For Quick Alerts
ALLOW NOTIFICATIONS  
For Daily Alerts

ದುರ್ಗಾ ಪೂಜೆಯ ಮಹತ್ವವನ್ನು ಸಾರುವ 9 ಆಚರಣೆಗಳು

|

ಬಹುತೇಕ ಜನರಿಗೆ ದುರ್ಗಾ ಪೂಜೆ ಎಂದರೆ ಏನು ಎಂದು ಗೊತ್ತು. ಆದರೆ ಅದಕ್ಕೆ ಸಂಬಂಧಿಸಿದ ಆಚರಣೆಗಳ ಬಗ್ಗೆ ಮಾತ್ರ ಗೊತ್ತಿರುವುದು ಅಪರೂಪ. ದುರ್ಗಾ ಪೂಜೆಯ ಜೊತೆಗೆ ಮಾಡುವ ಪ್ರತಿ ಆಚರಣೆಗೂ ಒಂದು ಅರ್ಥವಿದೆ ಮತ್ತು ಮಹತ್ವವಿದೆ. ನಿಮಗೆ ನಿಜವಾಗಿಯೂ ದುರ್ಗಾ ಪೂಜೆಯ ಜೊತೆಗೆ ಏಕೆ ಈ ಆಚರಣೆಗಳಲ್ಲ ಮಾಡುತ್ತಾರೆ ಎಂಬ ಕುರಿತು ಸಂಶಯವಿದ್ದಲ್ಲಿ, ನೀವು ಈ ಪೂಜೆಯ ಹಿಂದಿನ ಪುರಾಣವನ್ನು ತಿಳಿದುಕೊಳ್ಳಬೇಕಾಗುತ್ತದೆ.

ಪ್ರತಿ ವರ್ಷವು ದುರ್ಗಾ ದೇವಿಯು ಭಕ್ತರನ್ನು ನೋಡುವ ಸಲುವಾಗಿ ತನ್ನ ಆವಾಸ ಸ್ಥಾನವಾದ ಕೈಲಾಸದಿಂದ ಇಳಿದು ಭೂಮಿಗೆ ಬರುತ್ತಾಳಂತೆ. ಈ ದೇವಿಯು ತನ್ನ ಮಕ್ಕಳಾದ ಲಕ್ಷ್ಮೀ ದೇವಿ, ಸರಸ್ವತಿ ದೇವಿ, ಗಣಪತಿ ಮತ್ತು ಕಾರ್ತಿಕ ಸ್ವಾಮಿಯವರ ಜೊತೆಯಲ್ಲಿ ಬರುತ್ತಾಳಂತೆ. ಹುರ್ರೇ...ನಾಡಿಗೆ ಬಂತು ನವರಾತ್ರಿ ಹಬ್ಬ

ದುರ್ಗಾ ಪೂಜೆಯ ಆಚರಣೆಯು ಎಲ್ಲಾ ದೇವಾನು ದೇವತೆಗಳನ್ನು ಒಳಗೊಳ್ಳುತ್ತದೆ. ದೇವಿ ಪಕ್ಷ ಅಥವಾ ಪೂಜೆಯ ಆಚರಣೆಗಳು ಮಹಾಲಯ ಅಮಾವಾಸ್ಯೆ ಸಮಯದಲ್ಲಿ ಆರಂಭವಾಗಿ 10 ದಿನಗಳ ಕಾಲ ನಡೆಯುತ್ತದೆ. ಅದರಲ್ಲೂ ಪ್ರಮುಖವಾದ ಪೂಜೆಯು ಆರಂಭಗೊಳ್ಳುವುದು ಮಹಾ ಷಷ್ಠಿಯಂದು, ಅಂದರೆ ನವರಾತ್ರಿಯ ಆರನೇಯ ದಿನದಂದು. ಮಹಾ ಅಷ್ಟಮಿಯ ಸಂಜೆ ಒಂದು ಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆಯನ್ನು ಅಷ್ಟಮಿ ಮತ್ತು ನವಮಿ ಸಮಯದಲ್ಲಿ ಮಾಡಲಾಗುತ್ತದೆ.

