Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Happy Holi 2026: ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ ಈ ಸ್ಪೆಷಲ್ ಶುಭಾಶಯಗಳು! ಸ್ನೇಹ, ಪ್ರೀತಿ, ಸಂತೋಷ ತುಂಬಿದ ಮೆಸೇಜ್ ಇಲ್ಲಿವೆ
ಹೋಳಿ ಹಬ್ಬದ ಶುಭಾಶಯಗಳು! ನಿಮ್ಮ ಜೀವನದಲ್ಲಿ ಬಣ್ಣಗಳು ತುಂಬಿರಲಿ.. ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಇಲ್ಲಿವೆ ಅತ್ಯುತ್ತಮ ಹೋಳಿ (Happy Holi 2026) ಹಬ್ಬದ ಶುಭಾಶಯಗಳು. ಹೌದು, ಬಣ್ಣಗಳ ಹಬ್ಬ ಎಂದೇ ವಿಶ್ವಾದ್ಯಂತ ಖ್ಯಾತಿ ಪಡೆದಿರುವ ಹೋಳಿ, ಭಾರತದಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಇದು ಕೇವಲ ಬಣ್ಣಗಳನ್ನು ಎರಚಿದು ಸಂಭ್ರಮಪಡುವ ಹಬ್ಬವಲ್ಲ, ಬದಲಾಗಿ ಮನಸ್ಸಿನ ಕಹಿ ನೆನಪುಗಳು ಹಾಗೂ ದ್ವೇಷವನ್ನು ಮರೆತು ಹೊಸ ಸಂಬಂಧಗಳಿಗೆ ನಾಂದಿ ಹಾಡುವ ಸುದಿನವಾಗಿದೆ.
ಹೋಳಿ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಾರುವ ಮಹತ್ವವನ್ನು ಹೊಂದಿದೆ. ಕಾಮದಹನದ ಪವಿತ್ರ ಅಗ್ನಿಯು ನಮ್ಮ ಮನಸ್ಸಿನಲ್ಲಿರುವ ಆಲಸ್ಯ, ನಕಾರಾತ್ಮಕತೆ ಮತ್ತು ದಾರಿದ್ರ್ಯವನ್ನು ದಹಿಸಿ, ಜೀವನದಲ್ಲಿ ಹೊಸ ಭರವಸೆ ಮತ್ತು ಸಕಾರಾತ್ಮಕ ಬಣ್ಣಗಳನ್ನು ತುಂಬಲಿ ಎಂಬುದು ಈ ಹಬ್ಬದ ಆಶಯ. 2026ರ ಹೋಳಿ ಹಬ್ಬದ ಈ ಸುಸಂದರ್ಭದಲ್ಲಿ, ನಿಮ್ಮ ಪ್ರೀತಿಪಾತ್ರರು ಮತ್ತು ಸ್ನೇಹಿತರೊಂದಿಗೆ ಸಂತೋಷವನ್ನು ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮೂಲಕ ಹಂಚಿಕೊಳ್ಳಲು ಸುಂದರ ಸಂದೇಶಗಳನ್ನು (Happy Holi 2026 Wishes in Kannada) ಇಲ್ಲಿ ನೀಡಲಾಗಿದೆ.

