For Quick Alerts
ALLOW NOTIFICATIONS  
For Daily Alerts

ಬೇಯಿಸುವ ಮುನ್ನ ಕೋಳಿಮಾಂಸ ತೊಳೆಯುವ ಅಭ್ಯಾಸ ನಿಮಗಿದ್ದರೆ, ಇಂದೇ ಬಿಟ್ಟುಬಿಡಿ

|

ಮಾಂಸಹಾರಿಗಳ ಫೇವರೆಟ್ ಐಟಮ್ ಅಂದ್ರೆ ಚಿಕನ್. ವೀಕೆಂಡ್ ಬಂದ್ರೆ ಸಾಕು, ಅಮ್ಮನ ಕೈಯಿಂದ ವೆರೈಟಿ ವೆರೈಟಿ ಡಿಶ್ ಮಾಡಿಸಿಕೊಂಡು ತಿನ್ನುವ ಖುಷಿನೇ ಬೇರೆ. ಇಂತಹ ಚಿಕನ್ ನ ಮಾರ್ಕೆಟ್ ನಿಂದ ತಂದಮೇಲೆ ತೊಳೆಯುತ್ತೇವೆ. ಆದರೆ ಬೇಯಿಸುವ ಮುನ್ನ ಕೋಳಿಮಾಂಸ ತೊಳೆಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ, ಹೀಗಂತ ಹೇಳುತ್ತಿರುವ ಸಿಡಿಸಿ ಅಂದ್ರೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ. ಹಾಗಾದ್ರೆ ಏನಿದು ವಿಚಾರ, ಯಾಕೆ ತೊಳೆಯಬಾರದು, ತೊಳೆದರೆ ಏನಾಗುವುದು ಎಲ್ಲವನ್ನು ಇಲ್ಲಿ ನೋಡೋಣ.

ಬೇಯಿಸುವ ಮುನ್ನ ಕೋಳಿ ಮಾಂಸವನ್ನು ತೊಳೆಯಬಾರದು ಏಕೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ:

ಚಿಕನ್ ನಲ್ಲಿರುವ ಪೋಷಕಾಂಶಗಳು:

ಚಿಕನ್ ನಲ್ಲಿರುವ ಪೋಷಕಾಂಶಗಳು:

ಚಿಕನ್ ನಲ್ಲಿ ಪೋಷಕಾಂಶಕ್ಕೇನೂ ಕೊರತೆಯಿಲ್ಲ. ಇದರಲ್ಲಿ ಪ್ರೋಟೀನ್ ಅಗಾಧ ಪ್ರಮಾಣದಲ್ಲಿದ್ದು, ನಮ್ಮ ದೇಹದ ಸ್ನಾಯು-ಮೂಳೆಗಳು ಗಟ್ಟಿಗೊಳಿಸುತ್ತವೆ. ಕೊಬ್ಬಿನಾಂಶನೂ ಬಹಳ ಕಡಿಮೆ. ಸಾಮಾನ್ಯವಾಗಿ ಮಾಂಸಹಾರದಿಂದಲೇ ತೂಕ ಏರುತ್ತದೆ ಎಂದು ನಾವೆಲ್ಲ ಅಂದುಕೊಂಡಿದ್ದೇವೆ, ಆದರೆ ಕೋಳಿ ಮಾಂಸದಿಂದ ಸ್ನಾಯುಗಳು ಬೆಳೆಯುತ್ತವೆ, ಹೊರತು ಕೊಬ್ಬಿನ ಸಂಗ್ರಹವಾಗುವುದು ಕಡಿಮೆ. ಇನ್ನೂ ಮಕ್ಕಳ ಬೆಳವಣಿಗೆಗೂ ಚಿಕನ್ ಸೂಕ್ತ ಏಕೆಂದರೆ ಇದರಲ್ಲಿ ಅಮೈನೋ ಆಸಿಡ್ ಅಧಿಕವಾಗಿದ್ದು, ಹಸಿವನ್ನ ಹೆಚ್ಚಿಸುತ್ತದೆ. ಇದರ ಜೊತೆಗೆ ರೋಗ ನಿರೋಧಕ ಶಕ್ತಿಗೆ, ಕೂದಲಿಗೆ, ಹೆಣ್ಮಕ್ಕಳ ತಿಂಗಳ ಸಮಸ್ಯೆ ಸೇರಿದಂತೆ ಹತ್ತು-ಹಲವಾರು ಪ್ರಯೋಜನಗಳನ್ನ ಈ ಒಂದು ಆಹಾರ ಪದಾರ್ಥದಿಂದ ಪಡೆಯಬಹುದು.

