For Quick Alerts
ALLOW NOTIFICATIONS  
For Daily Alerts

ಅಷ್ಟಕ್ಕೂ ದುರ್ಗಾ ಪೂಜೆ ಆರಂಭವಾಗಿದ್ದು ಯಾವಾಗ?

By Hemanth
|

ಭಾರತದಲ್ಲಿ ಹಿಂದಿನಿಂದಲೂ ನವರಾತ್ರಿಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ದುರ್ಗೆಯನ್ನು ಒಂಬತ್ತು ದಿನಗಳ ಕಾಲ ಪೂಜಿಸುವಂತಹ ನವರಾತ್ರಿ ಉತ್ಸವು ಅನಾದಿ ಕಾಲದಿಂದಲೂ ನಡೆಯುತ್ತಲೇ ಇದೆ.

ನಮ್ಮ ಪೂರ್ವಜರು ಕೂಡ ನವರಾತ್ರಿಯನ್ನು ಆಚರಿಸಿಕೊಂಡು ಬರುತ್ತಲೇ ಇದ್ದಾರೆ. ಆದರೆ ನವರಾತ್ರಿಯನ್ನು ಮೊದಲ ಸಲ ಆಚರಣೆಗೆ ತಂದವರು ಯಾರು ಎನ್ನುವ ಬಗ್ಗೆ ಪ್ರಶ್ನೆಗಳು ಬರುವುದು ಸಹಜ. ದುರ್ಗಾ ಪೂಜೆಯ ಇತಿಹಾಸ ಏನು ಎಂದು ತಿಳಿದುಕೊಳ್ಳಬೇಕಾಗುತ್ತದೆ. ದೇವಿಯನ್ನು ಒಲೈಸಿಕೊಳ್ಳುವ ಸಲುವಾಗಿ ರಾಮ ದೇವರು ಮೊದಲ ಸಲ ದುರ್ಗಾ ಪೂಜೆಯನ್ನು ಮಾಡಿದರಂತೆ. ದುರ್ಗಾ ಪೂಜೆಯ ಮಹತ್ವವನ್ನು ಸಾರುವ 9 ಆಚರಣೆಗಳು

Durga Puja

ಅದರಲ್ಲೂ ನವರಾತ್ರಿಯನ್ನು ವರ್ಷದಲ್ಲಿ ಎರಡು ಸಲ ಆಚರಿಸಲಾಗುತ್ತದೆ. ಮಾರ್ಚ್-ಎಪ್ರಿಲ್‌ನಲ್ಲಿ ಬರುವ ನವರಾತ್ರಿಯು ಮುಖ್ಯ ಹಬ್ಬವಾಗಿರುತ್ತದೆ. ಸಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಬರುವಂತಹ ನವರಾತ್ರಿಯನ್ನು ನಾವು ಚೈತ್ರಾ ನವರಾತ್ರಿ ಎಂದು ಕರೆಯುತ್ತೇವೆ.

ರಾಮಾಯಣದಲ್ಲಿ ರಾಮನು ರಾವಣನೊಂದಿಗೆ ಯುದ್ಧಕ್ಕೆ ಹೊರಡುವ ಮೊದಲು ದೇವಿಯಿಂದ ವರನ್ನು ಪಡೆಯಲು ದುರ್ಗಾ ಪೂಜೆಯನ್ನು ಮಾಡಿದನೆಂದು ಪುರಾಣಗಳು ಹೇಳುತ್ತವೆ. ದುರ್ಗೆಯ ಆರಾಧನೆಯಲ್ಲಿ ಲಿಂಬೆಗೆ ಏಕೆ ಅಷ್ಟೊಂದು ಪ್ರಾಶಸ್ತ್ಯ?

