Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ದುರ್ಗೆಯ ಆರಾಧನೆಯಲ್ಲಿ ಲಿಂಬೆಗೆ ಏಕೆ ಅಷ್ಟೊಂದು ಪ್ರಾಶಸ್ತ್ಯ?
ಹೊಸ ಕಾರು, ಹೊಸ ಮನೆಗಳ ಎದುರು ಲಿಂಬೆಹಣ್ಣು ಮತ್ತು ಮೆಣಸಿನ ಹಾರ ನೇತಾಡಿಸುವುದರ ಮಹತ್ವ ಬಲ್ಲಿರಾ? ಯಾವುದೇ ಹೊಸವಸ್ತು ಪ್ರಕಟಗೊಂಡಾಗ ಅದು ಎಲ್ಲರ ಗಮನ ಸೆಳೆಯುತ್ತದೆ. ಕೆಲವರು ಇದನ್ನು ಒಳ್ಳೆಯ ದೃಷ್ಟಿಯಲ್ಲಿ ನೋಡಿದರೆ ಅಸೂಯೆಯ ಅಥವಾ ಕೆಟ್ಟ ದೃಷ್ಟಿಯಿಂದ ನೋಡುವವರೂ ಇರುತ್ತಾರೆ.
ದುಷ್ಟ ಶಕ್ತಿಗಳು ಈ ದೃಷ್ಟಿಯನ್ನು ಬಳಸಿಕೊಂಡು ಈ ವಸ್ತುವಿಗೆ ದುರ್ವಿಧಿ ತಂದೊಡ್ಡಬಹುದು. ಇದನ್ನು ನಿವಾರಿಸಲು ಲಿಂಬೆ ಮತ್ತು ಮೆಣಸಿನ ಹಾರವನ್ನು ನೇತುಹಾಕಲಾಗುತ್ತದೆ. ಈ ಹಾರ ಕೆಟ್ಟ ದೃಷ್ಟಿಯನ್ನು ದೂರವಾಗಿಸಿ ರಕ್ಷಣೆ ನೀಡುತ್ತದೆ. ತಂತ್ರದಲ್ಲಿಯೂ ಲಿಂಬೆಯನ್ನು ದುಷ್ಟಶಕ್ತಿಗಳ ನಿವಾರಣೆಗೆ ಉಪಯೋಗಿಸಲಾಗುತ್ತದೆ. ತ್ರಿಶೂಲ, ಮೂರ್ತಿಗಳ, ಯಜ್ಞಕುಂಡಗಳ ಮೇಲೆ, ಬಾಗಿಲ ಅಕ್ಕಪಕ್ಕವೂ ಇರಿಸಲಾಗುತ್ತದೆ. ದುರ್ಗಾ ಪೂಜೆ ಆಚರಣೆ; ಹಿನ್ನಲೆ, ಐತಿಹ್ಯವೇನು?
ಅಷ್ಟೇ ಅಲ್ಲ, ರೋಗಿಗಳ ಹಾಸಿಗೆಯ ಅಕ್ಕಪಕ್ಕ ಲಿಂಬೆಯನ್ನು ನೇತಾಡಿಸುವುದರಿಂದ ಅವರ ಅನಾರೋಗ್ಯಕ್ಕೆ ಕಾರಣವಾದ ದುಷ್ಟಶಕ್ತಿಗಳನ್ನು ಓಡಿಸಲೂ ಸಾಧ್ಯ. ದುಷ್ಟಶಕ್ತಿಗಳನ್ನು ಓಡಿಸುವ ದುರ್ಗಾಮಾತೆಯ ಕೆಲಸವನ್ನೇ ಇವೂ ಮಾಡುವುದರಿಂದ ಭಕ್ತರು ದುರ್ಗಾಮಾತೆಗೆ ಲಿಂಬೆಯ ಹಾರವನ್ನೇ ತೊಡಿಸುತ್ತಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಿ...

