For Quick Alerts
ALLOW NOTIFICATIONS  
For Daily Alerts

ಮೆದುಳು ಚುರುಕಾಗಬೇಕೆ ಈ ಮೈಂಡ್ ಡಯಟ್ ಅನುಸರಿಸಿ!

|

ಇತ್ತೀಚಿನ ಬದಲಾದ ಜೀವನ ಶೈಲಿಯಿಂದ ಮನುಷ್ಯ ತಾನಾಗಿಯೇ ಅನೇಕ ಖಾಯಿಲೆಗಳಿಗೆ ಆಹ್ವಾನ ಕೊಡುತ್ತಿದ್ದಾನೆ. ಕೆಲಸದ ಒತ್ತಡ, ದುಡಿಮೆಯ ತೀವ್ರತೆ, ಮನೆಯ ಜವಾಬ್ದಾರಿಗಳು ಹೀಗೆ ಹತ್ತು ಹಲವಾರು ಸಮಸ್ಯೆಗಳು ಮನುಷ್ಯನ ಆರೋಗ್ಯವನ್ನು ಹಾಳು ಮಾಡುತ್ತವೆ. ವಯಸ್ಸಾಗುತ್ತಿದ್ದಂತೆ ಮಧುಮೇಹ, ರಕ್ತದ ಒತ್ತಡ, ಅಲ್ಜೀಮಾರ್ ಖಾಯಿಲೆ ತರಹದ ರೋಗ ಲಕ್ಷಣಗಳು ದೇಹಕ್ಕೆ ಆವರಿಸತೊಡಗುತ್ತವೆ.

Mind Diet That Will Boost Your Brain Function | Boldsky Kannada
mind diet boost memory

ಹಾಗಾಗಿ ಮನುಷ್ಯ ಡಯಟ್ ನ ಮೊರೆ ಹೋಗುತ್ತಾನೆ. ಡಯಟ್ ನ ವಿಚಾರವಾಗಿ ನಡೆದ ಒಂದು ಸಂಶೋಧನೆಯಲ್ಲಿ ಮನುಷ್ಯನಿಗೆ ಪೂರಕವಾದಂತಹ ಕೆಲವೊಂದು ಆಹಾರ ಪದ್ದತಿಗಳನ್ನು ವೈದ್ಯರು ಕಂಡು ಹಿಡಿದಿದ್ದಾರೆ. ಅದರಲ್ಲಿ ಮೈಂಡ್ ಡಯಟ್ ಮತ್ತು ಮೆಡಿಟರೇನಿಯನ್ ಡಯಟ್ ಪ್ರಮುಖವಾಗಿವೆ.

ಎರಡು ವಿಧದ ಮೈಂಡ್‌ ಡಯಟ್‌

ಎರಡು ವಿಧದ ಮೈಂಡ್‌ ಡಯಟ್‌

ಸಾಮಾನ್ಯವಾಗಿ ಮೈಂಡ್ ಡಯಟ್ ಎನ್ನುವುದು ಮೆಡಿಟರೇನಿಯನ್ ಡಯಟ್ ಮತ್ತು ಡ್ಯಾಶ್ ಡಯಟ್ ಎಂಬ ಎರಡು ಆರೋಗ್ಯಕರ ಆಹಾರ ಪದ್ಧತಿಗಳ ಸಹಯೋಗದೊಂದಿಗೆ ಕೆಲಸ ಮಾಡುತ್ತದೆ.

