Just In
Don't Miss
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದ ಟೈಟಲ್ ಬದಲಾವಣೆ: ನಿರ್ದೇಶಕರು ಹೇಳಿದ್ದೇನು?
- Sports
ಭಾರತ vs ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ ಐದು ಅಂಶಗಳು
- News
ಹಸನಾಗದ ಅರಳಿಕಟ್ಟೆಹುಂಡಿ ಗ್ರಾಮದ ಜನರ ಬದುಕು!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಟ್ಟಗಾಯ ಹಾಗೂ ಕಲೆಗಳಿಗೆ ಬೆಸ್ಟ್ ಮನೆಮದ್ದುಗಳು
ಅಡುಗೆ ಮನೆಯಲ್ಲಿ ಅದೂ ಇದೂ ಅಂತ ಕೆಲಸ ಮಾಡುವಾಗ ಕೈ ಸುಟ್ಟುಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಬೆಂಕಿಯಿಂದ ದೊಡ್ಡ ದೊಡ್ಡ ಅನಾಹುತಗಳೇ ನಡೆದು ಬಿಡಬಹುದು. ಬೆಂಕಿ, ಗಾಳಿ, ನೀರು ಇವುಗಳ ಮುಂದೆ ಮನುಷ್ಯ ತೃಣಕ್ಕೆ ಸಮ. ಖಂಡಿತ ಬೆಂಕಿಯಿಂದ ಆಗುವ ಅನಾಹುತಗಳನ್ನು ಯಾರೂ ತಮ್ಮ ಜೀವನದಲ್ಲಿ ಮರೆಯಲಾರರು. ಸಣ್ಣಪುಟ್ಟ ಕೈ ಸುಟ್ಟುಕೊಳ್ಳುವಿಕೆಯೇ ಎಷ್ಟು ಉರಿಯನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲ ಅದರ ಕಲೆ ನಿವಾರಣೆಯಾಗುವುದಕ್ಕೂ ಕೂಡ ಹಲವು ಸಮಯ ಹಿಡಿಯುತ್ತದೆ.
ಸುಟ್ಟಾಗ ಏನು ಮಾಡಬೇಕು? ಸುಟ್ಟ ಕಲೆಗಳನ್ನು ನಿವಾರಿಸುವುದು ಹೇಗೆ? ಅದರ ನೋವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಇತ್ಯಾದಿ ಕೆಲವು ಸರಳ ಟಿಪ್ಸ್ ಗಳನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಕಲೆಗಳನ್ನು ಹೇಳಹೆಸರಿಲ್ಲದಂತೆ ನಿವಾರಿಸುವುದಕ್ಕೆ ಕೆಲವು ಮನೆ ಮದ್ದುಗಳನ್ನೇ ನೀವು ಟ್ರೈ ಮಾಡಬಹುದು. ಹೌದು ಸುಟ್ಟ ಗಾಯಗಳಿಗೆ ಗಿಡಮೂಲಿಕೆಗಳೇ ಪರಿಹಾರ ನೀಡಬಲ್ಲವು. ಸುಡುವಿಕೆ ಖಂಡಿತವಾಗಲೂ ಬಹಳ ನೋವುಂಟು ಮಾಡುತ್ತದೆ. ನಾವಿಲ್ಲಿ ತಿಳಿಸುತ್ತಿರುವ ಕೆಲವು ಉಪಾಯಗಳು ಸುಟ್ಟಾಗ ಆಗುವ ನೋವನ್ನು ಕಡಿಮೆ ಮಾಡುತ್ತದೆ. ಸೋಂಕಾಗುವುದನ್ನು ತಡೆಯುತ್ತದೆ. ಮನೆಯಲ್ಲೇ ಇರುವ ಕೆಲವು ಮಾರ್ಗೋಪಾಯಗಳನ್ನು ಅನುಸರಿಸುವುದರಿಂದಾಗಿ ದೊಡ್ಡ ಮಟ್ಟದ ಸಮಸ್ಯೆ ಆಗದಂತೆ ತಡೆಯುವುದಕ್ಕೆ ಸಾಧ್ಯವಿದೆ. ಸಣ್ಣ ಪುಟ್ಟ ಸುಟ್ಟ ಗಾಯಗಳಾದಾಗ ನೀವು ಆಸ್ಪತ್ರೆ ಮೆಟ್ಟಿಲು ಹತ್ತಬೇಕಾಗಿಲ್ಲ. ಕೆಲವು ಮನೆಮದ್ದುಗಳು ನಿಮ್ಮ ಪ್ರಥಮ ಚಿಕಿತ್ಸೆಯಾದರೆ ಕೆಲವು ನಿಮ್ಮ ಕಲೆಗಳನ್ನು ನಿವಾರಿಸುತ್ತದೆ.
