For Quick Alerts
ALLOW NOTIFICATIONS  
For Daily Alerts

ನಿಮ್ಮ ಇಷ್ಟಾರ್ಥ ನೆರವೇರಲು ನವರಾತ್ರಿ 2ನೇ ದಿನ 'ಬ್ರಹ್ಮಚಾರಿಣಿ ದೇವಿ'ಯನ್ನು ಹೀಗೆ ಪೂಜಿಸಿ

By Staff
|

ನವರಾತ್ರಿಯಲ್ಲಿ ನವದುರ್ಗೆಯರನ್ನು ಪೂಜಿಸುತ್ತೇವೆ. ಒಂದೊಂದು ದಿನ ದೇವಿಯ ಒಂದೊಂದು ಅವತಾರವನ್ನು ಪೂಜಿಸುವುದು ಹಿಂದೂ ಧರ್ಮಿಯರ ಸಂಪ್ರದಾಯವಾಗಿದೆ. ದುರ್ಗೆಯ ಪ್ರತೀ ರೂಪಕ್ಕೂ ಅದರದ್ದೇ ಆದಂತಹ ವಿಶೇಷತೆಗಳಿವೆ. ಎರಡನೇ ದಿನದಂದು ಬ್ರಹ್ಮಚಾರಿಣಿ ಅಥವಾ ದೇವಿ ಯೋಗಿನಿಯನ್ನು ನಾವು ಪೂಜಿಸುತ್ತೇವೆ. ಈ ವರ್ಷ ಸೆಪ್ಟೆಂಬರ್ 27ರಂದು ಬ್ರಹ್ಮಚಾರಿಣಿ ದೇವಿಯ ಆರಾಧನೆ ಮಾಡಲಾಗುವುದು. ಬ್ರಹ್ಮಚಾರಿಣಿ ದೇವಿಯ ಮುಖದಲ್ಲಿ ವಿಶೇಷವಾದ ಕಾಂತಿಯಿರುತ್ತದೆ. ನವರಾತ್ರಿ ವಿಶೇಷ: ನವದುರ್ಗೆಯರಿಗೆ 'ನವ ನೈವೇದ್ಯ'

ಕಿತ್ತಳೆ ಬಣ್ಣದ ಅಂಚನ್ನು ಹೊಂದಿರುವ ಬಿಳಿ ಸೀರೆಯನ್ನು ಉಟ್ಟಿರುವ ದೇವಿಯು ಎಡದ ಕೈಯಲ್ಲಿ ಕಾಮಂದಲು ಮತ್ತು ಬಲದ ಕೈಯಲ್ಲಿ ಜಪಮಾಲೆಯನ್ನು ಧರಿಸಿರುತ್ತಾಳೆ. ಬ್ರಹ್ಮಚಾರಿಣಿ ದೇವಿಯು ಪ್ರೀತಿ ಹಾಗೂ ಶಾಂತಿಯ ಸಂಕೇತ. ಬ್ರಹ್ಮಚಾರಿಣಿ ದೇವಿಯ ಕಥೆಯಲ್ಲಿ ಮಹಿಳೆಯರ ಶಕ್ತಿ ಹಾಗೂ ಬಲವನ್ನು ತೋರಿಸುತ್ತದೆ. ಮದುವೆಯಾಗದೆ ಇರುವ ಪಾರ್ವತಿಯ ರೂಪವೇ ಈ ಬ್ರಹ್ಮಚಾರಿಣಿ ದೇವಿ ಎನ್ನಲಾಗಿದೆ.

Brahmacharini

ಶಿವನನ್ನು ಮದುವೆಯಾಗಬೇಕೆಂದು ಬಯಸಿದ ಬ್ರಹ್ಮಚಾರಿಣಿ ದೇವಿಯು ಹಲವಾರು ವರ್ಷಗಳ ಕಾಲ ತಪಸ್ಸನ್ನು ಆಚರಿಸುತ್ತಾಳೆ. ಮೊದಲು ಆಕೆ ಕೇವಲ ಹಣ್ಣುಗಳನ್ನು ಮಾತ್ರ ತಿಂದರೆ ಬಳಿಕ ಒಣಗಿದ ಬಿಲ್ವಪತ್ರೆಯ ಎಲೆಗಳನ್ನು ಸೇವಿಸುತ್ತಾಳೆ. ಅಂತಿಮವಾಗಿ ಸಂಪೂರ್ಣ ಆಹಾರವನ್ನು ತ್ಯಜಿಸಿ ತಪಸ್ಸಿನಲ್ಲಿ ಧಾನ್ಯಳಾದ ಬ್ರಹ್ಮಚಾರಿಣಿ ದೇವಿಯ ತಪಸ್ಸಿಗೆ ಒಲಿದ ಬ್ರಹ್ಮನು ಪ್ರತ್ಯಕ್ಷನಾಗಿ ಶಿವನನ್ನು ಮದುವೆಯಾಗು ಎಂದು ವರ ನೀಡುತ್ತಾನೆ. ನವರಾತ್ರಿ ವಿಶೇಷ: ಒಂಬತ್ತು ವಿಶಿಷ್ಟ ದಿನಗಳ ಮಹತ್ವ

ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮ್ಮ ಮನಸ್ಸು ತುಂಬಾ ಬಲವಾಗಿರುತ್ತದೆ. ನವರಾತ್ರಿಯ ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಕಾಡುವುದಿಲ್ಲ. ಬ್ರಹ್ಮಚಾರಿಣಿ ದೇವಿಯನ್ನು ಭಕ್ತಿ, ತ್ಯಾಗ ಮತ್ತು ಸಂಕಲ್ಪದ ಪ್ರತೀಕವೆನ್ನಲಾಗಿದೆ.

ನವರಾತ್ರಿಯ ಎರಡನೇ ದಿನ ಪೂಜಿಸಲ್ಪಡುವ ದೇವಿ
ದುರ್ಗಾ ದೇವಿಯ ಅವತಾರಗಳಲ್ಲಿ ಒಂದಾಗಿರುವ ಬ್ರಹ್ಮಚಾರಿಣಿ ದೇವಿಯನ್ನು ಶಾಂತಿ, ಸಂತೋಷ, ಭಕ್ತಿ ಹಾಗೂ ಸಂಕಲ್ಪದ ದೇವಿಯೆಂದು ನಂಬಲಾಗಿದೆ. ಆಕೆಯ ನಿಜವಾದ ಭಕ್ತಿ ಹಾಗೂ ಸಂಕಲ್ಪದಿಂದಾಗಿ ಆಕೆ ಸಾವಿರಾರು ವರ್ಷಗಳ ಕಾಲ ತಪಸ್ಸನ್ನು ಮಾಡಿದ್ದಾಳೆ. ನವರಾತ್ರಿಯ ವೇಳೆ ಭಕ್ತರು ಉಪವಾಸ ಮಾಡುತ್ತಾರೆ. ಬ್ರಹ್ಮಚಾರಿಣಿ ದೇವಿಯನ್ನು ಎರಡನೇ ದಿನ ಪೂಜಿಸುವುದರಿಂದ ಭಕ್ತರಿಗೆ ಯಾವುದೇ ತೊಂದರೆಯಿಲ್ಲದೆ ತಮ್ಮ ಕರ್ತವ್ಯವನ್ನು ಪೂರೈಸಲು ಸಾಧ್ಯವಾಗುವುದು.

ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಪ್ರಾಮುಖ್ಯತೆಯೇನು?
ಬ್ರಹ್ಮಚಾರಿಣಿಯೆಂದರೆ ಧರ್ಮದ ಜ್ಞಾನವನ್ನು ಪಡೆಯುವಂತಹ ಮಹಿಳೆಯರು ಎಂದರ್ಥ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ಭಕ್ತರು ತಮ್ಮ ಗುರಿಯನ್ನು ತಲುಪಬಹುದಾಗಿದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮ್ಮ ಮನಸ್ಸನ್ನು ಕದಡಲು ಯಾರಿಂದಲೂ ಸಾಧ್ಯವಿಲ್ಲ. ದೇವಿಯನ್ನು ತುಂಬಾ ಶ್ರದ್ಧೆ, ಭಕ್ತಿ ಹಾಗೂ ಸಂಕಲ್ಪದೊಂದಿಗೆ ಪೂಜಿಸಬೇಕು.