  • ಮೆಡಿಟರೇನಿಯನ್ ಡಯಟ್ ವಿಧಾನದಲ್ಲಿ ದೀರ್ಘ ಕಾಲದ ಮಧುಮೇಹ, ಹೃದಯ ರಕ್ತನಾಳದ ಕಾಯಿಲೆ ಮತ್ತು ಕ್ಯಾನ್ಸರ್ ನಂತಹ ಸಮಸ್ಯೆಗಳು ದೂರ ಆಗಿರುವುದು ಕಂಡು ಬಂದಿದ್ದು, ಮೆಟಬಾಲಿಕ್ ಆರೋಗ್ಯವನ್ನು ಅಭಿವೃದ್ಧಿ ಪಡಿಸಿರುವುದು ಸಹ ತಿಳಿದು ಬಂದಿದೆ.
  • ಡ್ಯಾಶ್ (ಡಯೆಟರಿ ಅಪ್ರೋಚಸ್ to ಸ್ಟಾಪ್ ಹೈಪರ್ ಟೆನ್ಷನ್ ) ಡಯಟ್ ಪದ್ಧತಿಯನ್ನು ಎರಡು ದಶಕಗಳ ಹಿಂದೆಯೇ ಪ್ರೀ ಹೈಪೆರ್ಟೆನ್ಸಿವ್ ಮತ್ತು ಹೈಪೆರ್ಟೆನ್ಸಿವ್ ರೋಗಿಗಳಲ್ಲಿ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಅಭಿವೃದ್ಧಿ ಪಡಿಸಲಾಗಿದೆ.
  • ಈ ಎರಡು ಆಹಾರ ಪದ್ಧತಿಗಳು ಮನುಷ್ಯನ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಡಿಮೆ ಪ್ರೋಟೀನ್ ಅಂಶಗಳ ಸೇವನೆ, ಕಡಿಮೆ ಸಕ್ಕರೆ ಅಂಶದ ಸೇವನೆ, ಕಡಿಮೆ ಉಪ್ಪು, ಕಡಿಮೆ ಸಂಸ್ಕರಿಸಿದ ಆಹಾರಗಳು, ಕಡಿಮೆ ಆಲ್ಕೋಹಾಲ್, ಆರೋಗ್ಯಕರ ಕೊಬ್ಬುಗಳ ಸೇವನೆಯ ಮಾಹಿತಿಯನ್ನು ಕೊಡುವುದರ ಜೊತೆಗೆ ನಿತ್ಯ ನಿಯಮಿತ ವ್ಯಾಯಾಮವನ್ನು ಮಾಡಬೇಕೆಂದು ಕೂಡ ಸೂಚಿಸಿವೆ.

    ಮೈಂಡ್ ಡಯಟ್ ಅನ್ನು ಯಾರು ಅನುಸರಿಸಬೇಕು?

    ಮೈಂಡ್ ಡಯಟ್ ಅನ್ನು ಯಾರು ಅನುಸರಿಸಬೇಕು?

    ಸಾಮಾನ್ಯವಾಗಿ ಮೈಂಡ್ ಡಯಟ್ 50 ವರ್ಷ ಮೇಲ್ಪಟ್ಟ ಜನರಿಗೆ ಸೂಕ್ತ ಎಂದು ವೈದ್ಯರು ತಿಳಿಸಿದ್ದಾರೆ. ನಿಮ್ಮ ವೈದ್ಯರ ಬಳಿ ಈ ಡಯಟ್ ಅನುಸರಣೆಯ ವಿಚಾರವಾಗಿ ಮಾಹಿತಿ ಪಡೆದುಕೊಳ್ಳಿ. ಯಾವ ಆಹಾರಗಳು ತಿನ್ನಲು ಸೂಕ್ತ ಮತ್ತು ಯಾವ ಆಹಾರಗಳನ್ನು ತಿನ್ನಬಾರದು ಎಂದು ಈ ಕೆಳಗೆ ತಿಳಿಸಲಾಗಿದೆ.

    1. ಬೆರ್ರಿ ಹಣ್ಣುಗಳು

    1. ಬೆರ್ರಿ ಹಣ್ಣುಗಳು

    ಮೈಂಡ್ ಡಯಟ್ ಎನ್ನುವುದು ಮೆದುಳಿಗೆ ಆರೋಗ್ಯಕರವಾಗಿ ಪರಿಣಮಿಸುವ ಆಹಾರಗಳು ಮತ್ತು ಪೌಷ್ಟಿಕ ಸತ್ವಗಳನ್ನು ಒಳಗೊಂಡಿದೆ. ಇದಕ್ಕೆ ಉದಾಹರಣೆಯೆಂದರೆ ಬೆರ್ರಿ ಹಣ್ಣುಗಳು. ಮೈಂಡ್ ಡಯಟ್ ಅನುಸರಿಸುವ ಪ್ರತಿಯೊಬ್ಬರು ಒಂದು ದಿನಕ್ಕೆ ಎರಡರಿಂದ ಮೂರು ಬಗೆಯ ಬೆರ್ರಿ ಹಣ್ಣುಗಳ ಸೇವನೆ ಮಾಡಿದರೆ ಉತ್ತಮ. ಸ್ಟ್ರಾಬೆರಿ, ಬ್ಲೂಬೆರ್ರಿ, ಬ್ಲಾಕ್ಬೆರ್ರಿ ಮತ್ತು ರಾಸ್ಪ್ ಬೆರ್ರಿ ಹಣ್ಣುಗಳು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿರಲಿ.