ಅದೆಷ್ಟೋ ಔಷಧಿಗಳನ್ನು ಜನರು ಬಳಸುವುದೇ ಇಲ್ಲ. ಕೆಲವು ಬಳಕೆಯಲ್ಲಿರುವ ವಿಧಾನಗಳು ಅಷ್ಟೇನು ಪರಿಣಾಮಕಾರಿಯಲ್ಲದೇ ಇರುವ ಸಾಧ್ಯತೆ ಇದೆ ಮತ್ತು ಸೊಂಕನ್ನು ಹೆಚ್ಚಿಸಲೂಬಹುದು. ವೈದ್ಯರು ಸುಡುವಿಕೆಯನ್ನು ನಾಲ್ಕು ಡಿಗ್ರಿಗಳಲ್ಲಿ ಪರಿಗಣಿಸುತ್ತಾರೆ. ಮೊದಲ ಮತ್ತು ಎರಡನೇ ಡಿಗ್ರಿಯ ಸುಡುವಿಕೆಯನ್ನು ಜನರು ಮನೆಯಲ್ಲೇ ಔಷದೋಪಚಾರಗಳಿಂದ ವಾಸಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಮೂರು ಮತ್ತು ನಾಲ್ಕನೇ ಡಿಗ್ರಿಯಲ್ಲಿ ಸುಟ್ಟಗಾಯಗಳಾಗಿದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಅವರಿಂದ ಪಡೆಯಬೇಕಾಗುತ್ತದೆ.
ನಾವು ಈ ಲೇಖನದಲ್ಲಿ ಯಾವ ಮನೆಮದ್ದುಗಳು ಸೂಕ್ತವಾದದ್ದು ಮತ್ತು ಯಾವುದು ಸೂಕ್ತವಲ್ಲ ಎಂದು ತಿಳಿಸಿಕೊಡುತ್ತಿದ್ದೇವೆ.

ನಿಂಬೆ ಮತ್ತು ಟೊಮೆಟೋ ರಸ
ನಿಂಬೆ ಮತ್ತು ಟೊಮೆಟೋ ರಸವು ನಿಜಕ್ಕೂ ಸಹಾಯ ಮಾಡುತ್ತದೆ. ನಿಧಾನವಾಗಿ ಸುಟ್ಟ ಗಾಯದ ಮೇಲಿನ ಸತ್ತ ಚರ್ಮವನ್ನು ತೆಗೆಯುತ್ತದೆ ಮತ್ತು ಹೊಸ ಚರ್ಮದ ಹುಟ್ಟುವಿಕೆಗೆ ನೆರವಾಗುತ್ತದೆ. ನಿಂಬೆಯಲ್ಲಿ ಆಸಿಡಿಕ್ ಗುಣಗಳಿವೆ ಇವು ಕಲೆ ನಿವಾರಕವಾಗಿ ಕೆಲಸ ಮಾಡುತ್ತದೆ. ತಾಜಾವಾಗಿ ರಸ ತೆಗೆದ ಟೊಮೆಟೋ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ನಂತೆ ಕೆಲಸ ಮಾಡುತ್ತದೆ ಮತ್ತು ಸುಟ್ಟ ಕಲೆಗಳನ್ನು ನಿವಾರಿಸುತ್ತದೆ. ಇದನ್ನು ಬಳಸುವುದು ಹೇಗೆ ಎಂಬುದು ಇಲ್ಲಿದೆ ನೋಡಿ.