ಇದರ ಜೊತೆಗೆ ಅತ್ಯಂತ ವಿನೋದಾತ್ಮಕವಾದ ಒಂದು ಆಚರಣೆಯು ದಸರೆಯ ಹತ್ತನೆ ದಿನ ಅಂದರೆ ವಿಜಯದಶಮಿಯಂದು ನಡೆಯುತ್ತದೆ. ಅಂದು ಮುತ್ತೈದೆಯರು ದೇವಿಗೆ ಕುಂಕುಮದ ಅಲಂಕಾರವನ್ನು ಮಾಡುತ್ತಾರೆ. ಜೊತೆಗೆ ಪರಸ್ಪರ ಹಚ್ಚಿಕೊಂಡು ಸಂತಸಪಡುತ್ತಾರೆ. ದುರ್ಗಾ ಪೂಜೆಗೆ ಸಂಬಂಧಿಸಿದ ಪ್ರಮುಖ ಆಚರಣೆಗಳ ವಿವರವನ್ನು ಈ ಕೆಳಗೆ ನೀಡಿದ್ದೇವೆ ಓದಿಕೊಳ್ಳಿ. ಆ ನಂತರ ಇದರ ಮಹತ್ವ ನಿಮಗೇ ಅರ್ಥವಾಗುತ್ತದೆ. ಜೈ ದುರ್ಗಾಮಾತೆಯ 10 ಕಲಾತ್ಮಕ ಚಿತ್ರ-ದರ್ಶನ

ತರ್ಪಣ: ಮಹಾಲಯ ಅಮಾವಾಸ್ಯೆ

ತರ್ಪಣ: ಮಹಾಲಯ ಅಮಾವಾಸ್ಯೆ

ಮಹಾಲಯ ಅಮಾವಾಸ್ಯೆ ದಿನ ದೇವಿ ಪಕ್ಷವು ಆರಂಭಗೊಳ್ಳುತ್ತದೆ. ಈ ದಿನ ದುರ್ಗಾ ದೇವಿಯು ಕೈಲಾಸದಿಂದ ತನ್ನ ಪ್ರಯಾಣವನ್ನು ಆರಂಭಿಸುತ್ತಾಳೆ. ಈ ದಿನ ಜನರು ಗತಿಸಿದ ತಮ್ಮ ಹಿರಿಯರಿಗಾಗಿ ತರ್ಪಣವನ್ನು ಬಿಡುತ್ತಾರೆ. ಇದು ದುರ್ಗಾ ಪೂಜೆಗೆ ಸಂಬಂಧಿಸಿದ ಆಚರಣೆಗಳಿಗೆ ಶಾಸ್ತ್ರೋಕ್ತವಾಗಿ ಮುನ್ನುಡಿ ಹಾಡುತ್ತದೆ.

ಕಲಪರಂಭೊ: ಮಹಾ ಷಷ್ಠಿ

ಕಲಪರಂಭೊ: ಮಹಾ ಷಷ್ಠಿ

ಈ ದಿನ ದೇವಿ ದುರ್ಗೆಯು ಮರ್ತ್ಯಲೋಕವನ್ನು ತಲುಪುತ್ತಾಳೆ, ಈ ಆಚರಣೆಯು ಅದನ್ನು ಸಾರುತ್ತದೆ. ಆಕೆಯ ಮುಚ್ಚಿದ ಮುಖವನ್ನು ಇಂದು ತೆರೆಯಲಾಗುತ್ತದೆ. ಕಲಪರಂಭೊ ಪೂಜೆಯು ಈ ಪೂಜಾ ಆಚರಣೆಯ ಆರಂಭಿಕ ವಿಧಿಯಾಗಿ ಪರಿಗಣಿಸಲಾಗಿರುತ್ತದೆ.

