Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದುರ್ಗಾ ಪೂಜೆಯ ಇತಿಹಾಸ, ಹಾಗೂ ಆಚರಣೆಗಳ ಮಹತ್ವ ...
ಹಿಂದೂ ಕ್ಯಾಲೆಂಡರ್ನ ಅಶ್ವಿನಿ ಮಾಸದಲ್ಲಿ ಬರುವ ದುರ್ಗಾ ಪೂಜೆಯನ್ನು ಬಹು ಸಂಭ್ರಮದಿಂದಲೇ ದೇಶಾದ್ಯಂತ ಆಚರಿಸುತ್ತಾರೆ. ಹತ್ತು ದಿನಗಳ ಈ ದೀರ್ಘ ಹಬ್ಬವು ತನ್ನದೇ ಐತಿಹಾಸಿಕ ಮಹತ್ವದಿಂದ ಪ್ರಸಿದ್ಧತೆಯನ್ನು ಪಡೆದುಕೊಂಡಿದ್ದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಎಂಬುದರ ಸಂಕೇತವಾಗಿ ವಿಜಯ ದಶಮಿಯೆಂದೇ ಜನಜನಿತವಾಗಿದೆ.
ದೇವಿ ದುರ್ಗಾ ಮಾತೆಯು ಮಹಿಷಾಸುರನನ್ನು ವಧಿಸಿದ ಈ ಶುಭ ಸಂದರ್ಭವೇ ನವರಾತ್ರಿಯಾಗಿ ಅನಾದಿ ಕಾಲದಿಂದಲೂ ಆಚರಣೆಯಲ್ಲಿದೆ. ಈ ದಿನಗಳಂದು ದೇವಿಗೆ ಒಂಬತ್ತು ಬಗೆಯ ಅಲಂಕಾರಗಳನ್ನು ಮಾಡಿ ಪೂಜಿಸುತ್ತಾರೆ. ಹತ್ತನೇ ದಿನವೇ 'ವಿಜಯ ದಶಮಿ'ಯಾಗಿದೆ. ದೇವಿಯನ್ನು ಹಿಂದೂ ಶಾಸ್ತ್ರದಲ್ಲಿ ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ. ಅಷ್ಟಕ್ಕೂ ದುರ್ಗಾ ಪೂಜೆ ಆರಂಭವಾಗಿದ್ದು ಯಾವಾಗ?
ಮೂರು ಕಣ್ಣುಗಳು, ಹತ್ತು ಭುಜಗಳು, ದೈವೀ ಸಂಭೂತ ಆಯುಧಗಳು, ಅಂತೆಯೇ ಅಭಯ ಮುದ್ರದ ಸಂಕೇತವಾಗಿ ದೇವಿಯು ಸಿಂಹದ ಮೇಲೆ ಕುಳಿತಿರುವುದು, ಹೀಗೆ ಭಯವೇ ಇಲ್ಲದ ದೇವಿಯ ವರ್ಚಸ್ಸಿನಿಂದಾಗಿ ದೇವತೆಗಳಿಗೆ ಮಹಿಷಾಸುರನನ್ನು ವಧಿಸಲು ಸಾಧ್ಯವಾಯಿತು.

ತನ್ನ ಮೃತ್ಯು ಹೆಣ್ಣಿನಿಂದಲೇ ಸಂಭವಿಸಬೇಕೆಂಬ ವರವನ್ನು ಪಡೆದಿದ್ದ ಮಹಿಷಾಸುರ ದೇವತೆಗಳನ್ನು ಹಿಂಸಿಸುತ್ತಿದ್ದ. ದೇವಿ ದುರ್ಗೆಯು ಮಹಿಷಾಸುರನ ವಧೆಗಾಗಿಯೇ ಅವತಾರವನ್ನು ಎತ್ತಿ ಪ್ರತಿಯೊಂದು ದೇವತೆಗಳಿಂದ ಒಂದೊಂದು ಶಕ್ತಿಯನ್ನು ಪಡೆದುಕೊಂಡು ಅಸುರನನ್ನು ವಧಿಸಲು ಮುಂದಡಿ ಇಡುತ್ತಾಳೆ. ಇಷ್ಟಾರ್ಥ ಸಿದ್ಧಿಗಾಗಿ-'ಬ್ರಹ್ಮಚಾರಿಣಿ ದೇವಿ'ಯನ್ನು ಪೂಜಿಸಿ
ರಾಮನು ಕೂಡ ರಾವಣನನ್ನು ವಧಿಸುವುದಕ್ಕೆ ಮುನ್ನ ಶಕ್ತಿಯ ಆಶೀರ್ವಾದವನ್ನು ಪಡೆದಿದ್ದರು ಎಂಬ ಮಾತೂ ಇದೆ. 108 ದೀಪಗಳು ಮತ್ತು 108 ನೀಲಿ ಕಮಲಗಳನ್ನು ದೇವಿಗೆ ಅರ್ಪಿಸಿ ಆಕೆಯನ್ನು ಪೂಜಿಸಿದ ಪ್ರಥಮ ವ್ಯಕ್ತಿ ರಾಮ ಎಂಬುದು ಇತಿಹಾಸದಲ್ಲಿ ಮೂಡಿ ಬಂದಿದೆ.