    2. ಹಸಿರು ಎಲೆ-ತರಕಾರಿಗಳು

    2. ಹಸಿರು ಎಲೆ-ತರಕಾರಿಗಳು

    ಒಂದು ವಾರಕ್ಕೆ ಏನಿಲ್ಲ ಅಂದರೂ ಆರು ಬಾರಿ ಹಸಿರು ಎಲೆ-ತರಕಾರಿಗಳಾದ ದಂಟಿನ ಸೊಪ್ಪು, ಪಾಲಕ್ ಸೊಪ್ಪು, ಕೇಲ್ ಗಳನ್ನು ಸೇವಿಸಲು ಸೂಚಿಸಲಾಗಿದೆ. ಸ್ಟಾರ್ಚ್ ಅಂಶವನ್ನು ಹೊಂದಿರದ ತರಕಾರಿಗಳು ನಿಮ್ಮ ಪ್ರತಿ ದಿನದ ಆಹಾರ ಪದ್ಧತಿಯಲ್ಲಿ ಸೇರಿದ್ದರೆ ವಾಸಿ.

    3. ಆಲಿವ್ ಆಯಿಲ್

    3. ಆಲಿವ್ ಆಯಿಲ್

    ಮೆಡಿಟರೇನಿಯನ್ ಡಯಟ್ ನ ಪ್ರಮುಖ ಭಾಗವಾದ ಆಲಿವ್ ಆಯಿಲ್ ಆರೋಗ್ಯಕರ ಕೊಬ್ಬುಗಳ ಮತ್ತು ಒಮೆಗಾ - 3 ಪ್ಯಾಟಿ ಆಮ್ಲಗಳ ಮಹಾಪೂರದೊಂದಿಗೆ ಸೃಷ್ಟಿಗೊಂಡಿದೆ. ಪ್ರತಿ ದಿನದ ನಿಮ್ಮ ಆಹಾರ ತಯಾರಿಕೆಯಲ್ಲಿ ಇದನ್ನು ಅಡುಗೆ ಎಣ್ಣೆಯಾಗಿ ಬಳಸಬಹುದು.

    4. ಬೀಜಗಳು

    4. ಬೀಜಗಳು

    ಬೀಜಗಳಲ್ಲಿ ಬಹಳಷ್ಟು ಬಗೆಯ ಆರೋಗ್ಯಕರ ಕೊಬ್ಬುಗಳು ಮತ್ತು ಪ್ರೋಟೀನ್, ಡಯೆಟರಿ ಫೈಬರ್, ವಿಟಮಿನ್ ಗಳು ಮತ್ತು ಖನಿಜಾಂಶಗಳು ತುಂಬಿವೆ. ನಿಮ್ಮ ಆಹಾರ ಪದ್ಧತಿಯಲ್ಲಿ ಬಾದಾಮಿ ಬೀಜಗಳು, ಪಿಸ್ತಾ, ವಾಲ್ನಟ್, ಮಕಾಡೆಮಿಯ ಮತ್ತು ಫೈನ್ ನಟ್ ಗಳನ್ನು ವಾರದಲ್ಲಿ ಐದು ಬಾರಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

    5. ಮೀನು

    5. ಮೀನು

    ಮೀನುಗಳಲ್ಲಿ ಒಮೇಗಾ - 3 ಪ್ಯಾಟಿ ಆಮ್ಲಗಳು ಬಹಳಷ್ಟಿದ್ದು ಅದರಲ್ಲೂ ಟ್ರೌಟ್, ಸಾಲ್ಮನ್ ಮತ್ತು ಟುನ ಮೀನುಗಳಲ್ಲಿ ಮನುಷ್ಯನ ದೇಹದ ಉರಿಯೂತವನ್ನು ಶಮನ ಮಾಡುವ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ನಿವಾರಣೆ ಮಾಡುವ ಅದ್ಭುತ ಗುಣ ಲಕ್ಷಣಗಳಿವೆ. ಒಂದು ವಾರದಲ್ಲಿ ಒಂದು ಬಾರಿಯಾದರೂ ಇವುಗಳ ಸೇವನೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು.

