For Quick Alerts
ALLOW NOTIFICATIONS  
For Daily Alerts

ಸುಟ್ಟ ಜೋಳ ತಿಂದ ತಕ್ಷಣ ನೀರುಕುಡಿಯಲೇಬಾರದು, ಏಕೆ?

|

ಮಳೆಗಾಲ ಎಂದರೆ ಅದೇನೋ ಮಜಾ. ಅದೇನೋ ಖುಷಿ. ಅದರಲ್ಲೂ ಮಳೆಗಾಲದಲ್ಲಿ ಬಾಯಿ ಚಪ್ಪರಿಸೋದು ಜಾಸ್ತಿ. ಎಣ್ಣೆಯ ತಿಂಡಿಗಳು, ಬಿಸಿ ಬಿಸಿ ತಿನಿಸುಗಳ ಕಡೆ ಸಹಜವಾಗೇ ಮನಸು ಹೊರಳುತ್ತೆ. ಈ ಪೈಕಿ ಬಿಸಿ ಬಿಸಿ ಜೋಳ ಕೂಡ ಒಂದು. ಹೌದು, ಮಳೆಗಾಲ ಆರಂಭವಾದರೆ ರಸ್ತೆ ತುಂಬೆಲ್ಲಾ ಹುರಿದ ಜೋಳಗಳ ಅಬ್ಬರ ಜೋರಾಗಿರುತ್ತೆ. ಅದನ್ನು ಖರೀದಿಸಲು ಜನರು ಮುಗಿಬೀಳುವುದು ಕೂಡ ಸಾಮಾನ್ಯ.

ನಾವು ನೋಡಿದ ಹಾಗೆ ಮಳೆಗಾಲದಲ್ಲಿ ಬಿಸಿ ಬಿಸಿ ಜೋಳಕ್ಕೆ ಬಟರ್, ಸ್ಪೈಸಿ ಐಟಂಗಳನ್ನು ಮಿಕ್ಸ್ ಮಾಡಿ ಸೇವನೆ ಮಾಡುವುದುಂಟು. ಇನ್ನೂ ಹಲವರು ಜೋಳವನ್ನು ಕೆಂಡದಲ್ಲಿ ಸುಟ್ಟು ತಿನ್ನುವುದುಂಟು. ಈ ಜೋಳ ಬಾಯಿಗೆ ಎಷ್ಟು ರುಚಿಯನ್ನು ನೀಡುತ್ತದೆಯೋ ಅಷ್ಟೇ ಆರೋಗ್ಯದ ದೃಷ್ಟಿಯಿಂದಲೂ ಜೋಳ ಹೆಚ್ಚು ಉತ್ತಮ ಆಹಾರ. ಆರೋಗ್ಯಕ್ಕೆ ಒಳಿತು. ಆದರೆ, ನಿಮಗೆ ಗೊತ್ತಾ ಜೋಳ ತಿಂದ ಮೇಲೆ ನೀರು ಕುಡಿದರೆ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು?. ಅನೇಕರಿಗೆ ಈ ವಿಚಾರ ಗೊತ್ತಿಲ್ಲ. ಹೌದು, ಸ್ಪೈಸ್ ಅಥವಾ ಸುಟ್ಟ ಜೋಳ ಯಾವುದೇ ರೀತಿಯ ಜೋಳ ತಿಂದರೂ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಪ್ರಮುಖವಾಗಿ ಜೋಳ ತಿಂದ ಬಳಿಕ ನೀರು ಕುಡಿಯಲೇ ಬಾರದು. ನೀರು ಕುಡಿದರೆ ಏನಾಗುತ್ತೆ? ಇದರಿಂದ ಆಗಬಹುದಾದ ಸಮಸ್ಯೆ ಏನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ:

ಜೋಳ ತಿಂದ ಮೇಲೆ ನೀರು ಕುಡಿಯಲೇಬೇಡಿ!

ಜೋಳ ತಿಂದ ಮೇಲೆ ನೀರು ಕುಡಿಯಲೇಬೇಡಿ!

ಜೋಳ ತಿಂದ ತಕ್ಷಣ ಯಾವುದೇ ಕಾರಣಕ್ಕೂ ನೀರನ್ನು ಕುಡಿಯಲೇ ಬಾರದು. ಯಾಕೆಂದ್ರೆ ಜೋಳ ತಿಂದು ನೀರು ಕುಡಿಯುವುದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಜೋಳ ತಿಂದ ಬಳಿಕ ನೀರು ಕುಡಿಯಲು ಸಾಕಷ್ಟು ಅಂತರ ಪಾಲಿಸಬೇಕಾಗುತ್ತದೆ. ಏಕೆಂದರೆ ಜೋಳದಲ್ಲಿ ಹೆಚ್ಚಿನ ಫೈಬರ್ ಅಂಶ ಕಂಡು ಬರುತ್ತದೆ. ನೀವು ಇದನ್ನು ತಿಂದ ಕೂಡಲೇ ನೀರು ಕುಡಿದ್ರೆ ಫೈಬರ್ ಜೀರ್ಣವಾಗುವುದಿಲ್ಲ.