ಬ್ರಹ್ಮಚಾರಿಣಿ ದೇವಿಯ ಕಥೆ
ಶಿವನನ್ನು ತನ್ನ ಪತಿಯಾಗಿ ಪಡೆಯಲು ಬ್ರಹ್ಮಚಾರಿಣಿ ದೇವಿಯು ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾಳೆ. ಇದಕ್ಕಾಗಿ ಆಕೆ ಹಲವಾರು ವರ್ಷಗಳ ಕಾಲ ತಪಸ್ಸನ್ನು ಮಾಡಬೇಕಾಯಿತು. ತಪಸ್ಸನ್ನು ಆಚರಿಸುತ್ತಾ ಇರುವಾಗ ಆಕೆ ಒಣಗಿದ ಬಿಲ್ವಪತ್ರೆಗಳನ್ನು ತಿನ್ನಲು ಆರಂಭಿಸಿದಳು. ಇದರ ಬಳಿಕ ಆಕೆ ಇದನ್ನು ಬಿಟ್ಟುಬಿಟ್ಟಳು. ಆಕೆಯ ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗಿ ಶಿವನನ್ನು ಮದುವೆಯಾಗುವ ವರ ನೀಡಿದ.

ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಮಂತ್ರ
ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ವೇಳೆ ಆಕೆಯ ಮಂತ್ರವನ್ನು ಪಠಿಸಬೇಕು. ದಾದಹಾನ ಕರ್ಪದಮಅಭಯಾಮಸ್ಕಮಲ ಕಾಮದಲು..ದೇವಿ ಪ್ರಸಿದತು ಮಯಿ ಬ್ರಹ್ಮಚಾರಿಣಿಯಂತಮ

ಬ್ರಹ್ಮಚಾರಿಣಿ ದೇವಿಗೆ ಆರತಿ ಬೆಳಗುವುದು ಹೇಗೆ?
ಬ್ರಹ್ಮಚಾರಿಣಿ ದೇವಿಯ ಮೂರ್ತಿಗೆ ಆರತಿ ಎತ್ತುವ ಮೊದಲು ಹಾಲು, ಮೊಸರು ಹಾಗೂ ಜೇನಿನಿಂದ ಅಭಿಷೇಕ ಮಾಡಬೇಕು. ಅಭಿಷೇಕದ ಬಳಿಕ ದುರ್ಗೆಗೆ ನೀಡುವಂತಹ ಭೋಗ್ಯವನ್ನು ಅರ್ಪಿಸಬೇಕು. ಒಂದು ಕೈಯಲ್ಲಿ ಹೂವನ್ನು ಹಿಡಿದುಕೊಂಡು ಮಂತ್ರವನ್ನು ಪಠಿಸಬೇಕು. ಪಂಚಮರಿತ, ಹೂ, ಅಕ್ಕಿ ಮತ್ತು ಕುಂಕುಮದ ಮಜ್ಜನ ಮಾಡಿಸಿ. ಕೆಂಪು ಹೂ ಅಥವಾ ತಾವರೆಯನ್ನು ದೇವಿಯ ಮೂರ್ತಿಯೊಂದಿಗೆ ಇಡಿ. ಬೆಣ್ಣೆಯಲ್ಲಿ ಒಂದು ದೀಪವನ್ನು ಹಚ್ಚಿ ಮತ್ತು ಭಕ್ತಿಯಿಂದ ಆರತಿ ಬೆಳಗಿರಿ.

ದೇವಿಗೆ ಅರ್ಪಿಸುವ ಭೋಗ ಯಾವುದು?
ದೇವಿಗೆ ಸಕ್ಕರೆ ಅಥವಾ ಪ್ರಸಾದವನ್ನು ಅರ್ಪಿಸಿದರೆ ತುಂಬಾ ಒಳ್ಳೆಯದು. ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಕಾರಣದಿಂದಾಗಿ ಸಕ್ಕರೆ ಭೋಗಕ್ಕೆ ಅತ್ಯುತ್ತಮ ಆಯ್ಕೆಯೆಂದು ಪರಿಗಣಿಸಲಾಗಿದೆ. ಸಕ್ಕರೆಯನ್ನು ಭೋಗವಾಗಿ ಅರ್ಪಿಸುವ ಕಾರಣದಿಂದ ಕುಟುಂಬ ಸದಸ್ಯರ ಆಯುಷ್ಯ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಿ.

English summary

Navratri 2021 Day 2, Maa Brahmacharini Colour, Puja Vidhi, Aaarti , Timings, Mantra, Muhurat, Vrat Katha and significance

Brahmacharini or Devi Yogini is the second manifestation and mightiest forms of Goddess Durga. The second day of Navratri is devoted for Goddess Brahmacharini. With a unique blend of radiance, she takes her devotes to the spiritual bliss. Wearing white sari with orange border and holding kamandalu in her left arm and rosary in her right arm, Brahmacharini epitomize love and peace.
X
Desktop Bottom Promotion