    6. ಧಾನ್ಯಗಳು

    6. ಧಾನ್ಯಗಳು

    ಕನಿಷ್ಠ ಬ್ರೌನ್ ರೈಸ್, ಕ್ವಿನೋವ, ಓಟ್ಸ್ ಮತ್ತು ಧಾನ್ಯಗಳ ರೊಟ್ಟಿಯನ್ನು ಒಂದು ದಿನಕ್ಕೆ ಮೂರು ಬಾರಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

     7. ಪೌಲ್ಟ್ರಿ

    7. ಪೌಲ್ಟ್ರಿ

    ಗ್ರೌಂಡ್ ಟರ್ಕಿ ಅಥವಾ ಬೇಯಿಸಿದ ಚಿಕನ್ ಬ್ರೆಸ್ಟ್ ಮಾಂಸಾಹಾರವನ್ನು ವಾರದಲ್ಲಿ ಎರಡು ಬಾರಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಕರಿದ ಚಿಕನ್ ಆಹಾರ ಬೇಡ.

     8. ದ್ವಿದಳ ಧಾನ್ಯಗಳು

    8. ದ್ವಿದಳ ಧಾನ್ಯಗಳು

    ಸೋಯಾ ಅವರೆ, ಮಸೂರ ಬೇಳೆ, ಮತ್ತು ಬೀನ್ಸ್ ಗಳನ್ನು ವಾರದಲ್ಲಿ ನಾಲ್ಕು ಬಾರಿ ಸೇವಿಸಿ.

    9. ವೈನ್

    9. ವೈನ್

    ವೈನ್ ನಲ್ಲಿರುವ ರೆಸ್ವೆರಾಟ್ರೋಲ್ ಅಂಶ ನಿಮ್ಮನ್ನು ಹೃದಯದ ಕಾಯಿಲೆ, ಆಲ್ಝೈಮರ್ ಕಾಯಿಲೆ ಮತ್ತು ಪಾರ್ಕಿನ್ಸನ್ ಸಮಸ್ಯೆಯಿಂದ ಕಾಪಾಡುತ್ತದೆ. ಒಂದು ದಿನಕ್ಕೆ ಅರ್ಧ ಗ್ಲಾಸ್ ರೆಡ್ ವೈನ್ ಕುಡಿಯುವ ಅಭ್ಯಾಸ ನಿಮ್ಮದಾಗಿರಲಿ.

    ಮೈಂಡ್ ಡಯಟ್ ಅನುಸರಿಸುತ್ತಿರುವವರು ತಿನ್ನಬಾರದ ಆಹಾರಗಳಿವು?

    ಸಂಶೋಧನೆಯ ಪ್ರಕಾರ ಈ ಕೆಳಗೆ ಸೂಚಿಸಿರುವ ಕೆಲವು ಆಹಾರಗಳು ಮೈಂಡ್ ಡಯಟ್ ಗೆ ಸೂಕ್ತವಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಜನರು ಇವುಗಳಿಂದ ಸ್ವಲ್ಪ ದೂರವಿದ್ದರೆ ಒಳ್ಳೆಯದು. ಅವು ಯಾವುವು ಎಂಬುದನ್ನು ಈಗ ನೋಡೋಣ.

    1. ಕರಿದ ಆಹಾರ ಪದಾರ್ಥಗಳು

    1. ಕರಿದ ಆಹಾರ ಪದಾರ್ಥಗಳು

    ಫ್ರೈಡ್ ಚಿಕನ್, ಚಿಕನ್ ನುಗ್ಗೆಟ್ಸ್, ಮತ್ತು ಇನ್ನಿತರ ಫಾಸ್ಟ್ ಫುಡ್ ಗಳು, ಆರೋಗ್ಯಕ್ಕೆ ಹಿತವಲ್ಲದ ಕೊಬ್ಬಿನ ಅಂಶಗಳನ್ನು ಹೊಂದಿರುವ ಪದಾರ್ಥಗಳು. ಇವುಗಳು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡದ ಮಟ್ಟಗಳನ್ನು ಹೆಚ್ಚು ಮಾಡುತ್ತವೆ.

