Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪಾಕಿಸ್ತಾನದಲ್ಲಿದೆ 1,500 ವರ್ಷಗಳ ಇತಿಹಾಸ ಮೆರೆದ ಹನುಮಂತನ ದೇಗುಲ!
ಸದಾ ಧರ್ಮದ ವಿಚಾರಕ್ಕಾಗಿಯೇ ಜಗಳವಾಡುವ ದೇಶ ಪಾಕಿಸ್ತಾನ. ಆ ನೆಲದಲ್ಲಿ ಮುಸ್ಲಿಂ ಧರ್ಮವೇ ಶ್ರೇಷ್ಠವಾದದ್ದು. ಹೀಗಿದ್ದರೂ ಅಲ್ಲೊಂದು ಹಿಂದೂ ದೇವಾಲಯವಿದೆ ಎಂದು ಹೇಳಿದರೆ ಎಷ್ಟು ಆಶ್ಚರ್ಯವಾಗುತ್ತದೆ ಅಲ್ಲವಾ? ಅದೂ ನಿನ್ನೆ ಮೊನ್ನೆಯಷ್ಟೇ ನಿರ್ಮಾಣವಾದದ್ದಲ್ಲ. ಸಾವಿರಾರು ವರ್ಷಗಳಷ್ಟು ಪುರಾತನ ಕಾಲದ್ದು. ಅಂದಿನಿಂದ ಇಂದಿನ ವರೆಗೂ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಇವೆ.
ಹೌದು, ಅದು ಹನುಮಂತನ ದೇಗುಲ, ಸರಿ ಸುಮಾರು 1,500 ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ದೇವಸ್ಥಾನ. ಇದರಲ್ಲಿ ಸ್ಥಾಪಿತವಾದ ಹನುಮಂತನ ಮೂರ್ತಿ ಮಾನವ ನಿರ್ಮಿತವಲ್ಲ. ಸ್ವಾಭಾವಿಕವಾಗಿ ಕಾಣಿಸಿಕೊಂಡ ಪಂಚಮುಖಿ ದೇಗುಲ. ಶತಮಾನಗಳಿಂದಲೂ ಭಕ್ತರು ಪೂಜಿಸುತ್ತಾರೆ. ಈ ದೇವಾಲಯವು ಹನುಮಂತನ ಎಲ್ಲಾ ಐದು ಅಂಶಗಳನ್ನು ಹೊಂದಿದೆ. ಈ ಮೂರ್ತಿಯಲ್ಲಿ ನರಸಿಂಹ, ಆದಿವರಾಹ, ಹಯಗ್ರೀವಾ, ಹನುಮಂತ ಹಾಗೂ ಗರುಡನ ಮುಖ ಇರುವುದನ್ನು ಕಾಣಬಹುದು....

11ರ ಸಂಖ್ಯೆಯ ನಂಟು
ಶತಮಾನಗಳ ಹಿಂದೆ ನೀಲಿ ಮತ್ತು ಬಿಳಿ ಬಣ್ಣದ 8 ಅಡಿ ಎತ್ತರದ ಹನುಮಂತನ ಮೂರ್ತಿ ಇಲ್ಲಿ ಗೋಚರವಾಯಿತು. ನಂತರ ಮೂರ್ತಿಯ ವಿಗ್ರಹದ ಮೇಲೆ ಇರುವ 11 ಮುಷ್ಟಿ ಮಣ್ಣನ್ನು ತೆಗೆದು ಸ್ವಚ್ಛಮಾಡಲಾಯಿತು. ಹಾಗಾಗಿಯೇ ಇಲ್ಲಿ ಭಕ್ತರು ವಿಗ್ರಹದ ಸುತ್ತ 11 ಸುತ್ತು ಸುತ್ತುತ್ತಾರೆ. ಹೀಗೆ ಮಾಡುವುದು ಶ್ರೇಷ್ಠ ಮತ್ತು ಪುಣ್ಯ ಎನ್ನುವ ನಂಬಿಕೆ ಇದೆ.

ದೇಗುಲದ ನವೀಕರಣ
ಈ ದೇವಾಲಯವನ್ನು 2012ರಲ್ಲಿ ನವೀಕರಣ ಮಾಡಲಾಯಿತು. ಮೊದಲು ಹಳದಿ ಬಣ್ಣವಿದ್ದ ದೇಗುಲವನ್ನು ಈಗ ಪುನರ್ ನವೀಕರಣ ಮಾಡಲಾಗಿದೆ. ಅಲ್ಲದೆ ವಾಸ್ತುಶಿಲ್ಪಗಳ ಸಂರಕ್ಷಣೆ ಮಾಡಲಾಗಿದೆ ಎನ್ನಲಾಗುತ್ತದೆ.

ಒತ್ತುವರಿ ಜಾಗ
ದೇಗುಲದ ಆಸ್ತಿ ಎಂದು ಒತ್ತುವರಿ ಮಾಡಿಕೊಂಡ ಪ್ರದೇಶಗಳನ್ನು ಜಿಲ್ಲಾಡಳಿತವು ತೆರವುಗೊಳಿಸಿದೆ. ಹಾಗಾಗಿ ದೇಗುಲವು ಸಾಧಾರಣ ವಿಸ್ತೀರ್ಣದಲ್ಲಿದೆ ಎನ್ನಬಹುದು.

ಕಾಳಿ ದೇವಿ
ಹನುಮಾನ್ ಮಂದಿರದಿಂದ ಸ್ವಲ್ಪ ದೂರದಲ್ಲಿ ಕಾಳಿ ದೇವಿಗೆ ಮೀಸಲಿರುವ ಇನ್ನೊಂದು ಹಿಂದೂ ದೇಗುಲವಿದೆ. ಇದೂ ಸಹ ಹಲವಾರು ಶತಮಾನಗಳ ಹಿನ್ನೆಲೆಯನ್ನು ಹೊಂದಿದೆ. ಇಲ್ಲಿ ಪುರಾತನಕಾಲದ ಹಲವಾರು ಪುರಾವೆಗಳಿವೆ.

ನಾರಾಯಣ ದೇವಸ್ಥಾನ
ಸ್ವಾಮಿ ನಾರಾಯಣ ದೇವಸ್ಥಾನ ಎಂದು ಕರೆಯುವ ಇನ್ನೊಂದು ದೇವಾಲಯವೂ ಹನುಮಂತ ದೇವಸ್ಥಾನಕ್ಕೆ ಹತ್ತಿರವಿದೆ (ಕರಾಚಿ). ಇಲ್ಲಿ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ಈ ದೇವಾಲಯಕ್ಕೂ ಭಕ್ತರ ಹರಿವು ಜೋರಾಗಿಯೇ ಇದೆ ಎನ್ನಲಾಗುತ್ತದೆ.

ವರ್ಷಗಳ ಇತಿಹಾಸ
ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಾರಾಯಣ ದೇವಸ್ಥಾನ ಸುಮಾರು 160 ವರ್ಷಗಳಷ್ಟು ಪುರಾತನದ್ದು.



Click it and Unblock the Notifications