ಕೊಲ ಬೌ ತರುವುದು

ಕೊಲ ಬೌ ತರುವುದು

ಮಹಾ ಸಪ್ತಮಿ ಕೊಲ ಬೌ ಎಂಬುದು ಬಾಳೆ ಹಣ್ಣಿನ ಗಿಡ, ಇದನ್ನು ಗಣಪತಿಯ ವಧು ಎಂದು ಸಹ ಪರಿಗಣಿಸಲಾಗುತ್ತದೆ. ಮಹಾ ಸಪ್ತಮಿಯಂದು ಈಕೆಯನ್ನು ನದಿಯಲ್ಲಿ ಅಥವಾ ನೀರಿರುವ ಕಲ್ಯಾಣಿಯಲ್ಲಿ ಸ್ನಾನ ಮಾಡಿಸಿ ಸಂಜೆಗೆ ಮುನ್ನ ಗಣಪತಿಯ ಮುಂದೆ ತಂದು ಇಡುತ್ತಾರೆ.

ಒಂಭತ್ತು ಗಿಡಗಳ ಪೂಜೆ

ಒಂಭತ್ತು ಗಿಡಗಳ ಪೂಜೆ

ಮಹಾ ಸಪ್ತಮಿಯಂದು ಮತ್ತೊಂದು ಬಗೆಯ ಆಚರಣೆಯನ್ನು ಮಾಡುತ್ತಾರೆ. ಅಂದು ಒಂಭತ್ತು ಬಗೆಯ ಗಿಡಗಳನ್ನು ಪೂಜಿಸುತ್ತಾರೆ. ಈ ಗಿಡಗಳು ದೇವಿಯನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ.

ಕುಮಾರಿ ಪೂಜಾ: ಮಹಾ ಅಷ್ಟಮಿ

ಕುಮಾರಿ ಪೂಜಾ: ಮಹಾ ಅಷ್ಟಮಿ

ಮಹಾ ಅಷ್ಟಮಿಯ ದಿನದಂದು, ಋತುಮತಿಯಾಗದ ಹೆಣ್ಣು ಮಕ್ಕಳನ್ನು ಮನೆಗೆ ಕರೆದು ಅಥವಾ ಮನೆಯಲ್ಲಿರುವ ಋತುಮತಿಯಾಗ ಹೆಣ್ಣು ಮಕ್ಕಳನ್ನು ದೇವಿಯ ಅವತಾರದ ಸ್ವರೂಪವೆಂದು ಭಾವಿಸಿ ಪೂಜಿಸಲಾಗುತ್ತದೆ.

ಸಂಧಿ ಪೂಜೆ: ಮಹಾನವಮಿ

ಸಂಧಿ ಪೂಜೆ: ಮಹಾನವಮಿ

ಮಹಾ ಅಷ್ಟಮಿ ಮತ್ತು ಮಹಾನವಮಿ ಸಂಧಿಸುವ ಸಮಯದಲ್ಲಿ ಈ ಸಂಧಿ ಪೂಜೆಯನ್ನು ಮಾಡಲಾಗುತ್ತದೆ. ಅಷ್ಟಮಿಯ ಕಡೆಯ 24 ನಿಮಿಷಗಳು ಮತ್ತು ನವಮಿಯ ಮೊದಲ 24 ನಿಮಿಷಗಳನ್ನು ಈ ಸಂಧಿಕಾಲವೆಂದು ಪರಿಗಣಿಸಲಾಗುತ್ತದೆ. ಈ ಸಂಧಿಕಾಲದಲ್ಲಿಯೇ ದುರ್ಗಾ ದೇವಿಯು ಭಯಾನಕ ರಾಕ್ಷಸರಾದ ಚಂಡ ಮತ್ತು ಮುಂಡರನ್ನು ಸಂಹರಿಸಿದಳು ಎಂದು ಹೇಳಲಾಗುತ್ತದೆ.