ದುರ್ಗಾ ಪೂಜೆಯ ಇತಿಹಾಸ ತೆರೆದುಕೊಳ್ಳುವುದು ಬಂಗಾಳದಲ್ಲಿ 16ನೇ ಶತಮಾನದಲ್ಲಾಗಿದೆ. ಮಧ್ಯಯುಗದ ಅವಧಿಯಲ್ಲಿ ಇದು ದುರ್ಗಾ ಪೂಜೆಯು ಆಚರಣೆಗೆ ಒಳಪಟ್ಟರೂ ತನ್ನ ಪ್ರಸಿದ್ಧತೆಯನ್ನು ಪೂಜೆಯು ಪಡೆದುಕೊಂಡಿರುವುದು 16ನೇ ಶತಮನಾದಲ್ಲಾಗಿದೆ.
ಇದನ್ನು ಪ್ರಥಮವಾಗಿ ಆಚರಣೆಗೆ ಯಾರು ತಂದರು ಎಂಬುದಕ್ಕೆ ಇತಿಹಾಸಕಾರರು ಬೇರೆ ಬೇರೆ ದಾಖಲೆಗಳನ್ನು ಒದಗಿಸುತ್ತಾರೆ. ತಹೇರಾಪುರದ ರಾಜ ಎಂಬುದಾಗಿ ಕೆಲವರು ಹೇಳಿದರೆ, ನಾದಿಯಾದ ಬಹಾಬಾನಂದ ಮಜುಮ್ದಾರ್ ಎಂಬುದಾಗಿ ಇನ್ನು ಕೆಲವರು ತಿಳಿಸುತ್ತಾರೆ. ದುರ್ಗಾ ಮಾತೆಯ ಒಂಬತ್ತು ಅವತಾರದ ವೈಶಿಷ್ಟ್ಯ
ಮಾಲ್ಡಾದ ಭೂಮಾಲಿಕರು ದೇವಿಯನ್ನು ಪೂಜಿಸುವ ಕ್ರಮವನ್ನು ಮೊದಲು ಆಚರಣೆಗೆ ತಂದರು ಎಂಬುದಾಗಿ ಕೂಡ ತಿಳಿಸುತ್ತಾರೆ. 1832 ರಲ್ಲಿ ರಾಜ ಹರಿನಾಥನು ದುರ್ಗಾ ಪೂಜೆಯನ್ನ ಮೊದಲು ಆರಂಭಿಸಿದವನು ಎಂಬ ಅಂಶ ಕೂಡ ಬೆಳಕಿಗೆ ಬಂದಿದ್ದು ಬಂಗಾಳಿ ಸಂಸ್ಕೃತಿಗೆ ನಾಂದಿ ಹಾಡಿದವನು ಈತನೇ ಆಗಿದ್ದಾನೆ ಎಂಬ ದಾಖಲೆ ಕೂಡ ಇದೆ. ದೇಶದಲ್ಲಿ ಬ್ರಿಟೀಷರ ಆಮನದೊಂದಿಗೆ ದೇಶದ ಇತರ ಭಾಗಗಳಲ್ಲಿ ಕೂಡ ಹಬ್ಬವು ಆಚರಣೆಯನ್ನು ಪಡೆದುಕೊಂಡಿತು. ನವರಾತ್ರಿ ವಿಶೇಷ: ನವದುರ್ಗೆಯರಿಗೆ 'ನವ ನೈವೇದ್ಯ'
ಮೊದಲಿಗೆ ದುರ್ಗಾ ಪೂಜೆಯ ಸಮಯದಲ್ಲಿ ಬ್ರಿಟೀಷರನ್ನು ಆಹ್ವಾನಿಸಲಾಗುತ್ತಿತ್ತು ನಂತರ ಇದನ್ನು ನಿಲ್ಲಿಸಲಾಯಿತು. 1910 ರಲ್ಲಿ ಬ್ರಿಟೀಷರು ತಮ್ಮ ಮುಖ್ಯ ಕಾರ್ಯಾಲವನ್ನು ಕಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಿಕೊಂಡರು. ಈ ಸಂದರ್ಭದಲ್ಲಿ ಹೆಚ್ಚಿನ ಜನರು ಮತ್ತು ಬಂಗಾಳಿ ಅಧಿಕಾರಿಗಳು ಅವರನ್ನು ಸೇರಿಕೊಂಡರು ಮತ್ತು ದೆಹಲಿಯಲ್ಲಿ ಪ್ರಥಮ ದುರ್ಗಾ ಪೂಜೆಯನ್ನು ಆರಂಭಿಸಿದರು. ನವರಾತ್ರಿ ವಿಶೇಷ: ಒಂಬತ್ತು ವಿಶಿಷ್ಟ ದಿನಗಳ ಮಹತ್ವ
ಮಂಗಳ ಕಲಶದ ಸಂಪ್ರದಾಯವನ್ನು ಮೊದಲು ಇವರು ಆಚರಣೆಗೆ ತಂದಿದ್ದು ನಂತರ ದೇಶದ ಹಲವೆಡೆಗಳಲ್ಲಿ ಈ ಆಚರಣೆಯನ್ನು ಆರಂಭಿಸಲಾಯಿತು.ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದುರ್ಗಾ ಪೂಜೆಯು ಭಾರತೀಯರನ್ನು ಒಗ್ಗೂಡಿಸಿತು, ದುರ್ಗಾ ಮಾತೆಯನ್ನು ಸಂಕೇತವಾಗಿ ಇರಿಸಿಕೊಂಡು ಸ್ವಾತಂತ್ರ್ಯಸಂಗ್ರಾಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡ ಹಬ್ಬವು ನಂತರ ದೇಶಾದ್ಯಂತ ಆಚರಣೆಯನ್ನು ಪಡೆದುಕೊಂಡಿತು.



Click it and Unblock the Notifications


