ಈ ಪಾರ್ಕ್ ನಲ್ಲಿ ಹೋಗಿ ಕೂತರೆ ಅವುಗಳು ನಮ್ಮ ಮನಸ್ಸಿಗೆ ತುಂಬಾ ಆಪ್ತವಾಗುತ್ತವೆ.
4. ಜೀವನ ಶೈಲಿ: ಯಾವ ಸಿನಿಮಾ ತಾರೆಗಿಂತ ನಾನೇನು ಕಮ್ಮಿಯಿಲ್ಲ ಅಂತ ಅಲಂಕಾರ ಮಾಡಿಕೊಂಡು ಗಾಡಿಯಲ್ಲಿ ಕಾಲೇಜ್ ಹೋಗುವ ಯುವ ಜನಾಂಗ, ಸೂಟ್, ಮಾಡರ್ನ್ ಡ್ರೆಸ್ ಹಾಕಿದ ಐಟಿ ಉದ್ಯೋಗಿಗಳು, ಯಾರ ಭಯವಿಲ್ಲದೆ ಕೈಕೈ ಹಿಡಿದು ನಡೆಯುವ ಪ್ರೇಮಿಗಳು, ರಜಾ ದಿನದಲ್ಲಿ ಮನೆ ಮಂದಿ ಜೊತೆ ರೆಸ್ಟೋರೆಂಟ್ ಗೆ ಹೋಗುವ ಕುಟುಂಬಗಳನ್ನು ನೋಡುವಾಗ ಈ ಸೌಲಭ್ಯಗಳು ನಮ್ಮ ಹಳ್ಳಿಯಲ್ಲಿ ಇಲ್ಲ, ಇಲ್ಲಿಯ ಜೀವನ ಎಷ್ಟು ಚೆಂದ ಅನಿಸುತ್ತದೆ.
5. ವೀಕೆಂಡ್: ವೀಕೆಂಡ್ ಗೆ ಡ್ರೆಸ್ ಮಾಡಿಕೊಂಡು ಶಾಪಿಂಗ್ ಮಹಲ್ ಗಳಿಗೆ ಹೋಗುವುದು, ಸಿನಿಮಾ ನೋಡುವುದು, ದೊಡ್ಡ ರೆಸ್ಟೋರೆಂಟ್ ಗಳಲ್ಲಿ ಊಟ ಮಾಡಿ, ಸಾಯಾಂಕಾಲ ಬೀದಿ ಬದಿಯಲ್ಲಿ ದೊರೆಯುವ ರುಚಿಯಾದ ಚಾಟ್ಸ್ ತಿಂದು ಗೆಳೆಯರೊಂದಿಗೆ ಒಂದು ಸಿನಿಮಾ ನೋಡಿ ಬರುವುದು ನೋಡುವಾಗ ಸ್ವರ್ಗ ಅಂದರೆ ಇದೇನಾ ಅನಿಸುವುದು.



Click it and Unblock the Notifications