- ಸಹಜವಾದ ನೀರಿನಿಂದ ಸುಟ್ಟ ಗಾಯವನ್ನು ನಿಧಾನವಾಗಿ ತೊಳೆಯಿರಿ.
- ನಿಮಗೆ ಎರಡು ಸ್ವಚ್ಛವಾಗಿರುವ ಬಟ್ಟೆಗಳು ಬೇಕು. ಒಂದರಲ್ಲಿ ತಾಜಾ ನಿಂಬೆಯ ರಸ ಮತ್ತು ಇನ್ನೊಂದರಲ್ಲಿ ತಾಜಾ ಟೊಮೆಟೋ ರಸವನ್ನು ಹಾಕಿ ನೆನಸಿ.
- ಮೊದಲಿಗೆ ತಣ್ಣನೆಯ ನೀರಿನಿಂದ ಸುಟ್ಟ ಜಾಗವನ್ನು ತೊಳೆಯಿರಿ.
- ಕೆಲವು ಘಂಟೆಗಳವರೆಗೆ ಸುಟ್ಟ ಗಾಯದ ಮೇಲೆ ಒದ್ದೆ ಮಾಡಿದ ಬಟ್ಟೆಗಳನ್ನು ಇಟ್ಟುಕೊಳ್ಳಿ.
- ಸ್ವಲ್ಪ ತಾಜಾ ನಿಂಬೆಯ ರಸವನ್ನು ರೆಡಿ ಇಟ್ಟುಕೊಳ್ಳಿ.
- ಸುಟ್ಟ ಗಾಯದ ಮೇಲೆ ನಿಂಬೆಯ ರಸದ ಬಟ್ಟೆಯನ್ನು ನಿಧಾನವಾಗಿ ಇಟ್ಟು ಸ್ವಲ್ಪ ಸಮಯ ಹಾಗೆಯೇ ಬಿಡಿ.
- ಒಮ್ಮೆ ಅದು ಒಣಗಿದ ನಂತರ ತಾಜಾ ಟೊಮೆಟೋ ರಸವನ್ನು ಸುಟ್ಟ ಗಾಯದ ಮೇಲೆ ಇಟ್ಟುಕೊಳ್ಳಿ.
- ಗರಿಷ್ಟ ಮಟ್ಟದ ಬ್ಲೀಚಿಂಗ್ ಪರಿಣಾಮದಿಂದಾಗಿ ನಿಮ್ಮ ಸುಟ್ಟ ಗಾಯದ ಕಲೆಗಳು ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ.
- ಈ ವಿಧಾನವನ್ನು ದಿನಕ್ಕೆ ಎರಡು ಬಾರಿ ಪುನರಾವರ್ತಿಸಿ. ಇದೇ ರೀತಿಯಾಗಿ ನೀವು ನಿಂಬೆ ರಸವನ್ನು ನಿಮ್ಮ ಮೊಡವೆ ಕಲೆಗಳ ನಿವಾರಣೆಗೂ ಕೂಡ ಬಳಕೆ ಮಾಡಬಹುದು.

ಬಾದಾಮಿ ಎಣ್ಣೆ
ಮನೆಯಲ್ಲೇ ಕಲೆ ನಿವಾರಣೆ ಮಾಡಿಕೊಳ್ಳುವುದಕ್ಕೆ ಇರುವ ಮತ್ತೊಂದು ಅತ್ಯುತ್ತಮ ಮಾರ್ಗವೆಂದರೆ ಅದು ಬಾದಾಮಿ ಎಣ್ಣೆ
- ನಿಧಾನವಾಗಿ ಬಾದಾಮಿ ಎಣ್ಣೆಯಿಂದ ಕಲೆಯ ಮೇಲೆ ಮಸಾಜ್ ಮಾಡಿ.