ದುರ್ಗಾಪೂಜೆಗೆ ಲಿಂಬೆಯ ದೀಪದ ಬಳಕೆ
ದುರ್ಗಾಪೂಜೆಯಲ್ಲಿ ಲಿಂಬೆಯ ದೀಪಗಳನ್ನು ಉರಿಸಲಾಗುತ್ತದೆ. ಬೆಸಸಂಖ್ಯೆಯಲ್ಲಿ ಗರಿಷ್ಟ ಒಂಭತ್ತು ದೀಪಗಳನ್ನು ಬೆಳಗಿಸಲು ಅತಿ ತೆಳ್ಳಗಿನ ಸಿಪ್ಪೆ ಇರುವ ಲಿಂಬೆಯನ್ನು ಬಳಸಲಾಗುತ್ತದೆ. ಇದಕ್ಕಾಗಿ ಮೊದಲು ಲಿಂಬೆಯನ್ನು ಅಡ್ಡಲಾಗಿ ಲಟ್ಟಣಿಕೆಯಂತೆ ಒತ್ತಿ ಉರುಳಾಡಿಸಬೇಕು. ಬಳಿಕ ಲಂಬವಾಗಿ (ಶರಬತ್ತಿಗಾಗಿ ಅಡ್ಡ ಕತ್ತರಿಸುವಂತೆ ಅಲ್ಲ) ಕತ್ತರಿಸಿ ರಸವನ್ನು ಹಿಂಡಿ ತೆಗೆಯಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದುರ್ಗಾಪೂಜೆಗೆ ಲಿಂಬೆಯ ದೀಪದ ಬಳಕೆ
ಬಳಿಕ ಲಂಬವಾಗಿ (ಶರಬತ್ತಿಗಾಗಿ ಅಡ್ಡ ಕತ್ತರಿಸುವಂತೆ ಅಲ್ಲ) ಕತ್ತರಿಸಿ ರಸವನ್ನು ಹಿಂಡಿ ತೆಗೆಯಬೇಕು. ಬಳಿಕ ಒಳಭಾಗ ಹೊರಬರುವಂತೆ ಮಡಚಿ ತಿರುಳಿನ ಎಲ್ಲಾ ಭಾಗವನ್ನು ನಿವಾರಿಸಿ ಕೇವಲ ಸಿಪ್ಪೆಯನ್ನು ಉಳಿಸಿಕೊಳ್ಳಬೇಕು. ಈಗ ಇದರೊಳಗೆ ತುಪ್ಪ ಅಥವಾ ಎಣ್ಣೆ ಮತ್ತು ಬಾಳೆನಾರಿನ ಬತ್ತಿ ಉಪಯೋಗಿಸಿ ದೀಪ ಹಚ್ಚಬೇಕು.

ಲಿಂಬೆ ದೀಪದ ಮಹತ್ವ
ಲಿಂಬೆಯ ಒಳಭಾಗವನ್ನುನಿವಾರಿಸುವುದು ನಮ್ಮ ಒಳಗಿನ ಸ್ವಾರ್ಥ, ಲಾಲಸೆ, ಸಿಟ್ಟು ಮೊದಲಾದವುಗಳನ್ನು ದೇವರ ಸಮ್ಮುಖದಲ್ಲಿ ನಿವಾರಿಸುವ ಸಂಕೇತವಾಗಿದೆ. ದೀಪದ ಬಿಳಿಯ ಹೊರಭಾಗ ನಮ್ಮ ಅರಿವನ್ನು ಹಾಗೂ ಎಣ್ಣೆಯಿರುವ ಒಳಭಾಗ (ಅಂದರೆ ಸಿಪ್ಪೆ) ನಮ್ಮ ಮಾಯೆಯನ್ನು ಪ್ರತಿನಿಧಿಸುತ್ತವೆ.