ಸಿಂಧೂರ್ ಖೇಲ: ಮಹಾ ದಶಮಿ

ಸಿಂಧೂರ್ ಖೇಲ: ಮಹಾ ದಶಮಿ

ಈ ಪೂಜೆಯ ಕಡೆಯ ದಿನದಂದು, ಭಕ್ತಾಧಿಗಳು ದೇವಿಯನ್ನು ಅತ್ಯಂತ ದುಃಖ ಭರಿತರಾಗಿ ಬೀಳ್ಕೊಡುತ್ತಾರೆ. ಭಕ್ತಾಧಿಗಳು ಆಕೆಯ ಕೂದಲಿಗೆ ಕುಂಕುಮವನ್ನು ಹಚ್ಚುತ್ತಾರೆ ಮತ್ತು ಆಕೆಗೆ ಸಿಹಿಯನ್ನು ಉಣಿಸುತ್ತಾರೆ. ಇದಕ್ಕೆ "ಠಾಕೂರು ಬೊರೊನ್" ಎಂದು ಕರೆಯುತ್ತಾರೆ. ಇದಾದ ನಂತರ ಹೆಂಗಳೆಯರು ತಮ್ಮ ತಮ್ಮಲ್ಲಿಯೇ ಪರಸ್ಪರ ಕುಂಕುಮದಲ್ಲಿ ಆಟವಾಡುತ್ತಾರೆ. ಇದಕ್ಕೆ " ಸಿಂಧೂರ್ ಖೇಲಾ" ಎಂದು ಕರೆಯುತ್ತಾರೆ.

ವಿಜಯದಶಮಿ: ಮಹಾದಶಮಿ

ವಿಜಯದಶಮಿ: ಮಹಾದಶಮಿ

ದೇವಿ ಮತ್ತು ಆಕೆಯ ಕುಟುಂಬವನ್ನು ನೀರಿನಲ್ಲಿ ಮುಳುಗಿಸಿದ ನಂತರ, ಆಕೆಯು ಕೈಲಾಸಕ್ಕೆ ಮತ್ತೆ ಪ್ರಯಾಣ ಆರಂಭಿಸುತ್ತಾಳೆ ಎಂದು ಪ್ರತೀತಿ. ಆಗ ವಿಜಯ ದಶಮಿ ಆರಂಭವಾಗುತ್ತದೆ. ಆಗ ನೀವು ನಿಮ್ಮ ಸಮಾನರಿಗೆ ಶುಭಾಶಯ ಹೇಳಬೇಕು, ಮತ್ತು ಹಿರಿಯರಿಂದ ಆಶೀರ್ವಾದವನ್ನು ಪಡೆಯಬೇಕು.

ಶಾರದಾ ನವರಾತ್ರಿ

ಶಾರದಾ ನವರಾತ್ರಿ

ಭಾರತದ ಪೂರ್ವದ ಕಡೆ ನವರಾತ್ರಿಯನ್ನು ಶಾರದಾ ನವರಾತ್ರಿಯೆಂದು ಆಚರಿಸುತ್ತಾರೆ. ಇನ್ನು ಕೆಲವು ಕಡೆ ಮಹಾನವರಾತ್ರಿ ಎಂದು ಕೂಡ ಕರೆಯುತ್ತಾರೆ. ರಾಮ ಸೀತೆಯನ್ನು ಬಿಡಿಸಿಕೊಂಡು ಬರಲು ಲಂಕೆಗೆ ಯುದ್ಧಕ್ಕೆ ಹೋಗುವ ಮುನ್ನ ಈ ಪೂಜೆ ಮಾಡಿದ್ದನು ಎಂದು ಹೇಳಲಾಗುತ್ತದೆ. ಈ ನವರಾತ್ರಿಯನ್ನು ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲಾಗುವುದು.

English summary

9 Rituals Associated With Durga Puja

Most people know about Durga Puja but not about the rituals involved in it. There is a significance of every single ritual that is practised during Durga Puja. If you really want to know why we celebrate Durga Puja, then you must know the significance of this worship from here.
X
Desktop Bottom Promotion