ಚಿಕನ್ ಬೇಯಿಸುವ ಮುನ್ನ ತೊಳೆಯುವುದು ಸಾಮಾನ್ಯ. ಆದರೆ ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕಾರಕ ಎಂದು ಅಮೆರಿಕಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳುತ್ತಿದೆ. ಹಸಿಕೋಳಿ ಮಾಂಸ ತೊಳೆಯುವುದರಿಂದ ರೋಗಾಣುಗಳು ಹರಡಬಹುದು ಎಂಬುದು ಇದರ ಹೇಳಿಕೆಯಾಗಿದೆ.

ಬೇಯಿಸುವ ಮುನ್ನ ಕೋಳಿಮಾಂಸ ತೊಳೆಯಬಾರದು ಏಕೆ?:

ಬೇಯಿಸುವ ಮುನ್ನ ಕೋಳಿಮಾಂಸ ತೊಳೆಯಬಾರದು ಏಕೆ?:

ಸಿಡಿಸಿ ಪ್ರಕಾರ, ಹಸಿಕೋಳಿಯನ್ನ ತೊಳೆಯುವುದರಿಂದ ಕೋಳಿಯಲ್ಲಿರುವ ರೋಗಾಣುಗಳು ಇತರ ಆಹಾರ ಅಥವಾ ಅಡುಗೆಮನೆಯಲ್ಲಿರುವ ಪಾತ್ರೆಗಳಿಗೆ ವರ್ಗಾವಣೆಯಾಗುತ್ತವೆ. ಅಂದರೆ, ಮಾಂಸದಲ್ಲಿರೋ ಸೂಕ್ಷ್ಮಜೀವಿಗಳು ಅಡುಗೆ ಮನೆ ಸೇರುವ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕಾಗಿಯೇ ತೊಳೆಯಬಾರದು ಎಂದು ಎಚ್ಚರಿಕೆ ನೀಡಿದೆ.

ತೊಳೆದರೆ ಏನಾಗಬಹುದು?:

ತೊಳೆದರೆ ಏನಾಗಬಹುದು?:

ಕೋಳಿ ಮಾಂಸವನ್ನ ಸಿಂಕ್ ನಲ್ಲಿ ತೊಳೆಯುವುದರಿಂದ ಫುಡ್ ಪಾಯಿಸನ್ ಆಗಬಹುದು. ಅದೇಗೆ ಅಂದ್ರೆ, ಚಿಕನ್ ನಲ್ಲಿ ಸಾಮಾನ್ಯವಾಗಿ ಸಾಲ್ಮೊನೆಲ್ಲಾ, ಕ್ಲೋಸ್ಟ್ರಿಡಿಯಮ್ ಪರ್ಫ್ರೀಂಜನ್ಸ್ ಮತ್ತು ಕ್ಯಾಂಪಿಲೋಬ್ಯಾಕ್ಟರ್ ಎಂಬ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ. ನಾವು ಮಾರ್ಕೆಟ್ ನಿಂದ ತಂದ ಚಿಕನ್ ನಲ್ಲಿ ಈ ಬ್ಯಾಕ್ಟೀರಿಯಾಗಳಲ್ಲಿ ಒಂದು ಇದ್ರೂ, ಅದನ್ನ ತೊಳೆದಾಗ, ಈ ಬ್ಯಾಕ್ಟಿರಿಯಾ ಅಡುಗೆಮನೆಯಲ್ಲಿರುವ ಪಾತ್ರೆ ಅಥವಾ ಇತರ ಆಹಾರಕ್ಕೆ ಸೇರಿಬಿಡುತ್ತವೆ. ಇದನ್ನರಿಯದ ನಾವು, ಅದನ್ನೇ ತಿಂದು ಅಥವಾ ಅದೇ ಪಾತ್ರೆ ಬಳಸಿದರೆ, ಅದು ಆಹಾರದ ವಿಷಕ್ಕೆ ಕಾರಣವಾಗುವುದು.