ವಿವಿಧ ನಾರಿನ ಬತ್ತಿಗಳ ದೀಪದ ಮಹತ್ವ
ಬಾಳೆನಾರಿಗೆ ನಮ್ಮ ಪಾಪಗಳನ್ನು ಮತ್ತು ವಂಶಪಾರಂಪರಿಕವಾಗಿ ಬಂದಂತಹ ಶಾಪಗಳನ್ನು ವಿಮೋಚಿಸುವ ಶಕ್ತಿಯಿದೆ ಎಂದು ನಂಬಲಾಗಿದೆ. ಹತ್ತಿಯ ಬತ್ತಿಯ ದೀಪಕ್ಕೆ ಸಮೃದ್ದಿ ಮತ್ತು ಐಶ್ವರ್ಯವನ್ನು ಆಕರ್ಷಿಸುವ ಶಕ್ತಿಯಿದೆ ಎಂದು ನಂಬಲಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿವಿಧ ನಾರಿನ ಬತ್ತಿಗಳ ದೀಪದ ಮಹತ್ವ
ಆದ್ದರಿಂದ ನಿತ್ಯದ ಪೂಜೆಗಳಲ್ಲಿ ಹತ್ತಿಯ ಬತ್ತಿಯ ದೀಪಗಳನ್ನೇ ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಕಮಲದ ಹೂವಿನ ದಂಟಿನ ನಾರಿನಿಂದ ಮಾಡಿದ ಬತ್ತಿಯ ದೀಪಕ್ಕೆ ಪೂರ್ವಜನ್ಮದ ಕರ್ಮದ ಫಲವನ್ನು ನಿವಾರಿಸುವ ಹಾಗೂ ಈ ಜನ್ಮದಲ್ಲಿ ಉತ್ತಮ ಬಾಳನ್ನು ನೀಡುವ ಶಕ್ತಿಯಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿವಿಧ ನಾರಿನ ಬತ್ತಿಗಳ ದೀಪದ ಮಹತ್ವ
ಚಿತ್ರಾವಳಿ (madder plant) ಗಿಡದ ಕಾಂಡದ ನಾರಿನ ಬತ್ತಿಯ ದೀಪಕ್ಕೆ ಐಶ್ವರ್ಯವನ್ನು ವೃದ್ಧಿಸುವ ಮತ್ತು ದುರಾದೃಷ್ಟವನ್ನು ನಿವಾರಿಸುವ ಶಕ್ತಿಯಿದೆ. ಹೊಸ ಮತ್ತು ಹಳದಿ ಬಣ್ಣದ ಹತ್ತಿಯ ಬತ್ತಿಯ ದೀಪಕ್ಕೆ ಪರಶಕ್ತಿ ದೇವಿಯ ಅನುಗ್ರಹವನ್ನು ಪಡೆಯುವ ಶಕ್ತಿಯಿದೆ ಹಾಗೂ ಜೀವನದ ಜಂಜಾಟಗಳಿಂದ ಮುಕ್ತಿಗೊಳಿಸಿ ಜೀವನದಲ್ಲಿ ಎಂದೂ ದುರಾದೃಷ್ಟ ಕಾಡದಂತೆ ರಕ್ಷಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿವಿಧ ನಾರಿನ ಬತ್ತಿಗಳ ದೀಪದ ಮಹತ್ವ
ಹೊಸ ಕೆಂಪು ಹತ್ತಿಯ ಬಟ್ಟೆಯ ಬತ್ತಿಯ ದೀಪಕ್ಕೆ ವಿವಾಹಕ್ಕೆ ಮತ್ತು ಗರ್ಭಧರಿಸಲು ಅಡ್ಡಿಯಾಗುವ ದುಷ್ಟಶಕ್ತಿಗಳನ್ನು ನಿವಾರಿಸುವ ಹಾಗೂ ಮಂತ್ರತಂತ್ರಗಳ ಪ್ರಭಾವದಿಂದ ರಕ್ಷಿಸುವ ಶಕ್ತಿಯಿದೆ.



Click it and Unblock the Notifications