     2. ಕೆಂಪು ಮಾಂಸ

    2. ಕೆಂಪು ಮಾಂಸ

    ಮಾಂಸಹಾರಿಗಳು ಆದಷ್ಟು ಕೆಂಪು ಮಾಂಸದಿಂದ ದೂರವಿದ್ದರೆ ಒಳ್ಳೆಯದು. ಏಕೆಂದರೆ ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಅಂಶಗಳು ಬಹಳಷ್ಟಿದ್ದು, ನಿಮ್ಮ ಹೃದಯ ಮತ್ತು ನಿಮ್ಮ ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಅಷ್ಟೂ ಬೇಕೆನಿಸಿದರೆ ವಾರದಲ್ಲಿ ಕೇವಲ ಒಂದರಿಂದ ಎರಡು ಬಾರಿ ಮಾತ್ರ ಕೆಂಪು ಮಾಂಸದ ಸೇವನೆಯನ್ನು ಮಿತಗೊಳಿಸಿ.

     3. ಹೆಚ್ಚಿನ ಉಪ್ಪು ಮತ್ತು ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ ಆಹಾರಗಳು

    3. ಹೆಚ್ಚಿನ ಉಪ್ಪು ಮತ್ತು ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ ಆಹಾರಗಳು

    ಉಪ್ಪು ಮತ್ತು ಸಕ್ಕರೆ ಅಂಶ ಹೊಂದಿರುವ ಆಹಾರಗಳಾದ ಪೊಟಾಟೋ ವಾಫೆರ್, ಬರ್ಗರ್, ಉಪ್ಪಿನ ಅಂಶ ಹೊಂದಿರುವ ಬೀಜಗಳು, ಕ್ಯಾನ್ನೆಡ್ ಫುಡ್ಸ್, ಫ್ರೋಜನ್ ಮಾಂಸ, ಸಾಸ್ ಮತ್ತು ಕ್ಯಾಂಡೀಸ್ ಗಳನ್ನು ಸೇವನೆ ಮಾಡುತ್ತಿದ್ದರೆ ನಿಲ್ಲಿಸುವುದು ಒಳ್ಳೆಯದು.

    4. ಬೆಣ್ಣೆ ಮತ್ತು ಮಾರ್ಗರೈನ್

    4. ಬೆಣ್ಣೆ ಮತ್ತು ಮಾರ್ಗರೈನ್

    ನಿಮ್ಮ ಆಹಾರ ಪದ್ಧತಿಯಲ್ಲಿ ಬೆಣ್ಣೆ ಮತ್ತು ಮಾರ್ಗರೈನ್ ಅಂಶಗಳು ತುಂಬಿದ್ದರೆ ಅದನ್ನು ಕೇವಲ ಒಂದು ದಿನಕ್ಕೆ ಒಂದು ಟೇಬಲ್ ಚಮಚದಷ್ಟು ಮೀಸಲಿರಿಸಿ.

    5. ಚೀಸ್

    5. ಚೀಸ್

    ಒಂದು ವಾರದಲ್ಲಿ ಒಂದು ಬಾರಿ ಮಾತ್ರ ಚೀಸ್ ಬಳಸುವ ಅಭ್ಯಾಸ ಮಾಡಿಕೊಳ್ಳಿ.

    ಎಚ್ಚರ

    ನೀವು ಸೇವಿಸುವ ಆಹಾರ ಮತ್ತು ಸೇವಿಸಬಾರದ ಆಹಾರಗಳ ಪಟ್ಟಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

    ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಒಮ್ಮೆ ಸಂಪರ್ಕಿಸಿ ಅವರಿಂದ ಮಾಹಿತಿ ಕಲೆಹಾಕಿ ಇವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

English summary

Mind Diet Will Help You To Boost Your Memory & Brain Function

Here we are discussing about Mind Diet Will Help You To Boost Your Memory & Brain Function.What’s the secret behind the success of this diet? What should you eat and avoid? Can the MIND diet help protect you and your loved ones from brain degeneration? Keep reading to find out.Read more.
Story first published: Saturday, February 29, 2020, 16:33 [IST]
X
Desktop Bottom Promotion