ಕೋಳಿಮಾಂಸ ತೊಳೆಯುವ ಬದಲು ಏನು ಮಾಡಬೇಕು?:

ಕೋಳಿಮಾಂಸ ತೊಳೆಯುವ ಬದಲು ಏನು ಮಾಡಬೇಕು?:

  • ಅಮೇರಿಕಾದ ಒಂದು ಸಂಸ್ಥೆ ಪ್ರಕಾರ, ಹಸಿ ಕೋಳಿಯನ್ನು ತೊಳೆಯುವುದರಿಂದ ಅದರಲ್ಲಿರುವ ಕೀಟಾಣುಗಳು ಸಾಯುವುದಿಲ್ಲ, ಅದರ ಬದಲು ಅದನ್ನು ಬೇಯಿಸಿದಾಗ ಮಾತ್ರ ಅದಲ್ಲಿರುವ ಕೀಟಾಣುಗಳು ಸಾಯಲು ಸಾಧ್ಯ. ಆದ್ದರಿಂದ ಚಿಕನ್ ತಿನ್ನುವ ಮೊದಲು ಅದು ಸರಿಯಾಗಿ ಬೆಂದಿದೆಯಾ ನೋಡಿಕೊಳ್ಳಿ, ಅನಂತರ ತಿನ್ನಿ.
  • ಒಂದು ವೇಳೆ ಫ್ರಿಡ್ಜ್ ಇದ್ದರೆ, ಬೇಯಿಸುವ ಮೊದಲು ಚಿಕನ್ ನ್ನು ಒಂದು ಕವರ್ ನಲ್ಲಿ ಸುತ್ತಿ, ಡೀಪ್ ಫ್ರಿಡ್ಜರ್ ನಲ್ಲಿಡಿ. ಆಮೇಲೆ ಬಳಸಿ.
  • ಚಿಕನ್ ತೊಳೆಯಲೇಬೇಕೆಂದರೆ ಅಡುಗೆ ಮನೆಯ ಸಿಂಕ್ ಬಳಸಬೇಡಿ. ಹೊರಗೆ ತೆಗೆದುಕೊಂಡು ಹೋಗಿ ತೊಳೆಯಿರಿ.
  • ಕೋಳಿಮಾಂಸ ತಂದು ಕವರ್ ನ್ನು ಅಡುಗೆಮನೆಯಲ್ಲಿಡಬೇಡಿ.
  • ಕತ್ತರಿಸಲು ಬಳಸುವ ಚಾಕು ಮತ್ತು ಕಟ್ಟಿಂಗ್ ಬೋರ್ಡ್ ನ್ನು ಕ್ಲೀನ್ ಆಗಿ ತೊಳೆಯಿರಿ
  • ಎಲ್ಲಕ್ಕಿಂತ ಮುಖ್ಯವಾಗಿ ಕೊಳೆ ತೊಳೆದ ಮೇಲೆ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಿರಿ
English summary

Why you should Never Wash Raw Chicken in Kannada

Here we talking about Why you should never wash raw chicken in Kannada, read on
Story first published: Saturday, September 11, 2021, 15:02 [IST]
X
Desktop Bottom Promotion