- ದಿನಕ್ಕೆ ಎರಡು ಬಾರಿ ಈ ವಿಧಾನ ಅನುಸರಿಸುವುದರಿಂದಾಗಿ ಕಲೆಯನ್ನು ನಿವಾರಿಸಿಕೊಳ್ಳಬಹುದು.
- ಬಾದಾಮಿ ಎಣ್ಣೆ ನಿಮ್ಮ ಕೂದಲಿಗೂ ಕೂಡ ಬಹಳ ಉತ್ತಮವಾದದ್ದು. ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಬಾದಾಮಿ ಎಣ್ಣೆ ಬಹಳ ಪ್ರಯೋಜನಕಾರಿ. ಬಾದಾಮಿ ಎಣ್ಣೆಯ ಥೆರೆಪಿ ದಿ ಬೆಸ್ಟ್.

ಮೆಂತ್ಯೆ ಕಾಳುಗಳು
ಸುಟ್ಟ ಕಲೆಗಳ ನಿವಾರಣೆಗೆ ಮೆಂತ್ಯೆ ಕಾಳುಗಳು ಕೂಡ ಬಹಳ ಒಳ್ಳೆಯದು.
- ಒಂದು ರಾತ್ರಿ ಪೂರ್ತಿ ಮೆಂತ್ಯೆಯ ಕಾಳುಗಳನ್ನು ನೀರಿನಲ್ಲಿ ನೆನಸಿಡಿ. ಮಾರನೇಯ ದಿನ ಅದನ್ನು ಪೇಸ್ಟ್ ಮಾಡಿಕೊಳ್ಳಿ.
- ಇದನ್ನು ನಿಮ್ಮ ಸುಟ್ಟ ಗಾಯದ ಮೇಲೆ ಹಚ್ಚಿಕೊಳ್ಳಿ ಮತ್ತು ಕೆಲವು ಸಮಯ ಹಾಗೆಯೇ ಬಿಡಿ.
- ಒಮ್ಮೆ ಪೇಸ್ಟ್ ಸಂಪೂರ್ಣ ಡ್ರೈ ಆದ ನಂತರ ನೀವು ಅದನ್ನು ನೀರಿನಿಂದ ತೊಳೆಯಬಹುದು.
- ಗಾಯದ ಕಲೆಯ ಮೇಲೆ ಆಗಾಗ ಅಪ್ಲೈ ಮಾಡಿಕೊಳ್ಳುವುದು ಸೂಕ್ತ.
- ತಣ್ಣನೆಯ ನೀರಿನ ಜೊತೆಗೆ ಅರಿಶಿನ ಬಳಸುವುದರಿಂದಲೂ ಕೂಡ ಸೋಂಕು ನಿವಾರಿಸುವ ಶಕ್ತಿ ಇದೆ. ಇದೂ ಕೂಡ ಸುಟ್ಟ ಚರ್ಮಕ್ಕೆ ಉತ್ತಮವಾದುದ್ದಾಗಿದೆ.
- ಮೆಂತ್ಯೆಯಿಂದ ಇತರೆ ಸಮಸ್ಯೆಗಳಾಗಿರುವ ಕೂದಲು ಉದುರುವುದು, ತುರಿಕೆಯುಕ್ತವಾಗಿರುವ ತಲೆ, ಮೊಡವೆ, ಚರ್ಮ ಸಂಬಂಧಿ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.

ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್
ಲ್ಯಾವೆಂಡರ್ ಎಸೆನ್ಶಿಯಲ್ ಎಣ್ಣೆ ಕೂಡ ಅತ್ಯುತ್ತಮವಾದ ಸೋಂಕು ನಿವಾರಕ ಗುಣಗಳನ್ನು ಹೊಂದಿದ್ದು ನೋವನ್ನು ಕಡಿಮೆ ಮಾಡಿ ಬಹಳ ಬೇಗನೆ ಗಾಯವನ್ನು ಗುಣ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ಅಷ್ಟೇ ಅಲ್ಲ ಇದರ ಜೊತೆಗೆ ಬೇಗನೆ ಕಲೆ ನಿವಾರಿಸುವ ಸಾಮರ್ಥ್ಯವೂ ಇದಕ್ಕಿದೆ.
- ಸುಟ್ಟ ಗಾಯಕ್ಕೆ ಕೂಡಲೇ ಲ್ಯಾವೆಂಡರ್ ಎಣ್ಣೆಯನ್ನು ಸವರುವುದರಿಂದಾಗಿ ಗಾಯ ಬಹಳ ಬೇಗನೆ ಗುಣವಾಗಿ ಕಲೆಯು ಉಳಿಯದಂತೆ ಮಾಡುತ್ತದೆ.
- ದೊಡ್ಡ ಗಾಯಗಳಾಗಿದ್ದಲ್ಲಿ ಲ್ಯಾವೆಂಡರ್ ಎಣ್ಣೆಯಲ್ಲಿ ಬಟ್ಟೆಯನ್ನು ಅದ್ದಿ ಅದನ್ನು ಗಾಯದ ಮೇಲೆ ಕೂಡಲೇ ಇಟ್ಟುಕೊಳ್ಳಿ ಮತ್ತು ಕೆಲವು ಘಂಟೆಗಳವರೆಗೆ ಇಟ್ಟುಕೊಳ್ಳಬಹುದು.
- ತುರಿಕೆ ಇರುವ ಚರ್ಮಕ್ಕೆ ತೆಂಗಿನ ಎಣ್ಣೆ ಸವರುವುದರಿಂದ ಪರಿಹಾರ ಸಿಗುವಂತೆಯೂ ಇದೂ ಕೂಡ ಕೆಲಸ ಮಾಡುತ್ತದೆ.

ಹತ್ತಿಯ ಸುಟ್ಟ ಬೂದಿ
ಭಾರತದ ಹತ್ತಿಯ ಬೂದಿ ಅಥವಾ ಭಸ್ಮವೂ ಕೂಡ ಸುಟ್ಟ ಗಾಯಗಳಿಗೆ ಅತ್ಯುತ್ತಮ ಚಿಕಿತ್ಸೆಯಾಗಿರುತ್ತದೆ.
- ಒಂದು ದೊಡ್ಡ ಕಾಟನ್ ತುಂಡನ್ನು ತೆಗೆಯಿರಿ( ಅಥವಾ ಕಾಟನ್ ಬಟ್ಟೆಯಾದರೂ ಸರಿ) ನಂತರ ಅದನ್ನು ಸುಟ್ಟುಬಿಡಿ. (ಯಾವುದಾದರೂ ಮೆಟಲ್ ಪಾಟ್ ನಲ್ಲಿ ಸುಡುವುದು ಸೂಕ್ತ).
- ಹತ್ತಿಯನ್ನು ಸುಟ್ಟು ಲಭ್ಯವಾಗುವ ಬೂದಿಯನ್ನು ಬಳಸಿ ಮತ್ತು ಅದನ್ನು ಆಲಿವ್ ಎಣ್ಣೆಯೊಂದಿಗೆ ಸೇರಿಸಿ ಪೇಸ್ಟ್ ತಯಾರಿಸಿ.
- ಈ ಕಪ್ಪು ಪೇಸ್ಟ್ ನ್ನು ಸುಟ್ಟ ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು ಕವರ್ ಮಾಡಿ ಇಟ್ಟುಕೊಳ್ಳಿ.