ವಿಶೇಷ ಹಾಗೂ ಭಕ್ತಿಪೂರ್ವಕ ಸಂದೇಶಗಳು
ಪ್ರೀತಿಪಾತ್ರರಿಗೆ ಶುಭಕೋರಲು ಇಂತಹ ಸಂದೇಶಗಳನ್ನು ಬಳಸಬಹುದು: "ಹೋಳಿಯ ಈ ಪವಿತ್ರ ಅಗ್ನಿಯಲ್ಲಿ ನಿಮ್ಮ ಜೀವನದ ಎಲ್ಲಾ ನಿರಾಸೆ, ದಾರಿದ್ರ್ಯ ಮತ್ತು ಆಲಸ್ಯಗಳು ದಹನವಾಗಲಿ. ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಸದಾ ನೆಲೆಸಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು!"
ಸಂಬಂಧಗಳ ಬಣ್ಣದ ಸಾರವನ್ನು ಹೇಳುವ ಸಂದೇಶ
ಸಂಬಂಧಗಳ ಸುಂದರ ಬಣ್ಣಗಳನ್ನು ಪ್ರಶಂಸಿಸುವ ಒಂದು ಸಂದೇಶ ಹೀಗಿದೆ: "ಪ್ರೀತಿಯ ಬಣ್ಣ, ಸ್ನೇಹದ ಬಣ್ಣ, ನಂಟಿನ ಬಣ್ಣ, ಬಂಧದ ಬಣ್ಣ, ಹರ್ಷದ ಬಣ್ಣ ಮತ್ತು ಉಲ್ಲಾಸದ ಬಣ್ಣ... ಈ ಎಲ್ಲಾ ಬಣ್ಣಗಳು ಸೇರಿ ನಿಮ್ಮ ಜೀವನವನ್ನು ಒಂದು ಸುಂದರ ವರ್ಣಚಿತ್ರವಾಗಿಸಲಿ. ಬಣ್ಣಗಳ ಹಬ್ಬವನ್ನು ಸಡಗರದಿಂದ ಆಚರಿಸಿ. ಹ್ಯಾಪಿ ಹೋಳಿ!"
ಕೆಟ್ಟದ್ದರ ನಾಶ ಹಾಗೂ ಸುಖದ ಆಗಮನದ ಸಂದೇಶ
ಸಕಾರಾತ್ಮಕತೆಯನ್ನು ಆಶಿಸುವ ಮೂಲಕ ಪಠಿಸಬಹುದಾದ ಸಂದೇಶ: "ಸುಖದ ಬಣ್ಣಗಳಿಂದ ನಿಮ್ಮ ಜೀವನವು ರಂಗೇರಲಿ, ಹೋಳಿಯ ಜ್ವಾಲೆಯಲ್ಲಿ ನಿಮ್ಮ ಸುತ್ತಲಿರುವ ಎಲ್ಲಾ ಕೆಟ್ಟ ಶಕ್ತಿಗಳು ಸುಟ್ಟು ಹೋಗಲಿ. ಎಲ್ಲರಿಗೂ ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು."
ಆಧುನಿಕ ಶೈಲಿಯ ಮೋಜಿನ ಸಂದೇಶ
ಇದೇ ಸಂದರ್ಭದಲ್ಲಿ ಮೋಜನ್ನು ಹಂಚಿಕೊಳ್ಳುವವರಿಗೆ ಒಂದು ವಿಭಿನ್ನ ಸಂದೇಶ: "ನಿಮ್ಮ ಜೀವನದಲ್ಲಿ ಆನಂದವು 'OverFlow' ಆಗಿರಲಿ, ಮೋಜು-ಮಸ್ತಿ ಎಂದಿಗೂ 'Low' ಆಗದಿರಲಿ. ನಿಮ್ಮ ಹೋಳಿ ಆಚರಣೆ ಯಾವಾಗಲೂ 'Number One' ಆಗಿರಲಿ ಮತ್ತು ಇಡೀ ಜೀವನ ಪರ್ಯಂತ 'Lots of Fun' ಮಾಡುತಿರಿ. ಹೋಳಿ ಹಬ್ಬದ ಶುಭಾಶಯಗಳು!"
ಹಬ್ಬದ ಅಡುಗೆಯ ಸೊಗಡನ್ನು ಸೇರಿಸಿದ ಸಂದೇಶ
ಹಬ್ಬದ ಸವಿ ನೆನಪುಗಳನ್ನು ಒಳಗೊಂಡ ಈ ಸಂದೇಶವನ್ನು ಹಂಚಿಕೊಳ್ಳಬಹುದು: "ಘಮಘಮಿಸುವ ಹೋಳಿಗೆಯ ಸವಿ ಸವಿಯುವ ಮುನ್ನ, ಬಣ್ಣಗಳ ಲೋಕದಲ್ಲಿ ಮುಳುಗುವ ಮುನ್ನ, ಹುಣ್ಣಿಮೆಯ ಚಂದ್ರ ಉದಯಿಸುವ ಮುನ್ನ... ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೋಳಿ ಹಬ್ಬದ ಪ್ರೀತಿಯ ಶುಭಾಶಯಗಳು."
ಪರಿಸರ ಸ್ನೇಹಿ ಹೋಳಿ ಆಶಯ
ಪರಿಸರ ಕಾಳಜಿಯನ್ನೂ ಒಳಗೊಂಡಂತೆ ಶುಭ ಕೋರಲು, "ಹೊಸ ಯುಗದ ಹೊಸ ಸಂದೇಶ - ಆರೋಗ್ಯ ಕಾಪಾಡಿ, ಗಿಡಗಳನ್ನು ನೆಡಿ ಮತ್ತು ಮರಗಳನ್ನು ಬೆಳೆಸಿ. ಅಗ್ನಿದೇವನ ಪೂಜೆಯೊಂದಿಗೆ ಪರಿಸರವನ್ನೂ ರಕ್ಷಿಸೋಣ. ಎಲ್ಲರಿಗೂ ಪರಿಸರ ಸ್ನೇಹಿ ಹೋಳಿ ಹಬ್ಬದ ಶುಭಾಶಯಗಳು."

ಹೋಳಿ ಆಚರಣೆಗೆ ಕೆಲವು ಪರಿಣಾಮಕಾರಿ ಸಲಹೆಗಳು
ಹಬ್ಬವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ಕೆಲವು ಸಲಹೆಗಳನ್ನು ಪಾಲಿಸಬಹುದು. ಮೊದಲಿಗೆ, ರಾಸಾಯನಿಕ ಬಣ್ಣಗಳ ಬದಲು ನೈಸರ್ಗಿಕ ಬಣ್ಣಗಳನ್ನು ಬಳಸಿ ಪರಿಸರ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಿ. ಎರಡನೆಯದಾಗಿ, "ಹೋಳಿ ಬಂತು ಬಣ್ಣವ ಚೆಲ್ಲೋಣ, ದ್ವೇಷವ ಮರೆತು ಒಂದಾಗೋಣ" ಎಂಬಂತಹ ಭಾವನೆಯೊಂದಿಗೆ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿ.
ಮೂರನೆಯದಾಗಿ, ನಿಮ್ಮ ಹೋಳಿ ಸಂಭ್ರಮದ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಮೇಲಿನ ಕ್ಯಾಪ್ಷನ್‌ಗಳೊಂದಿಗೆ ಹಂಚಿಕೊಳ್ಳಿ. ಹೋಳಿ ಹಬ್ಬವು ನಮ್ಮ ಜೀವನಕ್ಕೆ ಕೇವಲ ಬಣ್ಣಗಳನ್ನು ಸೇರಿಸದೆ, ಒಗ್ಗಟ್ಟು ಮತ್ತು ಸಾಮರಸ್ಯದ ಮಹತ್ವವನ್ನೂ ಕಲಿಸುತ್ತದೆ. ಈ ಸಂದೇಶಗಳು ನಿಮ್ಮ ಪ್ರೀತಿಪಾತ್ರರೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿ.



Click it and Unblock the Notifications