ಅಲ್ಲದೆ ಜೋಳ ಜೀರ್ಣವಾಗಲು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಕಾಣಿಸಿಕೊಳ್ಳುತ್ತದೆ. ಜೋಳ ತಿಂದ ತಕ್ಷಣವೇ ನೀರು ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆ ಎದುರಾಗಬಹುದು. ಹಾಗೆಯೇ ಹೊಟ್ಟೆಯಲ್ಲಿ ಗ್ಯಾಸ್​ ಉತ್ಪತಿ ಯಾಗಿ ವಾಂತಿ, ತಲೆ ನೋವಿಗೂ ಕಾರಣವಾಗಬಹುದು. ಜೋಳ ತಿಂದು ನೀರು ಕುಡಿದರೆ ಈ ರೀತಿಯ ಅನುಭವ ಖಂಡಿತವಾಗಿಯೂ ಎಲ್ಲರಿಗೂ ಆಗುತ್ತದೆ ಎಂದು ವೈದ್ಯರು ಕೂಡ ತಿಳಿಸಿದ್ದಾರೆ.

ಹೀಗಾಗಿ ಜೋಳ ತಿಂದು ನೀರು ಕುಡಿಯುವ ಮುನ್ನ ಎಚ್ಚರವಾಗಿರುವುದು ಒಳ್ಳೆಯದು.

ನೀರು ಕುಡಿಯಲೇಬೇಕು ಎಂದಾದರೆ ಹೀಗೆ ಮಾಡಿ!

ನೀರು ಕುಡಿಯಲೇಬೇಕು ಎಂದಾದರೆ ಹೀಗೆ ಮಾಡಿ!

ಸುಲಭವಾಗಿ ಹೇಳಬೇಕೆಂದರೆ ಕಾರ್ನ್ ತಿಂದು ನೀರು ಕುಡಿದರೆ ನೀವು ಹೊಟ್ಟೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರಿ. ಈ ರೀತಿಯ ಸಮಸ್ಯೆಯಿಂದ ದೂರ ಇರಬೇಕಾದರೆ ನೀರು ಸೇವಿಸಲು ಹೋಗಬೇಡಿ. ಹಾಗೂ ನೀರು ಕುಡಿಯಲೇ ಬೇಕು ಎಂದಾದರೆ ಜೋಳ ಸೇವಿಸುವ 45 ನಿಮಿಷ ಮುಂಚೆ ಅಥವಾ 45 ನಿಮಿಷ ನಂತರ ನೀರು ಕುಡಿಯುವುದು ಒಳ್ಳೆಯದು. ಯಾಕೆಂದರೆ ಕೊಂಚ ಪ್ರಮಾಣದಲ್ಲಿ ತಿಂದ ಜೋಳ ಜೀರ್ಣವಾಗಿರುತ್ತದೆ ಹೀಗಾಗಿ 45 ನಿಮಿಷ ನಂತರ ಜೋಳ ಸೇವಿಸಬಹುದು.

ಜೋಳಕ್ಕೆ ನಿಂಬೆ ಬೆರೆಸಿ!

ಜೋಳಕ್ಕೆ ನಿಂಬೆ ಬೆರೆಸಿ!

ಜೋಳಕ್ಕೆ ಲೆಮನ್ ಜ್ಯೂಸ್ ಹಾಕಿ ತಿಂದರೆ ನಿಮ್ಮ ಜೀರ್ಣಕ್ರೀಯೆ ಸಮಸ್ಯೆ ದೂರವಾಗುತ್ತದೆ. ಹೌದು, ನಿಂಬೆಗೆ ಜೀರ್ಣಕ್ರಿಯೆಯನ್ನು ಸುಗಮಗೊಳಿಸುವ ಶಕ್ತಿ ಇದೆ. ನಿಂಬೆ ಜೀರ್ಣಕ್ರಿಯೆಯ ಪ್ರಕ್ರಿಯೆ ಸುಗಮ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ. ಹೀಗಾಗಿ ನಿಂಬೆ ಬಳಸುವುದು ಉತ್ತಮ ಐಡಿಯಾ. ಟೇಸ್ಟ್ ಗೆ ಕೊಂಚ ಖಾರ ಮಸಾಲ ಬಳಸಿದರೂ ಒಳ್ಳೆಯದು.