- ನೋವಿನ ಪ್ರಮಾಣವು ಇದರಿಂದ ಕಡಿಮೆಯಾಗುತ್ತದೆ.
- ನೋವು ಪುನರಾವರ್ತನೆಯಾದರೆ ಪುನಃ ಈ ಪೇಸ್ಟ್ ನ್ನು ಗಾಯವಿರುವ ಜಾಗಕ್ಕೆ ಅಪ್ಲೈ ಮಾಡಿಕೊಳ್ಳಿ.
- ಒಂದು ವಾರದವರೆಗೆ ಈ ಪೇಸ್ಟ್ ನ್ನು ಬಳಸಿ ಮತ್ತು ನಿಮ್ಮ ಗಾಯದ ತೀವ್ರತೆಯ ಅನುಸಾರ ಹೆಚ್ಚು ಅವಧಿಗೂ ಬಳಕೆ ಮಾಡಬಹುದು.

ಆಲೂಗಡ್ಡೆ ಸಿಪ್ಪೆಗಳು
ಬಹಳ ಹಳೆಯ ಕಾಲದಿಂದಲೂ ಬಳಕೆಯಲ್ಲಿರುವ ಇನ್ನೊಂದು ವಿಧಾನವೆಂದರೆ ಆಲೂಗಡ್ಡೆಯ ಸಿಪ್ಪೆಯನ್ನು ಸುಟ್ಟ ಗಾಯಕ್ಕೆ ಬಳಸುವುದು. ಇದರಲ್ಲಿ ನೀರಿನಂಶವಿರುತ್ತದೆ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳು ಗಾಯವನ್ನು ಗುಣ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸಣ್ಣಪುಟ್ಟ ಗಾಯಗಳಿಗೆ ಇದು ಉತ್ತಮ ಔಷಧಿ ಎಂದು ವೈದ್ಯರೂ ಕೂಡ ಅಭಿಪ್ರಾಯ ಪಡುತ್ತಾರೆ.
- ಆಲೂಗಡ್ಡೆಯನ್ನು ಸಿಪ್ಪೆ ತೆಗೆಯಿರಿ ಮತ್ತು ಅದನ್ನು ಗಾಯವಿರುವ ಜಾಗಕ್ಕೆ ಅಪ್ಲೈ ಮಾಡಿ.
- ಆಲೂಗಡ್ಡೆಯ ಸಿಪ್ಪೆಯನ್ನು ಗಾಯಕ್ಕೆ ಸುತ್ತಿ ಬ್ಯಾಂಡೇಜ್ ತರಹವೂ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ನೋವು ನಿವಾರಣೆಯಾಗುತ್ತದೆ.

ಬಾರ್ಲಿ, ಅರಿಶಿನ ಮತ್ತು ಮೊಸರು
ಬಾರ್ಲಿ, ಅರಿಶಿನ ಮತ್ತು ಮೊಸರನ್ನು ಬಳಸುವುದೂ ಕೂಡ ಸುಟ್ಟ ಗಾಯಗಳಿಗೆ ಅತ್ಯುತ್ತಮ ಮನೆಮದ್ದು.
- ಈ ಮೂರೂ ವಸ್ತುಗಳನ್ನು ಅಂದರೆ ಬಾರ್ಲಿ, ಅರಿಶಿನ ಮತ್ತು ಮೊಸರು ಮೂರನ್ನೂ ಸಮ ಪ್ರಮಾಣದಲ್ಲಿ ಸೇರಿಸಿ.
- ಅದರ ಪೇಸ್ಟ್ ನ್ನು ಗಾಯವಾದ ಜಾಗಕ್ಕೆ ಅಪ್ಲೈ ಮಾಡುವುದರಿಂದಾಗಿ ನೋವು ನಿವಾರಣೆಯಾಗಿ ಗಾಯವೂ ವಾಸಿಯಾಗುತ್ತದೆ.