ಲಂಕೆಯಲ್ಲಿ ಬಲಿಷ್ಠವಾಗಿದ್ದ ರಾವಣನನ್ನು ಸೋಲಿಸುವುದು ರಾಮ ದೇವರಿಗೆ ಕೂಡ ಅಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿಯೇ ದೇವಿಯ ವರನ್ನು ಪಡೆಯಲು ದುರ್ಗಾ ಪೂಜೆಯನ್ನು ಮಾಡಿದರು. ಆದರೆ ರಾಮ ದೇವರಿಗೆ ಇನ್ನು ಆರು ತಿಂಗಳುಗಳ ಕಾಲ ಕಾಯಲು ಸಮಯವಿಲ್ಲದೆ ಇದ್ದ ಕಾರಣದಿಂದಾಗಿ ನವರಾತ್ರಿಯಲ್ಲದ ಸಮಯದಲ್ಲಿ ದುರ್ಗಾ ಪೂಜೆಯನ್ನು ಮಾಡಿದರು.

ಇದರಿಂದಾಗಿಯೇ ದುರ್ಗಾ ಪೂಜೆಯನ್ನು ಅಕಾಲ ಬೋಧನ' ಎನ್ನಲಾಗುತ್ತದೆ. ಬೇರೆ ಋತುವಿನಲ್ಲಿ ಪೂಜೆ ಮಾಡಿರುವುದು ಎಂದು ಇದರರ್ಥ. ದೇವಿಯ ಪೂಜೆಗಾಗಿ 108 ಕಮಲದ ಹೂ ಹಾಗೂ 108 ದೀಪಗಳನ್ನು ಹಚ್ಚಿ ಪೂಜಿಸಲಾಗುತ್ತಿದ್ದ ಸಮಯದಲ್ಲಿ ಒಂದು ಕಮಲವನ್ನು ರಾಕ್ಷಸರು ತಿಳಿಯದಂತೆ ಕದ್ದ ಕಾರಣದಿಂದಾಗಿ ಪೂಜೆಯು ಸಂಪೂರ್ಣವಾಗಲಿಲ್ಲ.

ಇದರಿಂದಾಗಿ ರಾಮನು ಕಮಲದ ಬದಲಿಗೆ ತನ್ನ ಕಣ್ಣುಗಳನ್ನು ದೇವಿಗೆ ಅರ್ಪಿಸಲು ನಿರ್ಧರಿಸಿದ. ಇದನ್ನು ಕಂಡು ದೇವಿಯು ರಾಮನ ಮುಂದೆ ಪ್ರತ್ಯಕ್ಷವಾಗಿ ವಿಜಯಿಯಾಗಲು ಹರಸಿದಳು. ನವರಾತ್ರಿಯ ಹತ್ತನೇ ದಿನದಂದು ರಾಮನು ರಾವಣನನ್ನು ಸಂಹರಿಸುತ್ತಾನೆ.

ಇದಕ್ಕಾಗಿಯೇ ದಸರಾದಂದು ರಾವಣನ ದೊಡ್ಡ ಪ್ರತಿಕೃತಿಯನ್ನು ದಹಿಸಿ ವಿಜಯೋತ್ಸವವನ್ನು ಆಚರಿಸುತ್ತೇವೆ. ಲಂಕೆಯ ಯುದ್ಧದಿಂದಾಗಿ ರಾಮನು ದುರ್ಗೆಯನ್ನು ಪೂಜಿಸಿದ. ಅದು ಈಗಲೂ ಮುಂದುವರಿದುಕೊಂಡು ಬಂದಿದೆ. ದುರ್ಗಾ ಮಾತೆಯ ಒಂಬತ್ತು ಅವತಾರದ ವೈಶಿಷ್ಟ್ಯ

English summary

Did Lord Rama Start Durga Puja?

Durga Puja or Navratri is a massive festive extravaganza today. We celebrate it every year. But Who did the first Durga Puja in history? We do not have any written records, but according to oral tradition, it was Lord Rama who started Durga Puja as a means to invoke the goddess.
X
Desktop Bottom Promotion