ತಾಜಾ ಜೋಳ ಸೇವಿಸಿ!

ತಾಜಾ ಜೋಳ ಸೇವಿಸಿ!

ಜೋಳ ತಿನ್ನುವಾಗ ಯಾವಾಗಲೂ ಅದು ತಾಜಾ ಇದ್ಯಾ ಎಂದು ನೋಡಿಕೊಳ್ಳಿ. ಯಾಕೆಂದರೆ ಜೋಳಗಳಲ್ಲಿ ಬ್ಯಾಕ್ಟೀರಿಯಾಗಳು ಬೇಗ ಸೃಷ್ಟಿಯಾಗುತ್ತದೆ. ಬೇಗನೆ ಜೋಳ ಕೆಡುವುದರಿಂದ ತಾಜಾ ಜೋಳವನ್ನೇ ಆರಿಸಿಕೊಳ್ಳಿ. ಅದರ ಸಿಪ್ಪೆ ತೆಗೆದು ಇಟ್ಟಿರುವ ಜೋಳ ನಿಮಗೆ ಬೇಡ ಎನ್ನಿ. ಯಾಕೆಂದರೆ ಸಿಪ್ಪೆ ತೆಗೆದರೆ ಅದು ಬೇಗ ಹಾಳಾಗುತ್ತದೆ. ಅಲ್ಲದೇ ಈಗಾಗಲೇ ಹಿರಿದ ಜೋಳವನ್ನು ಸೇವಿಸಬೇಡಿ ಅದೂ ಕೂಡ ನಿಮ್ಮ ಆರೋಗ್ಯವನ್ನು ಹಾಳು ಗೆಡವುತ್ತದೆ. ಹೀಗಾಗಿ ನಿಮ್ಮ ಕಣ್ಣ ಮುಂದೆಯೇ ಹುರಿದ ಜೋಳವನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

 ಜೋಳ ತಿಂದರೆ ಆರೋಗ್ಯ ಉತ್ತಮ!

ಜೋಳ ತಿಂದರೆ ಆರೋಗ್ಯ ಉತ್ತಮ!

ಹೌದು ಜೋಳ ತಿಂದರೆ ಆರೋಗ್ಯ ಉತ್ತಮವಾಗಿರುತ್ತದೆ. ನಾರಿನಂಶ ಹೇರಳವಾಗಿರುವ ಜೋಳದಲ್ಲಿ ಕಾರ್ಬೋಹೈಡ್ರೇಟ್ಸಗಳಿವೆ. ಆಹಾರದಲ್ಲಿ ಇದನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ನಾರಿನಂಶ ಅಧಿಕವಾಗಿರುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಕರುಳಿನಲ್ಲಿನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.

ಕರುಳಿನ ಕ್ಯಾನ್ಸರ್‌ ಬಾರದಂತೆ ತಡೆಗಟ್ಟುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಜೋಳ ಸೇವಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಜೋಳದ ಎಣ್ಣೆಯಲ್ಲಿರುವ ಒಮೆಗಾ 3 ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ತೆಗೆದುಹಾಕುವುದು. ಒಮೆಗಾ 3 ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು. ಜತೆಗೆ ಹೃದಯಾಘಾತ ಮತ್ತು ಪಾಶ್ರ್ವವಾಯುವಿನ ಸಮಸ್ಯೆಯನ್ನು ನಿವಾರಣೆ ಮಾಡುವುದು. ಜೋಳದಲ್ಲಿರುವ ಕಾರ್ಬೋಹೈಡ್ರೇಟ್ಸ್ ದೇಹಕ್ಕೆ ಹೆಚ್ಚಿನ ಶಕ್ತಿ ನೀಡುವುದು.

ಮಿದುಳು ಹಾಗೂ ನರ ಮಂಡಲದ ಕೆಲಸ ಕಾರ್ಯವನ್ನು ಸುಗಮವಾಗಿ ಮಾಡುವುದು. ಜೋಳದಲ್ಲಿ ವಿಟಮಿನ್‌ ಸಿ, ಕ್ಯಾರೊಟಿನಾಯ್ಡ್‌ ಸಮೃದ್ಧವಾಗಿದೆ.

English summary

Why You Should Not Drink Water After Eating Roasted Corn in Kannada

We love to eat roasted corn, but do you know we should not drink water after eating roasted corn in Kannada, Read on,
X
Desktop Bottom Promotion